Connect with us

ಉದಾಸೀನ ಪ್ರವೃತ್ತಿಯ ವ್ಯಕ್ತಿಗಳಿಗೆ ಮಾದರಿಯಾಗುವ ಸ್ವಾಭಿಮಾನದ ಕಥೆ ಇದು…

Published

on

ಉದಾಸೀನ ಪ್ರವೃತ್ತಿಯ ವ್ಯಕ್ತಿಗಳಿಗೆ ಮಾದರಿಯಾಗುವ ಸ್ವಾಭಿಮಾನದ ಕಥೆ ಇದು…

ಉಡುಪಿ: ಇವರ ಹೆಸರು ಕಲ್ಮಾಡಿಯ ಜಯಣ್ಣ…. ತೆಂಗಿನಕಾಯಿ ಕೀಳೋ ಜಯಣ್ಣ ಇವರ ನಾಮಧೇಯ. ತೆಂಗಿನ ಮರವೇರಿ ಕಾಯಿ ಕೀಳುವ ಉದ್ಯೋಗ ಇವರದಾಗಿತ್ತು.

ಆದರೆ ಆ ಒಂದು ದಿನ ಜಯಣ್ಣನ ಪಾಲಿಕೆ ಕರಾಳ ದಿನವಾಗಿತ್ತು. ಎಂದಿನಂತೆ ಕಾಯಿ ಕೀಳಲು ಎತ್ತರದ ಮರ ಏರಿದ್ದ ಜಯಣ್ಣ ಕಾಯಿ ಸಮೇತ ಕೆಳಗೆ ಉರುಳಿದ್ರು.

ಪರಿಣಾಮ ಬೆನ್ನು ಮೂಳೆ ಮುರಿಯಿತು. ಕಾಲುಗಳೆರಡೂ ಸ್ವಾಧೀನ ಕಳೆದುಕೊಂಡವು.

ಎಂಟು ಜನ ಸದಸ್ಯರಿರುವ ಆ ದೊಡ್ಡ ಕುಟುಂಬದ ಹಿರಿಯ ಮಗ ಎಂಟು ವರ್ಷ ಹಾಸಿಗೆಯಲ್ಲಿ ಮಲಗಿದಲ್ಲೇ ಕಾಲ ಕಳೆದ್ರು.

ದಿನಾ ಮರವೇರಿ ಕಾಯಿ ಕಿತ್ತು, ದುಡಿಮೆ ಮಾಡಿ ಸ್ವಂತ ಕಾಲಲ್ಲಿ ನಿಂತಿದ್ದ ಜಯಣ್ಣನ ಕಾಲುಗಳು ಸ್ವಾಧೀನ ಕಳಕೊಂಡಿದ್ದವು.

ಬೆನ್ನು ಹುರಿಯ ಗಾಯದಿಂದ ಅಪಾರ ಯಾತನೆ ಅನಭವಿಸುತ್ತಿದ್ದರು. ಆದರೆ ಸ್ವಾವಲಂಬನೆ ಅವರನ್ನು ಎಚ್ಚರಿಸಿತು.

ಅಸಹಾಯಕತೆಯ ನಡುವೆಯೂ ಜೀವನ ಪ್ರೀತಿ ಅವರನ್ನು ಪ್ರೇರೇಪಿಸಿತು. ಸ್ವಾಭಿಮಾನದ ಪ್ರೀತಿ, ಸೋಲಾರ್ ವಿದ್ಯುತ್ ಚಾಲಿತ ಸಣ್ಣ ಬಂಡಿಯನ್ನು ಬಳಸಿ ಎಳನೀರು ವ್ಯಾಪಾರದಲ್ಲಿ ಅವರನ್ನು ತೊಡಗಿಸಿಯೇಬಿಟ್ಟಿತು.

ಉಡುಪಿಯ ಆ ಪ್ರಶಾಂತ ಪರಿಸರದ ಮಲ್ಪೆ ಕಡಲ ಕಿನಾರೆಗೆ ಹೋಗುವಾಗ ಕಲ್ಮಾಡಿ ಸೇತುವೆಯ ಬಳಿ, ಬೊಬ್ಬರ್ಯ ಗುಡ್ಡಕ್ಕೆ ಹೋಗುವ ದ್ವಾರದ ಮುಂದೆ ಚಿಕ್ಕ ಗಾಡಿಯಲ್ಲಿ ಇವರು ಬೊಂಡದ ಗಾಡಿಯಲ್ಲಿ ಕುಳಿತುಕೊಳ್ಳುತ್ತಾರೆ.

ಸಂಜೆ ನಾಲ್ಕರಿಂದ ಎಂಟು ಗಂಟೆಯವರೆಗೆ ಇವರ ಬೊಂಡ ವ್ಯಾಪಾರ. ಎಳನೀರು ಕುಡಿಯೋಕೆ ಬಂದವರಿಗೆ ಬಂಡಿಯೊಳಗೆ ಕೂತಿದ್ದ ಅವರ ಹಸನ್ಮುಖ ಎಲ್ಲರನ್ನು ಸೆಳೆದು ಬಿಡುತ್ತೆ.

ಬಂದ ಗಿರಾಕಿಗಳಿಗೆ ಬೊಂಡ ಕೆತ್ತುವುದನ್ನು ನೋಡಿದ್ರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದವರೆಂದು ಗೊತ್ತೇ ಆಗಲ್ಲ.

ಎಳನೀರು ಕುಡಿಯೋದಕ್ಕೆಂದು ತಮ್ಮ ಗಾಡಿಯಿಂದ ಇಳಿಯುವವರು, ಅವರ ಕಾಲನ್ನು ಗಮನಿಸಿ ಕಥೆ ಕೇಳಿದ್ರೆ ಅವರ ಆತ್ಮವಿಶ್ವಾಸದ ಚಿಲುಮೆ ಎಂಥವರನ್ನು ನಾಚಿಸಿ ಬಿಡುತ್ತೆ.

ಹಾಸಿಗೆಯಲ್ಲೇ ಇದ್ದ ಎಂಟು ವರ್ಷದ ಸೋಲನ್ನು ಗೆಲ್ಲಲೇಬೇಕೆಂಬ ಹಠ ನನ್ನದು ಎನ್ನುತ್ತಾ, ತಾನಿವತ್ತು ಸ್ವಾವಲಂಬನೆಯ ಬದುಕನ್ನು ಕಂಡುಕೊಳ್ಳುತ್ತಿರಲು ನೆರವಾದ ಸಂಸ್ಥೆ, ವ್ಯಕ್ತಿಗಳನ್ನು ನೆನೆಯುವಾಗ ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತೆ.

ಹಾಸಿಗೆ ಹಿಡಿದಿದ್ದ ಜಯಣ್ಣನಿಗೆ ಸ್ನೇಹಿತರೊಬ್ಬರು ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿರುವ ಸೇವಾಭಾರತಿಯ ಟ್ರಸ್ಟ್ ಬಗ್ಗೆ ಮಾಹಿತಿ ನೀಡಿದರಂತೆ.

ಆ ಸಂಸ್ಥೆ ನಡೆಸುತ್ತಿದ್ದ ಶಿಬಿರಕ್ಕೆ ಇವರು ಸೇರಿದರು. ಒಟ್ಟು 40 ಮಂದಿಯಲ್ಲಿ ಐದು ಜನರನ್ನು ಆಯ್ಕೆ ಮಾಡಿ ಬೆಂಗಳೂರಿನ APD ಸಂಸ್ಥೆಯ ಶಿಬಿರಕ್ಕೆ ಕಳುಹಿಸಿಕೊಟ್ಟಿದ್ದರು.

ಅಲ್ಲಿ ಚಿಕಿತ್ಸೆ ಹಾಗೂ ಆತ್ಮವಿಶ್ವಾಸ ತುಂಬಿ ಇವರು ಮಾಡಬಹುದಾದ ಉದ್ಯೋಗವನ್ನು ಮನಗಾಣಿಸಿ, ಅದಕ್ಕೆ ಬೇಕಾದ ವಾಹನವನ್ನೂ ಉಚಿತವಾಗಿ ತಯಾರಿಸಿಕೊಟ್ಟರಂತೆ.

ನಿಜಕ್ಕೂ ಜಯಣ್ಣ ಪ್ರತಿಯೊಬ್ಬರಿಗೂ ಪ್ರೇರಣೆ. ಈ ರೀತಿಯ ನೋವಿನಿಂದ ಬಳಲುತ್ತಿರುವವರಿಗೆಲ್ಲ ಮಾದರಿ.

ಮಲ್ಪೆಗೆ ಹೋದಾಗ ಕಲ್ಮಾಡಿ ಸೇತುವೆ ಸಮೀಪದ ಇವರ ಗಾಡಿಯಂಗಡಿಯಿಂದ ಒಂದು ಎಳನೀರು ಕೊಂಡು ಕುಡಿದರೆ ಅದು ಜಯಣ್ಣನ ಸ್ವಾವಲಂಬನೆಯ ಬದುಕಿಗೆ ನಾವೆಲ್ಲ ಪ್ರೋತ್ಸಾಹ ನೀಡಿದಂತಾಗುತ್ತದೆ ಅಲ್ವ.

ಮಲ್ಪೆಗೆ ಬಂದ್ರೆ ಜಯಣ್ಣನ ಹತ್ರ ಹೋಗಿ ಬೊಂಡ ಕುಡಿಯದೆ ವಾಪಾಸು ಬರಬೇಡಿ ಆಯ್ತಾ….!…

Advertisement
Click to comment

Leave a Reply

Your email address will not be published. Required fields are marked *

kerala

ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ

Published

on

ತಿರುವನಂತಪುರ: 2024ರಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ  ರುದ್ರಾಕ್ಷಿ ಮಾರುತ್ತ ತನ್ನ ಸುಂದರ ಕಣ್ಣುಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಬೋಂಸ್ಲೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮೊನಾಲಿಸಾ ತನ್ನ ಗೆಳೆಯನ ಜೊತೆ ಬಂದು ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ದೈಹಿಕ ಕಿರುಕುಳ ನಡೆದಿಲ್ಲ. ಪ್ರಾಥಮಿಕವಾಗಿ ಬಲವಂತದ ವಿವಾಹ ಪ್ರಸ್ತಾಪವಾಗಿದೆ. ಮೊನಾಲಿಸಾ ತಂದೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದುದರಿಂದ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ಆದ ಬಳಿಕ ಮೊನಾಲಿಸಾ ಅವರ ಬದುಕೇ ಬದಲಾಗಿದೆ. ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿದೆ. ಪ್ರಸ್ತುತ ಶೂಟಿಂಗ್ ಗಾಗಿ ತಿರುವನಂತಪುರಕ್ಕೆ ಬಂದಿದ್ದ ಮೊನಾಲಿಸಾ ಇದೀಗ ಗೆಳೆಯನ ಜೊತೆ ಬಮದು ದೂರನ್ನು ನೀಡಿದ್ದಾರೆ.

Continue Reading

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page