ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ದಶಕದಲ್ಲಿ ಮಿಂಚಿದ್ದವರು ಈಗ ಕಣ್ಮರೆಯಾಗಿದ್ದಾರೆ. ಹೌದು, ಒಂದು ಕಾಲದಲ್ಲಿ ಬಾಳನಟಿಯರಾಗಿ, ನಟಿಯರಾಗಿ ನಟಿಸಿದ್ದ ನಟಿಯರು ಪತ್ತೆಯೇ ಇಲ್ಲದಂತಾಗಿದೆ. ಆದರೆ ಕೆಲವೊಂದು ಯೂಟ್ಯೂಬರ್ಸ್, ಚಾನೆಲ್ ಗಳ ಇಂಟರ್ವ್ಯೂವ್ ಮೂಲಕ ಹೊರ ಜಗತ್ತಿಗೆ ಕಾಣ ಸಿಗ್ತಾರೆ. ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು ಎಂಬ ಸಾಂಗ್ ಹಿಂದಿನ ಕಾಲದಿಂದ ಈಗಿನವರೆಗೂ ಟ್ರೆಂಡ್ ನಲ್ಲಿದೆ. ರಾಮ ಲಕ್ಷ್ಮಣ ಸಿನೆಮಾದ ಹಾಡಾಗಿದ್ದು, ಇದರ ನಟಿ ಈಗ ಹೇಗಿದ್ದಾರೆ ಗೊತ್ತಾ?

ಬೇಬಿ ಇಂದಿರಾ.. ಒಂದು ಕಾಲದಲ್ಲಿ ಎಲ್ಲರ ನೆಚ್ಚಿನ ನಟಿ ಬೇಬಿ ಇಂದಿರಾ. ಮುದ್ದು ಮುದ್ದಾಗಿರುವ ಮೊಗದಿಂದ, ಅದ್ಭುತ ನಟನೆಯ ಮೂಲಕ ಜನರಿಗೆ ಪ್ರೀತಿ ಪಾತ್ರರಾಗಿದ್ದರು. ಈಗಲೂ ಕೂಡಾ ಕೆಲವರು ಇವರನ್ನು ನೆನಪಿಸಿಕೊಳ್ತಾರೆ. ಯಾಕಂದ್ರೆ ಹಿಂದಿನ ಕಾಲದ ಸಿನೆಮಾಗಳೇ ಹಾಗೆ ಅಲ್ವಾ. ಒಂದು ಅರ್ಥಬದ್ಧವಾದ ಮನಸ್ಸಿಗೆ ಮುಟ್ಟುವಂಥ ಕಥೆಗಳು, ಹಾಡುಗಳು. ಬೇಬಿ ಇಂದಿರಾ ಬಾಲನಟಿಯಾಗ್ಗಿ ಸ್ಯಾಂಡಲ್‌ವುಡ್ ಬಾಲಿವುಡ್ ಸೇರಿದಂತೆ ಹಲವಾರು ದಿಗ್ಗಜರೊಂದಿಗೆ ನಟನೆಯನ್ನು ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ ನಾಯಕಿಯಾಗಿ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಚೆನ್ನೈ ಮೂಲದ ಬೇಬಿ ಇಂದಿರಾ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ‘ಜನ್ಮ ರಹಸ್ಯ’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಜೋಡಿಯಾಗಿ ನಟಿಸಿದ್ದರು. ಆದರೆ ನಂತರ ಅವರು ನಟನೆಯಿಂದ ಸಂಪೂರ್ಣ ದೂರಾದರು.

ಅರ್ಜುನ್ ಸರ್ಜಾ ಜೊತೆ ನಾಯಕಿಯಾಗಿ ಮಳೆ ಬಂತು ಮಳೆ ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಅಂಜದ ಗಂಡು ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡಾ ನಟಿಸಿದ್ದರು. ಆದರೆ ಕೆಲವರ್ಷಗಳ ನಂತರ ಇಂದಿರಾ ಕಣ್ಮರೆಯಾಗಿಬಿಟ್ಟರು.
ಸಿನಿಮಾಗಳಿಗೆ ಗುಡ್ ಬೈ ಹೇಳಿ ಮದುವೆ ಆದ ನಟಿ
ಸಿನಿಮಾಗಳಿಗೆ ಗುಡ್ ಬೈ ಹೇಳಿ ಇಂದಿರಾ ತಮಿಳಿನ ಶ್ರೀಧರ್ ಅವನ್ನು ಮದುವೆ ಆದರು. ಶ್ರೀಧರ್ ಕೂಡಾ ತಮಿಳಿನಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದ್ದವರು. ಕರ್ಣನ್, ಚಿತ್ರಮೇಳ, ಸ್ನೇಹಂ, ಕ್ರೋಧಂ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಈ ದಂಪತಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ದುರದೃಷ್ಟವಷಾತ್ ಶ್ರೀಧರ್ 11 ಡಿಸೆಂಬರ್ 2013 ರಂದು ಹೃದಯಾಘಾತದಿಂದ ನಿಧನರಾದರು.
ಅಯ್ಯರ್ ಫ್ಯಾಮಿಲಿಯಿಂದ ಬಂದ ಇವರು ಮೂಲತಃ ಕೇರಳದ ಪಾಲಕ್ಕಾಡ್ ನವರು. ಬಳಿಕ ತಂದೆ ಸರಕಾರಿ ಕೆಲಸದಲ್ಲಿ ವರ್ಗಾವಣೆ ಯಾಗಿ ಚೆನ್ನೈ ಯಲ್ಲಿ ನೆಲೆಸ್ತಾರೆ. ಸಿನೆಮಾಗೆ ಗುಡ್‌ಬೈ ಹೇಳಿದ ಬಳಿಕ ಶ್ರೀಧರ್ ರವರನ್ನು ಮದುವೆಯಾಗ್ತಾರೆ. ಆದರೆ ದುರದೃಷ್ಟವಷಾತ್ ಶ್ರೀಧರ್ 11 ಡಿಸೆಂಬರ್ 2013 ರಂದು ಹೃದಯಾಘಾತದಿಂದ ವಿಧಿವಶರಾಗ್ತಾರೆ.
ಪತಿ ನಿಧನರಾದ ನಂತರ ಬೇಬಿ ಇಂದಿರಾ ಬಹಳ ಆರ್ಥಿಕ ಸಮಸ್ಯೆ ಎದುರಿಸಿದ್ದಾರೆ. ಬಹಳ ವರ್ಷಗಳಿಂದ ಅವರು ಮಾಧ್ಯಮಗಳ ಕಣ್ಣಿಗೂ ಬಿದ್ದಿಲ್ಲ. ಸೋಷಿಯಲ್ ಮೀಡಿಯಾ ಕೂಡಾ ಬಳಸುತ್ತಿಲ್ಲ. ಸದ್ಯಕ್ಕೆ ಇಂದಿರಾ ತಮಿಳುನಾಡಿನ ಚೆನ್ನೈನ ಕೊಟ್ಟಿವಾಕಮ್ ಕರ್ಪಗಂಬಲ್ ನಗರದಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ.