Connect with us

LATEST NEWS

ಇಂಡಿಗೋ ಬಿಕ್ಕಟ್ಟು : ನಾಲ್ವರು ವಿಮಾನ ಕಾರ್ಯಾಚರಣೆ ಇನ್‌ಸ್ಪೆಕ್ಟರ್‌ಗಳ ಅಮಾನತು

Published

on

ಮಂಗಳೂರು/ಮುಂಬೈ : ಇಂಡಿಗೋ ವಿಮಾನ ಬಿಕ್ಕಟ್ಟು ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿಮಾನಗಳ ಸಂಚಾರ ರದ್ದತಿ ದೇಶವನ್ನೇ ತಲ್ಲಣಗೊಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದ್ದು, ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು(ಎಫ್‌ಒಐ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅಮಾನತುಗೊಳಿಸಿದೆ.

ನೂರಾರು ವಿಮಾನಗಳ ವ್ಯತ್ಯಯದಿಂದ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇಂದು(ಡಿ.12) ಕೂಡ ಈ ಬಿಕ್ಕಟ್ಟು ಮುಂದುವರಿದಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ 50 ವಿಮಾನಗಳ ಕಾರ್ಯಾಚರಣೆಗಳು ರದ್ದುಗೊಂಡಿವೆ.

ಇದನ್ನೂ ಓದಿ : ತಾಯಿಯನ್ನು ನಿಂದಿಸಿದ ಅಣ್ಣ; ಕೊಂ*ದೇ ಬಿಟ್ಟ ತಮ್ಮ!

ಎಫ್‌ಒಐಗಳು ನಾಗರಿಕ ವಿಮಾನಯಾನ ನಿರ್ದೇಶನಾಲಯದಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳು. ಅದರ ನಿಯಂತ್ರಕ ಮತ್ತು ಸುರಕ್ಷತಾ ಮೇಲ್ವಿಚಾರಣಾ ಕಾರ್ಯಗಳ ಭಾಗವಾಗಿ ಅವರು ಕೆಲಸ ಮಾಡುತ್ತಾರೆ. ಆಗಾಗ್ಗೆ ವಿಮಾನಯಾನ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗುತ್ತದೆ.

DAKSHINA KANNADA

ಡಾ. ಬಿ. ವಿ. ಮಂಜುನಾಥ್ ಅವರಿಗೆ FRCP (ಗ್ಲಾಸ್ಗೋ–ಯುಕೆ) ಪ್ರಶಸ್ತಿ

Published

on

ಮಂಗಳೂರು : ಯುನೈಟೆಡ್ ಕಿಂಗ್ಡಮ್‌ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ ಸಂಸ್ಥೆಯು ಹೃದಯರೋಗ ಕ್ಷೇತ್ರದಲ್ಲಿ ವಿಶಿಷ್ಟ ವೈದ್ಯಕೀಯ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ, ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ,  ಮುಖ್ಯಸ್ಥರ ಹಾಗೂ ಮುಖ್ಯ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಬಿ. ವಿ. ಮಂಜುನಾಥ್ ಅವರಿಗೆ ಅತ್ಯಂತ ಗೌರವಾನ್ವಿತ “ಆನರರಿ FRCP” (ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್) ಪ್ರಶಸ್ತಿಯನ್ನು ಪ್ರದಾನಿಸಿದೆ.

ಡಾ. ಮಂಜುನಾಥ್ ಅವರಿಗೆ 36 ವರ್ಷಗಳಿಗಿಂತ ಹೆಚ್ಚು ಹೃದಯರೋಗ ಚಿಕಿತ್ಸಾ ಅನುಭವವಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ಲೇಖನಗಳು ಮತ್ತು ಪ್ರಸ್ತುತಿಗಳು, ಪಿಎಚ್‌ಡಿ ಮಾರ್ಗದರ್ಶಕರಾಗಿ ಹಾಗೂ ವಿಶ್ವವಿದ್ಯಾಲಯದ ಪರೀಕ್ಷಕರಾಗಿ ಸೇವೆ, ಮತ್ತು ಅನೇಕ ಪದವಿ, ಸ್ನಾತಕೋತ್ತರ ಹಾಗೂ ಡಿಎಂ ಕಾರ್ಡಿಯಾಲಜಿ ಫೆಲೋಶಿಪ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ಹೃದಯ ಕ್ಯಾಥ್ ಲ್ಯಾಬ್‌ನಲ್ಲಿ ಅನೇಕ ಸಂಕೀರ್ಣ ಇಂಟರ್ವೆನ್ಶನಲ್ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಆನರರಿ FRCP ಪದವಿ ಪರೀಕ್ಷಾಧಾರಿತ ಪದವಿಯಿಂದ ಭಿನ್ನವಾಗಿದ್ದು, ಇದು ಅನುಭವಿ ವೈದ್ಯರಿಗೆ ನೀಡಲಾಗುವ ಅತ್ಯಂತ ಅಪರೂಪದ ಹಾಗೂ ಗೌರವಾನ್ವಿತ ಅಂತಾರಾಷ್ಟ್ರೀಯ ಫೆಲೋಶಿಪ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದವರಿಗೆ ಈ ಗೌರವ ಲಭಿಸುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ಮಟ್ಟದ ಸಹೋದ್ಯೋಗಿ ಮಾನ್ಯತೆಯನ್ನು ನೀಡುತ್ತದೆ.

ಇದನ್ನೂ ಓದಿ : ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

ಈ ಗೌರವವನ್ನು ವಿಶ್ವದಾದ್ಯಂತ ಆಯ್ಕೆಯಾದ ಕೆಲವೇ ವೈದ್ಯರಿಗೆ (ವಾರ್ಷಿಕವಾಗಿ ಗರಿಷ್ಠ 15 ಜನರಿಗೆ ಮಾತ್ರ) ರಾಯಲ್ ಕಾಲೇಜ್ ಸದಸ್ಯರ ಮತದಾನದ ಮೂಲಕ ಪ್ರದಾನಿಸಲಾಗುತ್ತದೆ.

 

Continue Reading

LATEST NEWS

ನಿಂತಿದ್ದ ಪಿಕ್‌-ಅಪ್‌ಗೆ ಡಿಕ್ಕಿ ಹೊಡೆದ ಶಾಲಾ ಮಕ್ಕಳಿದ್ದ ವಾಹನ; ನಾಲ್ಕು ಮಕ್ಕಳು ಗಂಭೀರ ಗಾಯ

Published

on

ಕಾರವಾರ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಬೊಲೆರೊ ಓಮಿನಿ ನಿಂತಿದ್ದ ಪಿಕ್‌-ಅಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಳೆ ಬಸ್‌ ನಿಲ್ದಾಣದ ಬಳಿ ಸಂಭಿವಿಸಿದೆ.


ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಗಂಭೀರ ಗಾಯಗೊಂಡ ಮಕ್ಕಳು. ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೆಎಸ್ಆರ್‌ಟಿಸಿ ಬಸ್‌-ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕನ ಜೀವ ಉಳಿದಿದ್ದೇ ಒಂದು ಪವಾಡ

ಈ ಘಟನೆ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ನಡೆದಿದೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

INTERNATIONAL

ಕೊನೆಗೂ ಸಿಕ್ತು ಡೊನಾಲ್ಡ್‌ ಟ್ರಂಪ್‌ ಕೈಗೆ ನೊಬೆಲ್‌ ಶಾಂತಿ ಪುರಸ್ಕಾರ!

Published

on

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಹುದಿನಗಳ ಕನಸು ಈಡೇರಿದೆ. ಕೊನೆಗೂ ನೊಬೆಲ್‌ ಶಾಂತಿ ಪುರಸ್ಕಾರ ಅವರ ಕೈ ಸೇರಿದೆ.

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕು ಅನ್ನೋ ವಿಚಾರ ಭಾರೀ ಸದ್ದು ಮಾಡಿತ್ತು. ಜಗತ್ತಿನಲ್ಲಿ ಅನೇಕ ಯುದ್ದಗಳನ್ನು ನಾನು ನಿಲ್ಲಿಸಿ ಜಗತ್ತಿನಲ್ಲಿ ಶಾಂತಿ ಕಾಪಾಡಿದ್ದೇನೆ, ಹೀಗಾಗಿ ನನಗೆ ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿ ಕೊಡಬೇಕು ಎಂದು ಡೊನಾಲ್ಡ್‌ ಟ್ರಂಪ್‌ ವಾದ ಮಾಡಿದ್ದರು. ಆದರೆ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊಗೆ ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಲಾಗಿತ್ತು.

ಆದರೆ ತನಗೆ ಸಿಕ್ಕ ಪ್ರಶಸ್ತಿಯನ್ನು ಕೊರಿನಾ ಮಚಾದೊ ಶ್ವೇತಭವನಕ್ಕೆ ತೆರಳಿ ಅಧ್ಯಕ್ಷ ಟ್ರಂಪ್‌ ಅವರಿಗೆ ಗೌರವ ಸೂಚಕವಾಗಿ ಪ್ರದಾನ ಮಾಡಿದ್ದಾರೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟನೆ ನೀಡಿದ್ದಾರೆ.

ವೆನೆಜುವೆಲಾದ ಮಾರಿಯಾ ಕೊರಿನಾ ಮಚದೊ ಅವರನ್ನು ಭೇಟಿಯಾಗಲು ತಮಗೆ ಸಿಕ್ಕ ದೊಡ್ಡ ಗೌರವ ಎಂದು ಅಧ್ಯಕ್ಷ ಟ್ರಂಪ್‌ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಉತ್ತಮ ಕೆಲಸಕ್ಕಾಗಿ ಮಾರಿಯಾ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

ಇನ್ನು ಮಚಾದೊ ಅವರು ಹೇಳಿಕೆ ನೀಡಿದ್ದು, ನಾನು ಯುನೈಟೆಡ್‌ ಸ್ಟೇಟ್ಸ್‌ ಅಧ್ಯಕ್ಷರಿಗೆ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನೊಬೆಲ್‌ ಪ್ರಶಸ್ತಿಯನ್ನು ಹಸ್ತಾಂತರಿಸಬಹುದೇ?
ಮಾರಿಯಾ ಕೊರಿನಾ ಮಚಾದೊ ಅವರಿಗೆ ಸಿಕ್ಕಿದ ನೊಬೆಲ್‌ ಶಾಂತಿ ಪ್ರಶಸ್ತಿಯ ಪದಕ ಹಾಗೂ ಪ್ರಮಾಣ ಪತ್ರವನ್ನು ಮಚಾಡೊ ಟ್ರಂಪ್‌ ಅವರಿಗೆ ಹಸ್ತಾಂತರ ಮಾಡಿದ್ದು ದೊಡ್ಡ ವಿವಾದ ಎಬ್ಬಿಸಿದೆ. ಸಾಮಾನ್ಯವಾಗಿ ನಾರ್ವೇಜಿಯನ್‌ ನೊಬೆಲ್‌ ಸಂಸ್ಥೆಯು ಪ್ರಶಸ್ತಿಯ ಹಣವ್ನನು ವಿಜೇತರು ಬಯಸುವವರೊಂದಿಗೆ ಮಾತ್ರ ಹಂಚಿಕೊಳ್ಳಬಹುದು. ಆದರೆ ಬಹುಮಾನವನ್ನು ಬೇರೆಯವರೊಂದಿಗೆ ವರ್ಗಾಯಿಸಲು ಅಥವಾ ಹಂಚಿಕೊಳ್ಳು ಸಾಧ್ಯವಿಲ್ಲ ಎಂದು ಹೇಳಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page