Connect with us

LATEST NEWS

ಮಹಿಳಾ ವಿಶ್ವಕಪ್‌ನಲ್ಲಿ ಮಿಂಚುತ್ತಿರುವ ಬಂಟ್ವಾಳ ಮೂಲದ ಜೆಮಿಮಾ ರೊಡ್ರಿಗಸ್

Published

on

ಭಾರತ ವನಿತೆಯರ ಕ್ರಿಕೆಟ್ ತಂಡದ ದಶಕಗಳ ಕನಸು ವಿಶ್ವಕಪ್ ವಿಜಯಕ್ಕೆ ಇನ್ನೊಂದು ಹೆಜ್ಜೆ ಬಾಕಿ ಇದೆ. ಆದರೆ ಬಲಾಢ್ಯ ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಸಿಡಿಸಿದ ಶತಕ ಮತ್ತು ಭಾರತ ತಂಡವನ್ನು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ ಫೈನಲ್‌ಗೆ ಜೆಮಿಮಾ ರೊಡ್ರಿಗಸ್ ಕೊಂಡೊಯ್ದ ರೀತಿ ಭಾರತೀಯರ ಮನಸಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ. ಅದರಲ್ಲೂ, ಜೆಮಿಮಾ ರೊಡ್ರಿಗಸ್ ಅವರ ಪೋಷಕರು ಮಂಗಳೂರಿಗರೇ ಅನ್ನೋದು ಮತ್ತೊಂದು ವಿಶೇಷ.

ಹೌದು, ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಗಳಿಸಿದ್ದ ಐದು ವಿಕೆಟ್‌ಗಳ ಐತಿಹಾಸಿಕ ಗೆಲುವಿನಲ್ಲಿ ಜೆಮಿಮಾ ಪಾತ್ರ ದೊಡ್ಡದು. 134 ಎಸೆತಗಳಲ್ಲಿ 127 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ ಅವರು ಕೇವಲ ತನ್ನ ಕೌಶಲ್ಯದಿಂದ ಮಾತ್ರವಲ್ಲದೆ ಅಸಾಧಾರಣ ಮಾನಸಿಕ ಸ್ಥೈರ್ಯದಿಂದ ಭಾರತವನ್ನು ಫೈನಲ್‌ಗೆ ತಲುಪಿಸಿದ್ದರು.

ಈ ಅಮೋಘ ಗೆಲುವಿನಿಂದ ಜೆಮಿಮಾ ಕೇವಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನಷ್ಟೇ ಅಲ್ಲ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದಾರೆ. ಹಿಂದೊಮ್ಮೆ ರೀಲ್‌ಗಳ ರಾಣಿ ಎಂದು ಟೀಕೆಗೆ ಗುರಿಯಾಗಿದ್ದ ಜೆಮಿಮಾ, ಈಗ ರನ್‌ಗಳ ರಾಣಿಯಾಗಿ ಟೀಕೆಗೆ ತಕ್ಕ ಉತ್ತರ ನೀಡಿದ್ದರು.

ಬಂಟ್ವಾಳ ತಾಲೂಕಿನ ತೊಡಂಬಿಲದಲ್ಲಿ ಜೆಮಿಮಾ ಅವರ ಅಜ್ಜಿ ಮನೆ ಇದ್ದ ಕಾರಣ ಜೆಮಿಮಾ ಅವರು ಕರಾವಳಿಯ ಬಗ್ಗೆ ಅಭಿಮಾನ ಹೊಂದಿದ್ದಾರೆ. ಜೆಮಿಮಾ ಅವರು 2 ವರ್ಷವರಿದ್ದಾಗಲೇ ಕ್ರಿಕೆಟ್ ಆಟದತ್ತ ಆಕರ್ಷಿತರಾಗಿದ್ದರು. ತನ್ನ ಅಜ್ಜ ಕ್ಸೇವಿಯರ್ ಅವರೊಂದಿಗೆ ಮನೆಯಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅದುವೇ ಮುಂದೆ ಅವರಿಗೆ ಹವ್ಯಾಸವಾಗಿ ಬೆಳೆಯಿತು. ಅಜ್ಜ ಕಲಿಸಿದ ವಿದ್ಯೆ ಇಂದು ಆಕೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್!

ಮುಂಬೈನ 17 ಹಾಗೂ 19 ವರ್ಷ ವಯೋಮಾನದ ಹಾಕಿ ತಂಡಗಳಲ್ಲಿ ಪ್ರತಿನಿಧಿಸಿದ್ದ ಜೆಮಿಮಾ, ಎರಡೂ ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ಮಟ್ಟದಲ್ಲಿ ಸಾಧನೆ ಮಾಡಿದ ಅಪರೂಪದ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು ಅನ್ನುವುದೇ ಮತ್ತೊಂದು ವಿಶೇಷ.

FILM

ಪ್ರೀಮಿಯರ್ ಶೋ ನೋಡಿ ‘ಜೈ’ ಅಂದ್ರು ಪ್ರೇಕ್ಷಕರು

Published

on

ಮಂಗಳೂರು : ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಹೊಸ ತುಳು ಚಲನ ಚಿತ್ರ ‘ಜೈ’ ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಅದರ ಪ್ರೀಮಿಯರ್ ಶೋ ಇಂದು(ನ.09) ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ ಭರ್ಜರಿಯಾಗಿ ನಡೆಯಿತು.  ನಟ ರಾಜ್ ದೀಪಕ್ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಪ್ರೀಮಿಯರ್ ಶೋ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

ಬಿಗ್ ಬಜೆಟ್‌ನ ಈ ಚಿತ್ರ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್, ಟ್ರೇಲರ್ ಎಲ್ಲವೂ  ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಅಂದಹಾಗೆ, ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸಿರೋದು ಪ್ರಮುಖ ಆಕರ್ಷಣೆ.

ಗಿರಿಗಿಟ್, ಗಮ್ಜಾಲ್ ಮತ್ತು ಸರ್ಕಸ್ ಚಿತ್ರದ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ‘ಜೈ’ ಎಂಬ ಮಹತ್ವಾಕಾಂಕ್ಷೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.  ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆ್ಯಕ್ಷನ್, ಡ್ರಾಮಾ ಮತ್ತು ಎಮೋಷನ್‌ಗಳ ಸಮನ್ವಯವಿದೆ. ರೂಪೇಶ್ ಶೆಟ್ಟಿಗೆ  ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೊತೆಯಾಗಿದ್ದಾರೆ.

ಚಿತ್ರದ ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಅವರು ಬರೆದಿದ್ದಾರೆ. ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ್ಹಾ, ಸಂಕಲನ ರಾಹುಲ್ ವಸಿಷ್ಠ ಅವರದ್ದು ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ : ಉರ್ವ ಮಾರಿಯಮ್ಮ ಕ್ಷೇತ್ರ : ಡಿ.25 ಮತ್ತು 26 ರಂದು ನವಾಕ್ಷರಿ ಮಹಾಮಂತ್ರ ಯಾಗ

ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಜೈ’ ಚಲನ ಚಿತ್ರದ  ಪ್ರಿಮಿಯರ್ ಶೋ ಈಗಾಗಲೇ ಹಲವಾರು ಕಡೆ ನೆರವೇರಿದೆ. ಮಂಗಳೂರಿನಲ್ಲಿ ಇಂದು(ನ.09) ನೆರವೇರಿದ್ದು, ಚಿತ್ರ  ನೋಡಿದ ಪ್ರೇಕ್ಷಕರು ಜೈ ಎಂದಿದ್ದಾರೆ.

 

 

Continue Reading

BIG BOSS

ನಿಶ್ಚಿತಾರ್ಥ ಮಾಡಿಕೊಂಡ BBK11ರ ಸ್ಪರ್ಧಿ ಉಗ್ರಂ ಮಂಜು

Published

on

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ, ನಟ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಮಂಜು ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಬರೆದುಕೊಂಡಿದ್ದಾರೆ.

ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ.

ಇದನ್ನೂ ಓದಿ: 20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

ಹುಡುಗಿ ಯಾರು?
ಉಗ್ರಂ ಮಂಜು ಕೈಹಿಡಿಯಲಿರುವ ಸಂಧ್ಯಾ ಖುಷಿ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲ್ಯಾಂಟ್ ಕೋರ್ಡಿನೇಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿರುವ ಸಂಧ್ಯಾ ಅವರು ತಮ್ಮ ಹಲವಾರು ವಿಡಿಯೋಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ.

Continue Reading

LATEST NEWS

ಉರ್ವ ಮಾರಿಯಮ್ಮ ಕ್ಷೇತ್ರ : ಡಿ.25 ಮತ್ತು 26 ರಂದು ನವಾಕ್ಷರಿ ಮಹಾಮಂತ್ರ ಯಾಗ

Published

on

ಮಂಗಳೂರು : ಉರ್ವ ಶ್ರೀಮಾರಿಯಮ್ಮ ದೇವಸ್ಥಾನದಲ್ಲಿ ಡಿಸೆಂಬರ್ 25 ರಿಂದ 26 ರ ವರೆಗೆ ನವಾಕ್ಷರಿ ಮಹಾಮಂತ್ರ ಯಾಗ ನಡೆಯಲಿದೆ.

ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಮಂಗಳೂರು ತಾಲೂಕಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡ ಒಂದೆನಿಸಿರುತ್ತದೆ. ಈ ಕ್ಷೇತ್ರವು ಸಹಸ್ರಾರು ಸಂಖ್ಯೆಯ ಭಕ್ತರ ಆರಾಧನ ಸ್ಥಳವೆನಿಸಿದೆ. ವರ್ಷಂಪ್ರತಿ ಕುಂಭ ಮಾಸದ ಶುಕ್ಲ ಪಕ್ಷದಲ್ಲಿ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯುವ ವರ್ಷಾವಧಿ ಮಹಾಪೂಜೆಯ ಸಂದರ್ಭ ಇಲ್ಲಿ ಸೇರುವ ಭಕ್ತ ಜನಸ್ತೋಮ ಈ ಕ್ಷೇತ್ರದ ಕಾರಣಿಕ ಹಾಗೂ ಪ್ರಸಿದ್ದಿಗೆ ಉದಾಹರಣೆಯಾಗಿದೆ ಎಂದು ಲಕ್ಷಣ ಅಮೀನ್ ಕೋಡಿಕಲ್ ಆಡಳಿತ ಮೊಕ್ತೇಸರರು ತಿಳಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಉರ್ವ ಶ್ರೀಮಾರಿಯಮ್ಮ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಿಮಿತ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ವೈಭವದಿಂದ ಸಂಪನ್ನವಾಗಿದ್ದು, ಅದಕ್ಕೆ ಪೂರಕವಾಗಿ ಈ ಬಾರಿ ಗ್ರಾಮ ಕ್ಷೇಮ ಮತ್ತು ಲೋಕ ಕಲ್ಯಾಣರ್ಥವಾಗಿ ಹಾಗೂ ಸಾನ್ನಿಧ್ಯ ಶ್ರೇಯೋಭಿವೃದ್ಧಿಗಾಗಿ ‘ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ’ವನ್ನು ನೆರೆವೇರಿಸಲು ನಿಶ್ಚಯಿಸಲಾಗಿರುತ್ತದೆ‌ ಎಂದರು.

ಕ್ಷೇತ್ರದ ತಂತ್ರಿವರ್ಯರಾದ ಕೋಡಿಕಲ್ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದ ಪೌರೋಹಿತ್ವದಲ್ಲಿ ಡಿ. 25 ಹಾಗೂ 26 ರಂದು ಕ್ಷೇತ್ರದಲ್ಲಿ ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗದ ವೈದಿಕ ವಿಧಿ-ವಿಧಾನಗಳು ನಡೆಯಲಿದ್ದು, ಈ ಮಹಾಮಂತ್ರ ಯಾಗವು ವಿಶಿಷ್ಠವಾದ ಯಾಗವಾಗಿದ್ದು, ಮಹಾದೇವಿಗೆ ತುಂಬಾ ಪ್ರಿಯವಾದ ಶ್ರೇಷ್ಠ ಯಾಗವೆನಿಸಿದೆ ಎಂದರು.

ಈ ನವಾಕ್ಷರಿ ಯಾಗ ನಡೆಯಲಿರುವ ಎರಡು ದಿನಗಳಲ್ಲಿ ವಿವಿಧ ವೈದಿಕ ಆಚರಣೆಗಳು ಜರಗಲಿದ್ದು, ಮಹಾ ಅಭಿಷೇಕ, ಮಹಾರಂಗಪೂಜೆ, ಶ್ರೀ ದೇವಿಯ ದರ್ಶನ ಬಲಿ, ದೀಪೋತ್ಸವ, ರಥೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ಕೂಡಾ ನೆರವೇರಲಿರುವುದು. ಇದೇ ಸಂದರ್ಭ ದ.ಕ. ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ, ಆಯ್ದ ಭಜನಾ ತಂಡಗಳಿಂದ ಹರಿನಾಮ ಸಂಕೀರ್ತನೆ, ಯಕ್ಷ ತೆಲಿಕೆ – ಹಾಸ್ಯ ವೈಭವ ಕಾರ್ಯಕ್ರಮ, ಚಾ ಪಠ್ಯ ಕಲಾವಿದರಿಂದ ತುಳು ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ

ಸುದ್ದಿಗೋಷ್ಟಿಯಲ್ಲಿ  ಕರ್ನಾಟಕ ಪರ್ಶಿಯನ್ ಮೀನುಗಾರರ ಸಂಘದ ಅಧ್ಯಕ್ಷ ಅನೀಲ್ ಕುಮಾರ್ ಬೊಕ್ಕಪಟ್ಣ,  ಲೋಕೇಶ್ ಸುವರ್ಣ ಕುದ್ರೋಳಿ 3 (ಅಧ್ಯಕ್ಷ, ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾ), ಮೋಹನ್ ಬೆಂಗ್ರೆ, (ಉಪಾಧ್ಯಕ್ಷ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ), ಗೌತಮ್ ಸಾಲ್ಯಾನ್ ಕೋಡಿಕಲ್ (ಸಂಚಾಲಕರು, ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ ಸಮಿತಿ), ಜಗದೀಶ್ ಬಂಗೇರ ಬೋಳೂರು(ಪ್ರಧಾನ ಕಾರ್ಯದರ್ಶಿ, ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾ), ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

 

 

 

 

 

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page