Connect with us

LATEST NEWS

ಜೂನ್ 24 ರಿಂದ ಭಾರತೀಯ ವಾಯುಪಡೆಗೆ ನೇಮಕಾತಿ ಆರಂಭ

Published

on

ನವದೆಹಲಿ: ‘ಅಗ್ನಿಪಥ’ ಯೋಜನೆಯಡಿ ಜೂನ್ 24 ರಿಂದ ಭಾರತೀಯ ವಾಯುಪಡೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ವಿ.ಆರ್ ಚೌಧರಿ ಶುಕ್ರವಾರ ತಿಳಿಸಿದ್ದಾರೆ.


2022ರ ಅವಧಿಯಲ್ಲಿ ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 23ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಯುವಕರು ಹೊಸ ಮಾದರಿಯ ನೇಮಕಾತಿಯ ಅಡಿಯಲ್ಲಿ ವಾಯುಪಡೆ ಸೇರಲಿದ್ದಾರೆ ಎಂದು ಅವರು ಹೇಳಿದರು.
ನಾಲ್ಕು ವರ್ಷಗಳ ಅಲ್ಪಾವಧಿ ನೇಮಕಾತಿ ಯೋಜನೆಯ ಬಗ್ಗೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ‘ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಸರ್ಕಾರವು ಇತ್ತೀಚೆಗೆ ‘ಅಗ್ನಿಪಥ’ ಯೋಜನೆಯನ್ನು ಘೋಷಿಸಿತು.

ಯೋಜನೆಗೆ ವಯೋಮಿತಿ ಹದಿನೇಳುವರೆ ವರ್ಷದಿಂದ 21 ವರ್ಷಗಳನ್ನು ನಿಗದಿ ಮಾಡಿತ್ತು. ಆದರೆ, ಮೊದಲ ನೇಮಕಾತಿಯಲ್ಲಿ ವಯೋಮಿತಯನ್ನು 23 ವರ್ಷಗಳಿಗೆ ಹೆಚ್ಚಿಸಲಾಗಿದೆ’ ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಹೇಳಿದ್ದಾರೆ.
‘ಈ ಬದಲಾವಣೆಯು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿವೀರರಾಗಿ ಸೇರ್ಪಡೆಗೊಳ್ಳಲು ಸಹಾಯವಾಗಲಿದೆ. ವಾಯುಪಡೆಯ ಆಯ್ಕೆ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗುತ್ತದೆ’ ಅವರು ಹೇಳಿದರು.
2022ರ ಅವಧಿಯಲ್ಲಿ ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 23 ವರ್ಷಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಗುರುವಾರ ರಾತ್ರಿ ತೀರ್ಮಾನ ಕೈಗೊಂಡಿತ್ತು.

FILM

ತಾಳಿ ಕಟ್ಟುವಾಗ ನನಗೆ… ಮದುವೆಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಧನಂಜಯ

Published

on

ಮಂಗಳೂರು/ಮೈಸೂರು : ನಟ ಡಾಲಿ ಧನಂಜಯ್ ಅವರು ಡಾ|| ಧನ್ಯಾತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಭಾನುವಾರ (ಫೆ.16ರಂದು) ಮೈಸೂರಿನ ವಸ್ತು ಸಂಗ್ರಹಾಲಯ ಮೈದಾನದಲ್ಲಿ ಎರಡೂ ಕುಟುಂಬದ ಹಿರಿಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು.

ಧನಂಜಯ-ಧನ್ಯತಾ ಅವರ ಅದ್ದೂರಿ ವಿವಾಹ ಸಂಭ್ರಮಕ್ಕೆ ನೂರಾರು ಸಿನಿಮಾ ತಾರೆಯರು, ರಾಜಕೀಯ ಗಣ್ಯರು, ಸಾವಿರಾರು ಅಭಿಮಾನಿಗಳು ಆಗಮಿಸಿ ಶುಭಕೋರಿದ್ದಾರೆ.

ಇದನ್ನೂ ಓದಿ: ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ ಗೊತ್ತಾ ? ಈ ಬಗ್ಗೆ ಏನಂದ್ರು ಧನಂಜಯ್ ಅವರ ಭಾವಿ ಪತ್ನಿ

ಮದುವೆ ಮುಗಿದ ನಂತರ ಡಾಲಿ ಧನಂಜಯ ಅವರು ಮೊದಲ ಬಾರಿಗೆ ಮಾಧ್ಯಮಗಳ ಎದುರಲ್ಲಿ ಮಾತನಾಡಿದ್ದಾರೆ. ‘ಎಲ್ಲರಿಗೂ ಧನ್ಯವಾದಗಳು. ಸಣ್ಣ-ಪುಟ್ಟ ತಪ್ಪುಗಳು ಆಗಿದ್ದರೆ ಕ್ಷಮೆ ಇರಲಿ. ಶಾಂತಿಯುತವಾಗಿ ಸಮಾರಂಭ ನಡೆಯಿತು. ಅಭಿಮಾನಿಗಳಿಗೆ ವಿಶೇಷ ಧನ್ಯವಾದ. ಮನೆಯವರು ತುಂಬಾ ಖುಷಿ ಆಗಿದ್ದಾರೆ. ಸಾವಿರಾರು ಜನರು ಬಂದು ಹರಸಿದ್ದು ಖುಷಿ ಆಯಿತು. ಅಭಿಮಾನಿಗಳ ಪ್ರೀತಿಗೆ ಸಾವಿರಾರು ಜನ ಬಂದು ಹಾರೈಸಿದ್ದು ಖುಷಿ ಆಯಿತು. ಅಭಿಮಾನಿಗಳ ಪ್ರೀತಿಗೆ ಏನು ವಾಪಾಸ್ ನೀಡವಬೇಕೆಂದು ಗೊತ್ತಿಲ್ಲ. ಅವರ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಡಾಲಿ ಹೇಳಿದರು.

ತುಂಬಾನೆ ಖುಷಿ ಆಗುತ್ತಿದೆ. ಇಷ್ಟು ಜನರನ್ನು ನಾನು ಯಾವತ್ತೂ ನೋಡಿರಲಿಲ್ಲ. ಇವರಿಗೆ ಸ್ವಲ್ಪ ಪರಿಚಯ ಇರುತ್ತದೆ. ನಾನು ತುಂಬಾ ಭಾವುಕಳಾದೆ. ಎಲ್ಲರ ಆಶೀರ್ವಾದ ಪಡೆದು ತುಂಬಾನೇ ಖುಷಿ ಆದೆ ಎಂದು ಧನ್ಯತಾ ಹೇಳಿದರು.

ಅವರ ಕುಟುಂಬ ನನ್ನ ಕುಟುಂಬ ಇದ್ದಹಾಗೆ. ಒಂದು ವರ್ಷದಿಂದ ಇದ್ದೇವೆ. ನನ್ನ ಮನೆಗೆ ಹೋಗುವ ತರಾ ಫೀಲಿಂಗ್ ಇದೆ. ತುಂಬಾ ಖುಷಿಯಿಂ ನಾನು ಹೋಗೋಕೆ ಕಾಯ್ತಾ ಇದ್ದೇನೆ ಎಂದು ಧನ್ಯತಾ ಹೇಳಿದರು.

ತಾಳಿ ಕಟ್ಟುವಾಗ ನನಗೇನು ಭಯ ಆಗಿಲ್ಲ. ನಾನು ಹೇಗೆ ಇದ್ನೋ ಹಾಗೆಯೇ ಇದ್ದೆ. ಎಲ್ಲವೂ ಚೆನ್ನಾಗಿಯೇ ಆಯಿತು. ಮನೆಯವರು ಅಂದುಕೊಂಡ ಹಾಗೆಯೇ ಮದುವೆ ನಡೆಯಿತು. ಕುಟುಂಬದವರ ಬಹುದಿನದ ಕನಸು ನನಸಾಗಿದೆ ಎಂದು ಡಾಲಿ ಧನಂಜಯ ಹೇಳಿದರು.

Continue Reading

LATEST NEWS

ವಿಶ್ವದ ಮೊದಲ ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್ ಹೆಂಡ್ರಿಕ್ಸ್‌ ಹ*ತ್ಯೆ

Published

on

ಮಂಗಳೂರು/ಜೋಹಾನ್ಸ್‌ ಬರ್ಗ್: ತಾನು ‘ಸಲಿಂಗಿ’ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದ ವಿಶ್ವದ ಮೊದಲ ಇಮಾಮ್, ಮುಲ್ಕಿನ್ ಹೆಂಡ್ರಿಕ್ಸ್(57) ಅವರನ್ನು ಶನಿವಾರ ಗುಂ*ಡಿಕ್ಕಿ ಹ*ತ್ಯೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಗೈಬರ್ಹಾ ನಗರದಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.


ಸಲಿಂಗಿ ಮುಸ್ಲಿಮರಿಗೆ ನಿರ್ಮಿಸಿದ್ದ ಸುರಕ್ಷಿತ ತಾಣಕ್ಕೆ ಹೆಂಡ್ರಿಕ್ಸ್ ಚಾಲಕನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮುಸುಕುಧಾರಿ ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಹೆಂಡ್ರಿಕ್ಸ್ ಮೇಲೆ ಹಲವು ಬಾರಿ ಗುಂಡಿನ ದಾ*ಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊ*ಲೆಗೆ ಕಾರಣ ನಿಗೂಢವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1996ರಲ್ಲಿ ತನ್ನನ್ನು ಸಲಿಂಗಿ ಎಂದು ಹೆಂಡ್ರಿಕ್ಸ್ ಘೋಷಿಸಿಕೊಂಡಿದ್ದರು. ಆ ಬಳಿಕ ಅವರು ಎಲ್‌ಜಿಬಿಟಿಕ್ಕೂ ಪರ ವಕಾಲತ್ತು ವಹಿಸುತ್ತಿದ್ದರು. ಎರಡು ವರ್ಷಗಳ ನಂತರ ತನ್ನ ತವರು ನಗರದಲ್ಲಿ LGBTQ+ ಮುಸ್ಲಿಮರಿಗಾಗಿ ಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದರು.

ಇದನ್ನೂ ಓದಿ : ಅಮೆರಿಕಾದಿಂದ ಗಡಿಪಾರಾಗಿ ಬಂದವರಲ್ಲಿ ಇಬ್ಬರು ಅರೆಸ್ಟ್!

2022 ರಲ್ಲಿ ‘ದಿ ರಾಡಿಕಲ್’ ಎಂಬ ಸಾಕ್ಷ್ಯ ಚಿತ್ರದಲ್ಲಿ ಹೆಂಡ್ರಿಕ್ಸ್ ಕಾಣಿಸಿಕೊಂಡಿದ್ದರು. ಬಳಿಕ ತನ್ನ ವಿರುದ್ಧ ಬೆ*ದರಿಕೆಗಳಿವೆ ಎಂದಿದ್ದರು. ಅಂಗರಕ್ಷಕರನ್ನು ನೇಮಿಸಿಕೊಳ್ಳಲು ಸಲಹೆಯನ್ನು ಅವರಿಗೆ ನೀಡಲಾಗಿತ್ತು. ಸಾ*ವಿನ ಭಯಕ್ಕಿಂತ ಪ್ರಾಮಾಣಿಕವಾಗಿರುವುದು ದೊಡ್ಡದು ಎಂದು ಹೇಳಿದ್ದರು.

ಹೆಂಡ್ರಿಕ್ಸ್ ಮಹಿಳೆಯೊಬ್ಬರನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ್ದು, ತಮ್ಮ 29 ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದಿದ್ದರು.

Continue Reading

LATEST NEWS

ಅಮೆರಿಕಾದಿಂದ ಗಡಿಪಾರಾಗಿ ಬಂದವರಲ್ಲಿ ಇಬ್ಬರು ಅರೆಸ್ಟ್!

Published

on

ಮಂಗಳೂರು/ಪಟಿಯಾಲ: ಅಮೆರಿಕಾದಿಂದ ಗಡಿಪಾರಾಗಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರನ್ನು ಕೊ*ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಪೊಲೀಸರು ಭಾನುವಾರ(ಫೆ.16) ಬಂಧಿಸಿದ್ದಾರೆ.

ಅಮೆರಿಕಾದಿಂದ ಗಡೀಪಾರಾದ 119 ಭಾರತೀಯರನ್ನು ಹೊತ್ತ ಸಿ-17 ವಿಮಾನ ಭಾನುವಾರ ಬೆಳಿಗ್ಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಅದರಲ್ಲಿದ್ದವರನ್ನು ಮನೆಗೆ ಕಳುಹಿಸುವ ಮುನ್ನ ಎಲ್ಲರನ್ನೂ ತಪಾಸಣೆ ಮಾಡಲಾಗಿದೆ. ಈ ಸಂದರ್ಭ ಪಟಿಯಾಲ ಜಿಲ್ಲೆಯ ರಾಜ್‌ ಪುರದ ಇಬ್ಬರು ವ್ಯಕ್ತಿಗಳ ಮೇಲೆ ಕೊ*ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪ ಇರುವ ವಿಚಾರ ಬಹಿರಂಗವಾಗಿದೆ.

ಸಂದೀಪ್ ಸಿಂಗ್ ಅಲಿಯಾಸ್ ಸನ್ನಿ, ಪ್ರದೀಪ್ ಸಿಂಗ್ ಬಂಧಿತರು. ಇವರು 2023ರಲ್ಲಿ ನಡೆದ ಕೊ*ಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ. ಸಂದೀಪ್ ಸೇರಿ ನಾಲ್ವರ ವಿರುದ್ಧ ರಾಜ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ದಿ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ; ಚಾಲೆಂಜ್ ಹಾಕಿದ ದಾಸ

ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ತೆಗೆದುಕೊಂಡ ಕ್ರಮದ ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವಾರ 104 ಅಕ್ರಮ ಭಾರತೀಯ ವಲಸಿಗರಿದ್ದ ವಿಮಾನ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಇಂದು (ಫೆ. 16) 119 ಭಾರತೀಯರನ್ನು ಹೊತ್ತ ಯುಎಸ್ ಸೇನಾ ವಿಮಾನವು ಅಮೃತಸರಕ್ಕೆ ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page