Connect with us

LATEST NEWS

IND vs SA ODI: ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ರೋಹಿತ್-ವಿರಾಟ್ ಜೋಡಿ!

Published

on

ರಾಂಚಿ: ಇಂದಿನಿಂದ ಭಾರತ-ಸೌತ್‌ ಆಫ್ರಿಕಾ ಎದುರಿನ ಮೂರು ದಿನಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಮುಖಭಂಗವನ್ನು ಮರೆಸುವ ರೀತಿಯಲ್ಲಿ ಹೋರಾಟ ಸಂಘಟಿಸಬೇಕಾದ ಒತ್ತಡ ಭಾರತದ ಮೇಲಿದೆ. ಇದೆಲ್ಲದರ ನಡುವೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.

ರಾಂಚಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ರಾಹುಲ್ ಪಡೆ ಸಜ್ಜಾಗಿದೆ. ಇನ್ನೊಂದೆಡೆ ಟೆಸ್ಟ್ ಹಾಗೂ ಟಿ20 ಮಾದರಿಗೆ ವಿದಾಯ ಹೇಳಿರುವ ಟೀಂ ಇಂಡಿಯಾದ ಸೂಪರ್ ಸ್ಟಾರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ಸರಣಿಯ ಅಮೋಘ ಗೆಲುವಿನ ಹುಮ್ಮಸ್ಸಿನೊಂದಿಗೆ ಆಡಲಿಳಿಯಲಿದೆ. ‘ಲಕ್ಕಿ ಕ್ಯಾಪ್ಟನ್’ ಟೆಂಬ ಬವುಮ ಅವರೇ ಹರಿಣಗಳ ಪಡೆಯ ಸಾರಥಿ. ಹೀಗಾಗಿ ಬವುಮ ಪಡೆ ರಾಂಚಿಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದೆ.

ದಾಖಲೆಗಳ ಮೇಲೆ ಕಣ್ಣಿಟ್ಟ ರೋಹಿತ್-ವಿರಾಟ್ ಜೋಡಿ!

ರೋಹಿತ್ ಮುರಿಯಬಹುದಾದ ದಾಖಲೆಗಳು?
ಸ್ಟಾರ್ ಓಪನರ್ ರೋಹಿತ್ ಶರ್ಮಾ ಇನ್ನು ಕೇವಲ 98 ರನ್ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ಸಾವಿರ ರನ್ ಬಾರಿಸಿದ ಭಾರತದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಏಕದಿನ ಮಾದರಿಯಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಸದ್ಯ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಹೆಸರಲ್ಲಿದೆ. ಅವರು 398 ಪಂದ್ಯಗಳ 369 ಇನಿಂಗ್ಸ್‌ಗಳಲ್ಲಿ 351 ಸಿಕ್ಸ್ ಬಾರಿಸಿದ್ದಾರೆ.. ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ರೋಹಿತ್‌ಗೆ ಬೇಕಿರುವುದು 2 ಸಿಕ್ಸ್ ಮಾತ್ರ. 276 ಪಂದ್ಯಗಳ 268 ಇನಿಂಗ್ಸ್‌ ಗಳಲ್ಲಿ ಬ್ಯಾಟ್ ಬೀಸಿರುವ ‘ಹಿಟ್ ಮ್ಯಾನ್’ 349 ಸಲ ಚೆಂಡನ್ನು ಬೌಂಡರಿಗೆ ಗೆರೆಯಾಚೆಗೆ ಅಟ್ಟಿದ್ದಾರೆ.

ತವರಿನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಲು ರೋಹಿತ್‌ಗೆ ಇನ್ನು 133 ರನ್ ಬೇಕಿದೆ. ಹಾಗೆಯೇ, ಮನೆಯಂಗಳದಲ್ಲಿ ನಡೆದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 9,000 ರನ್ ಗಳಿಸಿದ ಬ್ಯಾಟ‌ರ್ ಎನಿಸಿಕೊಳ್ಳಲು 27 ರನ್ ಅಗತ್ಯವಿದೆ.

ಇದನ್ನೂ ಓದಿ: ಒಟಿಟಿಗೆ ಲಗ್ಗೆ ಇಟ್ಟ ಕನ್ನಡದ ಸೂಪರ್ ಹಿಟ್ ಸಿನಿಮಾ; ಕ್ಲೈಮ್ಯಾಕ್ಸ್‌ನಲ್ಲಿ ದೊಡ್ಡ ಟ್ವಿಸ್ಟ್‌

ಕೊಹ್ಲಿ ಮುರಿಯಬಹುದಾದ ದಾಖಲೆಗಳು?
ಕೊಹ್ಲಿ ಈ ಏಕದಿನ ಸರಣಿಯಲ್ಲಿ ಶತಕ ಗಳಿಸುವಲ್ಲಿ ಯಶಸ್ವಿಯಾದರೆ, ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುತ್ತಾರೆ. ಸಚಿನ್ ತೆಂಡೂಲ್ಕರ್ 51 ಶತಕಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಏಕದಿನ ಪಂದ್ಯಗಳಲ್ಲಿ 51 ಶತಕಗಳನ್ನು ಹೊಂದಿದ್ದಾರೆ.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳನ್ನು ತಲುಪುವ ಹೊಸ್ತಿಲಲ್ಲಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಲು ಅವರಿಗೆ 337 ರನ್‌ಗಳ ಅಗತ್ಯವಿದೆ. ಇಲ್ಲಿಯವರೆಗೆ, ವಿಶ್ವದ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ 28,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ: ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಕ್ಕಾರ. ಒಂದೇ ಸರಣಿಯಲ್ಲಿ ಕಿಂಗ್ ಈ ಮೈಲಿಗಲ್ಲನ್ನು ತಲುಪುವುದು ಕಷ್ಟಕರವಾಗಿದ್ದರೂ, ಕೊಹ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ್ ಸಂಗಕ್ಕಾರ ಅವರ ಗಣ್ಯರ ಪಟ್ಟಿಯಲ್ಲಿ ಸೇರುವ ಹಾದಿಯಲ್ಲಿದ್ದಾರೆ.

ಇನ್ನು ತವರಿನಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನೂರು ಸಲ 50ಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲು ಕೊಹ್ಲಿ ಇನ್ನೊಮ್ಮೆ 50ಕ್ಕಿಂತ ಅಧಿಕ ಮೊತ್ತ ಕಲೆಹಾಕಬೇಕಿದೆ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಏಕದಿನ ಮಾದರಿಯಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಳ್ಳಲು ಕೊಹ್ಲಿಗೆ ಇನ್ನೊಂದು ಶತಕ ಬೇಕಿದೆ. ಸದ್ಯ 5 ಶತಕ ಸಿಡಿಸಿರುವ ಅವರು, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

LATEST NEWS

ಪತಿಯನ್ನು ನಂಬಿ ಪ್ರಾ*ಣ ಕಳೆದುಕೊಂಡ ಕಬಡ್ಡಿ ಆಟಗಾರ್ತಿ

Published

on

ಮಂಗಳೂರು/ನಾಗ್ಪುರ : ಪ್ರತಿಭಾವಂತ ಕಬಡ್ಡಿ ಆಟಗಾರ್ತಿಯೊಬ್ಬರು ಮನೆಯಲ್ಲೇ ಕೀಟನಾಶಕ ಸೇವಿಸಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಕಿರಣ್ ಸೂರಜ್ ದಾಧೆ (29) ಆ*ತ್ಮಹ*ತ್ಯೆಗೆ ಶರಣಾದ ಆಟಗಾರ್ತಿ.

ಕಿರಣ್ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಬಿ.ಎ ಪದವೀಧರೆಯಾದ ಕಿರಣ್, ಸೇನೆ, ಪೊಲೀಸ್, ಹೋಮ್ ಗಾರ್ಡ್ ಮತ್ತು ಇತರ ಸರ್ಕಾರಿ ಉದ್ಯೋಗಗಳಿಗಾಗಿ ನಿರಂತರವಾಗಿ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ಇದೇ ಸಂದರ್ಭ ಸ್ವಪ್ನಿಲ್ ಜಯದೇವ್ ಎಂಬ ಯುವಕನ ಪರಿಚಯವಾಗಿದೆ. ತನ್ನನ್ನು ಮದ್ವೆಯಾದ್ರೆ ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಹೇಳಿದ್ದ. ಅದನ್ನು ನಂಬಿ ಮದುವೆಯಾದ ಬಳಿಕ ಆತನ ನಿಜರೂಪ ಬಯಲಾಗಿದೆ. ಸ್ವಲ್ಪ ಸಮಯದ ಬಳಿಕ ಆತ ನಿರಂತರ ಕಿರುಕು*ಳ ನೀಡಲು ಆರಂಭಿಸಿದ್ದಾನೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೂ ಈತನ ಕಿರುಕು*ಳ ಹೆಚ್ಚಾಗುತ್ತಲೇ ಇತ್ತು ಎನ್ನಲಾಗಿದೆ.

ಇದನ್ನೂ ಓದಿ : ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡಿದ ಆರ್‌ ಅಶ್ವಿನಿ; ನೆಟ್ಟಿಗರು ಶಾಕ್!

ಗಂಡ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಬೆ*ದರಿಸಿ ಮಾನಸಿಕವಾಗಿ ಹಿಂ*ಸೆ ನೀಡುತ್ತಿದ್ದ. ಇದರಿಂದ ಮನನೊಂದು ಕೀಟನಾಶಕ ಸೇವಿಸಿ ಪ್ರತಿಭಾವಂತ ಆಟಗಾರ್ತಿ ಜೀವಾಂ*ತ್ಯಗೊಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

 

 

Continue Reading

DAKSHINA KANNADA

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ: ವಾರ್ಷಿಕ ಮಹೋತ್ಸವ

Published

on

ಬಂಟ್ವಾಳ : ವೆಲಂಕಣಿ ಮಾತೆ ದೇವಾಲಯ ಫರ್ಲ ಇದರ ವಾರ್ಷಿಕ ಮಹೋತ್ಸವ ನಡೆಯಿತು. ದಿವ್ಯ ಬಲಿ ಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ, ವ್ಯಕ್ತಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಪ್ರೀತಿ, ತ್ಯಾಗ ಮತ್ತು ಏಕತೆಯೊಂದಿಗೆ ದೇವರ ಅನುಗ್ರಹವು ಬೇಕು. ಇದಕ್ಕಾಗಿ ಪ್ರತಿದಿನ ಮಾತೆ ಮರಿಯಮ್ಮನ ಜಪಮಾಲೆಯನ್ನು ಪಠಿಸುವುದರಿಂದ  ಇದನ್ನು ಗಳಿಸಬಹುದು ಎಂದರು.

ಬಂಟ್ವಾಳ ವಲಯದ ಹಾಗೂ ಪಾಲಟಾಯ್ನ್ ಸಭೆಯ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ : ಕಾವ್ಯಾ ನಾಮಿನೇಟ್ ಮಾಡಿದ್ಯಾರನ್ನ ಗೊತ್ತಾ!? ರಣರಂಗವಾಯ್ತು ‘ಬಿಗ್’ ಮನೆ

ಫರ್ಲಾ ಧರ್ಮಕೇಂದ್ರದ ಧರ್ಮಗುರು ವಂದನೀಯ  ಮಾರ್ಕ್ ಅರುಣ್ ಡಿಸೋಜ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಹಾಗೂ ಗೌರವಾರ್ಥವಾಗಿ ಆಶೀರ್ವದಿಸಿದ ಮೇಣದ ಬತ್ತಿಯನ್ನು ವಿತರಿಸಲಾಯಿತು. ಊರ, ಪರವೂರ  ಅನೇಕ ಭಕ್ತರು ಭಾಗವಹಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page