Connect with us

LATEST NEWS

ಭಟ್ಕಳದಲ್ಲಿ ಮುಸ್ಲಿಂ ಮಹಿಳೆಯರ ಜತೆ ಅಸಭ್ಯ ವರ್ತನೆ; ಇಬ್ಬರು ಹಿಂದು ಯುವಕರ ಸಹಿತ ಏಳು ಮಂದಿ ವಶಕ್ಕೆ..!

Published

on

ಭಟ್ಕಳದ ರಂಜಾನ್‌ ಮಾರ್ಕೆಟ್‌ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸರು ಇಬ್ಬರು ಹಿಂದೂ ಯುವಕರು ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳ : ಭಟ್ಕಳದ ರಂಜಾನ್‌ ಮಾರ್ಕೆಟ್‌ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸರು ಇಬ್ಬರು ಹಿಂದೂ ಯುವಕರು ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.  

ಭಟ್ಕಳದ ಮಾರುಕಟ್ಟೆಯಲ್ಲಿ ರಂಜಾನ್‌ ಖರೀದಿ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಜನಸಂದಣಿ ಇತ್ತು.

ಇದನ್ನು ದುರುಪಯೋಗಪಡಿಸಿಕೊಂಡ ಯುವಕರು ಮುಸ್ಲಿಂ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹದ್ಲೂರು ನಿವಾಸಿ ಚಂದ್ರು ಗೊಂಡ, ಸರ್ಪನಕಟ್ಟೆಯ ರವೀಂದ್ರ ನಾಯ್ಕ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಗಳಾಗಿದ್ದಾರೆ.

ಹಿಂದು ಯುವಕರು ಈ ರೀತಿ ವರ್ತಿಸುತ್ತಿರುವುದನ್ನು ಗಮನಿಸಿದ ಮುಸ್ಲಿಂ ಯುವಕರು ಅವರ  ಮೆಲೆ ಹಲ್ಲೆ ನಡೆಸಿದ್ದಾರೆ.

ಈ ನಡುವೆ, ಸ್ಥಳಕ್ಕೆ ಪೊಲೀಸರು ಆಗಮಿಸಿ ಅನುಚಿತವಾಗಿ ವರ್ತಿಸಿದ ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಮುಂದಾದರು.

ಆರೋಪಿಗಲನ್ನು ಆರೋಪಿಗಳನ್ನು ಕರೆದೊಯ್ಯುವ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಅವರು ಬೀಸಿದ ಕಲ್ಲಿಗೆ ಪೊಲೀಸ್ ಜೀಪಿನ ಗಾಜು ಪುಡಿಯಾಗಿತ್ತು.

ಪೊಲೀಸ್ ಜೀಪಿನ ಮೇಲೆ ಕಲ್ಲೆಸೆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಲ್ಲು ತೂರಾಟ ನಡೆಸಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ದೊಂಬಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

WATCH : ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾ*ಘಾತ; ಯುವಕ ಸಾ*ವು

Published

on

ಮಂಗಳೂರು/ವಿಜಯಪುರ : ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಜಯಪುರದಲ್ಲಿ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.  ಡ್ಯಾನ್ಸ್ ಮಾಡುವಾಗಲೇ ಯುವಕನೊಬ್ಬ ಹೃದಯಾ*ಘಾತದಿಂದ ಸಾ*ವನ್ನಪ್ಪಿದ್ದಾನೆ. ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ದು*ರಂತ ಸಂಭವಿಸಿದೆ.

28 ವರ್ಷದ ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಮೃ*ತ ಯುವಕ. ಮಹಮ್ಮದ್ ಪೈಗಂಬರ್ ಆಲ್ಯೂಮೀನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದ. ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ  ಹೃ*ದಯಾಘಾತಕ್ಕೊಳಗಾಗಿ ಕು*ಸಿದು ಬಿದ್ದಿದ್ದಾನೆ.

ಇದನ್ನೂ ಓದಿ : ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

ಕೂಡಲೇ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟುಹೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ. ಯುವಕನ ಕೊನೆಯ ಕ್ಷಣದ ವೀಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

 

Continue Reading

LATEST NEWS

ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

Published

on

ಮಂಗಳೂರು/ಬೆಳಗಾವಿ: ಮಹಾಮಾರಿ ಕೋವಿಡ್ ಕುರಿತು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮಿಜಿಯವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಕೊವಿಡ್ ಕುರಿತು ಸ್ವಾಮೀಜಿ ಅವರು, ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರಿ. ಉಸಿರಾಟಕ್ಕೆ ತೊಂದರೆಯಾಗಿ ಸಾ*ವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿರೋದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ ಐದು ವರ್ಷ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗಲಿವೆ’ ಎಂದರು.

ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ; ಮೋಹಕ ತಾರೆ ಬೇಸರ

‘ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ. ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯವಿದೆ. ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಎನಾಗುತ್ತೆ ನೋಡಬೇಕು’ ಎಂದು ಸ್ವಾಮೀಜಿ ಹೇಳಿದ್ದಾರೆ.

Continue Reading

FILM

ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ; ಮೋಹಕ ತಾರೆ ಬೇಸರ

Published

on

ಮಂಗಳೂರು/ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ಗೆ ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿರುವುದರಿಂದ ಎದ್ದಿರುವ ವಿವಾದದ ಬೆನ್ನಲ್ಲೇ, ಮೋಹಕ ತಾರೆ ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ಬೇಸರ ಹಂಚಿಕೊಂಡಿದ್ದಾರೆ.

ಕರ್ನಾಟಕ ಡಿಟರ್ಜೆಂಟ್ಸ್ ಕಂಪನಿಯು ತನ್ನ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕಾಗಿ ಅವರಿಗೆ ಎರಡು ವರ್ಷಗಳಿಗೆ 6.2 ಕೋಟಿ ರೂ. ಸಂಭಾವನೆಯನ್ನು ಗೊತ್ತುಪಡಿಸಿದೆ. ತಮನ್ನಾ, ಸಂಸ್ಥೆಯ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ಪೋಸ್ಟ್‌ ಮಾಡಿದ್ದು, ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್ ರಾಯಭಾರಿಯಾಗಿ ಬಾಲಿವುಡ್ ನಟಿ! ಸಂಭಾವನೆ ಎಷ್ಟು?

‘ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆ ಪಾವತಿದಾರರ ಹಣ ವ್ಯರ್ಥಮಾಡಿದಂತಾಗುತ್ತದೆ. ಒಂದು ಉತ್ಪನ್ನಕ್ಕೆ ಜನ ಗ್ರಾಹಕರಾಗಲು, ಆ ಉತ್ಪನ್ನ ಉತ್ತಮವಾಗಿರಬೇಕು. ನಮ್ಮ ಮೈಸೂರು ಸ್ಯಾಂಡಲ್‌ ಸೋಪ್ ಉತ್ತಮ ಉತ್ಪನ್ನವಷ್ಟೇ ಅಲ್ಲ, ಅದು‌ ನಮ್ಮ ಪರಂಪರೆಯಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಬಳಸಿದ ಪ್ರತಿಯೊಬ್ಬ ವ್ಯಕ್ತಿಯು ಅದರ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗ ಸಹ ಅದರ ರಾಯಭಾರಿ, ಅದನ್ನು ಪ್ರತಿಯೊಬ್ಬ ಕನ್ನಡಿಗನು ಉಚಿತವಾಗಿ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಾನೆ’ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಜಗತ್ತಿನ ಯಶಸ್ವಿ ಬ್ರಾಂಡ್‌ಗಳಲ್ಲಿ ಒಂದಾದ ಆ್ಯಪಲ್ ಸಂಸ್ಥೆ ಬ್ರಾಂಡ್ ಅಂಬಾಸಿಡರ್ ಹೊಂದಿಲ್ಲ. ರಾಯಭಾರಿಗಾಗಿ ಆ ಕಂಪನಿ ಹಣ ವ್ಯಯಿಸುವುದಿಲ್ಲ. ಹಾಗೆಯೇ, ಡವ್‍ ಸೋಪ್‍ ಪ್ರಚಾರ ಬಹಳ ಚೆನ್ನಾಗಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page