Connect with us

kerala

ಅಕ್ರಮ ಚಿನ್ನ ಸಾಗಾಟಕ್ಕೆ ಹೊಸ ತಂತ್ರ-ಇಬ್ಬರು ಸ್ಮಗ್ಲರ್‌ ಗಳಿಂದ 2 ಕೋಟಿ ರೂ. ಮೌಲ್ಯದ ಚಿನ್ನ ವಶ..!

Published

on

ತಿರುವನಂತಪುರಂ: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಸ್ಮಗ್ಲರ್‌ ಗಳು ಹೊಸ ಹೊಸ ತಂತ್ರ ಅನುಸರಿಸುತ್ತಿದ್ದಾರೆ.

ಕಸ್ಟಮ್ಸ್‌ ಅಧಿಕಾರಿಗಳು ನೇರ ಕಾರ್ಯಾಚರಣೆಗೆ ಮುಂದಾದರೆ ಸ್ಮಗ್ಲರ್‌ ಗಳು ರಂಗೋಲಿ ಕೆಳಗೆ ತೂರುತ್ತಾರೆ. ಚಿನ್ನದ ದ್ರಾವಣದಲ್ಲಿ ಬಟ್ಟೆಗಳನ್ನು ಅದ್ದಿ ಅಕ್ರಮವಾಗಿ ಸಾಗಿಸುವ ಹೊಸ ತಂತ್ರವನ್ನು ಸ್ಮಗ್ಲರ್‌ ಗಳು ಅನುಸರಿಸಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಸ್ಮಗ್ಲರ್‌ ಗಳಿಂದ 2 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಈ ಪೈಕಿ ಒಂದು ಪ್ರಕರಣದಲ್ಲಿ 10 ಲುಂಗಿಗಳನ್ನು ಚಿನ್ನದ ದ್ರಾವಣದಲ್ಲಿ ಮುಳುಗಿಸಿ ಬಳಿಕ ಅದನ್ನು ಒಣಗಿಸಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.  ದುಬಾಯಿನಿಂದ ಬಂದಿದ್ದ ಈ ಪ್ರಯಾಣಿಕನ ಬಳಿ ಇದ್ದ ಚಿನ್ನದ ದ್ರಾವಣದಲ್ಲಿ ಅದ್ದಿದ ಲುಂಗಿಗಳ ತೂಕ  4.3 ಕೆ.ಜಿ. ಇತ್ತು. ಚಿನ್ನವನ್ನು ವಸ್ತ್ರದಿಂದ ಸಪೂರ್ಣವಾಗಿ ಬೇರ್ಪಡಿಸಿದ ಬಳಿಕವೇ ಚಿನ್ನದ ನೈಜ ತೂಕ ಗೊತ್ತಾಗಲಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ಲುಂಗಿಗಳಿಗೆ ಕನಿಷ್ಟ 1 ಕೆ.ಜಿ. ಚಿನ್ನ ಬಳಕೆ ಮಾಡಿರ ಬಹುದೆಂದು ಅಂದಾಜಿಸಲಅಗಿದೆ. ಇನ್ನೊಂದು ಪ್ರಕರಣದಲ್ಲಿ ಪ್ರಯಾಣಿಕನ ಹ್ಯಾಂಡ್‌ ಬ್ಯಾಗ್‌ ನಲ್ಲಿದ್ದ ಸ್ಟೀಲ್‌ ಫ್ಲಾಸ್ಕ್‌ ನಲ್ಲಿ ಅಡಗಿಸಿಟ್ಟಿದ್ದ 2,201.6 ಗ್ರಾ ಚಿನ್ನ ಪತ್ತೆಯಾಗಿದೆ. ಫ್ಲಾಸ್ಕ್‌ ನಿಂದ ಚಿನ್ನವನ್ನು ಪ್ರತ್ಯೇಕಿಸಿದಾಗ 1959.85 ಗ್ರಾ ಚಿನ್ನ ಸಿಕ್ಕಿದೆ. ಇದರ ಮಾರುಕಟ್ಟೆ ಮೌಲ್ಯ 1,19,35,487 ರೂಪಾಯಿ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಕೈತಪರಬಿಲ್‌ ಸುಹೈಬ್‌ ಎಮುರೇಟ್ಸ್‌ ವಿಮಾನದಲ್ಲಿ ದುಬಾಯಿಯಿಂದ ಆಗಮಿಸಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ಮಾಹಿತಿಯಂತೆ ಕಸ್ಟಮ್ಸ್‌ ಅಧಿಕಾರಿಗಳು ದಾಳಿ ನಡೆಸಿದರು.  ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

kerala

ಜೀವಾಂತ್ಯಕ್ಕೆ ಯತ್ನಿಸಿದ ವಿದ್ಯಾರ್ಥಿನಿ, ಆಸ್ಪತ್ರೆಗೆ ಸಾಗಿಸುವಾಗ ಕಾರು ಅಪಘಾತವಾಗಿ ಸಾವು..!

Published

on

ಕಾಸರಗೋಡು: ಆಕೆ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ. ಆದ್ರೆ, ಅದೇನಾಯ್ತೋ ಗೊತ್ತಿಲ್ಲ. ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಳು. ತಕ್ಷಣ ಆಕೆಯ ಸಹೋದರ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ದುರಂತ ಅಂದ್ರೆ, ಕಾರು ಅಪಘಾತ ಸಂಭವಿಸಿ, ಆಕೆ ಸಾವನ್ನಪ್ಪಿದ್ದಾಳೆ.

ಸಹೋದರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ನಡೆದಿರೋದು ಇಂದು ಬೆಳಿಗ್ಗೆ ಕಾಸರಗೋಡು ಜಿಲ್ಲೆಯ ಬೇತೂರು ಪಾರ ಸಮೀಪ. ತಚ್ಚಾರ್ ಕುಂಡುವಿನ 19 ವರ್ಷದ ಮಹಿಮಾ ಮೃತಪಟ್ಟ ವಿದ್ಯಾರ್ಥಿನಿ.

ಮಹೇಶ್ ಗಾಯಗೊಂಡ ಸಹೋದರ. ಮನೆಯಿಂದ ಒಂದು ಕಿ.ಮೀ ಅಂತರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಮಹಿಮಾ ಆಗಲೇ ಮೃತಪಟ್ಟಿದ್ದರು. ಮಹೇಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ವಿದ್ಯಾರ್ಥಿನಿ ನೇಣು ಬಿಗಿದ ಹಾಗೂ ಅಪಘಾತದ ಬಗ್ಗೆ ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

Continue Reading

kerala

ಮಂಜೇಶ್ವರ: ಗಂಟಲಲ್ಲಿ ಆಮ್ಲೆಟ್ ಸಿಲುಕಿ ವ್ಯಕ್ತಿ ಸಾವು

Published

on

ಮಂಜೇಶ್ವರ: ಗಂಟಲಲ್ಲಿ ಆಮ್ಲೆಟ್ ಸಿಲುಕಿ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಮಂಜೇಶ್ವರದ ಬದಿಯಡ್ಕದಲ್ಲಿ ರವಿವಾರ ಸಂಜೆ ನಡೆದಿದೆ.

ಬದಿಯಡ್ಕ ಚುಳ್ಳಿಕ್ಕಾನ ಮೂಲದ, ಪ್ರಸ್ತುತ ಬಾರಡ್ಕದಲ್ಲಿ ವಾಸವಿದ್ದ 52 ವರ್ಷದ ವಿನ್ಸೆಂಟ್ ಕ್ರಾಸ್ತಾ ಮೃತಪಟ್ಟವರು. ವಿನ್ಸೆಂಟ್ ರವಿವಾರ ಸಂಜೆ ಮನೆ ಸಮೀಪದ ಗೂಡಂಗಡಿಯಲ್ಲಿ ಆಮ್ಲೆಟ್ ಸೇವಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಆಮ್ಲೆಟ್ ಗಂಟಲಲ್ಲಿ ಸಿಲುಕಿ ಒದ್ದಾಡುತ್ತಿದ್ದ ವಿನ್ಸೆಂಟ್ ರನ್ನು ತಕ್ಷಣ ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಬೇಳ ಕಟ್ಟತ್ತಂಗಡಿ ಎಂಬಲ್ಲಿ ವೆಲ್ಡಿಂಗ್ ಶಾಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿನ್ಸೆಂಟ್ ಕ್ರಾಸ್ತಾ ಅವಿವಾಹಿತರಾಗಿದ್ದರು. ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿ ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Continue Reading

kerala

ಕಾಸರಗೋಡು : ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾದ ಯುವಕ

Published

on

ಕಾಸರಗೋಡು : ಚಿತ್ತಾರಿಕ್ಕಲ್ ನ ಕಂಬಳ್ಳೂರಿನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಸಿಂಧು ಮೋಲ್ (34) ಎಂಬ ಯುವತಿ ಮೇಲೆ ಕಂಬಳ್ಳೂರು ಮೂಲದ ರತೀಶ್ ಎಂಬಾತ ಆಸಿಡ್ ದಾಳಿ ನಡೆಸಿದ್ದು, ಬಳಿಕ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯುವತಿ ಮೇಲೆ ದುಷ್ಕರ್ಮಿ ಆಸಿಡ್ ದಾಳಿ ನಡೆಸಿದ್ದರಿಂದ ಆಕೆಯ ಮುಖ, ಕಣ್ಣು, ಕುತ್ತಿಗೆ ಮತ್ತು ತೊಡೆಯ ಮೇಲೆ ತೀವ್ರ ಆಸಿಡ್ ಸುಟ್ಟ ಗಾಯಗಳಾಗಿವೆ. ಸಿಂಧು ಮೋಲ್ ಪ್ರಸ್ತುತ ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರತೀಶ್ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿಂಧು ತನ್ನ ಫ್ಯಾನ್ಸಿ ಅಂಗಡಿಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸಂತ್ರಸ್ತೆಯ ಕುಟುಂಬವು ರತೀಶ್ ಸಿಂಧು ಅವರನ್ನು ಹಿಂಬಾಲಿಸುತ್ತಿದ್ದನೆಂದು ಮತ್ತು ಈ ಹಿಂದೆ ಆಸಿಡ್ ದಾಳಿಯ ಬೆದರಿಕೆ ಹಾಕಿದ್ದನೆಂದು ಬಹಿರಂಗಪಡಿಸಿದೆ. ಆಕೆ ಇತ್ತೀಚೆಗೆ ದೂರು ಕೂಡ ದಾಖಲಿಸಿದ್ದಳು ಎನ್ನಲಾಗಿದೆ.

ಇದನ್ನೂ ಓದಿ : ಆತ್ಮಹ*ತ್ಯಾ ದಾಳಿಗೆ ಸಂಬಂಧಿಸಿ ವೈರಲ್ ಆಗುತ್ತಿರುವ ಸುದ್ಧಿಗಳು ಸುಳ್ಳು : ಭಾರತೀಯ ಸೇನೆ ಸ್ಪಷ್ಟನೆ

ರತೀಶ್ ಮತ್ತು ಸಿಂಧು ನೆರೆಹೊರೆಯವರಾಗಿದ್ದು ಆಪ್ತ ಸ್ನೇಹಿತರಾಗಿದ್ದರು ಎಂದು ಹೇಳಲಾಗಿದೆ. ಯಾವುದೋ ಕಾರಣಕ್ಕೆ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸ್ ವರದಿಗಳು ಹೇಳಿವೆ. ನಂತರ ಆತ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದಾಗಿ ಆಕೆ ಚಿತ್ತಾರಿಕ್ಕಲ್ ಪೊಲೀಸರಿಗೆ ದೂರು ನೀಡಿದ್ದಾಳೆ. ರತೀಶ್ ಬೋರ್‌ವೆಲ್ ನಿರ್ಮಾಣ ಕಂಪನಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page