Connect with us

DAKSHINA KANNADA

ಮಂಗಳೂರು: ಅಕ್ರಮ ಗೋಮಾಂಸ ಸಾಗಾಟ-500 ಕೆ.ಜಿ ಗೋ ಮಾಂಸ ವಶ

Published

on

ಮಂಗಳೂರು: ಆಲ್ಟೋ ಕಾರಿನಲ್ಲಿ ಮುಡಿಪು ಭಾಗದಿಂದ ಮಂಗಳೂರಿನ ಕುದ್ರೋಳಿಯ ಕಸಾಯಿಖಾನೆಗೆ ಗೋ ಮಾಂಸ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿ ಬಂದರು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ಡೊಂಗರಕೆರೆ ಬಳಿ ನಡೆದಿದೆ.

ಆರೋಪಿಯಿಂದ ಸುಮಾರು ಸುಮಾರು 500 ಕೆ.ಜಿ ಗೋ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ಬಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಮಾಂಸ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದಾರೆ.

DAKSHINA KANNADA

ಸುರತ್ಕಲ್ : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಹೊಂಡಕ್ಕೆ ; ದಂಪತಿಗೆ ಗಾಯ

Published

on

ಸುರತ್ಕಲ್: ಕಾರೊಂದು ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 5 ಅಡಿ ಆಳದ ಹೊಂಡಕ್ಕೆ ಬಿದ್ದು ದಂಪತಿ ಗಾಯಗೊಂಡಿರುವ ಘಟನೆ ಜೋಕಟ್ಟೆಯ ಕಳವಾರು ಎಂಬಲ್ಲಿ ನಿನ್ನೆ (ಫೆ.6) ಮಧ್ಯಾಹ್ನ ನಡೆದಿದೆ.

ಸುರತ್ಕಲ್ ಕಾನ ಕಾಪ್ರಿಗುಡ್ಡ ನಿವಾಸಿ ರವಿ ಹಾಗೂ ಅವರ ಪತ್ನಿ ಗಾಯಳುಗಳು ಎಂದು ಗುರುತಿಸಲಾಗಿದೆ. ಅಪಘಾತದಿಂದ ದಂಪತಿಗೆ ಗಾಯಗಳಾಗಿದ್ದು, ಅವರನ್ನು ಕಾನದ ಆಸ್ಪತ್ರೆಗೆ ರವಾನಿಸಲಾಗಿದೆ.

ತಮ್ಮ ಪತ್ನಿಯೊಂದಿಗೆ ರವಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಜೋಕಟ್ಟೆ ಕಳವಾರು ಬಳಿ ಕಾರಿನ ಬ್ರೇಕ್ ಫೇಲ್ ಆಗಿದೆ.‌ ಕಾರನ್ನು ನಿಯಂತ್ರಣಕ್ಕೆ ತರಲೆಂದು ಯತ್ನಿಸಿದಾಗ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದರ ಪರಿಣಾಮ ಒಂದು ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು, ಹೈಟೆನ್ಷನ್ ವಯರ್ ರಸ್ತೆಯಲ್ಲಿ ಬಿದ್ದಿದೆ.

 

ಇದನ್ನೂ ಓದಿ : ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

 

ಅಪಘಾತದ ರಭಸಕ್ಕೆ ಕಾರು ಜೋಕಟ್ಟೆ ಬಜ್ಪೆ ರಸ್ತೆಯಿಂದ ಎಸ್‌.ಇ.ಆರ್‌.ಝೆಡ್ ರಸ್ತೆಗೆ ಉರುಳಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

 

Continue Reading

BELTHANGADY

ಮಾಲಾಡಿ ಮನೆಯ ದೆವ್ವದ ರಹಸ್ಯವೇನು ಗೊತ್ತಾ..?

Published

on

ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬ ಗ್ರಾಮದಲ್ಲಿ ಭೂತದ ಕಾಟ ನಡೆಯುತ್ತಿರುವುದು ಈಗ ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದು ಭೂತದ ಚೇಷ್ಟೆ ಎಂದು ಮನೆಯವರು ಹೇಳಿಕೊಂಡಿದ್ದಾರೆ.

ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿಯುವ ಬಟ್ಟೆಗಳು.. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗುವ ಜೋಡಿಸಿಟ್ಟ ಅಡುಗೆ ಪಾತ್ರೆಗಳು… ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಇನ್ಯಾರೋ ಓಡಾಡಿದಂತೆ ಆಗುವ ಅನುಭವ. ಹೌದು ಇಂತಹ ಒಂದು ಘಟನೆ ಮನೆಯೊಂದರಲ್ಲಿ ನಡೆಯುತ್ತಿದ್ದು ಕಳೆದ ಮೂರು ತಿಂಗಳಿನಿಂದ ಮನೆಯವರು ನಿದ್ರೆಯನ್ನೇ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆಯಂತೆ.

ಮೊಬೈಲ್‌ನಲ್ಲಿ ದೆವ್ವದ ಫೋಟೊ ಸೆರೆ

ಕತ್ತಲು ಆವರಿಸುತ್ತಿದ್ದಂತೆ ನಡೆಯುವ ಈ ವಿಚಿತ್ರಕಾರಿ ಘಟನೆಯಿಂದ ಮಾಲಾಡಿಯ ಈ ಮನೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಉಮೇಶ್ ಶೆಟ್ಟಿ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಾಗಿದ್ದು, ಕಳೆದ ಮೂರು ತಿಂಗಳಿನಿಂದ ಈ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಉಮೇಶ್ ಶೆಟ್ಟಿ ಅವರ ಮಗಳು ತನ್ನ ಮೊಬೈಲ್ ಮೂಲಕ ಈ ವಿಚಿತ್ರ ಘಟನೆಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಮುಖವನ್ನು ಹೋಲುವ ಆಕೃತಿಯೊಂದು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಹೀಗಾಗಿ ಇದು ಭೂತದ ಚೇಷ್ಟೆ ಅಂತ ಹೇಳಲಾಗಿದ್ದು, ಗ್ರಾಮದ ಜನರು ಇದರ ಪರಿಶೀಲನೆ ನಡೆಸಲು ಈ ಮನೆಗೆ ಬರ್ತಾ ಇದ್ದಾರೆ.

ಕೇವಲ ಮನೆಯವರಷ್ಟೇ ಇರುವಾಗ ಇಂತಹ ವಿಚಿತ್ರಕಾರಿ ಘಟನೆಗಳು ನಡೆದಿದೆ ಅನ್ನುವುದು ಇಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಊರಿನ ಜನರು ಬಂದು ಇದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ನಡೆಸಿದ್ದಾರೆಯಾದ್ರೂ ಯಾರಿಗೂ ಇಂತಹ ಅನುಭವ ಉಂಟಾಗಿಲ್ಲ. ಹಾಗಂತ ಉಮೇಶ್ ಅವರ ಪತ್ನಿಗೆ ಉಸಿರುಗಟ್ಟಿದಂತಹ ಅನುಭವ ಹೊರತು ಪಡಿಸಿದ್ರೆ ಬೇರೆ ಏನು ಇಲ್ಲಿ ಕಂಡು ಬಂದಿಲ್ಲ. ಆದ್ರೆ ಅವರ ಉಸಿರುಗಟ್ಟುವಿಕೆಗೂ ಭೂತಕ್ಕೂ ಸಂಬಂಧ ಇದೆಯಾ ಅನ್ನೋದು ಕೂಡಾ ಖಚಿತವಾಗಿಲ್ಲ.

ಯಾವಾಗ ಇವರು ಮೊಬೈಲ್‌ನಲ್ಲಿ ವಿಚಿತ್ರ ಆಕೃತಿಯ ಫೋಟೊ ತೆಗೆದು ಊರ ಜನರಿಗೆ ತೋರಿಸಿದ್ರೋ ಆವಾಗಿನಿಂದ ಇಲ್ಲಿಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ಜನರು ಬರಲು ಆರಂಭಿಸಿದ್ದಾರೆ. ಆದ್ರೆ ಊರವರ ಮುಂದೆ ಭೂತ ಪ್ರತ್ಯಕ್ಷವಾಗದೇ ಇರೋ ಕಾರಣ ಈ ಕಥೆಯ ಬಗ್ಗೆಯೇ ಜನರಿಗೆ ಅನುಮಾನ ಆರಂಭವಾಗಿದೆ. ಅಸಲಿಗೆ ಇಲ್ಲಿ ನಡೆಯುತ್ತಿರುವುದು ಭೂತದ ಚೇಷ್ಟೆಯೋ ಅಥವಾ ಮನುಷ್ಯ ನಿರ್ಮಿತ ಚೇಷ್ಟೆಯೋ ಅನ್ನೋ ಅನುಮಾನಗಳು ಜನರಿಗೆ ಕಾಡಿದೆ.

ಭಯದ ವಾತವಾರಣರದಲ್ಲಿ ಕತ್ತಲಲ್ಲಿ ಮೊಬೈಲ್ ಹಿಡಿದು ಭೂತದ ಫೋಟೊ ಹೇಗೆ ತೆಗೆದರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹಾಗಂತ ಈ ರೀತಿ ಭೂತ ಇದೆ ಅಂತ ಸುಳ್ಳು ಹೇಳುವುದರಿಂದಲೂ ಇವರಿಗೇನು ಸಿಗುತ್ತದೆ ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಈ ವಿಚಾರದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಭೂತದ ಹುಟುಕಾಟಕ್ಕೆ ಜನರು ಮುಂದಾಗಿದ್ದಾರೆ. ಕೆಲವರು ಇದು ಹೌದು ಅಂದ್ರೆ ಇನ್ನೂ ಕಲವರು ಇದು ಸುಳ್ಳು ಅಂದಿದ್ದು, ಇದರ ಹಿಂದೆ ಏನೋ ಮಸಲತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಅಸಲಿ ಸತ್ಯ ಏನು ಅನ್ನೋ ಬಗ್ಗೆ ಈ ಮನೆಯವರ ಕೌನ್ಸಿಲಿಂಗ್ ಮಾಡಿದ್ರಷ್ಟೇ ಗೊತ್ತಾಗಬಹುದು ಅನ್ನೋದು ಹಲವರ ಅಭಿಪ್ರಾಯ.

Continue Reading

DAKSHINA KANNADA

ಮಂಗಳೂರು: ಕೊಡಿಯಾಲ್ ತೇರಿನ ಬಳಿಕ ಭಕ್ತರಿಂದ ಸಂಭ್ರಮದ ಓಕುಳಿ

Published

on

ಮಂಗಳೂರು: ರಥಬೀದಿಯ ವೆಂಕಟರಮಣ ದೇವರ ಜಾತ್ರೋತ್ಸವ ಫೆಬ್ರವರಿ ನಾಲ್ಕರಂದು ಸಂಪನ್ನಗೊಂಡಿದೆ. ಕೊಡಿಯಾಲ ತೇರು ಎಂದೇ ಪ್ರಸಿದ್ದಿಯಾಗಿರುವ ವೆಂಕಟರಮಣ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ ಪುನೀತರಾಗಿದ್ದಾರೆ.

ಕೊಡಿಯಾಲ್‌ ತೇರಿನ ಮರುದಿನ ದೇವರ ಅವಭೃತ ಸ್ನಾನ ನೆರವೇರಿದ್ದು, ಸಾವಿರಾರು ಭಕ್ತರು ಓಕುಳಿ ಆಡಿ ಸಂಭ್ರಮಿಸಿದ್ದಾರೆ. ಮಂಗಳೂರು ರಥಬೀದಿ ಸೇರಿದಂತೆ ಪ್ರತಿ ಮನೆಯಲ್ಲೂ ಓಕುಳಿ ಸಂಭ್ರಮ ಕಂಡು ಬಂದಿದೆ. ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಬಣ್ಣದ ನೀರು ಎರಚಿ ಸಂಭ್ರಮಿಸಿದ್ದು, ನಾಸಿಕ್ ಬ್ಯಾಂಡ್‌ ಸದ್ದು ಇವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಗಂಡು ಮಕ್ಕಳು, ಹೆಣ್ಣು ಮಕ್ಕಳು, ವೃದ್ಧರು ಎಂಬ ಬೇಧವಿಲ್ಲದೆ ಎಲ್ಲರೂ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದರೆ, ಸುಡುವ ಬಿಸಿಲಿಗೆ ತಂಪು ನೀಡಲು ಟ್ಯಾಂಕರ್ ನಲ್ಲಿ ನೀರು ಸ್ಪ್ರೇ ಮಾಡುವ ಮೂಲಕ ಮೈ ತಂಪಾಗಿಸುವ ಕೆಲಸವನ್ನು ಕೆಲವು ಯುವಕರು ಮಾಡಿದ್ದಾರೆ.

ದೇವರ ಅವಭೃತ ಸ್ನಾನಕ್ಕೆ ದೇವಸ್ಥಾನದಿಂದ ದೇವರು ಹೊರಟು ಅವಭೃತ ಸ್ನಾನ ಮುಗಿಸಿ ಬರುವವರೆಗೂ ಈ ಓಕುಳಿ ಆಟ ನಡೆದಿದೆ. ಸಾವಿರಾರು ಜನರು ಈ ಸಂಭ್ರಮದ ಓಕುಳಿಯಲ್ಲಿ ಭಾಗಿಯಾಗಿ ಖುಷಿ ಪಟ್ಟಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಕೂಡಾ ಭಾಗಿಯಾಗಿ ಬಣ್ಣ ಹಚ್ಚಿ ಯುವಕರ ಜೊತೆ ಎಂಜಾಯ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page