Connect with us

LATEST NEWS

ನಿಮಗೆ ಧೈರ್ಯ ಇದ್ರೆ ಪೊಲೀಸರ ಮಾನಭಂಗ, ಕಲ್ಲೆಸೆತದ ವೀಡಿಯೋ ರಿಲೀಸ್‌ ಮಾಡಿ ಮಿಸ್ಟರ್‌ ಎಸ್‌ಪಿ: ಎಸ್‌ಡಿಪಿಐ ರಾಜ್ಯಾಧ್ಯಕ್ಷರ ಸವಾಲು

Published

on

ಮಂಗಳೂರು: ನಿಮಗೆ ಧೈರ್ಯ ಇದ್ರೆ ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್‌ ವೇಳೆ ಪಿಎಫ್‌ಐನ ಕಾರ್ಯಕರ್ತರು ಪೊಲೀಸರ ಮಾನಭಂಗ ಮಾಡಿದ, ಕಲ್ಲೆಸೆದ ಸಿಸಿಟಿವಿ ಫೂಟೇಜ್ ಇದ್ದರೆ ರಿಲೀಸ್ ಮಾಡಿ ಮಿಸ್ಟರ್ ಎಸ್‌ಪಿ. ಐ ಚಾಲೆಂಜ್‌ ಯೂ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಸವಾಲೆಸಿದಿದ್ದಾರೆ.


ನಗರದ ಖಾಸಗಿ ಹೋಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪ್ಪಿನಂಗಡಿಯಲ್ಲಿ ನಡೆದ ತಲ್ವಾರ್‌ ದಾಳಿ ಪ್ರಕರಣದಲ್ಲಿ ಅಮಾಯಕ ಸ್ಥಳೀಯ ಪಿಎಫ್‌ಐ ನಾಯಕರನ್ನು ಬಂಧಿಸಿ ಬ್ಲಾಕ್ ಮೇಲ್ ತಂತ್ರ ನಡೆಸಿದ್ದಾರೆ. ನಮಗೆ ಮಹಿಳಾ ಪೊಲೀಸ್ ಮಾನಭಂಗದ ಸಿಸಿಟಿವಿ ವೀಡಿಯೋ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ ಅವರು ಸಿಸಿಟಿವಿ ಬಿಡುಗಡೆ ಮಾಡಿದರೆ ಪೊಲೀಸರು ಅರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು. ಈ ಘಟನೆಯನ್ನು ಹೈಕೋರ್ಟ್‌ನ ಜಡ್ಜ್‌ ಮುಖಾಂತರ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ನಾವು ನಿಮ್ಮ ಲಾಠಿ ಏಟಿಗೆ ಹೆದರುವವರಲ್ಲ. ಇದನ್ನು ಕಾನೂನಿನ ಮೂಲಕವೇ ಎದುರಿಸುತ್ತೆವೆ. ಜೊತೆಗೆ ಬಂಧನದಲ್ಲಿರುವವರಿಗೆ ನೈತಿಕ ಬೆಂಬಲ ಸಲ್ಲಿಸುತ್ತೇವೆ ಎಂದರು.


ರಿಯಾಝ್‌ ಫರಂಗಿಪೇಟೆ ಮಾತನಾಡಿ, ಈ ಘಟನೆಯನ್ನು ಪೊಲೀಸರೇ ಕಮ್ಯೂನಲ್‌ ಮಾಡಿದ್ದಾರೆ. ಜೊತೆಗೆ ಈ ಘಟನೆಗೆ ಪತ್ರಕರ್ತರೂ ಕೋಮುಬಣ್ಣ ಬಳಿಯುತ್ತಿದ್ದಾರೆ. ಪತ್ರಿಕಾ ವರದಿಗಳು ಸಹ ಒನ್ ಸೈಡೆಡ್ ಅಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ನಡೆದ ನಂತರದಲ್ಲಿ ಪಿಎಫ್‌ಐ ಸಂಘಟಕರು ಎಸ್‌ಪಿ ಬಳಿ ಮಾತನಾಡುವಾಗ ಎಸ್ಪಿ ಹೇಳ್ತಾರೆ ಸಿಸಿಟಿವಿ ಹಾಳಾಗಿದೆ ಎಂದು. ಇಂತಹ ಷಡ್ಯಂತ್ರ ನಡೆಯುವಾಗವೇ ಸಿಸಿಟಿವಿ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ವೇಳೆ ಅವರೇ ಲಾಠಿಚಾರ್ಜ್ ಮಾಡಿದ ನಂತರ ಎಸ್ ಐ ಪ್ರಸನ್ನ ಸ್ಟೇಷನ್ ಗೆ ಒಳಗೆ ಬಂದಾಗ ಯಾವುದೇ ಗಾಯ ಇರಲಿಲ್ಲ ಅನಂತರ ಗಾಯ ಎಲ್ಲಿಂದ ಬಂತು. ಇದೆಲ್ಲಾ ಕಟ್ಟು ಕಥೆ ಎಂದು ಹೇಳಿದರು.

ಡಿಸಿ ಕಾಲರ್ ಪಟ್ಟಿ ಹಿಡಯುತ್ತೆನೆ ಎನ್ನುವವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಸಲ್ಮಾನರಾದರೆ ಒಂದು ಕಾನೂನು ಬೇರೆ ಧರ್ಮದವರಾದರೆ ಬೆರೆ ಕಾನೂನಾ? ಈ ಹಿಂದೆ ಶಾಸಕ ಹರೀಶ್ ಪೂಂಜಾ ಬಂಧಿತ ಆರೋಪಿಗಳನ್ನು ಸ್ಟೇಷನ್ನಿಂದ ಎಳೆದುಕೊಂಡು ಹೋಗಿದ್ದಾರೆ. ಆಗ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ.
 ಟಿ.ಡಿ ನಾಗರಾಜ್‌ ವಿರುದ್ಧ ಹರಿಹಾಯ್ದ ಮುಖಂಡರು
ಡಿವೈಎಸ್‌ಪಿ ಜೊತೆ ಸಂಘಟನೆಯ ನಾಯಕರು ಮಾತನಾಡಲು ಸ್ಟೇಷನೆ ಒಳಗೆ ಬಿಡದೇ ನಮ್ಮನ್ನು ಟಿ.ಡಿ ನಾಗರಾಜ್‌ ಅವಮಾನಿಸಿದ್ದಾರೆ. ನಂತರ ಡಿವೈಎಸ್‌ಪಿ ಜೊತೆ ಮಾತನಾಡುವಾಗ ‘ಸುಮ್ನೆ ಕೂತ್ಕೊಳ್ಳಯ್ಯಾ, ನಿಮ್ಮನ್ನೂ ಕೇಸ್‌ ಹಾಕಿ ಬಳ್ಳಾರಿ ಜೈಲಿಗೆ ಹಾಕುತ್ತೇವೆ ಎಂದು ವಿನಾಃಕಾರಣ ನಿಂದಿಸಿದ್ದಾರೆ. ನಂತರ ಡಿವೈಎಸ್‌ಪಿಯನ್ನು ಕರೆದುಕೊಂಡು ಹೋಗಿ ಏಕಾಏಕಿ ಲಾಠಿಚಾರ್ಜ್‌ ಮಾಡಿದ್ದಾರೆ. ಏಕಾಏಕಿ ಬೀದಿ ದೀಪ ಆರುತ್ತದೆ. ನಮ್ಮ ಧರ್ಮಗುರುಗಳ ತಲೆಗೆ ಬಲವಾದ ಅಯುಧದಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

Published

on

ಕೋಝಿಕೋಡ್‌: ಗೋವಿಂದಪುರದ ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಬುಧವಾರ ವ್ಲೋಗರ್ ಶಿಂಜಿತಾ ಮುಸ್ತಫಾ ಅವರನ್ನು ಬಂಧಿಸಿದ್ದಾರೆ. ಶಿಂಜಿತಾ ಬಸ್ಸಿನೊಳಗೆ ಅವಮಾನಿಸಿದ ನಂತರ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಮಹಿಳೆಯನ್ನು ವಡಕಾರದಲ್ಲಿ ಬಂಧಿಸಲಾಗಿದೆ. ಕೊಯಿಲಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ, ಶಿಂಜಿತಾ ಮುಸ್ತಫಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆಕೆಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವಾರು ಅಪರಾಧಗಳ ಆರೋಪವನ್ನ ಹೊರಿಸಲಾಗಿದೆ.

ದೀಪಕ್‌ಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸಾರ್ವಜನಿಕ ಪ್ರತಿಭಟನೆ ನಡೆದ ನಂತರ ಬಂಧನವಾಗಿದೆ. ಖಾಸಗಿ ಬಸ್ಸಿನಲ್ಲಿ ದೀಪಕ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಂಜಿತಾ ಮುಸ್ತಫಾ ಆರೋಪಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ದೀಪಕ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಹಾಸನ: ಶಾಲಾ ಬಾಲಕಿಯನ್ನು ಬೆನ್ನಟ್ಟಿದ ಪ್ರಕರಣ; ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರು

ದೀಪಕ್‌ ಆತ್ಮಹತ್ಯೆ ಮಾಡಿದ ನಂತರ ಈ ಪ್ರಕರಣ ತಿರುವು ಪಡೆದುಕೊಂಡಿತ್ತು. ದೀಪಕ್‌ ಅವರದ್ದು ಯಾವುದೇ ತಪ್ಪಿಲ್ಲದೇ ಇದ್ದರೂ ಅವರ ಬಳಿಯೇ ಹೋಗಿ ಆಕೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ವಿಡಿಯೋ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಕ್ಕೆ ಶಿಂಜಿತಾಳನ್ನು ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.

ತೀವ್ರ ಪ್ರತಿಭಟನೆಯ ನಂತರ ಎಚ್ಚೆತ್ತ ಪೊಲೀಸ್‌ ಇಲಾಖೆ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ವ್ಲೋಗರ್ ಶಿಂಜಿತಾ ಮುಸ್ತಫಾಳನ್ನ ಬಂಧಿಸಿದೆ. ಅಷ್ಟೆ ಅಲ್ಲದೆ, ಈ ಪ್ರಕರಣಕ್ಕೆ ಇದೀಗ ಕೇರಳ ಮಾನವ ಹಕ್ಕುಗಳ ಆಯೋಗ ಕೂಡ ಎಂಟ್ರಿ ಕೊಟ್ಟಿದ್ದು, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ ವರದಿ ನೀಡುವಂತೆ ಡಿಐಜಿಗೆ ಆದೇಶಿಸಿದೆ.

Continue Reading

LATEST NEWS

ಹಾಸನ: ಶಾಲಾ ಬಾಲಕಿಯನ್ನು ಬೆನ್ನಟ್ಟಿದ ಪ್ರಕರಣ; ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರು

Published

on

ಹಾಸನ: ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಪೊಲೀಸರು ಬಂಧಿಸಲಾಗಿದೆ.


ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಬಂಧಿತ ಆರೋಪಿ.

ಜನವರಿ 17 ರಂದು ಹಾಸನದಲ್ಲಿ ಈ ಘಟನೆ ನಡೆದಿತ್ತು. ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಇದನ್ನು ಗಮನಿಸಿ ಬಾಲಕಿ ಭಯಭೀತಳಾಗಿ ಓಡೋಡಿ ಬಂದು ಮನೆ ಸೇರಿಕೊಂಡಿದ್ದಳು.

ಇದನ್ನೂ ಓದಿ: ಬಾರೊಂದರಲ್ಲಿ ನಡೆದ ಗಲಾಟೆ; ತೀವ್ರ ಹಲ್ಲೆಗೊಳಗಾಗಿ ವ್ಯಕ್ತಿ ಸಾವು!

ಮನೆ ಬಳಿ ಬಂದ ಆರೋಪಿ ಗೇಟ್ ಹೊರಗೆ ನಿಂತು ಒಳಗೆ ಇಣುಕಿ ನೋಡಿ ವಾಪಾಸು ಹೋಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ವೈರಲ್ ಆಗಿತ್ತು.
ಈ ಬಗ್ಗೆ ಪೆನ್‌ ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಬಾರೊಂದರಲ್ಲಿ ನಡೆದ ಗಲಾಟೆ; ತೀವ್ರ ಹಲ್ಲೆಗೊಳಗಾಗಿ ವ್ಯಕ್ತಿ ಸಾವು!

Published

on

ಚಿಕ್ಕಮಗಳೂರು: ಬಾರ್ ಒಂದರಲ್ಲಿ ಬಿಹಾರಿ ಕಾರ್ಮಿಕರು ಹಾಗೂ ವ್ಯಕ್ತಿಯೊಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ತೇಜು (40)  ಸಾವನ್ನಪ್ಪಿದ ವ್ಯಕ್ತಿ. ಬಾರ್‌ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತೇಜು ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಅವರನ್ನು ಒಂದು ಕಿಮೀ ದೂರದ ಪಟಾಕಿ ಮೈದಾನಕ್ಕೆ ಒಯ್ದು ಎಸೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಆಂಧ್ರಪ್ರದೇಶ: ಖಾಸಗಿ ಸ್ಲೀಪರ್ ಬಸ್ ನಲ್ಲಿ ಅಗ್ನಿ ಅವಘಡ; ಮೂವರು ಸಜೀವ ದಹನ

ಆಟೋ ಚಾಲಕರೊಬ್ಬರು ತೇಜುವನ್ನು ನೋಡಿ ಉಸಿರಾಡುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ಸೇರಿಸಿದ್ದರು. ತೀವ್ರ ಹಲ್ಲೆಯಾಗಿದ್ದರಿಂದ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ತೇಜು ಕೊನೆಯುಸಿರೆಳೆದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page