Connect with us

DAKSHINA KANNADA

ಬಜರಂಗದಳ ಮುಟ್ಟಿದರೆ ಕಾಂಗ್ರೆಸ್ ಸರ್ವನಾಶ : ಡಾ.ಭರತ್ ಶೆಟ್ಟಿ ವೈ ಎಚ್ಚರಿಕೆ..!

Published

on

ಹಿಂದೂ ಸಮಾಜದ ಶಕ್ತಿಯಾಗಿರುವ ಬಜರಂಗದಳವನ್ನು ಕನಸಿನಲ್ಲೂ ನಿಷೇಧಿಸುವ ಬಗ್ಗೆ ಯೋಚಿಸಬೇಡಿ, ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ.

ಮಂಗಳೂರು :  ಹಿಂದೂ ಸಮಾಜದ ಶಕ್ತಿಯಾಗಿರುವ ಬಜರಂಗದಳವನ್ನು ಕನಸಿನಲ್ಲೂ ನಿಷೇಧಿಸುವ ಬಗ್ಗೆ ಯೋಚಿಸಬೇಡಿ, ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ.

ಮಾತ್ರವಲ್ಲ ಈಗಿನ ಅಳಿದುಳಿದ ನಿಮ್ಮ ಕಾಂಗ್ರೆಸ್ ಪಕ್ಷದ ಕುರುಹನ್ನು ಜನರೇ ಸಮೀಪದ ಅರಬೀ ಸಮುದ್ರದಲ್ಲಿ ವಿಸರ್ಜಿಸಲಿದ್ದಾರೆ.

ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ,ಹಾಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ದೇಶ ಭಕ್ತ ,ಹಿಂದೂ ಸಮಾಜದ ಒಳಿತಿಗಾಗಿ ಹಾಗೂ ಸಾಮಾಜಿಕವಾಗಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕೋಟಿ ಕೋಟಿ ಸದಸ್ಯರನ್ನು ಹೊಂದಿರುವ , ಪ್ರಬಲ ಹಿಂದೂ ಸಮಾಜದ ಅಸ್ಮಿತೆಯ ಪ್ರತಿರೂಪವಾಗಿದೆ. ರಾಷ್ಟ್ರೀಯತೆಯ ಶಕ್ತಿಯಾಗಿದೆ. ಒಗ್ಗಟ್ಟಿನ ಮತ್ತೊಂದು ಹೆಸರು ಬಜರಂಗದಳವಾಗಿದೆ.

ಮುಸ್ಲಿಂ ಸಮಾಜದ ತುಷ್ಟೀಕರಣದ ನೀತಿಯ ಅಂಗವಾಗಿ ಬಜರಂಗದಳ ನಿಷೇಧ ಮಾಡುವ ಭರವಸೆ ನೀಡಿದೆ.

ಇಂದಿರಾ ಗಾಂಧಿ ಆರ್‍ಎಸ್‍ಎಸ್ ನಿಷೇಧಿಸಲು ಯತ್ನಿಸಿ ಸೋತಿದ್ದರು. ಮುಸ್ಲಿಂ ಜಿಹಾದ್ ಹೋರಾಟವನ್ನು ಮಟ್ಟ ಹಾಕಲು ಆಗದ ಕಾಂಗ್ರೆಸ್ ವಿಶ್ವದ ಅತೀ ದೊಡ್ಡ ಸಂಘಟನೆಯ ನಿಷೇಧದ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡುತ್ತಿದೆ.

ಹಾಗಾದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಯಾವ ಕುರುಹೂ ಇರುವುದಿಲ್ಲ .ಜನರೇ ಕಾಂಗ್ರೆಸ್ಸನ್ನು ಬುಡಸಹಿತ ಅರಬೀ ಸಮುದ್ರಕ್ಕೆ ಗುಡಿಸಿಹಾಕುತ್ತಾರೆ.

ಕಾಂಗ್ರೆಸ್ ಈ ನಿರ್ಧಾರದಿಂದ ಹಿಂದೂ ವಿರೋಧಿ ಪಕ್ಷ ಎಂಬುದು ಇದೀಗ ಪೂರ್ಣಪ್ರಮಾಣದಲ್ಲಿ ಸಾಬೀತಾಗಿದೆ.

ರಕ್ತದಾನ,ಆರೋಗ್ಯ ಶಿಬಿರ,ಸರಕಾರದ ಸೌಲಭ್ಯ ಮನೆ ಮನೆ ಮುಟ್ಟಿಸುವ ಕಾರ್ಯ,ಕೊರೊನಾ ಸಂದರ್ಭ ಕೊರೊನಾ ಸಂಕಷ್ಟದಲ್ಲಿದ್ದ ಕೋಟಿ ಕೋಟಿ ಜನತೆಗೆ ಕಿಟ್ ಒದಗಿಸುವ ಮೂಲಕ ಜನಮಾನಸದಲ್ಲಿ ಇರುವ ಸಂಘಟನೆ.

ಹಿಂದೂ ಸಮಾಜದ ಭದ್ರ ಬುನಾದಿಗೆ ಕೊಡುಗೆ ನೀಡುವ ಸಂಘಟನೆಯನ್ನು ನಿಮಗೆ ಮುಟ್ಟಲೂ ಸಾದ್ಯವಿಲ್ಲ.

ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ನಾಯಕರು ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಲೇ ಬಂದಿದ್ದಾರೆ.

ಇದಕ್ಕೆ ಹಿಂದೂ ಸಮಾಜ ಒಟ್ಟಾಗಿ ಸೂಕ್ತ ಉತ್ತರ ನೀಡಲಿದೆ.ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ ಸಂಘಟನೆಗಳನ್ನು ನಿಷೇಧ ಮಾಡಲು ಸಾಧ್ಯವಾಗಿಲ್ಲ ,ಆದರೆ ಬಿಜೆಪಿ ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದೆ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

ಕಾಂಗ್ರೆಸ್‍ಗೆ ವಿನಾಶ ಕಾಲ ಈಗಲೇ ಎದುರಾಗಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ವಿಷ ಸರ್ಪ ಎಂದು ಹೇಳಿದರೆ, ಅವರ ಪುತ್ರ ಪ್ರಿಯಾಂಕ ಖರ್ಗೆ ನಾಲಾಯಕ್ ಎಂದು ಅವಹೇಳನದ ಮಾತು ಹೇಳಿದ್ದಾರೆ.

ಇದೀಗ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂಬ ಮಾತು ಹೇಳಿ ಮಾಡಲು ಮುಂದಾಗಿ ಪದೇ ಪದೇ ಹಿಂದೂ ಸಮಾಜದ ನಾಶ ಮಾಡುವ ತಂತ್ರ ಹೂಡಿದಂತಿದ್ದು, ಒಂದು ವರ್ಗದ ಓಲೈಕೆ ಮಾಡುತ್ತಾ ಬಂದ ಈ ಹಿಂದೂ ವಿರೋಧಿ ಪಕ್ಷಕ್ಕೆ ಕರ್ನಾಟಕದ ಜನತೆ ಸೂಕ್ತ ಪಾಠವನ್ನು ಕಲಿಸುವುದು ನಿಶ್ಚಿತ.

ನಿಮ್ಮ ಹಿಂದೂ ವಿರೋಧಿ ನೀತಿಯಿಂದ , ಸನಾತನ ಪರಂಪರೆ ಹಾಳು ಮಾಡುವ ಕುತಂತ್ರದಿಂದ ಆಡಳಿತಕ್ಕೆ ಬರುವುದು ಕನಸು ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

BANTWAL

ಎರಡನೇ ವರ್ಷದ ಮೂಳೂರು-ಅಡ್ಡೂರು ಕಂಬಳದ ಆಹ್ವಾನ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಎರಡನೇ ವರ್ಷದ ಮೂಳೂರು-ಅಡ್ಡೂರು ಜೋಡು ಕರೆ ಕಂಬಳ ಎಪ್ರಿಲ್ 12 ರ ಶನಿವಾರ ನಡೆಯಲಿದೆ.


ಸಮಾಜ ಸೇವಕ ಹಾಗೂ ರಾಜಕೀಯ ನಾಯಕ ಇನಾಯತ್ ಅಲಿಯವರ ನೇತೃತ್ವದಲ್ಲಿ ಈ ಕಂಬಳ ಆಯೋಜನೆಯಾಗಿದೆ. ವಿಜೃಂಭಣೆಯಿಂದ ನಡೆಯುವ ಮೂಳುರು-ಅಡ್ಡೂರು ಜೋಡುಕರೆ ಕಂಬಳದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮಕ್ಷಮದಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಎರಡನೇ ವರ್ಷದ ಕಂಬಳವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾಡಲಿದ್ದಾರೆ.

ಇದನ್ನೂ ಓದಿ: ಈ ದಿನದಂದು ನಿಮ್ಮ ಖಾತೆಗೆ ಸೇರಲಿದೆ 2 ತಿಂಗಳ ಗೃಹಲಕ್ಷ್ಮೀ ಹಣ 

ಸರ್ವ ಧರ್ಮಗಳ ಪ್ರಮುಖರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಅವರು ಭಾಗವಹಿಸಲಿದ್ದಾರೆ. ಹಲವಾರು ಚಲನ ಚಿತ್ರ ನಟ ನಟಿಯರು ಕೂಡಾ ಸಂಜೆಯ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿರುವುದಾಗಿ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

SSLC ಪರೀಕ್ಷಾ ಕೇಂದ್ರದಲ್ಲಿ ಸಿನಿಮಾ ಶೂಟಿಂಗ್; ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

Published

on

ಪುತ್ತೂರು : ಎಸ್ಎಸ್ಎಲ್‌ಸಿ ಪರೀಕ್ಷಾ ಕೇಂದ್ರವಾಗಿರುವ ಸೈಂಟ್ ವಿಕ್ಟರ್ಸ್ ಪ್ರೌಢ ಶಾಲೆಯ ಆವರಣದಲ್ಲಿ ಕನ್ನಡ ಸಿನಿಮಾವೊಂದಕ್ಕೆ ಶೂಟಿಂಗ್‌ಗೆ ಅವಕಾಶ ಕೊಟ್ಟು ಶಾಲಾ ಆಡಳಿತ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

ನಟ ಆರ್ಯನ್ ಅಭಿನಯದ `ಲವ್ ಟು ಲಸ್ಸಿ’ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್ ಶಾಲಾ ಆವರಣದಲ್ಲಿ ನಡೆಯುತ್ತಿತ್ತು. ಇದಕ್ಕೆ ಕಳೆದ ಒಂದುವರೆ ತಿಂಗಳ ಹಿಂದೆಯೇ ಶಾಲಾ ಸಂಚಾಲಕರಿಂದ ಅನುಮತಿ ಪಡೆಯಲಾಗಿತ್ತು. ಆದರೆ, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಜೊತೆಗೆ ಪರೀಕ್ಷಾ ಕೇಂದ್ರವಾಗಿದ್ದ ಪ್ರೌಢಶಾಲೆಯಲ್ಲಿ ಪರೀಕ್ಷಾ ದಿನದಂದೇ ಶೂಟಿಂಗ್‌ಗೆ ಅವಕಾಶ ಮಾಡಿಕೊಟ್ಟದ್ದು ಎಷ್ಟು ಸರಿ? ಎಂಬ ಪ್ರಶ್ನೆ ಪೋಷಕರಿಂದ ವ್ಯಕ್ತವಾಗಿದೆ. ಇದಕ್ಕೆ ಕಾರಣ ಬೆಳಗ್ಗೆ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಾಲಾ ಗೇಟು ಬಳಿ ಬಂದಾಗ ಗೇಟು ತೆರೆಯಲು ಪೊಲೀಸರು, ಗೇಟ್ ಕೀಪರ್ ನಿರಾಕರಿಸಿದ್ದಾರೆ.

ಇಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಅಸಮರ್ಪಕ ಉತ್ತರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕೆರಳಿದ ಪೋಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಸೆಕ್ಷನ್ ಇರುವಾಗ ಯಾವ ರೀತಿ ಅವಕಾಶ ಮಾಡಿ ಕೊಟ್ಟಿದ್ದೀರಿ ಎಂದು ಶಾಲಾ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಮುಂಜಾನೆ ಎದ್ದ ಕೂಡಲೇ ಹಲ್ಲು ಉಜ್ಜಬೇಡಿ ; ಆಯುರ್ವೇದವು ಹೀಗೆನ್ನಲು ಕಾರಣವೇನು ..?

ಇದಾದ ಬಳಿಕ ಸುದ್ದಿ ತಿಳಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶೂಟಿಂಗ್ ಸ್ಪಾಟ್‌ಗೆ ಬಂದು ಸಿನಿಮಾ ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಿದರು. ಜೊತೆಗೆ ಪೊಲೀಸರ ಮುಖಾಂತರ ಚಲನಚಿತ್ರ ತಂಡಕ್ಕೆ ಶಾಲಾ ಬಳಿಯಿಂದ ತೆರಳುವಂತೆ ಸೂಚನೆ ನೀಡಿದರು. ಇಷ್ಟೆಲ್ಲ ಆದ್ರೂ ಪರೀಕ್ಷಾ ಕೇಂದ್ರದ 200 ಮೀಟರ್ ಒಳಗಡೆ, ಹಾಗೆಯೇ ಸೆಕ್ಷನ್ 144 ಜಾರಿ ಇರುವಾಗ ಶಾಲಾ ಆಡಳಿತ ಮಂಡಳಿಯ ಶೂಟಿಂಗ್‌ಗೆ ಹೇಗೆ ಅವಕಾಶ ಕೊಟ್ಟಿದ್ದಾರೆ ಎಂಬುದು ಪೋಷಕರ ವಾದ.

Continue Reading

DAKSHINA KANNADA

ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ; ನಿಯಮ ಮೀರಿದ್ರೆ ಬೀಳುತ್ತೆ FIR

Published

on

ಮಂಗಳೂರು : ಮಂಗಳೂರು ನಗರದಲ್ಲಿ ಸಂಚರಿಸುತ್ತಿರುವ ಬಸ್‌ಗಳ ಅಟಾಟೋಪಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಈ ಹಿಂದೆ ಸಾಕಷ್ಟು ಎಚ್ಚರಿಕೆಯನ್ನು ನೀಡಿದೆ. ಆದರೆ, ಪೊಲೀಸರು ನೀಡಿದ ಎಚ್ಚರಿಕೆಗೆ ಕ್ಯಾರೇ ಅನ್ನದ ಖಾಸಗಿ ಬಸ್ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಈ ಹಿಂದೆ ಹಲವಾರು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನಲೆಯಲ್ಲಿ ಸುಮಾರು 1,527 ಕೇಸ್‌ಗಳನ್ನು ಹಾಕಲಾಗಿತ್ತು. ಆದಾಗ್ಯೂ ಖಾಸಗಿ ಬಸ್ ತನ್ನ ಎಂದಿನ ಚಾಳಿ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಪೊಲೀಸರು ಮತ್ತೊಂದು ಸುತ್ತಿನ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಕಾನೂನು ಉಲ್ಲಂಘಿಸಿ ಸಂಚರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 489 ಕೇಸ್ ದಾಖಲು ಮಾಡಿದ್ದಾರೆ.

ವಿಶೇಷವಾಗಿ ಬಸ್‌ಗಳಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿರುವುದಕ್ಕೆ 234 ಕೇಸ್‌ಗಳನ್ನು ಹಾಕಲಾಗಿದೆ. ಫುಟ್ ಬೊರ್ಡ್ ನಲ್ಲಿ ಪ್ರಯಾಣಿಸಿದ್ದಕ್ಕೆ 71 ಹಾಗೂ ಕರ್ಕಶ ಹಾರ್ನ್ ಬಳಕೆ ಮಾಡಿರುವ 62 ಪ್ರಕರಣಗಳು ಮತ್ತು ಟ್ರಾಫಿಕ್ ರೂಲ್ಸ್ ಉಲ್ಲಂಘನೆಯ 59 ಕೇಸ್ ಗಳು ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಮುಂಬರುವ ಅಮವಾಸ್ಯೆಯಂದು ಹೀಗೆ ಮಾಡಿ ..! ಶನಿ ದೋಷದಿಂದ ಮುಕ್ತಿ ಪಡೆಯಿರಿ ..!

2025 ರಲ್ಲಿ ದಾಖಲಾದ ಒಟ್ಟು 1,527 ಪ್ರಕರಣಗಳಲ್ಲಿ ಅಧಿಕ ಕೇಸ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿದಕ್ಕೆ 643 ಕೇಸ್ ಹಾಗೂ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ 316 ಕೇಸ್ ಫುಟ್ ಬೋರ್ಡ್ ಪ್ರಯಾಣಕ್ಕೆ 138 ಕೇಸ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಸ್ ಮಾಲಕರ ಸಭೆ ಕರೆದು ಎಚ್ಚರಿಕೆ ನೀಡಿದ ಬಳಿಕವೂ ನಿಯಮ ಉಲ್ಲಂಘನೆ ಮಾಡುವುದು ನಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಬಸ್‌ಗಳ ಮೇಲೆ ಬಿಎನ್‌ಎಸ್ ಕಾಯ್ದೆ ಕಲಂ 281 ರ ಜೊತೆಗೆ ಸಂಚಾರ ನಿಯಮ ಉಲ್ಲಂಘನೆಯ ಕುರಿತು ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ನಿವೇದಿಸುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page