Connect with us

ಉಳ್ಳಾಲದ ಕೋಟೆಪುರದಲ್ಲಿ ಕತ್ತೆ ಕಿರುಬ ಹಾವಳಿ: ಭಯಭೀತರಾದ ಸ್ಥಳಿಯ ಜನತೆ ..!

Published

on

ಉಳ್ಳಾಲದ ಕೋಟೆಪುರದಲ್ಲಿ ಕತ್ತೆ ಕಿರುಬ ಹಾವಳಿ: ಭಯಭೀತರಾದ ಸ್ಥಳಿಯ ಜನತೆ ..!

ಮಂಗಳೂರು : ಮಂಗಳೂರು ಹೊರವಲಯದ ಉಳ್ಳಾಲ ಕೋಟೆಪುರ ಭಾಗದಲ್ಲಿ ಕತ್ತೆ ಕಿರುಬ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಸೋಮವಾರ ತಡರಾತ್ರಿ ನಾಯಿಯನ್ನು ಕೊಂಡೊಯ್ಯುವ ಸಂದರ್ಭ ಬೆನ್ನಟ್ಟಿದ ಸ್ಥಳೀಯ ನಿವಾಸಿಯೊಬ್ಬರಿಗೆ ಕಾಲಿಗೆ ಗಾಯವಾಗಿದ್ದು, ಅರಣ್ಯ ಇಲಾಖೆ ಮೂರು ಬೋನುಗಳನ್ನು ಸ್ಥಳದಲ್ಲಿರಿಸುವ ಮೂಲಕ ಕಾರ್ಯಾಚರಣೆ ಗೆ ಇಳಿದಿದೆ.

ಕಳೆದ ಕೆಲ ದಿನಗಳಿಂದ ಸ್ಥಳೀಯವಾಗಿ ನಾಯಿಗಳು ನಾಪತ್ತೆಯಾಗುತ್ತಿದೆ. ಸೋಮವಾರ ಸಂಜೆ 7.30 ರ ಸುಮಾರಿಗೆ ನಾಯಿಯನ್ನು ಹಿಡಿಯಲು ಕತ್ತೆ ಕಿರುಬ ಮುಂದಾದ ಸಂದರ್ಭ, ಅಲ್ಲೇ ಮನೆ ಇರುವ ಇರ್ಫಾನ್ ಎಂಬವರು ಅಟ್ಟಾಡಿಸಿದ್ದಾರೆ.

ಈ ವೇಳೆ ನಾಯಿಯನ್ನು ಬಿಟ್ಟ ಕತ್ತೆ ಕಿರುಬ ಕಣ್ಮರೆಯಾಗಿದೆ. ಇದೇ ವೇಳೆ ಅಟ್ಟಾಡಿಸಿದ ಇರ್ಫಾನ್ ಕಾಲಿಗೆ ಗಾಯಗೊಂಡಿದ್ದಾರೆ.

ನೆರೆ ಸಂದರ್ಭ ಇದು ಬಂದಿರುವ ಸಾಧ್ಯತೆ ಇದ್ದುಎಂಟು ತಿಂಗಳ ಹಿಂದೆ ಮಳೆ ಸಂದರ್ಭ ನೆರೆ ನೀರಿನಲ್ಲಿ ಇದರ ಮರಿಗಳು ಬಂದಿರುವ ಸಾಧ್ಯತೆ ಇದೆ.

ಕಾಂಡಾ ಗಿಡಗಳು ಬೆಳೆದು ನಿಂತ ನೇತ್ರಾವತಿ ನದಿ ತೀರದ ಕಾಡಿನಲ್ಲಿ ಬೆಳಗ್ಗಿನ ಹೊತ್ತು ನಿಂತು, ರಾತ್ರಿ ಹೊತ್ತಿನಲ್ಲಿ ಕೋಟೆಪುರ ಭಾಗದಲ್ಲಿ ಸುತ್ತಾಡುತ್ತಿವೆ.

ಸ್ಥಳಿಯರು ಇದನ್ನು ಚಿರತೆ ಎಂದೇ ಭಾವಿಸಿದ್ದು ಇದರ ಸಿಸಿಟಿವಿ ಪರಿಶೀಲಿಸಿದ ಅರಣ್ಯಾಧಿಕಾರಿಗಳು ಇದು ಕತ್ತೆ ಕಿರುಬ ಎಂದು ಸ್ಫಷ್ಟನೆ ನೀಡಿದ್ದಾರೆ.

ಸಮೀಪದ ಮಸೀದಿಯ ಸಿಸಿಟಿವಿಯಲ್ಲಿ ಇದರ ಸಂಚಾರ ಸೆರೆಯಾಗಿದೆ. ಪುಟ್ಟ ಮಕ್ಕಳು ಮತ್ತು ನಾಯಿಗಳನ್ನು ಟಾರ್ಗೆಟ್ ಮಾಡುವ ಕತ್ತೆ ಕಿರುಬದ ಬಂಧನಕ್ಕೆ ಇದೀಗ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದ್ದು ಕೋಟೆಪುರದಲ್ಲಿ ಪರಿಸರದಲ್ಲಿ ಮೂರು ಬೋನುಗಳನ್ನು ಇರಿಸಲಾಗಿದೆ.

ಎರಡು ವಾರಗಳಿಂದ ಕತ್ತೆ ಕಿರುಬ ಸಂಚಾರ ಹೆಚ್ಚಾಗಿದ್ದು ಇದರಿಂದ ಸ್ಥಳಿಯ ಜನ ಭಯಭೀತರಾಗಿದ್ದಾರೆ

ವೀಡಿಯೋಗಾಗಿ

Advertisement
Click to comment

Leave a Reply

Your email address will not be published. Required fields are marked *

STATE

ಬೆಳಗಾವಿ ಅಧಿವೇಶನದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ 50 ಲಕ್ಷ ರೂ. ನೀಡಲು ಶಾಸಕರ ಮನವಿ

Published

on

ಬೆಳಗಾವಿ: ಢಾಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಗೆದ್ದ ಕಾರ್ಕಳ್ ಮಿಯ್ಯಾರಿನ ಧನಲಕ್ಷ್ಮಿ ಪೂಜಾರಿ ಅವರು ಇಂದು ತನ್ನ ಕೋಚ್‌ ತೇಜಸ್ವಿನಿ ಪೈ ಅವರ ಜತೆಗೆ ಬೆಳವಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದಅಧಿವೇಶನದ ಕಲಾಪ ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಧನ ಲಕ್ಷ್ಮಿ ಅವರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಧನಲಕ್ಷ್ಮಿ ಅದರ ಸಾಧನೆಯನ್ನು ಗುರುತಿಸಿ ಸರಕಾರದ ವತಿಯಿಂದ ಈಗಾಗಲೇ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಧನಲಕ್ಷ್ಮಿ ಮತ್ತು ಆಕೆಯ ತರಬೇತುದಾರರಾದ ತೇಜಸ್ವಿನಿ ಪೈ ಅವರನ್ನು ಅಭಿನಂದಿಸುತ್ತೇನೆ ಎಂದರು. ಧನಲಕ್ಞ್ಮಿ ಅವರಿಗೆ  ಕನಿಷ್ಟ 50 ಲಕ್ಷ ರೂಪಾಯಿ ಬಹುಮಾನ ನೀಡ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದರು.ಆಕೆಗೆ ಸರಕಾರಿ ಉದ್ಯೋಗ ಕೊಡಿಸಬೇಕೆಂದು ವಿ ಸುನಿಲ್ ಕುಮಾರ್ ಮನವಿ ಮಾಡಿದರು.

Continue Reading

DAKSHINA KANNADA

ಡಿ. 13, 14 ರಂದು ಮಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ

Published

on

ಮಂಗಳೂರು: ಮಂಗಳೂರಿನ ಮದರ್ ತೆರೆಸಾ ವಿಚಾರ ವೇದಿಕೆ ಮತ್ತು ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್‌ ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವವನ್ನು ಆಯೋಜಿಸಲಾಗಿದೆ.

ಎರಡು ದಿನಗಳ ಈ ಉತ್ಸವದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ 2.30 ರಿಂದ ರಾತ್ರಿ 9.30 ರ ತನಕ ನಡೆಯಲಿವೆ ಎಂದು ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್‌ ಖೇಲ್‌ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರಲ್‌ಗಳ ಗಾಯನ ಸ್ಪರ್ಧೆ, ಕೇಕ್ ಸ್ಪರ್ಧೆ, ಸ್ಟಾರ್ ಸ್ಪರ್ಧೆ, ವೈನ್‌ ಮೇಳ, ಆಹಾರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: ‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಕ್ಯಾಥೊಲಿಕದ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜಾ, ಕಾರ್ಯಕ್ರಮದ ಸಂಚಾಲಕ ಸ್ಟ್ಯಾನಿ ಲೋಬೊ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Continue Reading

DAKSHINA KANNADA

‘ನಶೆ ಮುಕ್ತ ಮಂಗಳೂರು’ ಅಭಿಯಾನ-ಸ್ಪೀಕರ್ ಯು.ಟಿ ಖಾದರ್ ಅವರಿಂದ ಉದ್ಘಾಟನೆ

Published

on

ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್‌ ಪ್ರಯುಕ್ತ “ನಶೆ ಮುಕ್ತ ಮಂಗಳೂರು’  ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ಬ್ರಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪೌಂಡೇಶನ್‌ನ ಸುಹೈಲ್ ಕಂದಕ್ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಭಿಯಾನದ ಉದ್ಘಾಟನೆಯನ್ನು ಸ್ಪೀಕರ್ ಯು ಟಿ ಖಾದರ್ ನೆರವೇರಿಸುವರು. ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿರುತ್ತಾರೆ ಎಂದರು.

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿಯಾನವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಎಸಿಪಿ ರವೀಶ್ ನಾಯಕ್, ಕಾಂಗ್ರೆಸ್ ನಾಯಕ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್, ಬೀನಾ ಸಲ್ದಾನ ಮೊದಲಾದವರಿದ್ದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page