Connect with us

ಕೊರೊನಾ ಸೋಂಕಿತ ಮಕ್ಕಳಿಗೆ ಹೈಡ್ರೋಕ್ಲೋರೋಕ್ವಿನ್ ಔಷಧಿ ಬಳಕೆ ಡೇಂಜರಸ್.!

Published

on

ಕೊರೊನಾ ಸೋಂಕಿತ ಮಕ್ಕಳಿಗೆ ಹೈಡ್ರೋಕ್ಲೋರೋಕ್ವಿನ್ ಔಷಧಿ ಬಳಕೆ ಡೇಂಜರಸ್.!

ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಹೈಡ್ರೋಕ್ಲೋರೋಕ್ವಿನ್ ಔಷಧಿ ಬಳಕೆ ಮಾಡುವುದು ಸುರಕ್ಷಿತವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಾಯಿ ಮೂಲಕ 8 ವರ್ಷದ ಮಗುವೊಂದು ಸೋಂಕಿಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಮಗುವಿನಲ್ಲಿ ಈವರೆಗೂ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಮಗುವಿಗೆ ಯಾವುದೇ ರೀತಿಯ ಔಷಧಿಗಳನ್ನೂ ನೀಡುತ್ತಿಲ್ಲ.

ಆದರೆ, 15 ವರ್ಷದ ಕೆಳಗಿನ ಮಕ್ಕಳಿಗೆ ಹೆಚ್ ಸಿಕ್ಯೂ ನೀಡಬಾರದು. ಈ ಔಷಧಿ ವಿಷತ್ವವನ್ನು ಹೊಂದಿದ್ದು, ಅವುಗಳು ಮಕ್ಕಳ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತವೆ.

ರೋಗ ಲಕ್ಷಣಗಳು ಕಂಡು ಬಂದ ಮಕ್ಕಳಿಗೆ ಮಾತ್ರ ಔಷಧಿ ಬಳಕೆ ಮಾಡಬಹುದು ಎಂದು ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ವೈದ್ಯಕೀಯ ವಲಯದಲ್ಲಿ ಹೆಚ್ ಸಿಕ್ಯೂ ಬಳಕೆ ಇನ್ನು ಹಲವು ವಿರೋಧದ ಅಭಿಪ್ರಾಯಗಳೊಂದಿಗೆ ವಿವಾದಾಸ್ಪದವಾಗಿಯೇ ಉಳಿದಿದೆ.

ಕ್ಲೌಡ್ ನೈನ್ ಆಸ್ಪತ್ರೆಯ ಸಂಸ್ಥಾಪಕ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಮಾತನಾಡಿ, 15 ವರ್ಷ ಕೆಳಗಿನ ಮಕ್ಕಳಿಗೆ ಹೆಚ್ ಸಿಕ್ಯೂ ಔಷಧಿಯನ್ನು ಶಿಫಾರಸು ಮಾಡುವುದಿಲ್ಲ.

ಮಕ್ಕಳಿಗೆ ಯಾವ ಮಟ್ಟದಲ್ಲಿ ಔಷಧಿ ಬಳಕೆ ಮಾಡಬೇಕೆಂಬ ಮಾಹಿತಿಗಳೂ ಗೊತ್ತಿಲ್ಲ. ಔಷಧಿ ಬಳಕೆ ಪ್ರಮಾಣ ಗೊತ್ತಿಲ್ಲದೆ ಬಳಕೆ ಮಾಡಿದ್ದೇ ಆದರೆ, ಮನುಷ್ಯರಲ್ಲಿ ಹೃದಯ ಸ್ತಂಭನ ಎದುರಾಗಬಹುದು ಎಂದು ಹೇಳಿದ್ದಾರೆ.

ಇನ್ನೋರ್ವ ವೈದ್ಯಾಧಿಕಾರಿ ಹೇಳಿರುವಂತೆ, ನ್ಯೂಮೋನಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಸ್ಟೀರಾಯ್ಡ್ ಗಳು ಮತ್ತು ಅಜಿಥ್ರೊಮೈಸಿನ್ ಸೇರಿದಂತೆ ಇತರೆ ಆ್ಯಂಟಿ ವೈರಸ್ ಔಷದಿಗಳನ್ನು ನೀಡಲಾಗುತ್ತಿದೆ.

ಇದೀಗ ನ್ಯೂಮೋನಿಯಾ ಅಥವಾ ಶ್ವಾಸಕೋಶದ ಸೋಂಕನ್ನು ಹೊಂದಿರುವ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿ ರೋಗ ನಿರೋಧಕ ಮತ್ತು ಸಕ್ರಿಯ ಚಿಕಿತ್ಸೆಗಾಗಿ ವಯಸ್ಕರಿಗೆ ಹೆಚ್ ಸಿಕ್ಯೂ ನೀಡಲಾಗುತ್ತಿದೆ.

ಅಜಿಥ್ರೊಮೈಸಿನ್ ಮತ್ತು ಹೆಚ್ ಸಿಕ್ಯೂನ್ನು ಸಕ್ರಿಯ ಚಿಕಿತ್ಸೆಗಾಗಿ ಒಟ್ಟಿಗೆ ನೀಡಲಾಗುತ್ತದೆ. ಆದರೆ, ರೋಗ ನಿರೋಧಕಕ್ಕೆ ಹೆಚ್ ಸಿಕ್ಯೂ ನೀಡಲಾಗುತ್ತಿದೆ ಅಂತ ತಿಳಿಸಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

kerala

ಮದ್ವೆಗೆ ಬಲವಂತ ಆರೋಪ-ಠಾಣೆ ಮೆಟ್ಟಿಲೇರಿದ ನೀಲಿ ಕಂಗಳ ಚೆಲುವೆ ಮೊನಾಲಿಸಾ

Published

on

ತಿರುವನಂತಪುರ: 2024ರಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ  ರುದ್ರಾಕ್ಷಿ ಮಾರುತ್ತ ತನ್ನ ಸುಂದರ ಕಣ್ಣುಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಹವಾ ಸೃಷ್ಟಿಸಿದ್ದ ಮೊನಾಲಿಸಾ ಬೋಂಸ್ಲೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ತನ್ನ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮೊನಾಲಿಸಾ ತನ್ನ ಗೆಳೆಯನ ಜೊತೆ ಬಂದು ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ದೈಹಿಕ ಕಿರುಕುಳ ನಡೆದಿಲ್ಲ. ಪ್ರಾಥಮಿಕವಾಗಿ ಬಲವಂತದ ವಿವಾಹ ಪ್ರಸ್ತಾಪವಾಗಿದೆ. ಮೊನಾಲಿಸಾ ತಂದೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದುದರಿಂದ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್ ಆದ ಬಳಿಕ ಮೊನಾಲಿಸಾ ಅವರ ಬದುಕೇ ಬದಲಾಗಿದೆ. ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿದೆ. ಪ್ರಸ್ತುತ ಶೂಟಿಂಗ್ ಗಾಗಿ ತಿರುವನಂತಪುರಕ್ಕೆ ಬಂದಿದ್ದ ಮೊನಾಲಿಸಾ ಇದೀಗ ಗೆಳೆಯನ ಜೊತೆ ಬಮದು ದೂರನ್ನು ನೀಡಿದ್ದಾರೆ.

Continue Reading

bangalore

6 ತಿಂಗಳಿನಿಂದ ಒಂದೇ ಮನೆಗೆ ಸ್ಕೆಚ್, 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಯುವಕ ಅರೆಸ್ಟ್

Published

on

ಬೆಂಗಳೂರು: ಮನೆಯವರು ಅಮೇರಿಕಾದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ  ಕಳ್ಳನೋರ್ವ ಸುಮಾರು 3.5 ಕೋಟಿ ಮೌಲ್ಯದ ಚಿನ್ನ ಎಗರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿನಿಮೀಯ ಶೈಲಿಯಲ್ಲಿಕಳ್ಳತನಗೈದ ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುತ್ತಿದ್ದ ವೇಲಾರಾಮ್ ಪಕ್ಕದ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿದ್ದ. ದಂಪತಿ ಅಮೇರಿಕಾದಲ್ಲಿ ಸೆಟಲ್ ಆಗಿರೋದನ್ನು ಖಚಿತಪಡಿಸಿಕೊಂಡು  ಬರೋಬ್ಬರಿ ಆರು ತಿಂಗಳು ಸ್ಕೆಚ್ ಹಾಕಿ ಒಮ್ಮೆಗೆ 3 ಕೋಟಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದ.

ಲಾಕರ್ ಓಪನ್ ಮಾಡಿ 1.8 ಕೆಜಿಯ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಎಲ್ಲವನ್ನು ದೋಚಿಕೊಂಡು ಹೋಗಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಕೇಳದೆ ನೇರವಾಗಿ ರಾಜಸ್ಥಾನಕ್ಕೆ ಚಿನ್ನಾಭರಣ ಕೊಂಡೊಯ್ದು, ಮನೆಯಲ್ಲಿ ಬಚ್ಚಿಟ್ಟಿದ್ದ.

ಮನೆಯ ಸಿಸಿಟಿವಿಯನ್ನ ಅಮೆರಿಕದಲ್ಲಿದ್ದ ದಂಪತಿ ಮೊಬೈಲ್ ನಲ್ಲಿ ಪರಿಶೀಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಸಿಸಿಟಿವಿ ಆಧರಿಸಿ ಆರೋಪಿ ವೇಲಾರಾಮ್‌ ನನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

Continue Reading

LATEST NEWS

ಸೆಕೆ ತಾಳಲಾರದೆ ತಂಪಾಗಲು ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

Published

on

ಹುಬ್ಬಳ್ಳಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಈಜಲು ಹೋಗಿ ನೀರಿನ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.


ಮೃತಪಟ್ಟ ವಿದ್ಯಾರ್ಥಿಗಳನ್ನು ಸಮರ್ಥ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗೋಪನಕೊಪ್ಪದ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು ಎನ್ನಲಾಗಿದೆ.

ಬೇಸಿಗೆಯ ಸೆಕೆ ತಾಳಲಾರದೆ ತಂಪಾಗಲು ಇಬ್ಬರು ಸ್ನೇಹಿತರು ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್​​ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ತೆರಳಿದ್ದರು. ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಮನೆಗೆ ಮರುಳಲಿಲ್ಲ. ಆ ವೇಳೆ ಇಬ್ಬರು ಹೊಂಡದಲ್ಲಿ ಬಿದ್ದಿರೋದನ್ನು ಗಮನಿಸಿದ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಹಾಲ್​​ನಲ್ಲಿ ಬುರ್ಖಾಧಾರಿ ಕಳ್ಳಿಯ ಕರಾಮತ್ತು..! ವಿಚಾರಣೆ ವೇಳೆ ಆಘಾತಕಾರಿ ವಿಚಾರ ಬೆಳಕಿಗೆ..!?

ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ. ಘಟನನಾ ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page