Connect with us

DAKSHINA KANNADA

ಮಾನವ ಕಳ್ಳಸಾಗಣೆ ಜಾಲ ಬೆಂಬತ್ತಿದ ಮಂಗಳೂರು ಪೊಲೀಸ್ :38 ಶ್ರೀಲಂಕಾ ಪ್ರಜೆಗಳ ಬಂಧನ..!

Published

on

ಮಂಗಳೂರು :  ಮಂಗಳೂರು ಪೊಲೀಸರು  ಮಾನವ ಕಳ್ಳಸಾಗಾಟದ ಬೃಹತ್ ಜಾಲವನ್ನು ಬೆಂಬತ್ತಿದ್ದಾರೆ ಮತ್ತು ಈ ಸಂಬಂಧ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಶ್ರೀಲಂಕಾದಿಂದ ಕೆನಾಡಕ್ಕೆ ಇವರನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದಿಂದ ಮಾರ್ಚ್ ತಿಂಗಳಲ್ಲಿ 39 ಪ್ರಜೆಗಳು ತಮಿಳುನಾಡಿಗೆ ಪ್ರಯಾಣಿಸಿದ್ದರು. ಶ್ರೀಲಂಕಾದ ಏಜೆಂಟನೊಬ್ಬ ಪ್ರತಿಯೊಬ್ಬರಿಂದ ತಲಾ 5 ಲಕ್ಷದಿಂದ 10 ಲಕ್ಷದವರೆಗೆ ಹಣವನ್ನು ಪಡೆದುಕೊಂಡು ಕೆನಡಾ ದೇಶಕ್ಕೆ ಕಳುಹಿಸಲು ಯೋಜನೆ ಸಿದ್ದಪಡಿಸಿದ್ದನು.

ಅದರಂತೆ ಆತ ಶ್ರೀಲಂಕಾದಿಂದ ದೋಣಿಯ ಮುಖಾಂತರ ತಮಿಳುನಾಡು ರಾಜ್ಯದ ತೂತುಕುಡಿ ಎಂಬ ಸ್ಥಳಕ್ಕೆ 39 ಮಂದಿಯನ್ನು ಕಳುಹಿಸಿದ್ದ.

ಆದರೆ ತಮಿಳುನಾಡಿನಲ್ಲಿ ಚುನಾವಣಾ ಕಾರಣದಿಂದ ಲಾಡ್ಜ್ ಗಳಲ್ಲಿ ತಪಾಸಣೆ ಜಾಸ್ತಿ ಇದ್ದ ಕಾರಣ ಅವರನ್ನು ಬೆಂಗಳೂರು ಮೂಲಕ ಮಂಗಳೂರಿಗೆ ಕಳುಹಿಸಲಾಗಿದೆ.

ಹೀಗೆ ಮಂಗಳೂರಿಗೆ ಬಂದ 39 ಮಂದಿ ಮಂಗಳೂರಿನ ಒಂದು ಲಾಡ್ಜ್ ಮತ್ತು 2 ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಕಳೆದ ಒಂದು ತಿಂಗಳಿನಿಂದ ಅಕ್ರಮವಾಗಿ ವಾಸವಿದ್ದ ಬಗ್ಗೆ ಮಾಹಿತಿ ಕಲೆ ಹಾಕಿ  38 ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದ್ದು ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದರು.

ದೇಶದ ಆಂತರಿಕಾ ಭದ್ರತಾ ವಿಚಾರವಾಗಿರುವುದರಿಂದ ವಿವಿಧ ಪೊಲೀಸ್ ವಿಭಾಗಕ್ಕೆ ಮಾಹಿತಿ ರವಾನಿಸಲಾಗಿದೆ

ಮಂಗಳೂರಿನಲ್ಲಿ ಬಂಧಿಸಲಾಗಿರುವ 38 ಶ್ರೀಲಂಕಾ ಪ್ರಜೆಗಳ ಕೋವಿಡ್ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಈ ಬೃಹತ್ ಮಾನವ ಸಾಗಣೆಯಲ್ಲಿ ಶ್ರೀಲಂಕಾ, ತಮಿಳುನಾಡು, ಬೆಂಗಳೂರಿನಲ್ಲಿ ಏಜೆಂಟ್​ಗಳಿದ್ದೂ ಮಂಗಳೂರಿನಲ್ಲಿ ಇವರ ಸಂಪರ್ಕದಲ್ಲಿ ಇರುವವರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

DAKSHINA KANNADA

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

Published

on

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ವಾಗ್ವಾದ ನಡೆದು ಚೂರಿ ಇರಿತ ಸಂಭವಿಸಿದ ಘಟನೆ ವಿಟ್ಲದ ಖಾಸಗಿ ಐಟಿಐ ಕಾಲೇಜೊಂದರಲ್ಲಿ ಇಂದು ನಡೆದಿದೆ.


ವಿಟ್ಲದ ಖಾಸಗಿ ಐಟಿಐ ಒಂದರಲ್ಲಿ ವಿದ್ಯಾರ್ಥಿಗಳ ನಡುವೆ ಚೂರಿ ಇರಿತ ನಡೆದಿದೆ. ಆರಂಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದು ಬಳಿಕ ಚೂರಿ ಇರಿತ ಸಂಭವಿಸಿದ್ದು, ಘಟನೆಯಿಂದಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಜೋರಾಗಿ ಕೆಮ್ಮಿದ ಎಂಬ ಕಾರಣಕ್ಕೆ ನೆರೆಮನೆಯವರಿಂದಲೇ ಯುವಕನ ಕೊಲೆ

ಇದೇ ವೇಳೆ ಗಲಾಟೆ ಬಿಡಿಸಲು ಹೋದ ವಿದ್ಯಾರ್ಥಿಗೂ ಗಾಯವಾಗಿರುವುದಾಗಿ ಮಾಹಿತಿ ಲಭಿಸಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.

Continue Reading

DAKSHINA KANNADA

ಪುತ್ತೂರು: ಎಂ.ಡಿ.ಎಂ.ಎ. ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

Published

on

ಪುತ್ತೂರು: ಉಪ್ಪಿನಂಗಡಿ ಗ್ರಾಮದ ಪಂಜಳ ಎಂಬಲ್ಲಿ ಮಾದಕ ದ್ರವ್ಯ ಎಂ.ಡಿ.ಎಂ.ಎ. ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಮೂರು ಸಾವಿರ ರೂಪಾಯಿ ಮೌಲ್ಯದ 2.16 ಗ್ರಾಂ ಎಂ.ಡಿ.ಎಂ.ಎ., 45 ಸಾವಿರ ರೂಪಾಯಿ ಮೌಲ್ಯದ ಐಪೋನ್ ಮತ್ತು ಒಂದು ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಕೀ-ಪ್ಯಾಡ್ ಮೊಬೈಲ್ ಸೇರಿದಂತೆ ಒಟ್ಟು 49 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಕೊಕ್ಕಡ ನಿವಾಸಿ ಯಾಹ್ಯಾ (48) ಬಂಧಿತ ಆರೋಪಿಯಾಗಿದ್ದಾನೆ. ಉಪ್ಪಿನಂಗಡಿ ಪೊಲೀಸರು ಪಂಜಳ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಯಾಹ್ಯಾ ಕೊಕ್ಕಡನನ್ನು ವಿಚಾರಿಸಿದಾಗ ಆತ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಜೋರಾಗಿ ಕೆಮ್ಮಿದ ಎಂಬ ಕಾರಣಕ್ಕೆ ನೆರೆಮನೆಯವರಿಂದಲೇ ಯುವಕನ ಕೊಲೆ

ಉಪ್ಪಿನಂಗಡಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಫೆ.11-14: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ-ಕುಂಭ ಮಹೋತ್ಸವ

Published

on

ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಕುಂಭ ಮಹೋತ್ಸವ ಫೆ.11ರಿಂದ ಆರಂಭಗೊಂಡು ಫೆ.14ರವರೆಗೆ ಜರುಗಲಿದೆ.

ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಇವರ ಆಶೀರ್ವಾದದೊಂದಿಗೆ ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜನಾರ್ದನ ಭಟ್ಟರ ಉಪಸ್ಥಿತಿಯಲ್ಲಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವುದು.

ಫೆ.11ರಂದು ದೀಪಪ್ರಜ್ವಲನೆ ಮೂಲಕ ಭಜನಾ ಸಂಕೀರ್ತಣೆ ಸಂಜೆ 3 ಗಂಟೆಗೆ ಆರಂಭಗೊಳ್ಳಲಿದೆ. ಫೆ.12ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ ಇತ್ಯಾದಿ ನಡೆದು ಮಧ್ಯಾಹ್ನ ಮಹಾರಥೋತ್ಸವ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ ಆಯೋಜನೆ ಮಾಡಲಾಗಿದೆ. 

6 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಆಗಮಿಸಲಿರುವರು ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page