Connect with us

LATEST NEWS

ಉಡುಪಿಯಲ್ಲಿ ಸ್ಕೂಟರ್ -ಬೈಕ್ ನಡುವೆ ಭೀಕರ ಅಪಘಾತ

Published

on

ಸ್ಕೂಟರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ,ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಬ್ರಹ್ಮಾವರ ಸಮೀಪದ ಯಡ್ತಾಡಿಯಲ್ಲಿ ನಡೆದಿದೆ.

ಉಡುಪಿ: ಸ್ಕೂಟರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ,ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಬ್ರಹ್ಮಾವರ ಸಮೀಪದ ಯಡ್ತಾಡಿಯಲ್ಲಿ ನಡೆದಿದೆ.

ಇಲ್ಲಿನ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಹತ್ತಿರ ಈ ರಸ್ತೆ ಅಪಘಾತ ಸಂಭವಿಸಿದೆ.

ಮೃತರನ್ನು ಹೈಕಾಡಿಯ ನಿವಾಸಿಯಾಗಿರುವ 27 ವರ್ಷದ ಮುಹಮ್ಮದ್ ಸಫ್ವಾನ್ ಎ.ಕೆ. ಎಂದು ಗುರುತಿಸಲಾಗಿದೆ.

68 ವರ್ಷದ ಸ್ಕೂಟರ್ ಸವಾರ ಭುಜಂಗ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾರೆ.

ಬೆಳಗ್ಗೆ 9.45 ರ ಸುಮಾರಿಗೆ ಹಾಲಾಡಿ ಮಾರ್ಗವಾಗಿ ಸಾಯಿಬರಕಟ್ಟೆ ಕಡೆಯಿಂದ ಬ್ರಹ್ಮಾವರದ ಕಡೆಗೆ ಹೋಗುತ್ತಿದ್ದ ಬೈಕ್ ಗೆ  ಬ್ರಹ್ಮಾವರ ಕಡೆಯಿಂದ ಸಾಯಿಬರ ಕಟ್ಟೆ ಕಡೆಗೆ ಬರುತ್ತಿದ್ದ ಸ್ಕೂಟರ್ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಇದರ ಪರಿಣಾಮ ಬೈಕ್ ಮತ್ತು ಸ್ಕೂಟರ್ ಸವಾರಿಬ್ಬರೂ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದ ಗಾಯಗೊಂಡಿದ್ದಾರೆ.

ಬಳಿಕ ಇವರಿಬ್ಬರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಹಮ್ಮದ್ ಸಫ್ವಾನ್ ತಡರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS

ಬಸ್ ನಿಲ್ದಾಣಕ್ಕೆ ಕಾರು ಡಿ*ಕ್ಕಿ; ಚಾಲಕನಿಗೆ ಗಾ*ಯ

Published

on

ಕಾಪು : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಸ್ ನಿಲ್ದಾಣಕ್ಕೆ ಡಿ*ಕ್ಕಿಯಾದ ಘಟನೆ ಉಡುಪಿ ಜಿಲ್ಲೆಯ ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ(ಡಿ.07) ಸಂಭವಿಸಿದೆ.

ಕಾರು ಚಾಲಕ ಕೊಪ್ಪಲಂಗಡಿಯ ಇಸ್ಮಾಯಿಲ್  ಗಾ*ಯಗೊಂಡಿದ್ದಾರೆ. ಕಾಪುನಿಂದ ಉಚ್ಚಿಲ ಕಡೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇಸ್ಮಾಯಿಲ್‌ರನ್ನು  ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಮಹಿಳೆಯ ಹ*ತ್ಯೆ ಪ್ರಕರಣ : ಪೊಲೀಸರು ಬೀಸಿದ ಬಲೆಗೆ ಹಂ*ತಕ ಸಿಕ್ಕಿ ಬಿದ್ದಿದ್ದು ಹೇಗೆ?

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು

Continue Reading

LATEST NEWS

ನಾಗರಹಾವು ಕಡಿದು ವ್ಯಕ್ತಿ ಸಾ*ವು

Published

on

ಉಡುಪಿ : ನಾಗರಹಾವು ಕ*ಡಿದು ವ್ಯಕ್ತಿಯೊಬ್ಬರು ಸಾ*ವನ್ನಪ್ಪಿರುವ ಘಟನೆ ಉಡುಪಿ ಕುತ್ಯಾರು ಗ್ರಾಮದಲ್ಲಿ ನಡೆದಿದೆ. ಸುರೇಂದ್ರ ಕಿಟ್ಟು ಪೂಜಾರಿ(54) ಮೃ*ತಪಟ್ಟ ವ್ಯಕ್ತಿ.

ಸುರೇಂದ್ರ ಸ್ಥಳೀಯರೊಬ್ಬರಿಗೆ ಸೇರಿದ ತೋಟದಲ್ಲಿ ಕಳೆದ 6 ವರ್ಷಗಳಿಂದ ತೋಟ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು. ಡಿ. 5 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಡಕೆ ಮರಗಳಿಗೆ ಕ್ರಿಮಿನಾಶಕ ಸಿಂಪಡಿಸಲು ತೋಟಕ್ಕೆ ಹೋಗಿದ್ದಾಗ ನಾಗರಹಾವು ಕ*ಚ್ಚಿದೆ.

ಇದನ್ನೂ ಓದಿ : ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

ತಕ್ಷಣವೇ ಅವರನ್ನು ಕಿನ್ನಿಗೋಳಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಸುರೇಂದ್ರ ಪೂಜಾರಿ ಮೃ*ತಪಟ್ಟಿದ್ದಾರೆಂದು ತಿಳಿದುಬಂದಿದೆ. ಮೃ*ತರ ಪುತ್ರ ಕಿರಣ್.ಎಸ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

ನಾಲ್ಕು ತಿಂಗಳ ಹಿಂದಷ್ಟೇ ಮದುವೆ… ನವವಿವಾಹಿತೆಯ ದುರಂ*ತ ಅಂತ್ಯ!

Published

on

ಮಂಗಳೂರು/ಬೆಂಗಳೂರು : ಗ್ಯಾಸ್ ಗೀಸರ್​ ಸೋರಿಕೆಯಿಂದ ನವ ವಿವಾಹಿತೆ ಸಾ*ವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಭೂಮಿಕಾ ಮೃ*ತ ದುರ್ದೈವಿ.

ಭೂಮಿಕಾ ಹಾಸನ ಮೂಲದವರಾಗಿದ್ದು ನಾಲ್ಕು ತಿಂಗಳ ಹಿಂದಷ್ಟೇ ಕೃಷ್ಣಮೂರ್ತಿ ಎಂಬುವವರ ಜೊತೆ ಮದುವೆಯಾಗಿದ್ದರು. ಪತಿ ಕೆಲಸಕ್ಕೆ ಹೋದ ಬಳಿಕ ಭೂಮಿಕಾ ಸ್ನಾನಕ್ಕೆ ಹೋಗಿದ್ದಳಂತೆ. ಗ್ಯಾಸ್​ ಲೀಕ್​ ಆದ ಹಿನ್ನೆಲೆ ಭೂಮಿಕಾಗೆ ಉಸಿರುಗಟ್ಟಿದ್ದು, ಬಾತ್‌ ರೂಂನಲ್ಲೇ ಕೊನೆಯು*ಸಿರೆಳೆದಿದ್ದಾಳೆ.

ಇದನ್ನೂ ಓದಿ : ‘ಮದುವೆಯನ್ನು ರದ್ದುಗೊಳಿಸಲಾಗಿದೆ’ ಕೊನೆಗೂ ವದಂತಿಗೆ ಫುಲ್ ಸ್ಟಾಪ್ ನೀಡಿದ ಸ್ಮೃತಿ ಮಂಧಾನ

ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page