Connect with us

DAKSHINA KANNADA

ತುಳುನಾಡ ದೈವ ಶಿವದೂತೆ ಗುಳಿಗ ಕುರಿತು ಗೃಹ ಸಚಿವ ಆರಗ ಜ್ಞಾನೆಂದ್ರ ಅವಹೇಳನಾ ಮಾಡಿದ್ರಾ..!?

Published

on

ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಯಶಸ್ವಿ ತುಳು ನಾಟಕ ಶಿವದೂತೆ ಗುಳಿಗೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ ಎನ್ನಲಾಗಿರುವ ವ್ಯಂಗ್ಯ ಮಾತೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಂಗಳೂರು : ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶನದ ಯಶಸ್ವಿ ತುಳು ನಾಟಕ ಶಿವದೂತೆ ಗುಳಿಗೆ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ ಎನ್ನಲಾಗಿರುವ ವ್ಯಂಗ್ಯ ಮಾತೊಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ತುಳುವರ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂದು ಆಸ್ತಿಕರು  ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ವ್ಯಂಗ್ಯ ಭಾಷಣದ ತುಣುಕನ್ನು ವೈರಲ್‌ಮಾಡಲಾಗಿದೆ. ಮಾ.14ರಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಶಿವದೂತೆ ಗುಳಿಗೆ ನಾಟಕ ಆಯೋಜಿಸಿದ್ದರು.

ಈ ನಾಟಕ ಪ್ರದರ್ಶನ ಕುರಿತು ಎಲ್ಲೆಡೆ ಪೋಸ್ಟರ್‌ ಅಂಟಿಸಲಾಗಿತ್ತು. ಈ ಬಗ್ಗೆ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಕಾಂಗ್ರೆಸನ್ನು ನಂಬಬೇಡಿ, ಗುಳಿಗೆ ಎಂದು ಜಾಪಾನ್‌ ಮಾತ್ರೆ ನೀಡಿ ಜನರಿಗೆ ವಂಚಿಸುತ್ತಾರೆ ಎಂದು ವ್ಯಂಗ್ಯವಾಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಹಿ ಮೂಲ್ಕಿ ಎಂಬವರು ತೀರ್ಥಹಳ್ಳಿ ಹೊರ ಊರೇನು ಅಲ್ಲ. ತುಳುನಾಡಿಗೆ ತಾಗಿಕೊಂಡಿರುವ ಊರು. ತುಳುನಾಡಿನ ಮೂಲ ನಿವಾಸಿಗಳಾದ ಆದಿದ್ರಾವಿಡರು, ಮುಂಡಾಲರು ಸೇರಿದಂತೆ ವಿವಿಧ ಮೂಲನಿವಾಸಿಗಳು ಕೆಲಸವನ್ನು ಆಶ್ರಯಿಸಿ ಅಲ್ಲಿಯೇ ನೆಲೆಯಾಗಿದ್ದಾರೆ.

ತಮ್ಮೊಂದಿಗೆ ತಾವು ನಂಬಿರುವ ದೈವಗಳನ್ನು ಅಲ್ಲಿ ನಂಬುತ್ತಿದ್ದಾರೆ. ಗುಳಿಗ ದೈವ ಘಟ್ಟದಲ್ಲಿಯೂ ಇದೆ ಹೀಗಿರುವಾಗ ಗೃಹಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ ತುಳುವರ ಆರಾಧ್ಯ ದೈವವಾಗಿರುವ ಗುಳಿಗನ ಬಗ್ಗೆ ಗೊತ್ತಿಲ್ಲ ಎನ್ನುವುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಸ್ಪಷ್ಟನೆ ನೀಡಿದ ಆರಗ ಜ್ಞಾನೇಂದ್ರ…
ಕಾಂತಾರ ಚಿತ್ರ ಬಂದ ಮೇಲೆ ತುಳುನಾಡಿನ ಆರಾಧನಾ ಪದ್ಧತಿಯಾದ ಭೂತಾರಾಧನೆ/ದೈವಾರಾಧನೆ ಎಲ್ಲೆಡೆ ಪರಿಚಿತವಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡಕ್ಕೆ ಬಂದಿದ್ದ ಸಂದರ್ಭ ಅಮಿತ್​ ಷಾ ಕೂಡ ಮೆಚ್ಚುಗೆ ಸೂಚಿಸಿದ್ದರು.

ಇದೀಗ ಸಚಿವರು ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದ ‘ಶಿವದೂತೆ ಗುಳಿಗೆ’ (ಗುಳಿಗ) ತುಳು ನಾಟಕಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಈ ವಿಚಾರವಾಗಿ ಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.ಸ್ಪಷ್ಟನೆ ನೀಡುವ ಸಂದರ್ಭ ಮಾತನಾಡಿದ ಸಚಿವರು ‘ಕಾಂಗ್ರೆಸ್ ಅನ್ನು ಟೀಕಿಸಿ ದ್ದೇನೆ, ತುಳು ಸಂಸ್ಕೃತಿ, ದೈವಗಳನ್ನಲ್ಲ. ನೆರೆಯ ತುಳು ನಾಡಿನಲ್ಲಿ, ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ಮೆಚ್ಚುಗೆ ಇದೆ.

ಹಾಗೂ ದೈವದ ಬಗ್ಗೆ ಅಪಾರ ಭಕ್ತಿ ಗೌರವವನ್ನು ಹೊಂದಿದ್ದೇನೆ.ರಂಗಭೂಮಿಯ ಮೇಲೆ, ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು, , ಯಶಸ್ವಿ ಪ್ರದರ್ಶನವನ್ನು ಕಲಾ ರಸಿಕರಿಗೆ ಪರಿಚಯಿಸುತ್ತಿರುವ, ಕಲಾವಿದರು ಹಾಗೂ ವಿಶೇಷವಾಗಿ ನಿರ್ದೇಶಕ, ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ.

ಆದರೆ, ಜನರ ವಿಶ್ವಾಸ ಕಳೆದು ಕೊಂಡಿರುವ, ತೀರ್ಥಹಳ್ಳಿಯ ಸ್ಥಳೀಯ ಕಾಂಗ್ರೆಸ್ ನಾಯಕರು, ಕೇವಲ ರಾಜಕೀಯ ದುರುದ್ದೇಶದಿಂದ ‘ಶಿವದೂತೆ ಗುಳಿಗೆ’ ನಾಟಕದ ಪ್ರದರ್ಶನದ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ್ದೇನೆ.

ಅದರ ಹೊರತು, ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಮಾತನಾಡಿಲ್ಲ.ಆದರೆ, ನಾನಾಡಿದ ಮಾತುಗಳನ್ನು, ಅಪಾರ್ಥ ಬರುವಂತೆ ಮೂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ, ಅಪ ಪ್ರಚಾರ ನಡೆಸುತ್ತಿರುವ ಕುಹಕಿಗಳ ಉದ್ದೇಶ ಈಡೇರುವುದಿಲ್ಲ’ ಎಂದಿದ್ದಾರೆ.

DAKSHINA KANNADA

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಮೂವರು ಆರೋಪಿಗಳ ಬಂಧನ, ಇನ್ನೋರ್ವನಿಗಾಗಿ ಶೋಧ

Published

on

ಮಂಗಳೂರು : ಜಾರ್ಖಂಡ್ ಮೂಲದ ವಲಸೆ ಕಾರ್ಮಿಕ ದಿಲ್‌ಜಾನ್‌ ಅನ್ಸಾರಿ ಎಂಬಾತನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದ ಆರೋಪಿಗಳಾದ ಕೂಳೂರು ನಿವಾಸಿ ಸಾಗರ್‌, ಧನುಷ್‌, ಲಾಲು ಯಾನೆ ರತೀಶ್‌ ಮತ್ತು ಮೋಹನ್ ಎಂಬ ನಾಲ್ವರ ಪೈಕಿ ಕಾವೂರು ಪೊಲೀಸರು ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂಬವರನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಜನವರಿ 11 ರಂದು ಸಂಜೆ ಸುಮಾರು 6 :05ರ ಸುಮಾರಿಗೆ ಜಾರ್ಖಂಡ್ ಮೂಲದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬಾತನನ್ನು ತಡೆದು ನಿಲ್ಲಿಸಿದ ನಾಲ್ವರು ಆರೋಪಿಗಳು, ‘ನೀನು ಬಾಂಗ್ಲಾದೇಶದವನು’ ಎಂದು ಕೂಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂದು ದಿಲ್‌ಜಾನ್‌ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಜೊತೆಗೆ 3(5) ಅಡಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮಂಗಳೂರಿನ ಪೆಡ್ಲರ್‌ಗಳಿಗೆ ಡ್ರಗ್‌ ಸಪ್ಲೈ ಮಾಡುತ್ತಿದ್ದ ಉಗಾಂಡ ಮಹಿಳೆ ಅರೆಸ್ಟ್

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿ ಕಾವೂರು ನಿವಾಸಿ ಮೋಹನ್‌ ಎಂಬಾತ ಪರಾರಿಯಾಗಿದ್ದು, ಈತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Continue Reading

DAKSHINA KANNADA

ಅನುಪಮ ಮಹಿಳಾ ಮಾಸಿಕ ಪತ್ರಿಕೆ; ಜ.15ರಂದು ಬೆಳ್ಳಿ ಹಬ್ಬ ಸಂಭ್ರಮ, ವಿಶೇಷ ಸಂಚಿಕೆ ಬಿಡುಗಡೆ

Published

on

ಮಂಗಳೂರು: ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜ.15ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ.


ಬೆಳ್ಳಿ ಹಬ್ಬವನ್ನು ಖ್ಯಾತ ಸಾಹಿತಿ ಡಾ. ಕೆ. ಷರೀಫಾ ಉದ್ಘಾಟಿಸಲಿದ್ದಾರೆ ಎಂದು ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಹೇಳಿದರು.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ನಡೆಯಲಿದೆ. ಗೌರವ ಅತಿಥಿಗಳಾಗಿ ಸ್ಪೀಕರ್ ಯು.ಟಿ ಖಾದರ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರನ್ನು ಕೂಡಾ ಸನ್ಮಾನಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

ಸುದ್ದಿಗೋಷ್ಠಿಯಲ್ಲಿ ಕರಾವಳಿ ಇತರ ಮಹಿಳಾ ಸಾಹಿತಿಗಳು, ಸ್ವಾಗತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Continue Reading

DAKSHINA KANNADA

ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ: ಪ್ರತಾಪ್‌ಸಿಂಹ ನಾಯಕ್‌

Published

on

ಮಂಗಳೂರು: ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗುವುದಕ್ಕಿಂತ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದ ರೈತರ, ಮಹಿಳೆಯರ, ಕಾರ್ಮಿಕರ ಬಗ್ಗೆ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್‌ ಆರೋಪಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು ದಿನಗಳ ಸಮಯಾವಕಾಶ ಕಡಿಮೆ ಆಯಿತು ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲಾವಕಾಶ ವಿಸ್ತರಿಸಿ ಎಂದು ಬಿಜೆಪಿ ಆಗ್ರಹಿಸಿದರೂ ಅದನ್ನು ವಿಸ್ತರಿಸಿಲ್ಲ. ಕೇವಲ ನಾಮಾಕಾವಸ್ತೆ ಉತ್ತರಕರ್ನಾಟಕದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಮಾಡಲಾಗಿದೆಯೇ ಹೊರತು ಬೇರೆ ವಿಚಾರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ದೂರಿದರು.

ಈಗ ಮತ್ತೆ ತಕ್ಷಣ ಅಧಿವೇಶನ ಕರೆಯುವ ಬಗ್ಗೆ ಜೀ ರಾಮ್‌ಜೀ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಬಿಜೆಪಿ ಬಹಿರಂಗ ಚರ್ಚೆಗೂ ಸಿದ್ದ. ನಾವು ಚರ್ಚೆಯಿಂದ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ: ಡೆಲಿವರಿ ಬಾಯ್‌ ಆದ ರಾಜ್ಯಸಭಾ ಸಂಸದ; ವೀಡಿಯೋ ವೈರಲ್

ಆದರೆ ಈ ಚರ್ಚೆ ಪಾರ್ಲಿಮೆಂಟ್‌ನಲ್ಲಿ ಆಗುವಾಗ ನೀವು ಪ್ರತಿಪಕ್ಷವಾಗಿ ಏನು ಮಾಡಿದಿರಿ..? ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಶಿವರಾಜ್ ಸಿಂಗ್ ಚೌಹಾನ್‌ ಅವರನ್ನು ಮಾತನಾಡ್ಲಿಕ್ಕೆ ಬಿಡಲಿಲ್ಲ. ನೀವು ಅಂದು ನಡೆದುಕೊಂಡ ರೀತಿ ಎಂತದ್ದು. ಕಾಂಗ್ರೆಸ್ಸಿಗೆ ಈ ಮಸೂದೆಯ ಚರ್ಚೆ ಬೇಕಾಗಿಲ್ಲ. ಜನರ ದಾರಿತಪ್ಪಿಸಲು ಅವರು ಮುಂದಾಗಿದ್ದಾರೆ. ಕೇಂದ್ರದ ಯೋಜನೆಗಳ ಬಗ್ಗೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page