Connect with us

LATEST NEWS

‘ಮೆಟ್ರೋದಲ್ಲಿ ಇವರ ಧ್ವನಿ ಎಂದೆಂದಿಗೂ ಜೀವಂತ.. ಕಣ್ಣು ಮುಚ್ಚಿ ಇವರ ಸ್ಪಷ್ಟ ಕನ್ನಡವನ್ನು ಸವಿಯಿರಿ…’; ಅಪ್ಪಟ ಕನ್ನಡತಿಗೆ BMRCL ಸಂತಾಪ

Published

on

ಬೆಂಗಳೂರು: ಕನ್ನಡದ ಅಪ್ರತಿಮ ನಿರೂಪಕಿ ತನ್ನ ಭಾಷೆಯ ಹಿಡಿತದಿಂದಲೇ ಎಲ್ಲರ ಮನಗೆದ್ದ ಅಪರ್ಣಾ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ತನ್ನ ಅದ್ಭುತ ನಿರೂಪಣೆಯಿಂದ, ಸ್ವಚ್ಛಂದವಾದ ಭಾಷಾ ಹಿಡಿತವಿರುವ ಇವರು ಕನ್ನಡಿಗರ ಮನಸಿನಲ್ಲಿಅಚ್ಚಳಿಯದೆ ನೆಲೆಯೂರಿದ್ದಾರೆ.

ಅಪರ್ಣಾ ಇನ್ನಿಲ್ಲ ಅನ್ನೋದು ಕನ್ನಡಿಗರಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದಂತಾಗಿದೆ. ಕ್ಯಾನ್ಸರ್ ಎಂಬ ಮಹಾಮಾರಿ ಅಪರ್ಣಾ ಅವರನ್ನು ಹೆಮ್ಮಾರಿಯಂತೆ ಬಲಿ ಪಡೆದಿದ್ದು, ಇಡೀ ಚಿತ್ರರಂಗಕ್ಕೆ ಇದು ದೊಡ್ಡ ಆಘಾತವಾಗಿದೆ. ತನ್ನ ಆತ್ಮಸ್ಥೈರ್ಯದಿಂದಲೇ ಜೀವವನ್ನು ಹಿಡಿದಿಟ್ಟುಕೊಂಡಿದ್ದ ಅವರು ಕೊನೆಗೂ ಭಗವಂತನ ಆಜ್ಞೆಗೆ ತಲೆಬಾಗಲೇಬೇಕಾಯಿತು.

ಅಪ್ರತಿಮ ಕನ್ನಡತಿ ಅಪರ್ಣಾ ಇನ್ನಿಲ್ಲ..!

ಸರಕಾರದ ಯಾವುದೇ ಕಾರ್ಯಕ್ರಮವಿರಲಿ ಅಪರ್ಣಾ ಅವರ ಉಪಸ್ಥಿತಿ ಇರಲೇಬೇಕಿತ್ತು. ಅವರ ಸ್ವಚ್ಛ ಕನ್ನಡದಿಂದ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದ ಪರಿ, ವೇದಿಕೆಗೆ ಅವರು ತರುತ್ತಿದ್ದ ಕಳೆ ಎಲ್ಲರನ್ನೂ ಖುಷಿಪಡಿಸುತ್ತಿತ್ತು. ಅಲ್ಲದೇ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋಗೂ ಕೂಡಾ ಅಪರ್ಣಾ ಧ್ವನಿಯಾಗಿದ್ದಾರೆ. ಇದೀಗ ಅಪರ್ಣಾ ಅವರ ಅಕಾಲಿಕ ನಿಧನಕ್ಕೆ ಬಿಎಮ್‌ಆರ್‌ಸಿಎಲ್‌ ಸಂತಾಪ ಸೂಚಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

‘ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ’ ಎಂದು ಬರೆದುಕೊಂಡಿದೆ.

DAKSHINA KANNADA

ಸುರತ್ಕಲ್-ನಂತೂರು ಜಂಕ್ಷನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು ಗಂಟೆಗೆ 50 ಕಿಲೋ ಮೀಟರ್‌ ಗೆ ನಿಗದಿಪಡಿಸಲಾಗಿದೆ. ಈ ಮಿತಿ ಸಪ್ಟೆಂಬರ್‌ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಕೆಟ್ಟು ಹೋಗಿವೆ. ಹಾಗಾಗಿ ಅಂತಹ ಭಾಗಗಳು ಅತಿ ವೇಗದ ಚಾಲನೆಗೆ ಸುರಕ್ಷಿತವಾಗಿಲ್ಲ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಾಧ್ಯವಾದಷ್ಟು ಎಲ್ಲೆಲ್ಲಿ ಸರ್ವೀಸ್‌ ರಸ್ತೆಗಳಿವೆಯೋ ಅಲ್ಲಿ ಅದನ್ನೇ ಬಳಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

ಇದನ್ನೂ ಓದಿ: ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

ಸುರತ್ಕಲ್‌- ನಂತೂರು ನಡುವಣ ಹೆದ್ದಾರಿ ಕೆಟ್ಟು ಹೋಗಿದ್ದು, ಘನ ವಾಹನ, ಲಘುವಾಹನ, ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಎಲ್ಲಾ ವಾಹನಗಳು ಈ ಹೆದ್ದಾರಿಯನ್ನೇ ಬಳಸುತ್ತಿವೆ. ಕೆಲವೊಮ್ಮೆ ಹೊಂಡ ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ.

ಈ ಕಾರಣಕ್ಕಾಗಿ ಸರ್ವೀಸ್‌ ರಸ್ತೆ ಇರುವ ಪಣಂಬೂರು, ಸುರತ್ಕಲ್‌, ಬೈಕಂಪಾಡಿ, ಕೂಳೂರು ಭಾಗಗಳಲ್ಲಿ ಈ ಸರ್ವೀಸ್‌ ರಸ್ತೆಯನ್ನೇ ಬಳಸಿ ದ್ವಿಚಕ್ರ ವಾಹನಗಳು ಸಂಚರಿಸುವುದು ಸೂಕ್ತ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

LATEST NEWS

ಭೀ*ಕರ ರಸ್ತೆ ಅಪ*ಘಾತ; ಇಬ್ಬರು ಡ್ಯಾನ್ಸರ್ಸ್​ ಸ್ಥಳದಲ್ಲೇ ಸಾ*ವು

Published

on

ಮಂಗಳೂರು/ನೆಲಮಂಗಲ: ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಡ್ಯಾನ್ಸರ್ಸ್ ಸ್ಥಳದಲ್ಲೇ ಸಾ*ವನ್ನಪ್ಪಿರುವ ಘಟನೆ ನೆಲಮಂಗಲದ ಕುಣಿಗಲ್ ಬೈಪಾಸ್‌ನಲ್ಲಿ ನಡೆದಿದೆ.


ಮೃ*ತರನ್ನು ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್ (22) ಮತ್ತು ಕುರುಬರಹಳ್ಳಿ ನಿವಾಸಿ ಸಹನಾ(21) ಎಂದು ಗುರುತಿಸಲಾಗಿದೆ.

ಪ್ರಜ್ವಲ್ ಕೆಲವು ಸಿನಿಮಾ ಮತ್ತು ಇವೆಂಟ್​ಗಳಲ್ಲಿ ನೃತ್ಯ ಮಾಡಿದ್ದಾರೆ. ಸಹನಾ ಕೂಡ ಡ್ಯಾನ್ಸರ್​​ ಆಗಿದ್ದಾರೆ. ಇಬ್ಬರು ಮದುವೆ ಇವೆಂಟ್​​ ಒಂದನ್ನು ಮುಗಿಸಿಕೊಂಡು ಕುಣಿಗಲ್​ನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಬೈಕ್​ಗೆ ಡಿ*ಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಇದನ್ನೂ ಓದಿ: ಬೆಳ್ತಂಗಡಿ: ಹಿಟಾಚಿಗೆ ಖಾಸಗಿ ಬಸ್ ಡಿ*ಕ್ಕಿ; ಓರ್ವ ಸಾ*ವು, ಹಲವರಿಗೆ ಗಾಯ

ಅಪ*ಘಾತದ ಬೆನ್ನಲ್ಲೇ ಲಾರಿ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

Published

on

ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಅಪಾರ ಹಾನಿಗೂ ಕಾರಣವಾಗಿದೆ. ನಗರದ ಕದ್ರಿ ಕೈಬಟ್ಟಲ್ ಎಂಬಲ್ಲಿ ಮನೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ: ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

ಉಷಾ ಅಶೋಕ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತಕ್ಕೊಳಗಾಗಿದೆ. ಮನೆಯ ಹಲವು ಸಾಮಾಗ್ರಿಗೆ ಹಾನಿ ಉಂಟಾಗಿದೆ.

ಮನೆಯಲ್ಲಿ ಜನರಿದ್ದ ವೇಳೆ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತವಾಗಿದ್ದರೂ ಮನೆ ಮಂದಿ ಪ್ರಾಣಾಪಾಯದಿಂದ ಪಾರು ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page