Connect with us

DAKSHINA KANNADA

ಮಂಗಳೂರು: ಮಾ. 20ಕ್ಕೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ

Published

on

ಮಂಗಳೂರು: ಕೊರಗಜ್ಜನ ಆದಿ ಕ್ಷೇತ್ರವಾದ ಕುತ್ತಾರಿನ ಕೊರಗಜ್ಜ ಕಟ್ಟೆಗೆ ಇದೇ ಮಾ.20ಕ್ಕೆ ಎರಡನೇ ವರ್ಷದ ಪಾದಯಾತ್ರೆ ನಡೆಸಲು ವಿಶ್ವ ಹಿಂದು ಪರಿಷತ್ ಮಂಗಳೂರು ಘಟಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದರು.


ನಿನ್ನೆ ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರ್ ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ನಡೆಯಲಿದೆ.

ಆ ದಿನ ಬೆಳಿಗ್ಗೆ 6 ಗಂಟೆಗೆ ಕದ್ರಿಯಿಂದ ಪಾದಯಾತ್ರೆ ಹೊರಡಲಿದ್ದು 30 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

9.30 ಕ್ಕೆ ಕುತ್ತಾರಿನಲ್ಲಿಯೇ ಸಮಾರೋಪ ಸಮಾರಂಭವೂ ನಡೆಯಲಿದೆ.

ಕದ್ರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಬಳಿಕ 14 ಕಿ.ಮೀ ದೂರದ ಪಾದಯಾತ್ರೆಯಲ್ಲಿ ಭಾಗವಹಿಸುವವರ ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.

ಪಾದಯಾತ್ರೆಗೆ ಬೇರೆ ಬೇರೆ ಸ್ಥಳಗಳಿಂದ ಪಾಲ್ಗೊಳ್ಳುವವರಿಗೆ ಕದ್ರಿ ತಲುಪಲು ಹಾಗೂ ಕುತ್ತಾರ್‌ನಿಂದ ವಾಪಾಸ್ ಬರಲು ಬಸ್‌ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.

 

DAKSHINA KANNADA

ಉಡುಪಿ: ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ನಿಧನ

Published

on

ಉಡುಪಿ: ತೆಂಕುತಿಟ್ಟು ಯಕ್ಷಗಾನ ಪ್ರಕಾರದ ಹಿರಿಯ ಕಲಾವಿದ, ಕಟೀಲು ಮೇಳದಲ್ಲಿ 2 ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ ಕೋಡಿ ಕುಷ್ಟ ಗಾಣಿಗ ಯಾನೆ ಕುಂದಾಪುರದ ಕೃಷ್ಣ ಗಾಣಿಗ (78) ಅವರು ಅಸೌಖ್ಯದಿಂದ ಜೂನ್‌ 12 ರಂದು ಮಧ್ಯಾಹ್ನ ನಿಧನ ಹೊಂದಿದರು.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನ ಮಣ್ಣಣೆ ಪಡೆದಿದ್ದ ಅವರ ಶ್ರೀದೇವಿ ಮಹಾತ್ಮೆಯ ದೇವಿ ಪಾತ್ರ ಇಂದಿಗೂ ಯಕ್ಷ ಪ್ರೇಮಿಗಳು ಸ್ಮರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಅಹಮದಾಬಾದ್: ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಇರುವ ಶಂಕೆ

ಉಡುಪಿ ಕಲಾ ರಂಗ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷದ್ರುವ ಪಟ್ಲ ಪ್ರತಿಷ್ಠಾನ ಪ್ರಶಸ್ತಿ, ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.

Continue Reading

DAKSHINA KANNADA

ಗ್ಯಾರಂಟಿ ಹೆಸರಲ್ಲಿ ಡ್ರಾಮಾ ಮಾಡೋದನ್ನು ಬಿಟ್ಟು, ಅಭಿವೃದ್ಧಿ ಕಡೆ ಗಮನ ಕೊಡಿ: ಶೋಭಾ ಕರಂದ್ಲಾಜೆ

Published

on

ಮಂಗಳೂರು: ಕೇಂದ್ರ ಸರಕಾರದ ಈ ಹಿಂದಿನ ಪ್ಲಾನಿಂಗ್‌ ಕಮಿಷನ್‌ ಬದಲು ಈಗ ನೀತಿ ಆಯೋಗ ಇದ್ದು, ಈ ನೀತಿ ಆಯೋಗದ ಸಭೆಗೆ ಹಾಜರಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಕೇಂದ್ರ ಸರಕಾದಿಂದ ಬರಬೇಕಾಗಿರುವ ತೆರಿಗೆಯ ಪಾಲನ್ನು ಸರಿಯಾಗಿ ನೀಡದೆ ತಾರತಮ್ಯ ಎಸಗುತ್ತಿದೆ ಎಂದು ಆರೋಪ ಮಾಡುತ್ತಿರುವ ಬಗ್ಗೆ ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಗರಂ ಆಗಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004 ರಿಂದ 2014ರ ತನಕ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆಯ ಪಾಲು 1 ಲಕ್ಷದ 44 ಸಾವಿರದ 58 ಕೋಟಿ ರೂಪಾಯಿ ಬಂದಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2014 ರಿಂದ 2024 ರ ವರೆಗಿನ 10 ವರ್ಷಗಳಲ್ಲಿ 5 ಲಕ್ಷದ 42 ಸಾವಿರದ 341 ಕೋಟಿ ರೂ ಬಂದಿದೆ. ಅಂದರೆ ಶೇಕಡಾ 275 ಹೆಚ್ಚು ಬಂದಿದೆ. ಕಾಂಗ್ರೆಸಿಗರಿಗೆ ಲೆಕ್ಕ ಗೊತ್ತಿದ್ದರೆ ಯಾವಾಗ ಹೆಚ್ಚು ಅನುದಾನ ಬಂದಿದೆ ಎಂದು ಹೇಳಬೇಕು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ವತ: ಹಣಕಾಸು ಸಚಿವರಾಗಿದ್ದು, ಅವರಿಗೆ ಲೆಕ್ಕ ಗೊತ್ತಿದ್ದರೆ ಅವರು ಈ ಲೆಕ್ಕವನ್ನು ನೋಡಿ ಹೇಳಬೇಕು. ಅವರು ಜನರನ್ನು ತಪ್ಪು ದಾರಿಗೆಳೆಯಲು ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಸತ್ಯಾಂಶ ಇಲ್ಲ. ಅಂಕಿ ಅಂಶಗಳ ಆಧಾರದಲ್ಲಿ ಮುಖ್ಯಮಂತ್ರಿ ಮಾತನಾಡ ಬೇಕು ಎಂದರು. ಇನ್ನು ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಬಾರಿ ಹಾಜರಾಗಿದ್ದಾರೆ? ಅವರು ಯಾವತ್ತೂ ಹಾಜರಾಗುವುದೇ ಇಲ್ಲ. ಅವರ ಭಾವನೆಗಳನ್ನು, ರಾಜ್ಯದ ಬೇಡಿಕೆಗಳನ್ನು ಎಲ್ಲಿ ಮಂಡಿಸಬೇಕು? ಅವುಗಳನ್ನು ನೀತಿ ಆಯೋಗದ ಮುಂದಿಡಬೇಕಿತ್ತು.

ಆದರೆ ಮುಖ್ಯ ಮಂತ್ರಿಗಳು ನೀತಿ ಆಯೋಗದ ಸಭೆಗೆ ಬರುವುದಿಲ್ಲ. ಅಂದರೆ ಅದರ ಅರ್ಥವೇನು? ಅವರಿಗೆ ಅಭಿವೃದ್ಧಿ ಕೆಲಸಗಳ ಅಗತ್ಯವಿಲ್ಲ. ಅದೇ ಗ್ಯಾರಂಟಿ ಹೆಸರು ಹೇಳಿಕೊಂಡು ಡ್ರಾಮಾ ಮಾಡಬೇಕು. ಅದನ್ನೇ ಮಾಡ್ತಾ ಇದ್ದೀರಿ ತಾನೆ? ನಾನು ಮತ್ತೆ ಮತ್ತೆ ಹೇಳ್ತೇನೆ ಮುಖ್ಯಮಂತ್ರಿಗಳಿಗೆ.. ಚುನಾವಣೆ ಸಂದರ್ಭದಲ್ಲಿ ನಾವು ಎಲ್ಲಾ ಡ್ರಾಮಾ ಮಾಡೋಣ. ಆದರೆ ಉಳಿದ ನಾಲ್ಕುವರೆ ವರ್ಷ ರಾಜ್ಯದ ಜನರು ಯಾವ ಪಾಪ ಮಾಡಿದ್ದಾರೆ? ಕೇಂದ್ರ ಸರಕಾರ ನೀಡುವ ಒಂದೊಂದು ಪೈಸೆಯೂ ಸದುಪಯೋಗ ಆಗಬೇಕು. ಇನ್ನೂ ತರಬೇಕು, ಎಕ್ಸ್‌ಟ್ರಾ ಡಿಮಾಂಡ್‌ ಇಡ ಬೇಕು ಎಂದು ಸಲಹೆ ನೀಡಿದರು.

Continue Reading

DAKSHINA KANNADA

ಕಾರ್ಕಳ: ಖಾಸಗಿ ಬಸ್ ಮತ್ತು ಆಟೋ ಢಿಕ್ಕಿ; ಓರ್ವ ಸಾವು, ನಾಲ್ವರಿಗೆ ಗಾಯ

Published

on

ಕಾರ್ಕಳ: ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಓರ್ವ ಪ್ರಯಾಣಿಕ ಮೃತ ಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಕಾರ್ಕಳ- ಪಡುಬಿದ್ರೆ ರಾಜ್ಯ ಹೆದ್ದಾರಿಯ ಅಡ್ವೆ ಗಣಪತಿ ದೇವಸ್ಥಾನದ ಬಳಿ ಇಂದು ಸಂಭವಿಸಿದೆ.

ಉತ್ತರ ಭಾರತ ಮೂಲದ ಕಾರ್ಮಿಕ ಪ್ರತಾಪ್‌ ಮೃತ ಪಟ್ಟವರು. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಖಾಸಗಿ ಬಸ್ಸು ಕಾರ್ಕಳದಿಂದ ಮಂಗಳೂರಿನ ಕಡೆಗೆ ಸಂಚರಿಸುತ್ತಿದ್ದಾಗ, ಅಡ್ಡ ರಸ್ತೆಯಿಂದ ಬಂದ ಆಟೋ ರಿಕ್ಷಾವೊಂದು ಇದ್ದಕ್ಕಿದ್ದಂತೆ ಮುಖ್ಯ ರಸ್ತೆಯ ಕಡೆಗೆ ಬಂದಿದೆ. ಪರಿಣಾಮ ಬಸ್ಸು ಆಟೋ ರಿಕ್ಷಾಗೆ ಢಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದೆ.

ಅದೃಷ್ಟವಶಾತ್, ಬಸ್ ರಸ್ತೆ ಬದಿಯ ಕಂದಕಕ್ಕೆ ಬೀಳುವುದು ಸ್ವಲ್ಪದರಲ್ಲೇ ಪಾರಾದ ಕಾರಣ ದೊಡ್ಡ ದುರಂತ ತಪ್ಪಿದಂತಾಗಿದೆ. ಆಟೋ ರಿಕ್ಷಾದಲ್ಲಿ ಉತ್ತರ ಭಾರತದ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಪ್ರವೇಶ ದ್ವಾರ ಕುಸಿದು ಮೂವರು ಸಾವು

ಅವರನ್ನು ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರವನ್ನು ನಿರೀಕ್ಷಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page