Connect with us

LATEST NEWS

ಹಿಜಾಬೇ ಮುಖ್ಯ ಆಗಿದ್ದರೆ ಇವರ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತದಲ್ಲೇ ಯಾಕೆ ಉಳಿದರು: ಸುಬ್ರಮಣಿಯನ್‌ ಸ್ವಾಮಿ ಪ್ರಶ್ನೆ

Published

on

ನವದೆಹಲಿ: ಹಿಜಾಬ್‌ ಸಂಘರ್ಷದ ದಿನೇ ದಿನೇ ಕಾವು ಪಡೆಯುತ್ತಿದೆ.

ಈ ಮಧ್ಯೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇವರ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.


‘ಮೊದಲು ಹಿಜಾಬ್ ನಂತರ ಓದು’ ಎಂದು ಮುಸ್ಲಿಮ್‌ ವಿದ್ಯಾರ್ಥಿನಿಯರು ಹೇಳುತ್ತಿರುವುದನ್ನು ಕೇಳಿದ್ದೇನೆ.

ಹೀಗೆ ಘೋಷಣೆ ಕೂಗುತ್ತಾ ತರಗತಿಗಳನ್ನು ಬಹಿಷ್ಕರಿಸುವವರನ್ನು ನೋಡಿದ ಮೇಲೆ ನನಗೊಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ ಓದಿಗಿಂತ ಹಿಜಾಬೇ ಮುಖ್ಯ ಆಗಿದ್ದರೆ ಇವರ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತದಲ್ಲೇ ಯಾಕೆ ಉಳಿದರು.

ಎನ್ನುವುದೇ ಅಚ್ಚರಿಯ ಸಂಗತಿ. ಒಂದು ವೇಳೆ ಅವರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡುತ್ತಿದ್ದರೆ ಸುಲಭವಾಗಿ ಹಿಜಾಬೇ ಮೊದಲು ಆಗುತ್ತಿತ್ತಲ್ಲ ಎಂದಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಅ*ಗ್ನಿ ಅವ*ಘಡ; ಒಂದೇ ಮಳಿಗೆಯಲ್ಲಿತ್ತು 30 ಶ*ವಗಳು

Published

on

ಮಂಗಳೂರು/ಕರಾಚಿ : ಕರಾಚಿಯ ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ ನಲ್ಲಿ ಉಂಟಾದ ಅ*ಗ್ನಿ ಅವ*ಘಡದಲ್ಲಿ ಸಾ*ವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಒಂದೇ ಮಳಿಗೆಯಲ್ಲಿ 30 ಶ*ವಗಳು ಪತ್ತೆಯಾಗಿರೋದು ಶಾ*ಕ್ ಕೊಟ್ಟಿದೆ.  ಸಾ*ವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಯಿದೆ.

ಪಾಕಿಸ್ತಾನದ ಮನಿ ಕ್ಯಾಪಿಟಲ್‌ ಎಂದೇ ಖ್ಯಾತಿಗಳಿಂದ  ಕರಾಚಿ ಸದರ್‌ ಪ್ರದೇಶದಲ್ಲಿರುವ ಗುಲ್‌ ಶಾಪಿಂಗ್‌ ಮಾಲ್‌ನ ನೆಲಮಾಳಿಗೆಯಲ್ಲಿ ಜ.17 ರಂದು ಬೆಂ*ಕಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂ*ಕಿ ಬಳಿಕ ಕ್ಷಣಾರ್ಧದಲ್ಲಿ ಇಡೀ ಮಾಲ್‌ಗೆ ವ್ಯಾಪಿಸಿತ್ತು.

1,200 ಮಳಿಗೆಗಳನ್ನು ಹೊಂದಿರುವ  ಗುಲ್ ಪ್ಲಾಜಾ ಶಾಪಿಂಗ್‌ ಮಾಲ್‌ನಲ್ಲಿ 36 ಗಂಟೆಗಳ ಬಳಿಕ ಬೆಂ*ಕಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಬೆಂ*ಕಿಯನ್ನ ಮುಚ್ಚುವುದಕ್ಕಾಗಿ ಒಳಗಿದ್ದ ಹಲವು ಮಳಿಗೆಗಳ ಶೆಟರ್‌ಗಳನ್ನ ಬಂದ್‌ ಮಾಡಲಾಗಿತ್ತು.

ಇದನ್ನೂ ಓದಿ : ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕ  ಮಾಲ್ ಒಳಗೆ ಪರಿಶೀಲನೆ ನಡೆಸಲಾಯಿತು. ಈ ವೇಳೆ  ‘ದುಬೈ ಕ್ರಾಕರಿ’ ಎಂಬ ಒಂದೇ ಮಳಿಗೆಯಲ್ಲಿ ಸುಮಾರು 30 ಶ*ವಗಳು ಪತ್ತೆಯಾಗಿವೆ. ಬೆಂ*ಕಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಹಾಗೂ ಮಳಿಗೆಯವರು ಶೆಟ್ಟರ್ ಮುಚ್ಚಿಕೊಂಡಿದ್ದಾರೆ. ಈ ವೇಳೆ ದಟ್ಟ ಹೊಗೆ ತುಂಬಿಕೊಂಡು ಸಾ*ವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹಲವು ಮಂದಿ ಕಾಣೆಯಾಗಿದ್ದಾರೆಂದು ತಿಳಿದು ಬಂದಿದೆ.

Continue Reading

DAKSHINA KANNADA

ಪುತ್ತೂರು: 33ನೇ ವರ್ಷದ ಕೋಟಿ-ಚೆನ್ನಯ ಜೋಡುಕೆರೆ ಕಂಬಳ

Published

on

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 33ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಜನವರಿ 24 ಮತ್ತು 25ರಂದು ನಡೆಯಲಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕೂಟಗಳ ಪೈಕಿ ಹಲವು ಪ್ರಥಮಗಳನ್ನು ಸ್ಥಾಪಿಸಿದ ಕೂಟವೆಂಬ ಹೆಗ್ಗಳಿಕೆ ಪುತ್ತೂರು ಕಂಬಳಕ್ಕಿದ್ದು, ಈ ಬಾರಿ 200ಕ್ಕಿಂತಲೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಲಿವೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.32ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಜೋಡುಕರೆಯಲ್ಲಿ ಕಂಬಳವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: ಪಡುಬಿದ್ರೆಗೆ ಆಗಮಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ, ಕೈಯಲ್ಲಿ ಬಂಗುಡೆ ಹಿಡಿದು ಭರ್ಜರಿ ಡ್ಯಾನ್ಸ್

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ರೈ ವಹಿಸಲಿದ್ದಾರೆ ಹಲವು ಮಂದಿ ಗಣ್ಯರು ಭಾಗವಹಿಸಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು ಮೊದಲಾದವರಿದ್ದರು.

Continue Reading

LATEST NEWS

ಕೇರಳ: ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ; ವ್ಲೋಗರ್ ಶಿಂಜಿತಾ ಮುಸ್ತಫಾ ಬಂಧನ

Published

on

ಕೋಝಿಕೋಡ್‌: ಗೋವಿಂದಪುರದ ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಬುಧವಾರ ವ್ಲೋಗರ್ ಶಿಂಜಿತಾ ಮುಸ್ತಫಾ ಅವರನ್ನು ಬಂಧಿಸಿದ್ದಾರೆ. ಶಿಂಜಿತಾ ಬಸ್ಸಿನೊಳಗೆ ಅವಮಾನಿಸಿದ ನಂತರ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಮಹಿಳೆಯನ್ನು ವಡಕಾರದಲ್ಲಿ ಬಂಧಿಸಲಾಗಿದೆ. ಕೊಯಿಲಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ, ಶಿಂಜಿತಾ ಮುಸ್ತಫಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆಕೆಯ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವಾರು ಅಪರಾಧಗಳ ಆರೋಪವನ್ನ ಹೊರಿಸಲಾಗಿದೆ.

ದೀಪಕ್‌ಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸಾರ್ವಜನಿಕ ಪ್ರತಿಭಟನೆ ನಡೆದ ನಂತರ ಬಂಧನವಾಗಿದೆ. ಖಾಸಗಿ ಬಸ್ಸಿನಲ್ಲಿ ದೀಪಕ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಂಜಿತಾ ಮುಸ್ತಫಾ ಆರೋಪಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ದೀಪಕ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಹಾಸನ: ಶಾಲಾ ಬಾಲಕಿಯನ್ನು ಬೆನ್ನಟ್ಟಿದ ಪ್ರಕರಣ; ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರು

ದೀಪಕ್‌ ಆತ್ಮಹತ್ಯೆ ಮಾಡಿದ ನಂತರ ಈ ಪ್ರಕರಣ ತಿರುವು ಪಡೆದುಕೊಂಡಿತ್ತು. ದೀಪಕ್‌ ಅವರದ್ದು ಯಾವುದೇ ತಪ್ಪಿಲ್ಲದೇ ಇದ್ದರೂ ಅವರ ಬಳಿಯೇ ಹೋಗಿ ಆಕೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ವಿಡಿಯೋ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಕ್ಕೆ ಶಿಂಜಿತಾಳನ್ನು ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.

ತೀವ್ರ ಪ್ರತಿಭಟನೆಯ ನಂತರ ಎಚ್ಚೆತ್ತ ಪೊಲೀಸ್‌ ಇಲಾಖೆ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ವ್ಲೋಗರ್ ಶಿಂಜಿತಾ ಮುಸ್ತಫಾಳನ್ನ ಬಂಧಿಸಿದೆ. ಅಷ್ಟೆ ಅಲ್ಲದೆ, ಈ ಪ್ರಕರಣಕ್ಕೆ ಇದೀಗ ಕೇರಳ ಮಾನವ ಹಕ್ಕುಗಳ ಆಯೋಗ ಕೂಡ ಎಂಟ್ರಿ ಕೊಟ್ಟಿದ್ದು, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ ವರದಿ ನೀಡುವಂತೆ ಡಿಐಜಿಗೆ ಆದೇಶಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page