Connect with us

LATEST NEWS

ಕಾರ್ಕಳ ಉತ್ಸವದ ಯಕ್ಷಗಾನದಲ್ಲಿ ‘ಹಿಜಾಬ್‌’ ಪ್ರಸ್ತಾಪ: ವೀಡಿಯೋ ವೈರಲ್‌

Published

on

ಉಡುಪಿ: ಕಾರ್ಕಳ ಉತ್ಸವದಲ್ಲಿ ನಡೆದ ಯಕ್ಷಗಾನದ ತುಣುಕೊಂದು ಸದ್ಯ ವೈರಲ್‌ ಆಗುತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.


ಈ ಯಕ್ಷಗಾನ ತುಣುಕಿನಲ್ಲಿ ಕೆಲದಿನಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದವೆಬ್ಬಿಸಿದ ಹಿಜಾಬ್‌ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಇದೇ ವಿಚಾರವನ್ನು ತೆಂಕುತಿಟ್ಟು ಯಕ್ಷಗಾನದ ಪ್ರಸಂಗವೊಂದರಲ್ಲಿ ಪ್ರಸ್ತಾಪಿಸಲಾಗಿದೆ.

ಯಕ್ಷಗಾನ ಕಲಾವಿದರೊಬ್ಬರು ಈ ಬಗ್ಗೆ ವಿಶ್ಲೇಷಣೆ ಮಾಡಿದ್ದು, ವಿದ್ಯಾರ್ಥಿನಿಯರನ್ನು ಸೈನಿಕರಿಗೆ ಹೋಲಿಸಿ, ಹಿಜಾಬ್‌ನ್ನು ಕಪ್ಪು ಬಟ್ಟೆಗೆ ಹೋಲಿಸಿ ಹಾಸ್ಯ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರಸ್ತುತ ವಿದ್ಯಮಾನಗಳ ಕುರಿತು ಯಕ್ಷಗಾನದ ಇಬ್ಬರು ಕಲಾವಿದರು ಪ್ರಸಂಗದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಪ್ರದರ್ಶನ ನೋಡುತ್ತಿದ್ದ ಯಕ್ಷಗಾನ ಪ್ರೇಕ್ಷಕರಿಂದ ಈ ಹಾಸ್ಯಕ್ಕೆ ಚಪ್ಪಾಳೆ, ಸಿಳ್ಳೆಯ ಮೂಲಕ ಸ್ಪಂದನೆಯೂ ಸಿಕ್ಕಿದೆ.

ವಿಡಿಯೋ ತುಣುಕು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

DAKSHINA KANNADA

ಬಟ್ಟೆ ಅಂಗಡಿಯಲ್ಲಿನ ದರೋಡೆ ಪ್ರಕರಣಕ್ಕೆ ಟ್ವಿಸ್ಟ್; ಅಸಲಿ ಕಥೆನೇ ಬೇರೆ!

Published

on

ವಿಟ್ಲ: ಮಾ.18ರ ಮಧ್ಯಾಹ್ನ ವಿಟ್ಲದ ಬಟ್ಟೆ ಅಂಗಡಿಯಲ್ಲಿ ದರೋಡೆ ನಡೆದಿದೆ ಎಂಬ ರೀತಿಯಲ್ಲಿ ಚಿತ್ರಿಸಿ ಸಿಸಿಟಿವಿಯ ತುಣುಕುಗಳನ್ನು ಹಾಕಿ ವೈರಲ್ ಮಾಡಲಾಗಿತ್ತು. ಆದರೆ ಅಸಲಿಗೆ ನಡೆದದ್ದೇ ಬೇರೆ.


ಬಟ್ಟೆಯಂಗಡಿಯಾತ ವಿವಿಧ ವಿನ್ಯಾಸದ ಬಟ್ಟೆಗಳನ್ನು ತರಿಸಿಕೊಂಡು ಹಣ ನೀಡದೆ ಸತಾಯಿಸಿದ ಹಿನ್ನೆಲೆಯಲ್ಲಿ ವಿತರಣೆ ಮಾಡಿದಾತ ತಾನು ನೀಡಿದ್ದ ಬಟ್ಟೆಗಳನ್ನು ಅಂಗಡಿಯಿಂದ ಕೊಂಡೊಯ್ದಿದ್ದರು.

ಬಟ್ಟೆಗಳನ್ನು ಅಂಗಡಿಗೆ ವಿತರಣೆ ಮಾಡಿ, ಅದರ ಹಣವನ್ನು ತಿಂಗಳ ಕೊನೆಗೆ ಪಡೆದುಕೊಂಡು ಹೋಗಲಾಗುತ್ತಿತ್ತು. ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣೆ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಬಟ್ಟೆ ಅಂಗಡಿಯಲ್ಲಿಯೂ ಇದೇ ಸಂಪ್ರದಾಯ ಚಾಲ್ತಿಯಲ್ಲಿತ್ತು.

ಇದನ್ನೂ ಓದಿ: ವಿಟ್ಲ: ಏಕಾಏಕಿ ಬಟ್ಟೆ ಅಂಗಡಿಗೆ ನುಗ್ಗಿ ಬಟ್ಟೆಗಳನ್ನು ದೋಚಿ ಪರಾರಿಯಾದ ಗ್ಯಾಂಗ್

ಬಟ್ಟೆ ಅಂಗಡಿ ಮಾಲಕ ಸುಮಾರು ಎರಡು ತಿಂಗಳುಗಳಿಂದ ಬಟ್ಟೆ ವಿತರಣೆ ಮಾಡಿದವನಿಗೆ 5,500 ರೂ. ಬಾಕಿ ಇರಿಸಿಕೊಂಡಿದ್ದ. ಇದರಿಂದ ರೋಸಿ ಹೋದ ವಿತರಕನು ಮಂಗಳವಾರ ಕಾರಿನಲ್ಲಿ ಬಂದು ತಾನು ನೀಡಿದ್ದ ಬಟ್ಟೆಗಳನ್ನು ಅಂಗಡಿಯಿಂದ ಹಿಂಪಡೆದುಕೊಂಡು ತೆರಳಿದ್ದಾನೆ. ಈ ಬಗ್ಗೆ ಎರಡು ಕಡೆಯವರೂ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

 

Continue Reading

LATEST NEWS

2,000 ದಿಂದ 4,000ಕ್ಕೆ ಗೃಹಲಕ್ಷ್ಮಿ ಹಣ ಏರಿಕೆ ; ಯಾವಾಗದಿಂದ ಜಾರಿಯಾಗುತ್ತೆ ಈ ನೂತನ ಬದಲಾವಣೆ ?

Published

on

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಕ್ಕೆ ಬರುವ ಮುನ್ನವೇ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಳ ಆಮಿಷವೊಟ್ಟಿತ್ತು. ಅಂತೆಯೇ ಚುನಾವಣೆಯಲ್ಲಿ ಗೆದ್ದು ಆಡಳಿತಕ್ಕೆ ಬಂದ ಬಳಿಕ ಅವುಗಳನ್ನು ಜಾರಿಮಾಡಿದ್ದು, ಈ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ ಹಣ ಸಿಗುತ್ತದೆ. ಆದರೆ ಈ ಯೋಜನೆಯ ಮಹತ್ವದ ಬದಲಾವಣೆ ಮೂಡಲಿದ್ದು, ಇನ್ನು ಮುಂದೆ ಮಹಿಳೆಯರಿಗೆ 2,000 ಬದಲಾಗಿ 4000 ರೂಗಳನ್ನು ನೀಡುವುದಾಗಿ ಸದನದಲ್ಲಿ ಪ್ರಸ್ತಾಪವಾಗಿದೆ.

ರಾಜ್ಯದಲ್ಲಿ ಸದ್ಯ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಈ ವೇಳೆ “ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ಬದಲಾಗಿ 4000 ರೂಗಳನ್ನು ನೀಡುವ ಕುರಿತಾಗಿ ಹೊಸ ಘೋಷಣೆಯನ್ನು ಮಾಡಿದ್ದಾರೆ. ಹೌದು, 2028ರಲ್ಲಿ ಬಂದ್ರೆ ಈಗ ಗೃಹ ಲಕ್ಷ್ಮೀ ಯೋಜನೆಯಡಿ ಯಜಮಾನಿ ಮಹಿಳೆಯರಿ ನೀಡಲಾಗುತ್ತಿರುವಂತ 2000 ಹಣವನ್ನು 4000ಕ್ಕೆ ಏರಿಕೆ ಮಾಡುತ್ತೇವೆ” ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಘೋಷಿಸಿದರು.

“ಇಂದು ಗೃಹ ಲಕ್ಷ್ಮೀ ಯೋಜನೆಯಿಂದಾಗಿ ಲಕ್ಷಾಂತರ ಮಹಿಳೆಯ ನೆಮ್ಮದಿಯ ಜೀವನ ನಡೆಸುವಂತೆ ಆಗಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ ಆರಂಭದಲ್ಲಿ ಬಹಳಷ್ಟು ಜನರು 2000 ಬರುತ್ತಾ? ಕೊಡುತ್ತಾ ಈ ಸರ್ಕಾರ ಅಂತ ಟೀಕೆ ಮಾಡಿದ್ರು. ಆದರೇ 2000 ಕೊಟ್ಟಿದ್ದು ಕಣ್ಣಾರೆಯೇ ನೋಡುತ್ತಿದ್ದೇವೆ ಎಂದು ಹೇಳಿದರು. ಯಾರಾದರೂ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ವಿರೋಧ ಮಾಡಿದರೇ ಅವರಿಗೆ ರಾಜ್ಯದ ಯಜಮಾನಿ ಮಹಿಳೆಯರ ಶಾಪ ತಟ್ಟುತ್ತೆ. ಮುಂದಿನ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರವೇ ಬಂದ್ರೇ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದ್ರೆ 2000 ಗೃಹ ಲಕ್ಷ್ಮೀ ಹಣವನ್ನು 4000ಕ್ಕೆ ಏರಿಕೆ ಮಾಡಲು ನಾವು ತಯಾರಿದ್ದೇವೆ” ಎಂದು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ತಿಳಿಸಿದರು.

Continue Reading

LATEST NEWS

ಕಾರ್ಟೂನ್ ಶೋ ಗೆ ಧನಿ ನೀಡುತ್ತಾ ಒಂದಾಗಿದ್ದ ಜೋಡಿಯ ಕ್ಯೂಟ್ ಲವ್‌ ಸ್ಟೋರಿಯನ್ನು ನೀವೊಮ್ಮೆ ಓದಲೇ ಬೇಕು ..!

Published

on

ಪ್ರಸ್ತುತ ಮಕ್ಕಳ ಮನರಂಜನೆಗಾಗಿ ಸಾಕಷ್ಟು ಕಾರ್ಟೂನ್‌ಗಳು ಬರುತ್ತಿದೆ. ಕೆಲವೊಂದಕ್ಕೆ ಅರ್ಥವೂ ಇರುವುದಿಲ್ಲ. ಕೇವಲ ಕ್ರೈಂ ಸೀನ್‌ಗಳನ್ನು ಬೆಂಬಿಸುವುದೇ ಹೆಚ್ಚಾಗಿ ಇರುತ್ತದೆ. ಆದರೆ ಹಿಂದೆ ಹಾಗೆಲ್ಲಾ ಇರಲಿಲ್ಲ. ಪ್ರೀತಿ, ಪ್ರೇಮ, ಸಂಬಂಧಕ್ಕೆ ಬೆಲೆ ನೀಡುವಂತಹದ್ದಾಗಿತ್ತು. ಅದರಲ್ಲಿಯೂ ಮಿಕ್ಕಿ ಮೌಸ್‌ ಮತ್ತು ಮಿನ್ನಿ ಮೌಸ್ ಶೋ 80ರ ಹಾಗೂ 90ರ ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಶೋ ಆಗಿ ಗುರುತಿಸಿಕೊಂಡಿತ್ತುಎಂದರೆ ತಪ್ಪಾಗಲಾರದು. ಶೋ ನೋಡಿ ಫಿದಾ ಆಗದ ಮಕ್ಕಳೇ ಇರಲಿಲ್ಲ. ಇನ್ನು ಈ ಕಾರ್ಟೂನ್‌ಗಳ ಹಿನ್ನೆಲೆ ಧ್ವನಿಯಂತು ಮತ್ತೂ ಚೆನ್ನಾಗಿತ್ತು.

ಮಿಕ್ಕಿ ಮೌಸ್‌ ಮತ್ತು ಮಿನ್ನಿ ಮೌಸ್ ಶೋ ಗೆ ಹಿನ್ನಲೆ ಧನಿ ನೀಡುತ್ತಿದ್ದವರು ಯಾರು ?

ಮಿಕ್ಕಿ ಮೌಸ್‌ನ ಧ್ವನಿಯಾದವರು ವೇಯ್ನ್ ಆಲ್ವೈನ್ ಮತ್ತು ಮಿನ್ನೀ ಮೌಸ್‌ನ ಧ್ವನಿಯಾದವರು ರಸ್ಸಿ ಟೇಲರ್. ಆ ಶೋ ನಲ್ಲಿ ಎರಡು ಪಾತ್ರಗಳ ಮಾಂತ್ರಿಕ ಪ್ರೇಮಕಥೆಗೆ ಧ್ವನಿಯಾಗಿದ್ದ ಆ ಜೋಡಿಯ ಮುಂದಿನ ಬಾಳೇ ಬದಲಾಗಿತ್ಮುಂತು. ಧನಿ ನೀಡುತ್ತಲೇ ಅವರ ಬದುಕನ್ನು ಅದೇ ಪ್ರೇಮ ಸಂಭಾಷಣೆಗಳೊಂದಿಗೆ ಹಂಚಿಕೊಂಡರು. ವೇಯ್ನ್ ಆಲ್ವೈನ್ ಮತ್ತು ರಸ್ಸಿ ಟೇಲರ್ 1988 ರ ಡಿಸ್ನಿ ವಿಶೇಷ ಟೋಟಲಿ ಮಿನ್ನೀಯಲ್ಲಿ ಕೆಲಸ ಮಾಡುವಾಗ ಭೇಟಿಯಾದರು ಮತ್ತು ಶೀಘ್ರದಲ್ಲೇ ಪ್ರೀತಿಯಲ್ಲಿ ಸಿಲುಕಿದರು. ವರ್ಷಗಳಲ್ಲಿ ಅವರ ಬಾಂಧವ್ಯ ಬಲವಾಯಿತು ಮತ್ತು ಅಂತಿಮವಾಗಿ ಅವರು ವಿವಾಹವಾದರು.

ಮಿಕ್ಕಿ ಮೌಸ್ ಹಾಗೂ ಮಿನ್ನಿ ಮೌಸ್‌ನ ಕಾಲ್ಪನಿಕ ಪ್ರೇಮ ಕಥೆಯು ಈ ಜೋಡಿಯ ಬಾಳಲ್ಲಿ ನೈಜ್ಯವಾಯಿತು. ಮಿಕ್ಕಿ ಮತ್ತು ಮಿನ್ನಿಯಂತೆಯೇ ಅವರ ಪ್ರೀತಿ ನಗು, ದಯೆ ಮತ್ತು ಡಿಸ್ನಿ ಮ್ಯಾಜಿಕ್‌ನಿಂದ ತುಂಬಿತ್ತು. ವೇಯ್ನ್ ಆಲ್ವೈನ್ ಮತ್ತು ರಸ್ಸಿ ಟೇಲರ್ ಈಗ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಧ್ವನಿಗಳು ಮತ್ತು ಸುಂದರವಾದ ಪ್ರೇಮಕಥೆಯು ಪ್ರಪಂಚದಾದ್ಯಂತ ಹೃದಯಗಳನ್ನು ಸ್ಪರ್ಶಿಸುತ್ತಲೇ ಇದೆ. ಈಗಲೂ ನಾವು ಈ ಕಥೆಗಳನ್ನು ಅವರ ಸುಮಧುರ ಧ್ವನಿಯಲ್ಲಿ ನೋಡಬಹುದು.

Continue Reading
Advertisement

Trending

Copyright © 2025 Namma Kudla News

You cannot copy content of this page