Connect with us

LATEST NEWS

ಮಂಗಳೂರು ರಥಬೀದಿ ಕಾಲೇಜಿನಲ್ಲಿ ಹಿಜಾಬ್‌ ವಿವಾದ: 15 ಮಂದಿ ವಿರುದ್ಧ ಎಫ್‌ಐಆರ್‌

Published

on

ಮಂಗಳೂರು: ನಗರದ ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಘಟನೆಗೆ ಸಂಬಂಧಿಸಿ 15 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಪ್ರಮುಖ ಆರೋಪಿ ಸಾಯಿ ಸಂದೇಶ್ ಹಾಗೂ ಇತರರ ಮೇಲೆ ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಯಾನಂದ ಪೈ- ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ನಿತೇಶ್ ಶೆಟ್ಟಿ(20), ಸಮಂತ್ ಆಳ್ವ(21), ಸನತ್‌ ಶೆಟ್ಟಿ(20), ಸಾಯಿ ಸಂದೇಶ್ (20) ಹಾಗೂ ಇತರ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ.


ಘಟನೆ ಕುರಿತು ಮಾ.4 ರ ರಾತ್ರಿ ಹಲ್ಲೆಗೊಳಗಾದ ವಿದ್ಯಾರ್ಥಿನಿ ಹಿಬಾ ಶೇಖ್ ಬಂದರು ಠಾಣೆಗೆ ದೂರು ನೀಡಿದ್ದರು.

8 ಜನರ ಮೇಲೆ ಎಫ್‌ಐಆರ್‌: ಪೊಲೀಸರ ಮಾಹಿತಿ

ಘಟನೆ ಬಗ್ಗೆ ಬಂದರು ಪೊಲೀಸರಿಂದ ಮಾಹಿತಿ ಪಡೆದಾಗ ಎರಡು ಗುಂಪುಗಳ ಒಟ್ಟು 8 ಜನರ ಮೇಲೆ ಎಫ್‌ಐಆರ್‌ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

LATEST NEWS

ಅಹಮದಾಬಾದ್ ವಿಮಾನ ಪತನ: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ನಿಧ*ನ

Published

on

ಮಂಗಳೂರು/ಅಹಮದಾಬಾದ್: ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ವಿಮಾನ ದುರಂತದಲ್ಲಿ ಮೃ*ತಪಟ್ಟಿದ್ದಾರೆ.


ಏರ್ ಇಂಡಿಯಾ ಪತನವಾದಾಗ ಆ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ಅವರು ಈ ದುರಂತದಲ್ಲಿ ಮೃ*ತಪಟ್ಟಿರುವುದು ದೃಢವಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ- ಬ್ಲಾಕ್ ಬಾಕ್ಸ್‌ ಅಂದರೆ ಏನು?

ಹಲವು ರಾಜಕೀಯ ನಾಯಕರು ರೂಪಾನಿ ಅವರ ದುರಂತದ ಸಾ*ವಿಗೆ ಸಂತಾಪ ಸೂಚಿಸಿದ್ದಾರೆ.

 

Continue Reading

LATEST NEWS

ಏರ್‌ ಇಂಡಿಯಾ ವಿಮಾನ ಪತನ- ಬ್ಲಾಕ್ ಬಾಕ್ಸ್‌ ಅಂದರೆ ಏನು?

Published

on

ಗುಜರಾತ್​​ನ ಅಹಮದಾಬಾದ್​ನಲ್ಲಿ ಲಂಡನ್​​ಗೆ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದೆ.


ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ. ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನ ನಿಲ್ದಾಣದ ಪರಿಧಿಯ ಬಳಿ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ. ಯಾವುದೇ ವಿಮಾನ/ ಹೆಲಿಕಾಪ್ಟರ್‌ ಪತನವಾದರೂ ಪತನದ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸುವುದು ಬ್ಲ್ಯಾಕ್‌ ಬಾಕ್ಸ್‌.

ಬ್ಲಾಕ್ ಬಾಕ್ಸ್‌ ಅಂದರೆ ಏನು?
ಬ್ಲಾಕ್ ಬಾಕ್ಸ್‌ ಅಂದರೆ ರೆಕಾರ್ಡರ್‌ಗಳನ್ನು ಒಳಗೊಂಡಿರುವ ಎರಡು ದೊಡ್ಡ ಲೋಹದ ಪಟ್ಟಿಗೆಗಳಾಗಿದ್ದು, ಹೆಚ್ಚಿನ ವಿಮಾನಗಳಲ್ಲಿ ಒಂದನ್ನು ಮುಂಭಾಗದಲ್ಲಿ ಮತ್ತು ಇನ್ನೊಂದು ಹಿಂಭಾಗದಲ್ಲಿ ಇರಿಸಬೇಕಾಗುತ್ತದೆ. ಈ ರೆಕಾರ್ಡರ್‌ಗಳು ವಿಮಾನ ಹಾರಾಟದ ಬಗ್ಗೆ ಮಾಹಿತಿಯನ್ನು ದಾಖಲಿಸುತ್ತವೆ ಮತ್ತು ವಿಮಾನ ಅಪಘಾತಕ್ಕೆ ಕಾರಣವಾಗುವ ಘಟನೆಗಳನ್ನು ಪುನರ್‌ನಿರ್ಮಿಸಲು ಸಹಕಾರಿಯಾಗುತ್ತವೆ.

ಸಾಮಾನ್ಯವಾಗಿ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ.

ಇದನ್ನೂ ಓದಿ: ಅಹಮದಾಬಾದ್: ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಇರುವ ಶಂಕೆ

ಬ್ಲ್ಯಾಕ್ ಬಾಕ್ಸ್ ಹೆಸರು; ಬಣ್ಣ ಕಿತ್ತಳೆ
ವಿಮಾನದಲ್ಲಿ ಇರಿಸಿರುವ ಈ ಪೆಟ್ಟಿಗೆಗಳನ್ನು ಬ್ಲ್ಯಾಕ್‌ ಬಾಕ್ಸ್ ಎಂದು ಕರೆದರೂ ಸಹ ಇದು ಕಪ್ಪಗೆ ಇರುವುದಿಲ್ಲ. ಈ ಕಪ್ಪು ಪೆಟ್ಟಿಗೆಗಳು ಜ್ವಲಂತ, ಹೆಚ್ಚಿನ ಗೋಚರತೆಗಾಗಿ ಕಿತ್ತಳೆ ಬಣ್ಣದ್ದಾಗಿರುತ್ತವೆ. ಇದರಿಂದಾಗಿ ಕ್ರ್ಯಾಶ್ ಸೈಟ್‌ನಲ್ಲಿ ಅವುಗಳನ್ನು ಹುಡುಕುವ ಸಿಬ್ಬಂದಿಗಳು ಅವುಗಳನ್ನು ಹುಡುಕಲು ಸುಲಭವಾಗಿರುತ್ತದೆ.

ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ ?
ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲ್ಯಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

ಡೇಟಾ ರಿಕವರ್ ಮಾಡುವುದು ಹೇಗೆ?
ಕಪ್ಪು ಪೆಟ್ಟಿಗೆಗಳಿಂದ ರಿಕವರ್‌ ಆದ ಡೇಟಾವನ್ನು ವಿಶ್ಲೇಷಿಸಲು ಸಾಮಾನ್ಯವಾಗಿ 10-15 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಮಧ್ಯೆ, ತನಿಖಾಧಿಕಾರಿಗಳು ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿಯಿಂದ ಹೇಳಿಕೆ ಪಡೆಯುವುದು ಮತ್ತು ಎಟಿಸಿ ಹಾಗೂ ಪೈಲಟ್‌ಗಳ ನಡುವಿನ ಸಂಭಾಷಣೆಯ ರೆಕಾರ್ಡಿಂಗ್‌ಗಳಂತಹ ಇತರ ಸುಳಿವುಗಳಿಗಾಗಿಯೂ ನೋಡುತ್ತಾರೆ ಎಂದು ತಿಳಿದುಬಂದಿದೆ.

Continue Reading

LATEST NEWS

ಏರ್‌ ಇಂಡಿಯಾ ವಿಮಾನ ದುರಂತ; ಪ್ರಧಾನಿ ಮೋದಿ ಸಂತಾಪ

Published

on

ಗುಜರಾತ್‌ನ ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ಸೂಚಿಸಿದ್ದಾರೆ.

ಅಹಮದಾಬಾದ್‌’ನಲ್ಲಿ ನಡೆದ ಈ ದುರಂತವು “ಪದಗಳಿಗೆ ಮೀರಿದ ಹೃದಯವಿದ್ರಾವಕ” ಎಂದು ಪ್ರಧಾನಿ ಹೇಳಿದರು. ಅಲ್ಲದೇ ಈ ದುರಂತವು ನಮ್ಮನ್ನು ದಿಗ್ಭ್ರಮೆಗೊಳಿಸಿದೆ ಮತ್ತು ದುಃಖಿಸಿದೆ. ಇದು ಪದಗಳಿಗೆ ಮೀರಿದ ಹೃದಯವಿದ್ರಾವಕವಾಗಿದೆ ಎಂದು ಪ್ರಧಾನಿ ಮೋದಿ X ನಲ್ಲಿ ಬರೆದಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page