Connect with us

LATEST NEWS

ಹಿಜಾಬ್ ವಿವಾದ: ಇಂದು 2.30ಕ್ಕೆ ಹೈಕೋರ್ಟ್‌ನಲ್ಲಿ ಮತ್ತೆ ಅರ್ಜಿ ವಿಚಾರಣೆ

Published

on

ಬೆಂಗಳೂರು: ಹಿಜಾಬ್ ಧಾರಣೆ ಬಗ್ಗೆ ಇಂದು ಮತ್ತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಇಂದು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ.

ಈಗಾಗಲೇ 6 ರಿಟ್‌ ಅರ್ಜಿ ವಿಚಾರಣೆ ನಡೆಯಲಿದೆ. ತ್ರಿಸದಸ್ಯ ಪೀಠದಿಂದ ವಿಚಾರಣೆ ಆರಂಭವಾಗಲಿದೆ.

ಅರ್ಜಿದಾರರ ಪರ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್ ಇವತ್ತು ವಾದ ಮುಂದುವರಿಸಲಿದ್ದಾರೆ.

ಹಲವು ಅರ್ಜಿಗಳಿರುವುದರಿಂದ‌ ಇವತ್ತೇ ವಾದಮಂಡನೆ ಪೂರ್ಣ ವಾಗುವ ಸಾಧ್ಯತೆ ಇಲ್ಲ. ಇಂದೂ ಸಹ ಇಡೀ ರಾಜ್ಯದ ಜನತೆಯ ಚಿತ್ತ ಹೈಕೋರ್ಟ್ನತ್ತ ನೆಟ್ಟಿದೆ.

LATEST NEWS

ಭೀಕರ ಅಪಘಾತ; ಟೋಲ್ ಸಿಬ್ಬಂದಿಯನ್ನು 50 ಮೀಟರ್ ಎಳೆದೊಯ್ದ ಟ್ರಕ್!

Published

on

ಉತ್ತರ ಪ್ರದೇಶ: ಟೋಲ್‌ ಪ್ಲಾಜಾದಲ್ಲಿ ಕಾಯುತ್ತಿದ್ದ ಎರಡು ಕಾರುಗಳಿಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಟೋಲ್‌ ಸಿಬ್ಬಂದಿ ಮತ್ತು ಹಲವು ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶನಿವಾರ(ಜ.17) ಮಧ್ಯಾಹ್ನ ನಡೆದಿದೆ.


ಮಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯಲ್ಲಿರುವ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಫಾಸ್ಟ್​ ಟ್ಯಾಗ್ ವರ್ಕ್​ ಆಗಲಿಲ್ಲ ಎಂಬ ಕಾರಣಕ್ಕೆ ಎರಡು ಕಾರುಗಳು ಟೋಲ್​ನಲ್ಲೇ ನಿಂತಿದ್ದವು. ಟೋಲ್ ಸಿಬ್ಬಂದಿ ಟ್ಯಾಗ್​ ಸ್ಕ್ಯಾನ್ ಮಾಡುತ್ತಿದ್ದಾಗ ಹಿಂದಿನಿಂದ ಅತಿ ವೇಗದಲ್ಲಿ ಬಂದ ಟ್ರಕ್ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ಡಿಕ್ಕಿಯ ರಭಸಕ್ಕೆ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು, ಟ್ರಕ್ ಅವರನ್ನು ಸುಮಾರು 50 ಮೀಟರ್‌ಗಳಿಗಿಂತಲೂ ಹೆಚ್ಚು ದೂರ ಎಳೆದೊಯ್ದಿದೆ. ಪ್ಲಾಜಾದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Continue Reading

BIG BOSS

ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

Published

on

BBK12 : ಬಿಗ್ ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಅನ್ನೋ ಕುತೂಹಲ ಬಿಗ್ ಬಾಸ್ ವೀಕ್ಷಕರದ್ದು.  ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಈಗಾಗಲೇ ಬಹುತೇಕ ಮಂದಿ ವೋಟ್ ಮಾಡಿದ್ದು, ಫಿನಾಲೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಬಿಗ್ ಬಾಸ್‌ 11ರಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದವರು ಗಾಯಕ ಹನುಮಂತ ಲಮಾಣಿ. ಆ ಸೀಸನ್‌ನ ವಿಜೇತರಾಗಿ ಹೊರಬಂದು ಇತಿಹಾಸ ಸೃಷ್ಟಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಒಳಗೆ ಹೋದವರು ಗೆದ್ದು ತೋರಿಸಬಹುದೆಂದು ತೋರಿಸಿಕೊಟ್ಟಿದ್ದರು ಹನುಮಂತ. ಇದೀಗ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಅನ್ನೋ ಭವಿಷ್ಯ ನುಡಿದಿದ್ದಾರೆ.

ಯಾರು ವಿನ್ನರ್ ?

ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವರೇ ವಿನ್ನರ್ ಆಗ್ತಾರೆ ಎಂದು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಹೇಳಿದ್ದಾರೆ.

ಈ ಬಾರಿಗೆ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದ ಭಾವ ಮಾಡುವುದಿಲ್ಲ. ಈ ಬಾರಿ ಅತಿ ಹೆಚ್ಚು ವೋಟಿಂಗ್ ಆಗಿದೆ. ಅತಿ ಹೆಚ್ಚು ವೋಟು ಗಿಲ್ಲಿನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟ್ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್. ಸೋತೋರು ಬೇಜಾರ್ ಮಾಡ್ಕೋಬೇಡಿ. ಎಲ್ಲರಿಗೂ ಆಲ್ ದಿ ಬೆಸ್ಟ್, ಗಿಲ್ಲಿ ಅಣ್ಣನಿಗೆ ವಿಶೇಷ ಆಲ್ ದಿ ಬೆಸ್ಟ್. ಸುದೀಪ್ ಸರ್ ಮುಂದೆ ನಿಲ್ಲೋದೆ ಪುಣ್ಯ. ಫೈನಲ್ ವರೆಗೂ ಹೋಗೋದೆ ಪುಣ್ಯ  ಎಂದಿದ್ದಾರೆ.

Continue Reading

LATEST NEWS

ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಸಾ*ವು

Published

on

ಮಂಗಳೂರು/ಬೀದರ್ : ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿ*ದ್ದು ಯುವಕ ಮೃ*ತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

19 ವರ್ಷದ ಶಶಿಕುಮಾ‌ರ್ ಶಿವಾನಂದ ಮೃ*ತ ಯುವಕ. ಶಶಿ ಕುಮಾರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂ*ಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿ*ದ್ದಿದ್ದಾನೆ.

ಇದನ್ನೂ ಓದಿ : ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಪರಿಣಾಮ ಸ್ಥಳದಲ್ಲೇ ಕೊನೆ*ಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page