Connect with us

LATEST NEWS

ಪ್ರೊ. ಭಗವಾನ್‌ ವಿರುದ್ಧ ವಿಚಾರಣೆಗೆ ಅನುಮತಿ ವಿಳಂಬ: ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ

Published

on

ಬೆಂಗಳೂರು: ‘ರಾಮಮಂದಿರ ಏಕೆ ಬೇಡ?’ ಎಂಬ ಕೃತಿಯ ಮೂಲಕ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಹಾಗೂ ಸಮದಾಯಗಳ ನಡುವೆ ದ್ವೇಷ ಬಿತ್ತಿದ ಆರೋಪದಡಿ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ವಿಳಂಬ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ತ್ವರಿತವಾಗಿ ಅರ್ಜಿ ಪರಿಗಣಿಸದಿದ್ದರೆ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.


ತಮ್ಮ ಕೃತಿಯ ಮೂಲಕ ಪ್ರೊಫೆಸರ್ ಭಗವಾನ್ ಧಾರ್ಮಿಕ ನಂಬಿಕೆ ಹಾಳುಮಾಡಿರುವುದಲ್ಲದೇ ರಾಮನ ಮೇಲಿನ ಭಕ್ತಿ ನಂಬಿಕೆ ಹಾಗೂ ಗೌರವಕ್ಕೆ ಚ್ಯುತಿ ತಂದಿದ್ದಾರೆ.

ಅವರ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ಈವರೆಗೆ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಸಾಗರ ನಿವಾಸಿ ಮಹಾಬಲೇಶ್ವರ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಎಚ್ಚರಿಕೆ ನೀಡಿದೆ.

ಪೀಠ ತನ್ನ ಆದೇಶದಲ್ಲಿ, ಪ್ರೊಫೆಸರ್ ಕೆ.ಎಸ್ ಭಗವಾನ್ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ 8 ವಾರದಲ್ಲಿ ಪರಿಗಣಿಸಿ ಇತ್ಯರ್ಥಪಡಿಸಬೇಕು.

ಒಂದು ವೇಳೆ ಈ ನಿಗದಿತ ಅವಧಿಯಲ್ಲಿ ಅರ್ಜಿ ಇತ್ಯರ್ಥಪಡಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನಕ್ಕೆ 2 ಸಾವಿರ ರೂಪಾಯಿಯಂತೆ ದಂಡ ಪಾವತಿಸಬೇಕು ಎಂದು ಪೀಠ ನಿನ್ನೆ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ
ಪ್ರೊ. ಕೆ. ಎಸ್ ಭಗವಾನ್ ರಾಮಮಂದಿರ ಏಕೆ ಬೇಡ? ಕೃತಿ ರಚಿಸಿದ್ದರು. ಇದನ್ನು ಸರ್ಕಾರ ತನ್ನ ಗ್ರಂಥಾಲಯಗಳಿಗೂ ಸರಬರಾಜು ಮಾಡಿತ್ತು. ಆದರೆ, ಕೃತಿಯಲ್ಲಿ ರಾಮ, ಸೀತೆಯರನ್ನು ಅವಹೇಳನ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದವು.

ಈ ಹಿನ್ನೆಲೆಯಲ್ಲಿ ಸರ್ಕಾರ ಕೃತಿಯನ್ನು ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸುವ ಆದೇಶವನ್ನು 2021ರ ಜನವರಿಯಲ್ಲಿ ಹಿಂಪಡೆದಿತ್ತು.
ಕೃತಿ ಬಿಡುಗಡೆಯಾದ ಕೆಲ ದಿನಗಳ ಬಳಿಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಕ್ಕೇರಿ ನಿವಾಸಿ ಮಹಾಬಲೇಶ್ವರ ಎಂಬುವರು ಭಗವಾನ್ ವಿರುದ್ಧ ಸಾಗರ ಜೆಎಂಎಫ್ ಸಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು

DAKSHINA KANNADA

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್‌ರಿಗೆ ‘ಕನ್ನಡ ಪಯಸ್ವಿನಿ ಅವಾರ್ಡ್- 2026’ ಪ್ರದಾನ 

Published

on

ಮಂಗಳೂರು : ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026’ ಅಂತಾರಾಜ್ಯ ಪ್ರಶಸ್ತಿಯನ್ನು  ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆರಿಗೆ ಪ್ರದಾನ ಮಾಡಲಾಯಿತು.

ಕಾಸರಗೋಡು ನುಳ್ಳಿಪಾಡಿಯಲ್ಲಿ ನಡೆದ ಕನ್ನಡ ಭವನ ರಜತ ಸಂಭ್ರಮ – ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನುಅವರು  ಸ್ವೀಕರಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷ ಕ್ರೀಡಾ  ಅಂಕಣಕಾರರಾಗಿ ಹಾಗೂ ಕ್ರೀಡಾ  ವಿಮರ್ಶಾತ್ಮಕ ಲೇಖನಗಳ  ಮೂಲಕ ಎಸ್. ಜಗದೀಶ್ಚಂದ್ರ ಅಂಚನ್ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಡಾ.ಕೆ.ವಾಮನ್ ರಾವ್, ನಿರ್ದೇಶಕ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ , ಕರ್ನಾಟಕ ಬ್ಯಾರಿ‌ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ , ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ , ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟ್ಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ , ಸಾಹಿತಿ ಜಯಾನಂದ ಪೆರಾಜೆ, ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು  ಮೊದಲಾದವರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಳೆದು ಹೋದ ಹಣ, ವಿವಿಧ ಡಾಕ್ಯುಮೆಂಟ್ಸ್ ಗಳಿದ್ದ ಪರ್ಸ್; ಸಿಕ್ಕಿದ್ದಲ್ಲಿ ಮರಳಿಸುವಂತೆ ಮನವಿ

Published

on

 

ಸಾಂದರ್ಭಿಕ ಚಿತ್ರ

ಮಂಗಳೂರು : ವಿವಿಧ ಡಾಕ್ಯುಮೆಂಟ್ಸ್‌ ಗಳಿದ್ದ ಪರ್ಸೊಂದು ಕಳೆದುಹೋಗಿದೆ. ಚೇತನ್ ಎಂಬವರು ಬಂಟ್ವಾಳದಿಂದ ಕುಂಟಲ್ ಪಲ್ಕೆಯವರೆಗೆ ಆಟೋದಲ್ಲಿ ಪ್ರಯಾಣಿಸಿದ್ದು, ಈ ವೇಳೆ ಅವರ ಪರ್ಸ್  ಜೇಬಿನಿಂದ ಕೆಳಗೆ ಬಿದ್ದಿದೆ. ಅದರಲ್ಲಿ ಆಧಾರ್ ಕಾರ್ಡ್, ಹಣ ಹಾಗೂ ಇತರೆ ಡಾಕ್ಯುಮೆಂಟ್ಸ್‌ ಗಳಿದ್ದವು. ಯಾರಿಗಾದರೂ ಪರ್ಸ್ ಸಿಕ್ಕಿದ್ದಲ್ಲಿ 9036015784 ನಂಬರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Continue Reading

LATEST NEWS

ಬ್ಯಾಡ್ಮಿಂಟನ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್

Published

on

ನವದೆಹಲಿ: ಭಾರತದ ಬ್ಯಾಡ್ಮಿಂಟನ್‌ ತಾರೆ ಹಾಗೂ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌ ವೈಯಕ್ತಿಕ ಕಾರಣಗಳಿಂದ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ.


‘ನಾನು ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಆಡುತ್ತಿಲ್ಲ. ನನ್ನ ದೇಹವು, ನನ್ನ ಆಟಕ್ಕೆ ಸ್ಪಂದಿಸುತ್ತಿಲ್ಲ. ನಾನು ನನ್ನದೇ ಉದ್ದೇಶಗಳಿಂದ ಬ್ಯಾಡ್ಮಿಂಟನ್‌ ಅಂಗಳದಿಂದ ಹಿಂದೆ ಸರಿಯುತ್ತಿದ್ದೇನೆ. ಅದನ್ನು ಅಧಿಕೃತವಾಗಿ ಹೇಳುವ ಅವಶ್ಯಕತೆಯಿಲ್ಲ’ ಎಂದು ಪಾಡ್‌ಕಾಸ್ಟ್‌ನಲ್ಲಿ ಸೈನಾ ನೆಹ್ವಾಲ್‌ ಹೇಳಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೈನಾ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಈ ಸಮಸ್ಯೆ ಅವರ ವೃತ್ತಿ ಜೀವನಕ್ಕೆ ಪರಿಣಾಮ ಬೀರಿತ್ತು. ಈ ಗಾಯದಿಂದ ಮರಳಿದ ಅವರು, 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಮತ್ತು 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಕೊನೆಯದಾಗಿ ಅವರು 2023ರ ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರಿಗೆ ಆಡಲು ಸಾಧ್ಯವಾಗದಿರುವುದರಿಂದ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ವಿಷನ್ ಕುಡ್ಲ ಟ್ರಸ್ಟ್ : ಜ.25 ರಂದು ಉಳ್ಳಾಲದಲ್ಲಿ ಹಗ್ಗಜಗ್ಗಾಟ ಪಂದ್ಯಾಟ

‘ನಿವೃತ್ತಿ ಘೋಷಿಸುವುದು ಅಷ್ಟು ದೊಡ್ಡ ವಿಷಯವೆಂದು ನಾನು ಭಾವಿಸಿರಲಿಲ್ಲ. ಆದರೆ, ಇನ್ನುಮುಂದೆ ಆಡಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಏಕೆಂದರೆ, ನನ್ನ ಮೊಣಕಾಲುಗಳು ನನ್ನ ಆಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಹೇಳಿ ಭಾವುಕರಾಗಿದ್ದಾರೆ. ‘ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ಅತ್ಯುತ್ತಮ, ಆಟಗಾರರಾಗಬೇಕು ಎಂದರೆ 8-9 ಗಂಟೆಗಳ ಕಾಲ ತರಬೇತಿ ಪಡೆಯಬೇಕು. ಆದರೆ, ನನ್ನ ಮೊಣಕಾಲು ಒಂದು ಅಥವಾ ಎರಡು ಗಂಟೆಗಳಲ್ಲಿ ಬಲ ಕಳೆದುಕೊಳ್ಳುತ್ತಿದೆ. ಹಾಗಾಗಿ ಇನ್ನುಮುಂದೆ ಆಟ ನಿಲ್ಲಿಸಲು ಮುಂದಾಗಿದ್ದೇನೆ’ ಎಂದು ಹೇಳಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page