ಮಧ್ಯ ಪ್ರದೇಶ/ ಮಂಗಳೂರು: ಹೆಂಡತಿಯನ್ನು ಬಾಡಿಗೆಗೆ ಕೊಡುವಂತ ಪದ್ಧತಿಯೊಂದು ಭಾರತದಲ್ಲಿ ಇದೆ ಅಂದ್ರೆ ನೀವು ನಂಬುತ್ತೀರಾ? ನಂಬಲೇಬೇಕು… ನಮ್ಮ ಸಂಸ್ಕೃತಿಯಲ್ಲಿ ಹೆಣ್ಣನ್ನು ಮಾತೆಗೆ ಹೋಲಿಕೆ ಮಾಡ್ತಾರೆ. ಆದರೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅಲ್ಲೊಂದು ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಬಾಡಿಗೆಗೆ ಪಡೆದು ತಮ್ಮ ತೃಷೆ ತೀರಿಸಿಕೊಳ್ತಾರೆ. ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿ ಅಂತಹದೊಂದು ಪದ್ಧತಿ ಈಗಲೂ ರೂಢಿಯಲ್ಲಿದೆ. ಇಲ್ಲಿ ತುಸು ಶ್ರೀಮಂತರ, ಸ್ವಲ್ಪ ಬಡವರ ಮನೆಯ ಹೆಣ್ಣುಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ. ತಂದೆ ತನ್ನ ಹೆಣ್ಣುಮಕ್ಕಳನ್ನು, ಗಂಡ ತನ್ನ ಹೆಂಡತಿಯನ್ನು ಬಾಡಿಗೆಗೆ ಕೊಡುತ್ತಾರೆ.

ನಾವು ವಸ್ತುಗಳನ್ನು, ಮನೆಯನ್ನೆಲ್ಲಾ ಬಾಡಿಗೆ ಕೊಡೋದನ್ನ ಕೇಳಿದ್ದೇವೆ. ಇಲ್ಲಿ ಹೆತ್ತ ಮಗಳು, ಕಟ್ಕೊಂಡ ಹೆಂಡತಿಯನ್ನು ಇನ್ನೊಬ್ಬರಿಗೆ ಬಾಡಿಗೆ ಕೊಡುವವರು ಇದ್ದಾರೆ ಅಂದ್ರೆ ನಂಬೋಕೆ ಸಾಧ್ಯ ಇಲ್ಲಾ ಅಲ್ವಾ? ಇಂತಹದೊಂದು ಕೀಳು ಪದ್ಧತಿ ಈಗಲೂ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ.
ಇದೊಂದು ಒಪ್ಪಂದವಂತೆ. ಇದೊಂದು ಪದ್ಧತಿಯಾಗಿದ್ದು ಇದನ್ನು ‘ದಧೀಚ’ ಎಂದು ಕರೆಯುತ್ತಾರೆ. ‘ದಧೀಚ’ ಅಂದ ಕೂಡಲೇ ಪುರಾಣದಲ್ಲಿ ಬರುವ ಮುನಿಯಲ್ಲ. ಇವರಿಗೂ ಈ ಪದ್ಧತಿಗೂ ಯಾವುದೇ ಸಂಬಂಧವಿಲ್ಲ. ಇದು ನೂರು ವರ್ಷದಿಂದ ಆಚರಣೆಗೆ ಬಂದ ಪದ್ಧತಿಯಂತೆ. ಶ್ರೀಮಂತರು ಬಡವರ ಹೆಣ್ಣು ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ತಾರೆ. ಇನ್ನು ಹುಡುಗಿ ಬಾಡಿಗೆಗೆ ಪಡೆದವನ ಇಚ್ಛೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಹೆಚ್ಚಾಗಿ ದೈಹಿಕ ಸುಖಕ್ಕಾಗಿಯೆ ಇದು ನಡೆಯುತ್ತದೆ. ರಾತ್ರಿ ವೇಳೆ ಅವನಿಗೆ ಸುಖ ನೀಡುವಲ್ಲಿ ಸಹಕರಿಸಬೇಕು. ಇನ್ನು ಹಗಲಿನಲ್ಲಿ ಉಳಿದ ಮನೆ ಕೆಲಸ, ಗದ್ದೆ ಕೆಲಸಗಳನ್ನು ಮಾಡಿಕೊಂಡು ಅವನ ಆಳಾಗಿರಬೇಕು. ಇನ್ನು ಒಂದು ವರ್ಷದ ಬಳಿಕ ಮತ್ತೆ ಅವಳೇ ಬೇಕು ಎಂದಾದಲ್ಲಿ ಅಗ್ರಿಮೆಂಟ್ ರಿನಿವಲ್ ಮಾಡಬೇಕು.
ಇಲ್ಲಿ ಸಂಬಂಧಗಳಿಗೆ ಬೆಲೆನೇ ಇಲ್ಲ..!
ತಂದೆ ತನ್ನ ಮಗಳನ್ನು ಎಂಟು ಒಂಭತ್ತು ವರ್ಷಗಳಲ್ಲಿ ಹಣಕ್ಕಾಗಿ ಬಾಡಿಗೆಗೆ ಕೊಡಲು ಆರಂಭಿಸುತ್ತಾನೆ. ಅವಳು ಋತುಮತಿಯಾಗಬೇಕೆಂದಿಲ್ಲ. ಇನ್ನು ಮದುವೆಯಾದ ಗಂಡ ಮೊದಲ ರಾತ್ರಿಯನ್ನು ಅವಳ ಜೊತೆ ಕಳೆದು, ಎರಡನೇ ದಿನ ಸಿರಿವಂತನಿಗೆ ಹಣಕ್ಕಾಗಿ ಬಾಡಿಗೆಗೆ ಕೊಡುತ್ತಾನೆ. ಇದು ಒಂದು ರೀತಿಯ ಸೆ*ಕ್ಸ್ ದಂಧೆಯೇ ಆಗಿದೆ. ಇನ್ನು ಬಾಡಿಗೆಗೆ ತೆಗೆದುಕೊಳ್ಳುವವನು ಮುಖ್ಯವಾಗಿ ತನ್ನ ಚಪಲ ತೀರಿಸಿಕೊಳ್ಳುವ ಉದ್ದೇಶ. ಜೊತೆಗೆ ಅವಳ ಬಳಿ ಮನೆ ಕೆಲಸ, ಇತರ ಕೆಲಸಗಳಿಗೆ ಬಳಸಿಕೊಳ್ಳುತ್ತಾನೆ. ಅಲ್ಲದೇ ಗಂಡನ ಅಣ್ಣ, ಮಾವ, ತಮ್ಮ ಹೀಗೆ ಯಾರೂ ಬೇಕಾದರು ಅವಳನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು.ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಇದು ಹೆಣ್ಣಿನ ಕರಾಳ ಬದುಕಿನ ಕಥೆ..! ಬಲಿಯಾಗಿದ್ದಾರೆ 30 ಲಕ್ಷ ಮಹಿಳೆಯರು..!
ಇನ್ನು ಇಲ್ಲಿ ಹುಡುಗಿಯರನ್ನು ಹೇಗೆ ಆರಿಸ್ತಾರೆ ಅಂದ್ರೆ ಅವರ ಅಂದ ಚಂದವನ್ನು ನೋಡಿ. ಹಡುಗಿಯ ಮೈಮಾಟ, ವಯಸ್ಸು, ಬಣ್ಣ ಇದೆಲ್ಲವನ್ನು ಒಳಗಂಡ ಕನ್ಯೆಗೆ ಭಾರೀ ಮೊತ್ತ ಕೊಟ್ಟು ಬಾಡಿಗೆ ಪಡೆಯುತ್ತಾರಂತೆ. ಈ ಹೆಣ್ಣಿಗೆ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿ ಮಾಡ್ತಾರೆ. ಕನ್ಯೆಯರಲ್ಲದ ಹುಡುಗಿಯರಿಗೆ 10,000 ದಿಂದ 15000 ಸಾವಿರದವೆರೆಗೆ ಕೊಟ್ಟು ಪಡೆದುಕೊಳ್ಳುತ್ತಾರೆ. ಹುಡುಗಿಯ ಚರ್ಮದ ಟೋನ್, ಒಪ್ಪಂದದ ಮದುವೆಗಳ ಅಂಶಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳುತ್ತಾರೆ.
ಪೊಲೀಸರು ಏನು ಮಾಡ್ತಿದ್ದಾರೆ..?
ಅಯ್ಯೋ!! ಹಾಗಿದ್ರೆ ಪೊಲೀಸರಿಗೆ ಇದು ಗೊತ್ತಿಲ್ವಾ? ಬೇಲಿನೇ ಎದ್ದು ಹೊಲ ಮೇದಂತಾಗಿದೆ ಇಲ್ಲಿನ ಪರಿಸ್ಥಿತಿ. ಪೊಲೀಸರು ಕೂಡಾ ಇದರಲ್ಲಿ ಪಾಲುದಾರರು. ದುರಾದೃಷ್ಟ ಅಂದ್ರೆ ಇಲ್ಲಿನ ಹೆಣ್ಮಕ್ಕಳಿಗೆ ಅವರ ಮೇಲೆ ಆಗ್ತಾ ಇರೋದು ಅತ್ಯಾಚಾರ ಅನ್ನೋದೆ ತಿಳಿದಿಲ್ಲ. ಈ ಹಳ್ಳಿಗೆ ಕೆಲವು ಎನ್‌ಜಿಒ ಗಳು ಭೇಟಿ ನೀಡಿ ಇವರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಪದ್ಧತಿ ಶುರು ಆಗಲು ಕಾರಣ:
ಅಷ್ಟಕ್ಕೂ ಈ ಪದ್ದತಿ ಶುರುವಾಗಲು ಕಾರಣವಾದ್ರೂ ಏನು? ಈ ಹಿಂದೆ ಊರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ವಿರಳವಾಗಿತ್ತು. ಹಾಗಾಗಿ ಇಲ್ಲಿ ಹೆಣ್ಣು ಮಕ್ಕಳನ್ನು ಹಂಚಿಕೊಳ್ಳಲು ಆರಂಭ ಮಾಡ್ತಾರೆ. ಇನ್ನೂ ಕೆಲವು ಶ್ರೀಮಂತರು ವಧುದಕ್ಷಿಣೆ ಕೊಟ್ಟು ಕನ್ಯೆಯರನ್ನು ಕೊಂಡುಕೊಳ್ಳುತ್ತಿದ್ದರು. ಆದರೆ ಬಡವರು ಅಷ್ಟೆಲ್ಲಾ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲದಿದ್ದಾಗ ಹುಡುಗಿಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು. ಅಂದು ಈ ನೀಚ ಬಾಡಿಗೆ ಪದ್ಧತಿ ಹುಟ್ಟಿಕೊಂಡಿತು. ಪುರುಷ ಪ್ರಧಾನ ಸಮಾಜ ಸ್ತ್ರೀಯನ್ನು ಈ ರೀತಿಯಲ್ಲಿ ಶೋಷಣೆ ಒಳಪಡಿಸಲು ಆರಂಭಗೊಂಡಿತು.