Connect with us

LIFE STYLE AND FASHION

ಚಳಿಗಾಲದಲ್ಲಿ ಬೆಳಗಿನ ಜಾವ ಎದ್ದೇಳುವುದಕ್ಕೆ ಕಷ್ಟ ಆಗುವವರಿಗೆ ಇಲ್ಲಿದೆ ಸುಲಭ ಉಪಾಯ !

Published

on

ಮಂಗಳೂರು: ಚಳಿಗಾಲದಲ್ಲಿ ಕಂಬಳಿ ಹೊದ್ದು ಮಲಗುವುದು ಎಂದರೇ ಭಾರೀ ಖುಷಿ. ಅದರಲ್ಲೂ ಹೆಚ್ಚಿನವರು ಬೆಳಗ್ಗೆ ಬೇಗ ಯಾರು ಎದ್ದೇಳ್ತಾರೆ ಎನ್ನುತ್ತಲೇ ತಮ್ಮ ದಿನವನ್ನು ಗಾಢ ನಿದ್ದೆಯಿಂದಲೇ ಆರಂಭಿಸುತ್ತಾರೆ. ಆದರೂ ನಾನು ಬೇಗ ಎದ್ದೇಳಬೇಕು ಎನ್ನುವವರಿಗೆ ಇಲ್ಲಿದೆ ಕೆಲವೊಂದು ಸಲಹೆಗಳು.


ಈಗ ಚುಮುಚುಮು ಚಳಿಯೂ ಆವರಿಸಿದ್ದು, ಶೀತ ವಾತವರಣ ಇರುವುದರಿಂದ ಬೆಳಗ್ಗೆ ಎದ್ದೇಳಲು ಮನಸೇ ಬರುವುದಿಲ್ಲ. ಕೆಲವರು ಹೇಳೋದು ಇದೆ, ನಾಳೆ ಬೇಗ ಎಳ್ತೀನಿ, ಓದೋಕೆ ಇದೆ ಅಂತ. ಆದರೆ ಎಲ್ಲರಿಗಿಂತ ಲೇಟಾಗಿ ಎದ್ದೆಳೋದು ಅವರೇ.

ಆದರೆ, ಬೆಳಗ್ಗೆ ಲೇಟಾಗಿ ಎದ್ದೇಳುವುದರಿಂದ ನಮ್ಮ ಶರೀರ ದಿನ ಪೂರ್ತಿ ಆಲಸ್ಯದಿಂದ ಕೂಡಿರುತ್ತದೆ. ಇದನ್ನು ದೂರ ಮಾಡಲು ಕೆಲವೊಂದು ವಿಧಾನಗಳನ್ನು ಅನುಸರಿಸಿ.

ಈಗಿನ ವಾತವರಣ ಚಳಿಯಿಂದ ಕೂಡಿರುವುದರಿಂದ ಮುಂಜಾನೆ ಎದ್ದೇಳುವುದಕ್ಕೆ ತುಂಬಾನೇ ಕಷ್ಟ ಆಗುತ್ತೇ. ಮುಂಜಾನೆ ಎಚ್ಚರವಾದ ತಕ್ಷಣವೇ ಎದ್ದು ಬಿಡಬೇಕು. ಐದು ನಿಮಿಷ ಬಿಟ್ಟು ಎದ್ದೇಳ್ತಿನಿ ಅಂದುಕೊಂಡು ಮಲಗಿದರೆ, ಮತ್ತೆ ಹೆಚ್ಚು ಸಮಯ ಮಲಗಿ ಬಿಡುತ್ತೇವೆ. ಹೀಗಾಗಿ ಎಚ್ಚರವಾದ ತಕ್ಷಣವೇ ಎದ್ದು ಯೋಗ, ವಾಕಿಂಗ್, ರನ್ನಿಂಗ್, ವ್ಯಾಯಾಮದಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆಲಸ್ಯವು ದೂರವಾಗಿ ದಿನ ಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಕಂಬಳಿ, ಸ್ವೆಟರ್ ಗಳು ಕಪಾಟಿನಿಂದ ಹೊರಗೆ ಬರುತ್ತವೆ. ಕೆಲವರು ಚಳಿಗಾಲದಲ್ಲಿ ಸ್ವೆಟರ್ ಧರಿಸಿ ಮಲಗುತ್ತಾರೆ. ಅದರಿಂದಲೂ ಚಳಿಯಾಗುತ್ತೇ ಅಂತ ಅದರ ಮೇಲೆ ಕಂಬಳಿ ಹೊದ್ದು ಮಲಗುತ್ತಾರೆ. ಇದರಿಂದ ಬೆಳಗ್ಗಿನ ಹೊತ್ತು ಇನ್ನೂ ಸ್ವಲ್ಪ ಮಲಗುವ ಎಂದೆನಿಸುತ್ತದೆ. ಆಲಸ್ಯವನ್ನು ಜಾಸ್ತಿ ಮಾಡುವ ಕಾರಣ ಆದಷ್ಟು ಕಂಬಳಿ ಹಾಗೂ ಸ್ವೆಟರ್ ನಿಂದ ದೂರ ಇದ್ದು, ಆದಷ್ಟು ತೆಲುವಾದ ಕಂಬಳಿ ಹೊದ್ದು ಮಲಗಬೇಕು.

ಚಳಿಗಾಲದಲ್ಲಿ ಬೆಳಗ್ಗೆ ಬೇಗನೇ ಎದ್ದೇಳುವುದಕ್ಕಿಂತ ಕಷ್ಟದ ಕೆಲಸ ಮತ್ತೊಂದಿಲ್ಲ. ಬೆಳಗ್ಗೆ ಬೇಗ ಎಳಲು ಅಲಾರಂ ಸೇಟ್ ಮಾಡಿಕೊಳ್ಳಬೇಕು. ಕೆಲವರು ಅಲಾರಂ ಆದ ತಕ್ಷಣ ಆಫ್ ಮಾಡಿ ಮತ್ತೆ ಮಲಗುತ್ತಾರೆ. ಆದರೆ ಅಲಾರಂ ಆಫ್ ಮಾಡಿ ಮಲಗಿದರೆ ಮತ್ತೆ ಎಚ್ಚರ ಆಗುವುದಿಲ್ಲ. ಈಗಾಗೀ ಅಲಾರಂ ಆದ ತಕ್ಷಣವೇ ಎದ್ದೇಳುವ ಅಭ್ಯಾಸ ಮಾಡಬೇಕು.

ಸಮಯದ ಹಿಂದೆ ನಾವು ಓಡಬೇಕೆ ಹೊರತು, ನಮ್ಮ ಹಿಂದೆ ಸಮಯ ಬರುವುದಿಲ್ಲ. ಹೀಗಾಗಿ ನಿಮ್ಮ ದಿನಚರಿಯನ್ನು ಬೆಳಗ್ಗೆ ಬೇಗ ಎದ್ದೇಳುವುದರ ಮೂಲಕ ಪ್ರಾರಂಭಿಸಿ.

LIFE STYLE AND FASHION

ಮಾತನಾಡದೇ ಇರುವುದು ಒಂದು ರಿತಿಯ ಮಾನಸಿಕ ಕಾಯಿಲೆ..! ಯಾಕಂತೀರಾ..? ಇದನ್ನೊಮ್ಮೆ ಓದಿ..!

Published

on

ಕೆಲವೊಬ್ಬರು ತೆರೆದ ಪುಸ್ತಕವಿದ್ದಂತೆ. ಅವರು ತಮ್ಮ ಎಲ್ಲಾ ಭಾವನೆಗಳನ್ನು ಸುಲಭವಾಗಿ ಹಂಚಿಕೊಳ್ಳುತ್ತಾರೆ. ಆದರೆ ಕೆಲವರು ಯಾರ ಜೊತೆಯೂ ಹಂಚಿಕೊಳ್ಳುವುದಿಲ್ಲ. ಅವರು ಯಾರ ಜೊತೆಯೂ ಮಾತನಾಡದೇ ಮೌನವಾಗಿರುತ್ತಾರೆ. ಅಂತಹವರಿಗೆ ಕೆಟ್ಟ ಉದ್ದೇಶವೇ ಇರುತ್ತವೆ ಎಂದು ಯಾವಾಗಲೂ ಹೇಳಲಾಗುವುದಿಲ್ಲ. ಕೆಲವೊಮ್ಮೆ, ತಜ್ಞರು ಈ ರೀತಿಯ ಗುಣಗಳು ಮಾನಸಿಕ ಆರೋಗ್ಯ ಸಮಸ್ಯೆಯ ಸಂಕೇತವೆಂದು ಹೇಳುತ್ತಾರೆ.

ಮಾತನಾಡುತ್ತಾ ಇರುವುದು ಮನುಷ್ಯನ ಸಹಜ ಗುಣ. ಮುಕ್ತವಾಗಿ ಮಾತನಾಡದೇ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವುದು ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಮನಸ್ಸಿಗೆ ದುಃಖ ಉಂಟಾದಾಗ ಅದನ್ನು ಹೇಳಿಕೊಳ್ಳದಿದ್ದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಕೆಲವೊಬ್ಬರು ‘ಮೌನವಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಹಾಗಾಗಿ ನಾನು ಸುಮ್ಮನೆ ಇರುವುದೇ ಉತ್ತಮ’ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಯಾವಾಗಲೂ ಸುಮ್ಮನಿರುವುದು ಒಳ್ಳೆಯದಲ್ಲ. ಇದು ಮಾನಸಿಕ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಅದು ಹೇಗೆ ಗೊತ್ತಾ ?

ಕೆಲವೊಬ್ಬರು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಪದೇ ಪದೇ ಮಾತನಾಡಲು ಸಮಸ್ಯೆಯನ್ನು ಹೊಂದಿರುತ್ತಾರೆ. ಏಕೆಂದರೆ ಅವರ ಮನಸ್ಸಿನಲ್ಲಿ ಏನೋ ಬದಲಾವಣೆ ಉಂಟಾಗಿರುತ್ತದೆ. ಇದನ್ನು ‘ಸಾಮಾಜಿಕ ಅರಿವು’ ಎನ್ನುತ್ತಾರೆ. ಅಂದರೆ ಇತರರ ಭಾವನೆ ಹಾಗೂ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳುವುದು. ಆದರೆ, ಮಾನಸಿಕ ಅಸ್ವಸ್ಥತೆಗಳಿಂದ ಈ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಖಿನ್ನತೆ, ಬೈಪೋಲಾರ್ ಡಿಸಾರ್ಡರ್ ಮತ್ತು ಸ್ಕಿಜೋಫ್ರೇನಿಯಾದಂತಹ ಸಮಸ್ಯೆಗಳಲ್ಲಿ ಕೂಡ ಇದು ಕಂಡು ಬರುತ್ತದೆ.

ಹಾಗಾಗಿ ಮುಕ್ತವಾಗಿ ಮಾತನಾಡುವುದನ್ನು ಕಲಿಯಬೇಕು. ವಿಶೇಷವಾಗಿ ಕಛೇರಿಯಲ್ಲಿ ಕುಳಿತು ಕೆಲಸ ಮಾಡುವ ವೇಳೆ ಸುಮ್ಮನೆ ಗುಮ್ಮನಂತೆ , ಕಂಪ್ಯೂಟರ್ ಮುಂದೆಯೇ ಕುಳಿತು ಕೆಲಸ ಮಾಡುವ ಬದಲು ಅರ್ಧ ಗಂಟೆಗೊಮ್ಮೆಯಾದರೂ ಪಕ್ಕದಲ್ಲಿ ಕುಳಿತವರ ಜೊತೆ ಸಣ್ಣ ಮಾತುಕಥೆ ನಡೆಸುತ್ತಿರಬೇಕು. ಅವಾಗ ಮನಸ್ಸೂ ಹಗುರವಾಗುತ್ತದೆ. ಜೊತೆಗೆ ಕೆಲಸ ಮಾಡುವಾಗ ಆವರಿಸುವ ನಿದ್ರೆ, ಉದಾಸಿನವೂ ದೂರವಾಗುತ್ತದೆ. ಆಫೀಸ್‌ನಲ್ಲಿ ಟೀಂ ಮೆಂಬರ್ಸ್ ಜೊತೆ ಹಾಸ್ಯ ಮಾಡುತ್ತಾ ದಿನ ಕಳೆದದ್ದೇ ಆದಲ್ಲಿ ಮನಸ್ಸಿನಲ್ಲಿ ಅಡಕವಾಗಿರುವ ನೋವು ಮಾಯವಾಗುತ್ತದೆ. ಹಾಗಾಗಿ ಆದಷ್ಟು ಒಬ್ಬಮಟಿಯಾಗಿ, ಮಾತನಾಡದೇ ಸುಮ್ಮನೆ ಇರುವ ಹವ್ಯಾಸವನ್ನು ದೂರ ಮಾಡಿಕೊಳ್ಳಬೇಕು.

ಮಾನಸಿಕ ಅಸ್ವಸ್ಥತೆ ಇರುವವರು ಉದ್ದೇಶಪೂರ್ವಕವಾಗಿ ಏನನ್ನೂ ಮಾಡುವುದಿಲ್ಲ ಎಂದು ಅವರ ಕುಟುಂಬಸ್ಥರು ಅರ್ಥ ಮಾಡಿಕೊಳ್ಳಬೇಕು. ಅವರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದರ ಬಗ್ಗೆ ತರಬೇತಿ ಪಡೆಯಬೇಕಾಗಬಹುದು. ಯಾವಾಗಲು ಸುಮ್ಮನಿರುವವರು ಮತ್ತು ಯಾರೊಂದಿಗೂ ಮಾತನಾಡದವರು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

Continue Reading

LIFE STYLE AND FASHION

ಒಳ್ಳೆಯದು ಎಂದು ಜಾಸ್ತಿ ಬಿಸಿನೀರು ಕುಡಿದರೆ ಆರೋಗ್ಯಕ್ಕೆ ಹಾನಿ..!

Published

on

ಆರೋಗ್ಯಕ್ಕೆ ಬಿಸಿನೀರು ಒಳ್ಳೆಯದು ಎಂದು ಹೇಳಲಾಗುತ್ತದೆ. ಜೀರ್ಣಕ್ರಿಯೆ ಸುಧಾರಣೆ, ತೂಕ ಇಳಿಕೆ ಇದು ಉತ್ತಮ ಮದ್ದು ಎಂದು ನಂಬಲಾಗುತ್ತದೆ. ಆದರೆಎ, ಅತಿಯಾಗಿ ಬಿಸಿನೀರು ಕುಡಿಯುವುದು ಒಳ್ಳೆಯದಲ್ಲ. ಅತಿಯಾದರೆ ಅಮೃತವೂ ವಿಷ ಎಂಬಂತೆ ಹೆಚ್ಚು ಬಿಸಿನೀರು ಕುಡಿದರೆ ಪ್ರಅಣಕ್ಕೆ ಕುತ್ತಾಗಬಹುದು. ಇದು ಸುಳ್ಳಲ್ಲ. ಅತಿಯಾಗಿ ಬಿಸಿನೀರು ಸೇವಿಸಿ ಸಾವನ್ನಪ್ಪಿರುವ ಕೆಲವು ನಿದರ್ಶನಗಳೂ ಇವೆ.

ಕೇರಳದ 18 ವರ್ಷದ ಹುಡುಗಿ, ಡಯಟ್ ಹೆಸರಿನಲ್ಲಿ ಬಿಸಿ ನೀರು ಸೇವನೆ ಮಾಡಿ ಪ್ರಾಣ ಬಿಟ್ಟಿದ್ದಾಳೆ. ಇದಕ್ಕೆ ಬಿಸಿ ನೀರು ಮಾತ್ರ ಕಾರಣವಲ್ಲ. ಆಕೆ ಘನ ಆಹಾರ ಸೇವನೆ ಮಾಡದೆ, ಬರೀ ದ್ರವ ಆಹಾರ ಸೇವನೆ ಮಾಡುತ್ತಿದ್ದಳು. ಇದರಿಂದಾಗಿ ದೇಹದಲ್ಲಿ ಸೋಡಿಯಂ ಮತ್ತು ಸಕ್ಕರೆ ಪ್ರಮಾಣ ಕಡಿಮೆಯಾಗಿ ಆಕೆ ಸಾವನ್ನಪ್ಪಿದ್ದಾಳೆ. ಆದರೂ, ಅತಿ ಹೆಚ್ಚು ಬಿಸಿ ನೀರು ಒಳ್ಳೆಯದಲ್ಲ. ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ನೀರಿನಿಂದ ಶುರುವಾಗುವ ದಿನ, ರಾತ್ರಿ ಮಲಗುವವರೆಗೂ ಮುಂದುವರೆದರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬ ಸಂಪುರ್ಣ ಮಾಹಿತಿ ಇಲ್ಲಿದೆ.

ಎಷ್ಟು ಬಿಸಿ ನೀರು ಸೇವನೆ ಒಳ್ಳೆಯದು? 

ನಾವು ಬಾಯಿ ಸುಡುವಷ್ಟು ಬಿಸಿ ನೀರನ್ನು ಎಂದಿಗೂ ಸೇವನೆ ಮಾಡಬಾರದು. ಉಗುರು ಬೆಚ್ಚಗಿನ ನೀರನ್ನು ಕುಡಿಯಿಯಬೇಕು. ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮೊದಲು ಅತಿಯಾದ ಬಿಸಿ ನೀರು ಸೇವನೆ ಮಾಡಬಾರದು. ದಿನಕ್ಕೆ 8 -10 ಗ್ಲಾಸ್ ನೀರನ್ನು ಸೇವನೆ ಮಾಡಬೆಕು. ಬಿಸಿ ನೀರನ್ನು ಅತಿ ಕಡಿಮೆ ಪ್ರಮಾಣದಲ್ಲಿ ಕುಡಿದ್ರೆ ಒಳ್ಳೆಯದು. ನೀರನ್ನು ಬಿಸಿ ಮಾಡಿ, ಪಾತ್ರೆಯಲ್ಲಿ ಆರಿಸಿ ನಂತರ ಕುಡಿಯುವುದನ್ನು ರೂಢಿಸಿಕೊಳ್ಳಿ. ಅತಿಯಾದ ಬೆವರು, ಆಮ್ಲೀಯತೆ, ಸುಸ್ತು, ತಲೆ ತಿರುಗಿದ ಅನುಭವ, ಸದಾ ಆಯಾಸ ನಿಮಗೆ ಕಾಣಿಸಿಕೊಳ್ತಿದ್ದರೆ ತಕ್ಷಣ ನೀವು ಬಿಸಿ ನೀರಿನ ಸೇವನೆಯನ್ನು ನಿಲ್ಲಿಸುವುದು ಒಳ್ಳೆಯದು.

ಅತಿಯಾದ ಬಿಸಿ ನೀರು ಸೇವನೆಯಿಂದ ಆಗುವ ಅನಾನುಕೂಲಗಳು :-

ನಿದ್ರಾಹೀನತೆ :

ಅತಿಯಾಗಿ ಬಿಸಿ ನೀರು ಕುಡಿಯುವುದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇಡೀ ದಿನ ಬಿಸಿ ನೀರು ಸೇವನೆ ಮಾಡುವವರು ನಿದ್ರಾಹೀನತೆಯಿಂದ ಬಳಲುತ್ತಾರೆ.

ಜೀರ್ಣಕ್ರಿಯೆ ಸಮಸ್ಯೆ : 

ಬಿಸಿ ನೀರು ನಿಮ್ಮ ಜೀರ್ಣಕ್ರಿಯೆ ಮೇಲೂ ಪರಿಣಾಮ ಬೀರುತ್ತದೆ. ಬಿಸಿ ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡುತ್ತದೆ.

ನಿರ್ಜಲೀಕರಣ : 

ನೀರು ನಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಆದ್ರೆ ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ನೀರು ಕುಡಿದ್ರೆ ಖನಿಜಗಳ ಕೊರತೆಯಾಗುತ್ತದೆ. ತುಂಬಾ ಬಿಸಿನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಹೆಚ್ಚು ಬೆವರು ಕಾಣಿಸಿಕೊಳ್ಳುತ್ತದೆ. ಬೆವರು ನಿರ್ಜಲೀಕರಣ  ಸಮಸ್ಯೆಗೆ ಕಾರಣವಾಗುತ್ತದೆ.

ಯಕ್ತೃತ್ತು – ಮೂತ್ರಪಿಂಡಕ್ಕೆ ಹಾನಿ : 

ಹೆಚ್ಚು ಬಿಸಿನೀರು ಕುಡಿಯುವುದರಿಂದ ಮೂತ್ರಪಿಂಡ, ಯಕೃತ್ತು ಮುಂತಾದ ಪ್ರಮುಖ ಅಂಗಗಳಿಗೆ ಹಾನಿಯಾಗುತ್ತದೆ.

ರಕ್ತದೊತ್ತಡ :

ಹೆಚ್ಚು ಬಿಸಿನೀರು ಕುಡಿಯುವುದರಿಂದ ರಕ್ತದೊತ್ತಡದ ಅಸಮತೋಲನವುಂಟಾಗುತ್ತದೆ.  ಇದು ದೇಹದಲ್ಲಿನ ಸೋಡಿಯಂ ಮತ್ತು ಎಲೆಕ್ಟ್ರೋಲೈಟ್‌ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.  ಇದರಿಂದ ಆಯಾಸ, ಸುಸ್ತು, ತಲೆ ತಿರುಗುವಿಕೆ ಕಾಣಿಸಿಕೊಳ್ಳುತ್ತದೆ.

ಗಂಟಲು – ಬಾಯಿಗೆ ಹಾನಿ :

ಬಿಸಿಯಾದ ನೀರು ಗಂಟಲು ಮತ್ತು ಬಾಯಿಯ ಸೂಕ್ಷ್ಮ ಚರ್ಮವನ್ನು ಸುಡುತ್ತದೆ. ಇದು ಗುಳ್ಳೆ, ಗಂಟಲಿನಲ್ಲಿ ಊತ ಮತ್ತು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Continue Reading

LIFE STYLE AND FASHION

ಮನೆಯಲ್ಲಿ ದೇವರ ಪೂಜೆ ಮಾಡುವಾಗ ತಪ್ಪಿಯೂ ಈ ತಪ್ಪು ನಡೆಯದಂತೆ ಎಚ್ಚರ ವಹಿಸಿ ..!

Published

on

ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಬೇಕೆಂದರೆ ದೇವರಿಗೆ ಸಲ್ಲಿಸುವ ಪೂಜೆಯು ಪ್ರಧಾನ ಪಾತ್ರ ವಹಿಸುತ್ತದೆ.  ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಪ್ರತೀ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ದೀಪ ಹಚ್ಚುತ್ತಾರೆ. ಆದರೆ, ಕೆಲವರು ಸ್ನಾನ ಮಾಡಿ ಬಹಳ ಶುದ್ಧಿಯಿಂದ ದೇವರ ಪೂಜೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಯಾಗುತ್ತದೆ ಎಂದು ನಂಬಲಾಗುತ್ತದೆ. ಆದರೆ ದೇವರ ಪೂಜೆಯಲ್ಲಿ ತಪ್ಪುಗಳು ನಡೆದರೆ, ಫಲಗಳು ಸಿಗುವುದಿಲ್ಲ. ದೇವರನ್ನು ಪೂಜಿಸುವಾಗ ಯಾವ ರೀತಿಯ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇವರ ಪೂಜೆಯನ್ನು ಮಾಡುವುದಕ್ಕೆ ಅದರದ್ದೇ ಆದ ನಿಯಮಗಳು, ಸಂಪ್ರದಾಯಗಳು ಇವೆ. ಅವುಗಳನ್ನು ಪಾಲಿಸದೇ ಇದ್ದರೆ ಪೂಜೆ ಮಾಡಿಯೂ ವ್ಯರ್ಥವಾಗುತ್ತದೆ. ದೇವರ ಪೂಜೆಯನ್ನು ಮಾಡುವಾಗ ಯಾವಾಗಲೂ ಅದರ ನಿಯಮಗಳನ್ನು ಪಾಲಿಸಬೇಕು. ಏಕೆಂದರೆ ಪೂಜೆಯಲ್ಲಿ ಮಾಡುವ ತಪ್ಪುಗಳು  ಪೂಜೆಯ ಫಲವನ್ನು ನೀಡದಿರುವುದು ಮಾತ್ರವಲ್ಲ. ಪೂಜೆಯಲ್ಲಿ ದೋಷಗಳನ್ನು ಕೂಡ ಸೃಷ್ಟಿಸುತ್ತದೆ.

ದೇವರ ಕೋಣೆಯ ದಿಕ್ಕು:

ದೇವರನ್ನು ಪೂಜಿಸುವ ಮೊದಲು, ದೇವರ ಕೊಠಡಿ ವಾಸ್ತು ಪ್ರಕಾರ ಉಲ್ಲೇಖಿಸಲಾದ ದಿಕ್ಕಿನಲ್ಲಿರುವುದು ಅಗತ್ಯ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ದೇವರ ಕೋಣೆಯಿದ್ದರೆ ಅದು ಶುಭವೆಂದು ಪರಿಗಣಿಸಲಾಗಿದೆ. ದೇವರ ಕೋಣೆಯ ದಿಕ್ಕು ಸರಿಯಾಗಿಲ್ಲದಿದ್ದರೆ ಪೂಜೆಯ ಪ್ರಯೋಜನಗಳು ಸಿಗುವುದಿಲ್ಲ.

ದೇವರ ಕೋಣೆಯ ಶುಚಿತ್ವ :

ಪೂಜೆಯ ಸಮಯದಲ್ಲಿ ಸ್ವಚ್ಛತೆ ಮತ್ತು ಪರಿಶುದ್ಧತೆಗೆ ವಿಶೇಷ ಗಮನ ಹರಿಸಬೆಕು. ಏಕೆಂದರೆ ಪೂಜೆಯನ್ನು ಸ್ವಚ್ಛತೆ ಮತ್ತು ಪರಿಶುದ್ಧತೆಯಿಂದ ಮಾಡದಿದ್ದರೆ ಅದರ ಪ್ರಯೋಜನಗಳು ಸಿಗುವುದಿಲ್ಲ. ಹಾಗಾಗಿ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿದ ನಂತರವೇ ಪೂಜೆ ಮಾಡಬೇಕು. ಪೂಜೆಯ ಸಮಯದಲ್ಲಿಯೂ ಸಹ ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲಿ ತರಬಾರದು.

ಪೂಜೆ ಮಾಡುವಾಗ ಆಸನವನ್ನಿಟ್ಟು ಕುಳಿತುಕೊಳ್ಳುವುದು :

ಆಸನವಿಲ್ಲದೆ ಅಥವಾ ನಿಂತುಕೊಂಡು ನಾವು ದೇವರ ಪೂಜೆಯನ್ನು ಮಾಡಬಾರದು. ದೇವರ ಪೂಜೆಯನ್ನು ಮಾಡುವಾಗ ಆಸನವನ್ನಿಟ್ಟುಕೊಂಡು ಕುಳಿತುಕೊಳ್ಳಬೇಕು. ಅದರಲ್ಲೂ ದೇವರ ಪೂಜೆಯನ್ನು ಮಾಡುವಾಗ ಕುಳಿತುಕೊಳ್ಳಲು ಕುಶ ಆಸನವನ್ನು ಬಳಸಿಕೊಳ್ಳುವುದು ತುಂಬಾನೇ ಮುಖ್ಯ. ದೇವರ ಪೂಜೆಯನ್ನು ನಿಂತುಕೊಂಡು ಮಾಡಬಾರದು. ಇದರಿಂದ ಪೂಜೆಯ ಯಾವುದೇ ಫಲ ನಿಮಗೆ ಸಿಗುವುದಿಲ್ಲ.

ಮಂತ್ರಗಳ ಪಠಣೆ :

ದೇವರ ಪೂಜೆಯನ್ನು ಮಾಡುವಾಗ ಮಂತ್ರ ಮತ್ತು ಸ್ತೋತ್ರವನ್ನು ಪಠಿಸುವುದು ತುಂಬಾನೇ ಮುಖ್ಯ. ದೇವರ ಪೂಜೆಯಲ್ಲಿ ಮಂತ್ರವನ್ನು ಪಠಿಸಿದಾಗ ಮಾತ್ರ ಅದರ ಪ್ರಯೋಜ ದೊರೆಯುತ್ತದೆ. ನಿಯಮಿತವಾಗಿ ಮಂತ್ರಗಳನ್ನು ಪಠಿಸುವುದರಿಂದ ಆ ಮಂತ್ರಗಳು ಪ್ರಯೋಜನವನ್ನು ನೀಡಲು ಪ್ರಾರಂಭಿಸುತ್ತದೆ. ಮಂತ್ರಗಳ ಪಠಣದಿಂದ ಆದಷ್ಟು ಬೇಗ ದೇವರನ್ನು ಒಲಿಸಿಕೊಳ್ಳಬಹುದಾಗಿದೆ.

ಪೂಜೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ಪೂಜೆ ಮಾಡಬೇಕು. ಪೂಜೆಯ ಸಮಯದಲ್ಲಿ, ದೇವರು ಮತ್ತು ದೇವರ ವಿಗ್ರಹಗಳಿಗೆ ಬೆನ್ನು ಹಾಕಿ ಕುಳಿತುಕೊಳ್ಳಬಾರದು. ಹೀಗೆ ಮಾಡುವುದರಿಂದ ಪೂಜೆಯ ಪ್ರಯೋಜನಗಳು ಸಿಗುವುದಿಲ್ಲ. ಈ ರೀತಿಯ ಸಣ್ನ ಪುಟ್ಟ ತಪ್ಪುಗಳು ಪುಜೆಯ ಸಮಯದಲ್ಲಿ ಸಂಭವಿಸದಂತೆ ಎಚ್ಚರ ವಹಿಸುವುದು ಒಳ್ಳೆಯದು.

Continue Reading
Advertisement

Trending

Copyright © 2025 Namma Kudla News

You cannot copy content of this page