Connect with us

LATEST NEWS

ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಶುರುವಾಗಿದೆಯಾ..? ಹಾಗಾದರೆ ಹೀಗೆ ಮಾಡಿ…!

Published

on

ತಂತ್ರಜ್ಞಾನವು ಮೊದಲಿಗಿಂತ ಕೆಲಸವನ್ನು ಸುಲಭಗೊಳಿಸಿದ್ದರೂ, ಕೆಲಸದ ಒತ್ತಡ ಮಾತ್ರ ಹೆಚ್ಚಾಗುತ್ತಲೇ ಇದೆ. ಕೆಲವೊಮ್ಮೆ ನೀವು ಕೆಲಸದ ವಿಚಾರವಾಗಿ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಾಗಬಹುದು. ಇದು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಇಲ್ಲಿ ನೀಡಲಾಗಿರುವ ಸರಳ ವಿಧಾನಗಳನ್ನು ಅನುಸರಿಸಿ ನೋಡಿ.

1) ನೀವು ಗಂಟೆಗಟ್ಟಲೆ ಕುಳಿತರೆ ಅನಾರೋಗ್ಯಕ್ಕೆ ಒಳಗಾಗಬಹುದು. ಅನಾರೋಗ್ಯವನ್ನು ತಡೆಗಟ್ಟಲು ಪ್ರತಿ 30 ನಿಮಿಷಗಳಿಗೊಮ್ಮೆ ಸಣ್ಣ ವಿರಾಮ ತೆಗೆದುಕೊಳ್ಳಿ. ಕೆಲಸದ ನಡುವೆ ಇದನ್ನು ಮಾಡುವುದು ಸ್ವಲ್ಪ ಕಷ್ಟಕರವೆಂದು ತೋರಬಹುದು.ಆದರೆ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಬ್ರೇಕ್ ನಲ್ಲಿ ಎದ್ದು ಓಡಾಡಿ.

2) ಕೆಲಸದ ನಡುವೆ ಹಗುರವಾಗಿ ಕೈಕಾಲುಗಳನ್ನು ಹಿಗ್ಗಿಸಿ. ಹೀಗೆ ಮಾಡುವುದರಿಂದ ಸ್ನಾಯುಗಳು ಹೊಂದಿಕೊಳ್ಳುವ ಮತ್ತು ಬಲಗೊಳ್ಳಲು ಸಹಾಯ ಮಾಡುತ್ತದೆ. ಕೆಲಸದ ನಡುವೆ ನಿಮ್ಮ ಕುತ್ತಿಗೆ, ಎದೆ, ಭುಜಗಳು ಮತ್ತು ಮಣಿಕಟ್ಟುಗಳನ್ನು ಹಿಗ್ಗಿಸಲು ಪ್ರಯತ್ನಿಸಿ.

3) ನೀವು ದಿನವಿಡೀ ಕುಳಿತರೆ, ದೇಹವನ್ನು ಆರೋಗ್ಯಕರವಾಗಿಡಲು ಕೆಲವು ವ್ಯಾಯಾಮಗಳನ್ನು ಮಾಡಿ. ಉದಾಹರಣೆಗೆ ಡೆಡ್ ಲಿಫ್ಟ್ ಗಳು, ಆಳವಾದ ಸ್ಮಾಟ್ ಗಳು ಅಥವಾ ಪುಶ್-ಅಪ್ ಗಳನ್ನು ಮಾಡಿ.

4) ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವ ಜನರು ವ್ಯಾಯಾಮದ ಚೆಂಡುಗಳನ್ನು ಸಹ ಬಳಸಬಹುದು. ಇದು ನಿಮ್ಮ ಪ್ರಮುಖ ಸ್ನಾಯುಗಳನ್ನು ಬಲಪಡಿಸಲು ಮತ್ತು ಸ್ಥಾನೀಕರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

5) ಕೆಲಸದ ಕಾರಣದಿಂದಾಗಿ ವಾಕಿಂಗ್ ಹೋಗಲು ನಿಮಗೆ ಸಮಯ ಸಿಗದಿದ್ದರೆ, ನಿಮ್ಮ ಕಚೇರಿಯ ಮುಂದೆ ಒಂದು ಕಿಲೋಮೀಟರ್ ದೂರದಲ್ಲಿ ಕಾರನ್ನು ಪಾರ್ಕ್ ಮಾಡಿ ನಂತರ ಅಲ್ಲಿಂದ ಕಚೇರಿಗೆ ನಡೆಯಿರಿ. ವಾಕಿಂಗ್ ಮಾಡಲು ತಜ್ಞರು ನೀಡುವ ಸಲಹೆ ಇದು. ಮನೆಯಿಂದ ಕೆಲಸ ಮಾಡುತ್ತಿದ್ದರೆ, ಕೆಲಸವನ್ನು ಪ್ರಾರಂಭಿಸುವ ಮೊದಲು 15 ನಿಮಿಷಗಳ ವಾಕಿಂಗ್ ಮಾಡಿ.

LATEST NEWS

ಬಾಂಬ್ ಬೆದರಿಕೆ ಹಿನ್ನಲೆ ಶಾಲೆಗೆ ರಜೆ ಘೋಷಣೆ

Published

on

ಮಂಗಳೂರು/ನವದೆಹಲಿ : ನೋಯ್ಡಾ ಮತ್ತು ನವದೆಹಲಿಯ ಎರಡು ಶಾಲೆಗಳಿಗೆ ಇಂದು (ಫೆ.7) ಬೆಳ್ಳಂಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ದೌಡಾಯಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಇಮೇಲ್ ಮೂಲಕ ಬೆದರಿಕೆ ಬಂದ ಕೂಡಲೇ ಶಾಲಾ ಆಡಳಿತ ಮಂಡಳಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಈಗಾಗಲೇ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬಂದವರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಶಾಲಾ ಆವರಣವನ್ನು ಸುತ್ತುವರೆದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ, ಅಲ್ಲದೆ ಕಾರ್ಯಾಚರಣೆಯಲ್ಲಿ ಶ್ವಾನ ದಳವೂ ಸೇರಿದೆ.

ಇದನ್ನೂ ಓದಿ : ಜೊಮಾಟೊ ಹೆಸರು ಎಟರ್ನಲ್ ಎಂದು ಬದಲು; ಏಕೆ ಈ ನಾಮ ಬದಲಾವಣೆ ?

ನೋಯ್ಡಾದ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ನಕಲಿ ಇಮೇಲ್‌ಗಳನ್ನು ಕಳುಹಿಸಿದ್ದಕ್ಕಾಗಿ 9 ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಿದ ಒಂದು ದಿನದ ಬಳಿಕ ಇಂದು ಮತ್ತೆ ಎರಡು ಶಾಲೆಗಳಿಗೆ ಬೆದರಿಕೆ ಬಂದಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಸದ್ಯ ಬಾಂಬ್ ಬೆದರಿಕೆ ಬಂದಿರುವ ಇಮೇಲ್ ನ ಮೂಲ ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸಲಾಗುತ್ತಿದೆ.

Continue Reading

FILM

ನಟ ಸೋನು ಸೂದ್ ವಿರುದ್ದ ಬಂಧನ ವಾರೆಂಟ್ ಜಾರಿ

Published

on

ಮಂಗಳೂರು/ಪಂಜಾಬ್ : ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಿರುದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಲೂಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ವಾರೆಂಟ್ ಹೊರಡಿಸಿದ್ದಾರೆ. ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೇಶದ್ರೋಹದ ಆರೋಪ; ಖ್ಯಾತ ನಟಿ ಅರೆಸ್ಟ್

ಸಾಕ್ಷ್ಯ ಹೇಳಲು ಸೋನು ಸೂದ್ ಅವರಿಗೆ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸೋನು ಸೂದ್ ಅವರನ್ನು ಬಂಧಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲುಧಿಯಾನ ನ್ಯಾಯಾಲಯವು ನಿರ್ದೇಶಿಸಿದೆ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಫೆ.10 ಕ್ಕೆ ಕೋರ್ಟ್ ನಿಗದಿಪಡಿಸಿದೆ.

ಸೋನು ಸೂದ್ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದರ ಜೊತೆ ಮಾತನಾಡಿದ ಸೋನು ಸೂದ್, “ನಾನು ಯಾವುದಕ್ಕೂ ಬ್ರಾಂಡ್ ಅಂಬಾಸಿಡರ್ ಅಲ್ಲ, ನಾನು ಈಗಾಗಲೇ ನನ್ನ ವಕೀಲರ ಮೂಲಕ ಉತ್ತರಿಸಿದ್ದೇನೆ ಮತ್ತು ಫೆಬ್ರವರಿ 10 ರಂದು ಮತ್ತೆ ಉತ್ತರ ನೀಡುತ್ತೇನೆ. ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಏನೆಂದು ನನಗೂ ತಿಳಿದಿಲ್ಲ. ಕೆಲವರು ಬೇಕೆಂದೇ ಮಾನ ಹರಾಜು ಹಾಕಲು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ಇದಕ್ಕೆಲ್ಲ ನಾನು ಹೆದರುವುದಿಲ್ಲ” ಎಂದು ಹೇಳಿದ್ದಾರೆ.

Continue Reading

DAKSHINA KANNADA

ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಯೋಗಿಂದ್ರ ಬಿ ಇನ್ನಿ*ಲ್ಲ

Published

on

ಕಿನ್ನಿಗೋಳಿ : ಕಿನ್ನಿಗೋಳಿಯ ಐಕಳ ಪೊಂಪೈ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಯೋಗಿಂದ್ರ ಬಿ. (62 )ಅವರು ಹೃದಯಘಾತದಿಂದ ಬುಧವಾರ ರಾತ್ರಿ ನಿ*ಧನ ಹೊಂದಿದರು.

ಮೂಲತಃ ಕಾಸರಗೋಡು ತಾಲೂಕಿನ ಬದಿಯಡ್ಕ ನಿವಾಸಿಯಾಗಿದ್ದ ಅವರು  1986ರಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಪೊಂಪೈ ಕಾಲೇಜಿಗೆ ವರ್ಗಾವಣೆಗೊಂಡು 21 ವರ್ಷಗಳ ವರೆಗೆ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

ಸಮಾಜಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಮತ್ತು ಮುಖ್ಯಸ್ಥರಾಗಿ ಒಟ್ಟು 36 ವರ್ಷಗಳ ಸೇವೆಯನ್ನು ಸಲ್ಲಿಸಿದ್ದ ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಪೊಂಪೈ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಎನ್.ಎಸ್. ಎಸ್ ಕಾರ್ಯಕ್ರಮ ಅಧಿಕಾರಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಹಲವು ವರ್ಷಗಳ ಕಾಲ ಸಹ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು‌ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page