Connect with us

LATEST NEWS

ತೆನೆ ಹೊತ್ತ ಮಹಿಳೆಯ ಮುಡಿಯಲ್ಲಿ ಕಮಲ – BJP ಮೈತ್ರಿ ಹಿಂದಿದೆ jds​ ಲೆಕ್ಕಾಚಾರ..!

Published

on

ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟ ಬಂಧನ್ ನಾಯಕರು ಬೆಂಗಳೂರಲ್ಲಿ ಒಗ್ಗಟ್ಟು ಪ್ರದರ್ಶನವಾಗುತ್ತಿದ್ದಂತೆ ಅತ್ತ ದಳಪತಿ ಹೆಚ್​.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಲು ದೆಹಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರು: ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟ ಬಂಧನ್ ನಾಯಕರು ಬೆಂಗಳೂರಲ್ಲಿ ಒಗ್ಗಟ್ಟು ಪ್ರದರ್ಶನವಾಗುತ್ತಿದ್ದಂತೆ ಅತ್ತ ದಳಪತಿ ಹೆಚ್.​ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಲು ದೆಹಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ.

ಇಂದು ಅಥವಾ ನಾಳೆ ಹೆಚ್‌.ಡಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, NDA ಸಭೆಗೂ ಮುನ್ನ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಈಗಾಗಲೇ ಪ್ರಧಾನಿ ಮೋದಿ ಜತೆಗೆ ಉತ್ತಮ ಬಾಂಧವ್ಯದ ಮಾತುಗಳನ್ನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕಮಲ ಮುಡಿಯುವು ಫಿಕ್ಸ್ ಆಗಿದೆ.

ಬಿಜೆಪಿ ಸಹ ತನ್ನ ಬಲ ಹೆಚ್ಚಿಸಿಕೊಳ್ಳಲು ಜು. 18ರಂದು ಸಭೆ ನಡೆಸುತ್ತಿದೆ.

ಎನ್‌ಡಿಎ ಮೈತ್ರಿಕೂಟವನ್ನ ಮತ್ತೆ ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿದೆ.

ಈ ಪೈಕಿ ಜೆಡಿಎಸ್‌ಗೂ ಗಾಳ ಹಾಕಿದೆ. ಹೆಚ್‌ಡಿ ಕುಮಾರಸ್ವಾಮಿ ಸಹ ಬಿಜೆಪಿ ಜೊತೆ ಮೈತ್ರಿಗೆ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ನಾಡಿದ್ದಿನ ಸಭೆ ಬಳಿಕ ಮೈತ್ರಿ ಬಹುತೇಕ ಫಿಕ್ಸ್ ಆಗಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಮಹಾರಾಷ್ಟ್ರದ ಶಿವಸೇನೆಯ ಏಕನಾಥ್‌ ಶಿಂಧೆ ಬಣ, ಎನ್‌ಸಿಪಿಯ ಅಜಿತ್‌ ಪವಾರ್‌ ಬಣ ಎನ್‌ಡಿಎ ಕಡೆ ವಾಲಿದ್ದಾರೆ.

ಹಳೇ ಮಿತ್ರಪಕ್ಷಗಳಾದ ಶಿರೋಮಣಿ ಅಖಾಲಿದಳ, ತೆಲುಗುದೇಶಂ ಪಾರ್ಟಿಗೂ ನಡ್ಡಾ ಆಹ್ವಾನ ಹೋಗಿದೆ.

ಇನ್ನು, ಹೊಸ ಪಕ್ಷ ಪವನ್‌ ಕಲ್ಯಾಣ್‌ರ ಜನಸೇನಾ ಕೂಡಾ ಎನ್‌ಡಿಎ ಜತೆ ಗುರುತಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಆದ್ರೆ, ಜೆಡಿಎಸ್‌ ನಾಯಕ ಕುಮಾರಸ್ವಾಮಿ ಈವರೆಗೆ ತಮ್ಮ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಆದ್ರೆ, ಬಿಜೆಪಿ ನಾಯಕರು ಸಣ್ಣ ಸುಳಿವು ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಒಂದು ತಿಂಗಳ ಹಿಂದೆ ಬಿಜೆಪಿ ನಾಯಕರನ್ನ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಇದೀಗ ಮತ್ತೆ ದೆಹಲಿ ಬಿಜೆಪಿ ನಾಯಕರನ್ನ ಹೆಚ್‌ಡಿಕೆ ಭೇಟಿಯಾಗುತ್ತಿರುವುದು ತೀವ್ರು ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು ಎಂದಿದ್ದಾರೆ.

LATEST NEWS

ಉದಯೋನ್ಮುಖ ನಟಿ, ಒಡಿಶಾದ ಲೇಡಿ ಡಾನ್ ಸಂಗೀತಾ ಸಾಹು ಬಂಧನ

Published

on

ಮಂಗಳೂರು/ಹೈದರಾಬಾದ್: ಗಾಂಜಾ ಕಳ್ಳಸಾಗಣಿಕೆಯಲ್ಲಿ ಭಾಗಿಯಾಗಿದ್ದ ಒಡಿಶಾ ಮೂಲದ ನಟಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಯುವತಿ ಸಂಗೀತಾ ಸಾಹು ಅಲಿಯಾಸ್ ಗೀತಾ (29) ಎಂಬ ಮಹಿಳೆಯನ್ನು ತೆಲಂಗಾಣದ ವಿಶೇಷ ಅಬಕಾರಿ ಕಾರ್ಯಪಡೆ ಪೊಲೀಸರು (STF) ಬಂಧಿಸಿದ್ದಾರೆ.


ಮೂಲತಃ ಒಡಿಶಾದ ಕುರ್ತಾ ಜಿಲ್ಲೆಯ ಕಾಲಿಕೋಟ್‌ನ ಸಂಗೀತಾ ಸಾಹು ನಾಲ್ಕು ವರ್ಷಗಳಿಂದ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾಳೆ. ಅಲ್ಲದೆ, ಸಿಕಂದರಾಬಾದ್‌ನಲ್ಲಿ ಗಾಂಜಾ ಸಾಗಿಸಿದ ಒಂದು ಪ್ರಕರಣ ಮತ್ತು ಧುಲೆಪೇಟೆಯಲ್ಲಿ ಮಹಿಳಾ ವ್ಯಾಪಾರಿಗಳಿಗೆ ಗಾಂಜಾ ಪೂರೈಸಿದ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾಳೆ.

2022ರಲ್ಲಿ ಗಾಂಜಾ ಸಾಗಿಸುತ್ತಿರುವಾಗ ಸಿಕಂದರಾಬಾದ್‌ನ ರೈಲ್ವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಪರಿಣಾಮ ಹೈದರಾಬಾದ್‌ನ ಚಂಚಲಗುಡ ಜೈಲು ಹಕ್ಕಿಯಾಗಿದ್ದಳು. ಜೈಲಿನಲ್ಲಿದಾಗಲೂ ತನ್ನ ಸಹಚರರ ಮೂಲಕ ಗಾಂಜಾ ವ್ಯವಹಾರ ನಡೆಸುತ್ತಿದ್ದಳು. ಜೊತೆಗೆ ಜೈಲಿನಲ್ಲಿರುವ ಇತರೇ ಖೈದಿಗಳೊಡನೆ ಸಂಪರ್ಕ ಜಾಸ್ತಿಯಾಗಿತ್ತು. ಜೈಲಿನಿಂದ ಹೊರಬಂದ ನಂತರ ಈಕೆಯ ಗಾಂಜಾ ವ್ಯವಹಾರ ಮತ್ತಷ್ಟು ವೇಗ ಪಡೆದುಕೊಂಡಿತು.

ಇದನ್ನೂ ಓದಿ: ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಚಿನ್ನ ಸಾಗಣೆಯಲ್ಲಿ ಈತನ ಪಾತ್ರವೇನು?

ಮಹಾನಗರಗಳಲ್ಲಿ ಗಾಂಜಾ ನಂಟು
ಸಾಹು ಒಡಿಶಾದಲ್ಲಿ ಗಾಂಜಾ ಬೆಳೆಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈಕೆಯ ಗಾಂಜಾ ವ್ಯವಹಾರದ ಜಾಲ ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ಇತರ ಮಹಾನಗರಗಳಲ್ಲಿ ವ್ಯಾಪಿಸಿತ್ತು. ಹೈದರಾಬಾದ್ ಸಾಹುವಿನ ಪ್ರಮುಖ ಮಾರುಕಟ್ಟೆ ಎಂದು ಹೇಳಲಾಗಿದೆ. ಗಾಂಜಾ ಸಾಗಾಟಕ್ಕೆ ರೈಲ್ವೇ ಮಾರ್ಗವನ್ನೇ ಹೆಚ್ಚಾಗಿ ಆಯ್ಕೆಮಾಡಿಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

ಸದ್ಯ ಆರೋಪಿ ಮಹಿಳೆ ಸಂಗೀತಾ ಸಾಹು ಅಲಿಯಾಸ್ ಗೀತಾಳನ್ನು ಬಂಧಿಸಿದ ತೆಲಂಗಾಣದ ವಿಶೇಷ ಅಬಕಾರಿ ಕಾರ್ಯಪಡೆ ಪೊಲೀಸರು (STF) ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

 

Continue Reading

BELTHANGADY

ಬೆಳ್ತಂಗಡಿ: ಕಾರು ಓವರ್ ಟೇಕ್ ಮಾಡುವ ವೇಳೆ ಅಪಘಾತ, ಬೈಕ್ ಸವಾರ ಸಾವು

Published

on

ಬೆಳ್ತಂಗಡಿ: ಕಾರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಕಲ್ಲಗುಡ್ಡೆ ನಿವಾಸಿ 42 ವರ್ಷ ಪ್ರಾಯದ ಸಯ್ಯದ್ ಪಾಶ ಮೃತ ದುರ್ಧೈವಿಯಾಗಿದ್ದಾರೆ. ಬೆಳ್ತಂಗಡಿಯ ಚರ್ಚ್ ರಸ್ತೆಯ ಕಲ್ಕುಣಿ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ಸಯ್ಯದ್ ಪಾಶ ಅವರು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿತ್ತಾದ್ರೂ ಅವರು ಇಹಲೋಕ ತ್ಯಜಿಸಿದ್ದಾರೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

kerala

ಇಂದಿನಿಂದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದ ಬ್ರಹ್ಮಕಲಶೋತ್ಸವ ಆರಂಭ

Published

on

ಕಾಸರಗೋಡು:  ಉತ್ತರ ಕೇರಳದ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಳ್ಳಲಿವೆ. ಕುಂಬಳೆ ಸೀಮೆಯ ದೇಗುಲದ ಬ್ರಹ್ಮಕಲಶದಲ್ಲಿ ಎ. 7ರ ವರೆಗೆ ಪ್ರತಿ ದಿನವೂ ವಿವಿಧ ವೈದಿಕ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇಂದು ಬೆಳಗ್ಗೆ 8 ರಿಂದ ಬ್ರಹ್ಮಶ್ರೀ ಡಾ| ಶಿವಪ್ರಸಾದ್ ತಂತ್ರಿ ದೇರೇಬೈಲು, ಕ್ಷೇತ್ರ ತಂತ್ರಿವರ್ಯರು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ವಾಸ್ತು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಅವರಿಗೆ ಶಿಲ್ಪಿ ಮರ್ಯಾದೆ, ಪ್ರಾಸಾದ ಪರಿಗ್ರಹ, ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಶ್ರೀ ದೇವರ ಉಗ್ರಾಣ ಮುಹೂರ್ತ, ಅನ್ನಸಂತರ್ಪಣೆಯ ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ವಿಗರಣೆ, ಬ್ರಹ್ಮಕೂರ್ಚ ಹೋಮ, ಕಂಕಣ ಬಂಧ, ಅಥರ್ವಶೀರ್ಷ ಮಹಾ ಗಣಪತಿ ಯಾಗ ನಡೆಯಲಿದೆ. ಬೆಳಗ್ಗೆ 9.30 ಮತ್ತು ಸಂಜೆ 4.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 5 ರಿಂದ ಸಪ್ತಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಮೃತ್ತಿಕಾಹರಣ, ಅಂಕುರಾರೋಹಣ ನಡೆದಿದೆ.

 

ಇದನ್ನೂ ಓದಿ : ಕಾಸರಗೋಡು: ಕೊನೆಯ ಹಂತದಲ್ಲಿದೆ ಮಧೂರು ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ

ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ :

ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರ ವಾಹನಗಳ ಪಾರ್ಕಿಂಗ್ ಗಾಗಿ ಮಧೂರು ಬಯಲು, ಕೊಲ್ಯ ಏರಿಕ್ಕಳ ಬಯಲು, ಚೇನಕ್ಕೋಡು ಬಯಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಐಪಿ ವಾಹನಗಳಿಗೆ ಪಾಸ್ ನೀಡಲಾಗುತ್ತಿದೆ. ಬಸ್ ಸೌಕರ್ಯ ಪರಕ್ಕಿಲ ತನಕ ಮಾತ್ರ ಇದ್ದು, ಅಲ್ಲಿಂದ ಮುಂದೆ ನಡೆದುಕೊಂಡು ಹೋಗಬಹುದು. ನಡೆದು ಬರಲು ಅಶಕ್ತರಾದವರಿಗೆ ವಿಶೇಷ ವಾಹನ ಸೌಕರ್ಯ ಕಲ್ಪಿಸುವ ಆಲೋಚನೆ ಇದೆ. 1. ಕಾಸರಗೋಡು ಭಾಗದಿಂದ ಬರುವವರು ಮಧೂರು ಬಯಲಿನಲ್ಲಿ ಪಾರ್ಕಿಂಗ್ ಮಾಡಬೇಕು. 2. ಪುತ್ತೂರು, ವಿಟ್ಲ, ಬದಿಯಡ್ಕ, ಪೆರ್ಲ, ನೀರ್ಚಾಲು ಪ್ರದೇಶದಿಂದ ಬರುವವರು ಕೊಲ್ಯ ಏರಿಕ್ಕಳ ಬಯಲಿನಲ್ಲಿ 3. ಮಂಗಳೂರು, ಸುಳ್ಯ, ಕಾಂಞಂಗಾಡ್ ಮೊದಲಾದ ಪ್ರದೇಶಗಳಿಂದ ಬರುವವರಿಗೆ ಚೇನಕ್ಕೋಡ್‌ನಲ್ಲಿ ಪಾರ್ಕಿಂಗ್.

Continue Reading
Advertisement

Trending

Copyright © 2025 Namma Kudla News

You cannot copy content of this page