Connect with us

BELTHANGADY

ದೂರು ನೀಡಲು ಬಂದವಳನ್ನೇ ಅತ್ಯಾಚಾರ ಮಾಡಿದ ಧೂರ್ತ ಪಿಎಸ್‌ಐನನ್ನು ಬಂಧಿಸಲು ಹೈಕೋರ್ಟ್ ಸೂಚನೆ..!

Published

on

ಮಂಗಳೂರು : ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಯುವತಿ ಮೊಬೈಲ್‌ ನಂಬರ್ ಪಡೆದು ಆಕೆಯೊಂದಿಗೆ ಸಲುಗೆ ಬೆಳೆಸಿ, ಮದುವೆಯಾಗುವ ಭರವಸೆ ನೀಡಿ ಬಳಿಕ ಬೆಳ್ತಂಗಡಿಗೆ ಕರೆದುಕೊಂಡು ಬಂದು ಅತ್ಯಾಚಾರ ನಡೆಸಿ ವಂಚನೆ ಎಸಗಿದ್ದ ಆರೋಪಿ ಚಾಮರಾಜಪೇಟೆ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ವಿಶ್ವನಾಥ್ ಬಿರಾದಾರ್‌ಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದು ಮಾಡಿದ್ದು ಅವರನ್ನು ಕೂಡಲೇ ಬಂಧಿಸಬೇಕು ಎಂದು ಆದೇಶಿಸಿದೆ.

ಯುವತಿ ದೂರು ನೀಡಿದ್ದರೂ ಆರೋಪಿ ವಿರುದ್ಧ ಕ್ರಮ ಜರುಗಿಸದೇ, ಆತನಿಗೆ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್, ಪಿಎಸ್‌ಐ ಪವನ್ ಹಾಗೂ ಇತರ ಸಿಬ್ಬಂದಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿ ತನಿಖೆ ನಡೆಸಿ ಮೂರು ತಿಂಗಳಿನಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವನ್ನು ಸ್ಥಳೀಯ ಪೊಲೀಸರು ಸರಿಯಾಗಿ ನಿಭಾಯಿಸಿಲ್ಲ. ಆರೋಪಿ ಠಾಣೆಯಲ್ಲೇ ಇದ್ದರೂ ಆತನನ್ನು ಬಂಧಿಸಿಲ್ಲ. ಬದಲಿಗೆ ನೆರವು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬದಲಿಗೆ ಸಿಒಡಿ ತನಿಖೆ ಮಾಡಬೇಕು, ನಾಲ್ಕು ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.

ಲ್ಯಾಪ್ಟಾಪ್‌ ಕಳೆದು ಹೋಯಿತೆಂದು ಬೆಂಗಳೂರು ಮೂಲದ ೩೦ರ ಹರೆಯದ ಯುವತಿ ೨೦೨೦ರ ಆಗಸ್ಟ್‌ನಲ್ಲಿ ಚಾಮರಾಜ ಪೇಟೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು.

ಈ ಸಂದರ್ಭ ಪಿಎಸ್‌ಐ ವಿಶ್ವನಾಥ್ ಬಿರಾದಾರ್ ಆಕೆಯನ್ನು ಪರಿಚಯಿಸಿಕೊಂಡು ಮೊಬೈಲ್ ನಂಬರ್ ಪಡೆದು ಸಲುಗೆ ಬೆಳೆಸಿ ಮದುವೆಯಾಗುವ ಭರವಸೆ ನೀಡಿದ್ದ. ಅಲ್ಲದೆ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಮದುವೆಯಾಗದೇ ವಂಚನೆ ಮಾಡಿದ್ದ ಹಿನ್ನೆಲೆಯಲ್ಲಿ ಯುವತಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಳು.

BELTHANGADY

ಬೆಳ್ತಂಗಡಿ: ದಿನಸಿ ಅಂಗಡಿಗೆ ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ದೋಚಿದ ಕಳ್ಳರು

Published

on

ಬೆಳ್ತಂಗಡಿ: ದಿನಸಿ ಅಂಗಡಿಗೆ ಕಳ್ಳರು ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ಫೆ.10 ರಂದು ರಾತ್ರಿ ನಡೆದಿದೆ.

ಹರೀಶ್ ಕುಲಾಲ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ನಿನ್ನೆಯ ದಿನ ರಾತ್ರಿ ಕಳ್ಳರು ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಹೋದಿ ಅಂಗಡಿಯಲ್ಲಿದ್ದ ಹಲವಾರು ವಸ್ತುಗಳನ್ನು ಬಾಚಿಕೊಂಡು ಹೋಗಿದ್ದಾರೆ.

ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗಡಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Continue Reading

BELTHANGADY

ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಬರುವ ಭಕ್ತರಿಗೆ ವಿಶೇಷ ಸೂಚನೆ

Published

on

ಧರ್ಮಸ್ಥಳ: ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜನರು ದೇವಸ್ಥಾನಕ್ಕೆ ತೆರಳುವುದು ಸರ್ವೆ ಸಾಮಾನ್ಯ. ಹೀಗಾಗಿ ಈ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ವಿಶೇಷ ಸೂಚನೆಗಳನ್ನು ಹೊರಡಿಸಲಾಗುತ್ತದೆ. ಅದೇ ರೀತಿ ಮಹಾ ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಮಂದಿ ಭಕ್ತರು ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸುತ್ತಾರೆ. ಅವರಿಗಾಗಿ ಈ ವರ್ಷವೂ ಸಹ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಭಕ್ತರಿಗೆ ಮಹತ್ವದ ಸೂಚನೆ:

  • ರಸ್ತೆಯಲ್ಲಿ ವಾಹನ ದಟ್ಟಣೆ ಇರುವ ಹಿನ್ನೆಲೆ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು.
  • ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
  • ನೀವು ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ. ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ.
  • ಇನ್ನು ಪಾದಯಾತ್ರೆಗಳ ಅನುಕೂಲಕ್ಕಾಗಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಸುಮಾರು 10 ಕಡೆ ಮಿನಿ ಟ್ಯಾಂಕ್‌ಗಳನ್ನು ಇಡಲಾಗಿದ್ದು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
  • ಭಕ್ತಾದಿಗಳ ಆರೋಗ್ಯ ದೃಷ್ಟಿಯಿಂದ ತಾಳು ಬೆಟ್ಟದಲ್ಲಿ ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಐವತ್ತಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗಾಗಿ ಬರುವಂತಹ ಭಕ್ತರು ಶುಚಿತ್ವವನ್ನು ಕಾಪಾಡಿಕೊಳ್ಳಿ.

Continue Reading

BELTHANGADY

ಬೆಳ್ತಂಗಡಿ: ಮಾಲಾಡಿ ಮನೆಯಲ್ಲಿ ಮಾಯವಾದ ಭೂತ

Published

on

ಬೆಳ್ತಂಗಡಿ: ಸಾಕಷ್ಟು ಸುದ್ದಿ ಮಾಡಿರುವ ಬೆಳ್ತಂಗಡಿ ತಾಲೂಕಿನ ಮಾಲಾಡಿ ಮನೆಯಲ್ಲಿನ ಭೂತದ ಕಾಟ ನಿಂತು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಭೂತದ ಕಾಟದಿಂದ ಮನೆಯವರು ನಿದ್ದೆ ಕಳೆದುಕೊಂಡಿದ್ದರು. ಮನೆಯಲ್ಲಿ ಬಟ್ಟೆಗಳಿಗೆ ಬೆಂಕಿ ಬೀಳುವುದು, ಪಾತ್ರಗಳ ಉರುಳಿ ಬೀಳುವುದು ಹಾಗೂ ಮನೆಯಲ್ಲಿ ಯಾರೋ ಅಡ್ಡಾಡಿದಂತ ಅನುಭವದಿಂದ ಮನೆಯವರು ಭಯಭೀತರಾಗಿದ್ದರು.

ಸುದ್ದಿ ತಿಳಿದು ಈ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದ ಕಾರಣದಿಂದ ಎರಡು ದಿನಗಳ ಹಿಂದೆ ಇಡೀ ಕುಟುಂಬ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದರು. ಫೆ. 8 ರಂದು ಶನಿವಾರ ಮತ್ತೆ ಮನೆಗೆ ಆಗಮಿಸಿದ್ದು, ಮನೆಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡಿದ್ದಾಗಿ ಮಾಹಿತಿ ಇದೆ. ಇದು ಕುಟುಂಬ ದೈವದ ತೊಂದರೆಯಿಂದ ಆಗಿದ್ದ ಸಮಸ್ಯೆ ಎಂಬ ಮಾಹಿತಿ ಲಭ್ಯವಾಗಿದ್ದು, ಮನೆಯಲ್ಲಿ ಕಳೆದು ಹೋಗಿದ್ದ ಚಿನ್ನ ಕೂಡಾ ಸಿಕ್ಕಿದೆ.

ಮನೆಯಲ್ಲಿನ ದೇವರ ಫೋಟೋದ ಹಿಂಭಾಗದಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಈ ಹಿಂದೆ ಭೂತವೇ ಚಿನ್ನವನ್ನು ಅಡಗಿಸಿಟ್ಟಿದೆ ಎನ್ನಲಾಗಿತ್ತು. ಭಾನುವಾರ ಈ ಮನೆಗೆ ಪವಾಡ ರಹಸ್ಯ ತಜ್ಞ ಹುಲಿಕಲ್ ನಟರಾಜ್ ಅವರು ಬರುವುದಾಗಿ ಹೇಳಿದ್ದು ಅವರಿಗೆ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬ ಮಾಹಿತಿಯನ್ನು ಉಮೇಶ್ ಶೆಟ್ಟಿ ಕುಟುಂಬದವರು ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page