Connect with us

DAKSHINA KANNADA

ಹುಲಿ ವೇಷಧಾರಿಯ ಟೋಪಿಗೆ ಬೆಂಕಿ- ಅದೃಷ್ಟ ವಶಾತ್‌ ಪಾರು..!

Published

on

ಮಂಗಳೂರು: ಹುಲಿ ವೇಷಧಾರಿಗಳ ಸಾಹಸ ಪ್ರದರ್ಶನ ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗ ಬಹುದು. ಅಂತಹ ವಿದ್ಯಮಾನವೊಂದು ಮಂಗಳೂರಿನಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಹುಲಿ ವೇಷಧಾರಿ ಅಪಾಯದಿಂದ ಪಾರಾಗಿದ್ದಾನೆ.

ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ಹುಲಿ ವೇಷಧಾರಿಯೊಬ್ಬ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋಗಿ ತನ್ನ ತಲೆಯ ಮೇಲಿದ್ದ ಹುಲಿ ಟೋಪಿಗೆ ಬೆಂಕಿ ತಗುಲಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಟಿ ಸೆಂಟರ್ ಬಳಿ ರಸ್ತೆಯಲ್ಲಿ ಹುಲಿ ವೇಷಧಾರಿಗಳ ತಂಡವು ಜಮಾಯಿಸಿದ್ದ ಜನ ಸಮೂಹದ ಸಮಕ್ಷಮ ಹುಲಿ ಕುಣಿತದ ಪ್ರದರ್ಶನ ನೀಡುತ್ತಿದ್ದಾಗ ಹುಲಿ ವೇಷಧಾರಿಯೊಬ್ಬ ಬೆಂಕಿ ಸಾಹಸ ಮಾಡಲು ಮುಂದಾಗಿದ್ದ. ಆತ ತನ್ನ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಪ್ರದರ್ಶಿಸುತ್ತಿದ್ದ ವೇಳೆ ಆತನ ಟೋಪಿಗೆ ಬೆಂಕಿ ತಗುಲಿದೆ. ಕೂಡಲೇ ಆತ ತಲೆಯಿಂದ ಟೋಪಿಯನ್ನು ತೆಗೆದು ಎಸೆದಿದ್ದು, ಸಂಭಾವ್ಯ ಅಪಘಢ ತಪ್ಪಿದೆ. ಆತನ ಪಕ್ಕದಲ್ಲಿ ಹುಲಿ ವೇಷಧಾರಿ ಬಾಲಕನೊಬ್ಬ ಕೂಡಾ ಇದ್ದನು. ಒಂದೊಮ್ಮೆ ಅವಘಡ ನಡೆದಿದ್ದರೆ ಬಾಲಕನಿಗೂ ಅಪಾಯ ತಟ್ಟುವ ಸಾಧ್ಯತೆ ಇತ್ತು. ವಿಶೇಷವೆಂದರೆ ಯುವಕರ ತಂಡವೊಂದು ತಮ್ಮ ಭುಜದ ಮೇಲೆ ಹೊತ್ತ ವೇದಿಕೆಯ ಮೇಲೆಯೇ ಈ ಹುಲಿ ವೇಷಧಾರಿ ತನ್ನ ಸಾಹಸ ಪ್ರದರ್ಶಿಸುತ್ತಿದ್ದನು. ಬೆಂಕಿಯೊಂದಿಗೆ ಈ ರೀತಿಯ ಸರಸಕ್ಕೆ ಯಾರೂ ಮುಂದಾಗ ಬಾರದು ಎಂದು ಸಾರ್ವಜನಿಕರು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದಾರೆ.

 

 

DAKSHINA KANNADA

ಪಾಲೆಮಾರ್ ಗಾರ್ಡನ್ ನಲ್ಲಿ ಪ್ರೆಸ್ ಕ್ಲಬ್ ದಿನಾಚರಣೆ..! ಗೌರವ ಪ್ರಶಸ್ತಿ ಪ್ರದಾನ..!

Published

on

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ಇದರ ಪ್ರೆಸ್ ಕ್ಲಬ್ ದಿನಾಚರಣೆ ಮತ್ತು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ನಡೆದಿದೆ.

ಮೋರ್ಗನ್ಸ್ ಗೇಟ್‌ ಸಮೀಪದ ಪಾಲೆಮಾರ್ ಗಾರ್ಡನ್‌ ಎಂಫಸೀಸ್ ಇಲ್ಲಿ ಕಾರ್ಯಕ್ರಮ ಆಯೋಜಸಲಾಗಿತ್ತು. 2024 ನೇ ಸಾಲಿನ ಪ್ರೆಸ್ ಕ್ಲಬ್ ಗೌರವ ಸನ್ಮಾನ ಕಾರ್ಯಕ್ರಮ ನಡೆದಿದ್ದು, ವಿಜಯ ಕರ್ನಾಟಕದ ಮಹಮ್ಮದ್ ಆರೀಫ್ ಪಡುಬಿದ್ರೆ, ವಿಶ್ವವಾಣಿಯ ಜಿತೇಂದ್ರ ಕುಂದೇಶ್ವರ, ಸುದ್ದಿ ಬಿಡುಗಡೆ ಪತ್ರಿಕೆಯ ಭಾಸ್ಕರ್ ರೈ ಕಟ್ಟ, ಹೊಸದಿಂಗತದ ರಘುರಾಮ್ ನಾಯಕ್, ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ಇವರುಗಳನ್ನು ಸನ್ಮಾನಿಸಲಾಗಿದೆ.

ಈ ಗೌರವ ಪುರಸ್ಕಾರ ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದ  ಮಂಗಳೂರು, ಇಬ್ರಾಹಿಂ ಅಡ್ಕಸ್ಥಳ ಮತ್ತು ವಿಜಯಕೋಟ್ಯಾನ್ ಪಡು ಅವರನ್ನು ಕೂಡಾ ಗೌರವಿಸಲಾಗಿದೆ.

ಇದಲ್ಲದೆ ಜಿಲ್ಲಾ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಪುಷ್ಪರಾಜ್, ಸಂದೀಪ್ ಮತ್ತು ಸುಖಪಾಲ್ ಪೊಳಲಿ ಅವರನ್ನೂ ಕೂಡಾ ಸನ್ಮಾನಿಸಲಾಗಿದೆ. 2024 ರ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರಿಗೆ ಲಭಿಸಿದ್ದು , ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಪ್ರೆಸ್ ಕ್ಲಬ್ ಆಧ್ಯಕ್ಷ ಪಿ.ಬಿ.ಹರೀಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರೆಸ್ ಕ್ಲಬ್ ದಿನಾಚರಣೆಯನ್ನು ಮಾಜಿ ಮೇಯರ್ ದಿವಾಕರ್ ಕದ್ರಿ ಅವರು ಉದ್ಘಾಟಿಸಿದ್ದಾರೆ.ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Continue Reading

DAKSHINA KANNADA

ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇಬ್ರಾಹೀಂ ನವಾಝ್ ಆಯ್ಕೆ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, 10942 ಮತಗಳನ್ನು ಗಳಿಸಿ ಇಬ್ರಾಹೀಂ ನವಾಝ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಬಡಕಬೈಲ್ ನಿವಾಸಿಯಾಗಿರುವ ಇಬ್ರಾಹೀಂ ನವಾಝ್ ಈ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಅವರು ಬಂಟ್ವಾಳ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸ್ಥಾಪಕಾಧ್ಯಕ್ಷರಾಗಿ, ಆಸರೆ ಸೇವಾ ಫೌಂಡೇಶನ್ ಕಾರ್ಯದರ್ಶಿ, ನವೋದಯ ಅಟೋ-ರಿಕ್ಷಾ ಚಾಲಕ-ಮಾಲಕರ ಸಂಘ ಗೌರವಧ್ಯಕ್ಷರಾಗಿ, ಬಂಟ್ವಾಳ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸದಸ್ಯ, ತೆಂಗು ಬೆಳೆಗಾರರ ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕಗಳಿಗೆ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ 2024ರ ಆಗಸ್ಟ್ ತಿಂಗಳಿನಲ್ಲಿ ಮತದಾನ ನಡೆದಿತ್ತು. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರು.

Continue Reading

DAKSHINA KANNADA

ಜಪ್ಪಿನಮೊಗರು “ಜಯ – ವಿಜಯ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪ್ರಕಟ

Published

on

ಮಂಗಳೂರು : ಮಂಗಳೂರು ನಗರದ ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ 15 ನೇ ವರ್ಷದ ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳ ನಿನ್ನೆ (ಶನಿವಾರ) ಬೆಳಗ್ಗೆ ಆರಂಭವಾಗಿ ಇಂದು ಮಧ್ಯಾಹ್ನ ಕೊನೆಗೊಂಡಿದೆ.

ಈ ಬಾರಿಯ ಕಂಬಳ ಕೂಟದಲ್ಲಿ 144 ಜೊತೆ ಕೋಣಗಳು ಭಾಗವಹಿಸಿದ್ದವು. ಅದರಲ್ಲಿ  ಕನೆ ಹಲಗೆ  8 ಜೊತೆ, ಅಡ್ಡ ಹಲಗೆ 8 ಜೊತೆ, ಹಗ್ಗ ಹಿರಿಯ 19 ಜೊತೆ, ನೇಗಿಲು ಹಿರಿಯ 27 ಜೊತೆ, ಹಗ್ಗ ಕಿರಿಯ  22 ಜೊತೆ, ನೇಗಿಲು ಕಿರಿಯ  60 ಜೊತೆ ಕೋಣಗಳು ಭಾಗವಹಿಸಿದ್ದವು. ಇದೀಗ  “ಜಯ – ವಿಜಯ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪ್ರಕಟವಾಗಿದೆ.

ಕನೆ ಹಲಗೆ:

( ನೀರು ನೋಡಿ ಬಹುಮಾನ)

ಪ್ರಥಮ: ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ

ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ

 

ದ್ವಿತೀಯ: ನಿಡ್ಡೋಡಿ ಕಾನ ರಾಮ ಸುವರ್ಣ

ಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡ್ಡಾಪಿ ಸುರೇಶ್ ನಾಯ್ಕ್

ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ “ಎ” (11.14)

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

 

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ “ಬಿ” (11.68)

ಹಲಗೆ ಮುಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ

ಇದನ್ನೂ ಓದಿ: ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳಕ್ಕೆ ಚಾಲನೆ

ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ” (10.91)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಬಿ” (11.52)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ಹಗ್ಗ ಕಿರಿಯ:

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (11.14)

ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

 

ದ್ವಿತೀಯ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (11.20)

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ನೇಗಿಲು ಹಿರಿಯ:

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (10.94)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ(11.31)

ಓಡಿಸಿದವರು: ಆದಿ ಉಡುಪಿ ಜಿತೇಶ್

ನೇಗಿಲು ಕಿರಿಯ:

ಪ್ರಥಮ: ಮುನಿಯಾಲು ಉದಯ ಕುಮಾರ್ ಶೆಟ್ಟಿ “ಎ” (11.29)

ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

 

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಬಿ” (11.57)

ಓಡಿಸಿದವರು: ಸೂರಾಲ್ ಪ್ರದೀಪ್

 

 

Continue Reading
Advertisement

Trending

Copyright © 2025 Namma Kudla News

You cannot copy content of this page