Connect with us

LATEST NEWS

ಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ..!

Published

on

ಶಿವಮೊಗ್ಗ: ಮದುವೆಗೆ 13 ದಿನಗಳು ಬಾಕಿ ಇರುವಾಗ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ತೀರ್ಥಹಳ್ಳಿಯ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ.


ಎಂಕಾಂ ಪದವಿ ಪಡೆದಿದ್ದು, ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚೈತ್ರ (26) ಮೃತ ದುರ್ದೈವಿ. ಚೈತ್ರಗೆ ಫೆ.4ರಂದು ವಿವಾಹ ನಿಶ್ಚಯವಾಗಿತ್ತು. ಇನ್ನು ಮದುವೆಗೆ 2 ವಾರಗಳು ಬಾಕಿ ಇರುವ ಹಿನ್ನಲೆಯಲ್ಲಿ ಪೋಷಕರು ಮದುವೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದರು. ಆದರೆ ಇದೀಗ ಹಸೆಮಣೆ ಏರಬೇಕಿದ್ದ ಯುವತಿ ಮಸಣಕ್ಕೆ ಸೇರಿದ್ದಾಳೆ. ಈಕೆ ನನಗೆ ಆರೋಗ್ಯ ಸಮಸ್ಯೆ ಇದೆ ಮದುವೆ ಬೇಡವೆಂದು ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ. ಈಕೆಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

LATEST NEWS

ತೆಂಗು ಬೆಳೆದಾರರಿಗೆ ಬಂಪರ್ ಆಫರ್; ಕೊಬ್ಬರಿ ಕ್ವಿಂಟಾಲ್‌ ದರ ಕೇಳಿದ್ರೆ ನೀವೆ ಶಾಕ್ ಆಗ್ತೀರ .!

Published

on

ಹಲವಾರು ಕಾರಣದಿಂದ ಕೆಲಸಮಯಗಳಿಂದ ತೆಂಗಿನ ಬೆಳೆ ಇಳುವರಿಯಲ್ಲಿ ಕುಂಠಿತವಾಗಿತ್ತು. ಆದರೆ ಮತ್ತೆ ಮಾರುಕಟ್ಟೆಯಲ್ಲಿ ತೆಂಗಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ತೆಂಗಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಸರ ಏರಿಕೆಯಾಗಿದ್ದು. ಹಾಗಾದರೆ ಕೊಬ್ಬರಿ ಕ್ವಿಂಟಾಲ್‌ಗೆ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

2014-15ರಲ್ಲಿ 19 ಸಾವಿರ ಗರಿಷ್ಠ ಬೆಲೆ ಪಡೆದಿದ್ದು ಈವರೆಗೆ ದಾಖಲೆಯಾಗಿತ್ತು. ಆದ್ರೆ ಈಗ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ 19,051 ರೂ.ಗೆ ಮಾರಾಟವಾಗುವ ಮೂಲಕ ಈ ಹಿಂದಿನ ದಾಖಲೆ ಮುರಿದು ಮತ್ತೆ ನೂತನ ದಾಖಲೆ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ದಿನದಿಂದ ದಿನಕ್ಕೆ ನಿಧಾನವಾಗಿ ಕೊಬ್ಬರಿ ಬೆಲೆ ಏರುತ್ತಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.

ಅಷ್ಟೇ ಅಲ್ಲದೆ ತೆಂಗಿನಕಾಯಿಯೂ ಸಹ ಒಂದಕ್ಕೆ 50 ರೂ.ಗೆ ಮಾರಾಟವಾಗುತ್ತಿದ್ದು, ಯುಗಾದಿ ಹಬ್ಬಕ್ಕೆ 60 ರೂ. ದಾಟಿದರೂ ಅಚ್ಚರಿಯಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಆವಕವಿಲ್ಲದಿರುವುದರಿಂದ ಬೆಳೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Continue Reading

DAKSHINA KANNADA

ಅಕ್ರಮ ಗೋ ಸಾಗಾಟ ಗೋಹತ್ಯೆ ನಿಲ್ಲಿಸಲು ಒತ್ತಾಯ; ಪೊಲೀಸ್ ವೈಫಲ್ಯದ ಬಗ್ಗೆ ವಿಶ್ವ ಹಿಂದೂ ಪರಿಷತ್ ಖಂಡನೆ

Published

on

ಮಂಗಳೂರು : ಜಿಲ್ಲೆಯಾದ್ಯಂತ ಕಾನೂನು ಕಾಯ್ದೆಯನ್ನು ಮೀರಿ ನಿತ್ಯ ನೂರಾರು ಗೋವುಗಳ ಅಕ್ರಮ ಸಾಗಾಟ ಮತ್ತು ವಧೆ ಮಾಡಲಾಗುತ್ತಿದೆ. ಗೋ ಮಾಂಸ ಮಾಫಿಯಾದವರು ಎಗ್ಗಿಲ್ಲದೆ ನಡೆಸುತ್ತಿರುವ ಈ ದಂಧೆಯನ್ನು ಮಟ್ಟ ಹಾಕಲು ಪೊಲೀಸರು ವಿಫಲರಾಗಿದ್ದಾರೆ. ತಕ್ಷಣ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಅಂತ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಮಂಗಳೂರಿನ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಹೆಚ್‌ಪಿ ಪ್ರಮುಖರು ಈ ವಿಚಾರ ತಿಳಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ ನಾಲ್ಕು ಕಡೆಯಲ್ಲಿ ಬಜರಂಗದಳದ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸರು ಒಂದು ಟನ್ ಗೂ ಅಧಿಕ ಗೋ ಮಾಂಸ ಜಪ್ತಿ ಮಾಡಿದ್ದಾರೆ. ನಗರದ ಹತ್ತಾರು ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿದ್ದು ಅಕ್ರಮವಾಗಿ ಗೋವಧೆ ಮಾಡಲಾಗುತ್ತಿದೆ. ಆದ್ರೆ ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋ ಮಾಂಸ ಜಪ್ತಿಯ ವಿಚಾರದಲ್ಲೂ ವಿಶ್ವ ಹಿಂದೂ ಪರಿಷತ್ ಕೆಲವೊಂದು ಬೇಡಿಕೆ ಇಟ್ಟಿದ್ದು, ಅಕ್ರಮ ಗೋ ಮಾಂಸ ಕದ್ದ ಗೋವಿನಿಂದ ಆಗಿದ್ದ ಎಂಬ ಬಗ್ಗೆ ತನಿಖೆ ನಡೆಸಬೇಕು. ಮಾಂಸದ ಅಂಗಡಿಗೆ ಲೈಸೆನ್ಸ್ ಪಡೆದು ಗೋ ಮಾಂಸ ಮಾರಾಟ ಮಾಡುವುದಕ್ಕೂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಗೋ ರಕ್ಷಾ ಪ್ರಮುಖ್ ಸುನಿಲ್ ಹಾಗೂ ಜಿಲ್ಲಾಧ್ಯಕ್ಷ ಎಚ್ ಕೆ ಪುರುಷೋತ್ತಮ ಸಹಿತ ಹಲವು ವಿಹೆಚ್‌ಪಿ ಬಜರಂಗದಳ ಪ್ರಮುಖರು ಈ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಮಂಗಳೂರು : ಇಂದಿನಿಂದ ಭಟ್ರಕೋಡಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಆರಂಭ

Published

on

ಮಂಗಳೂರು : ನಗರದ ನೀರುಮಾರ್ಗ ಸಮೀಪದ ಪಡು ಭಟ್ರಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದಿನಿಂದ (ಮಾ.27) ಆರಂಭಗೊಂಡು ಮಾ.30ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ ವೈ ಭರತ್ ಶೆಟ್ಟಿ ತಿಳಿಸಿದ್ದಾರೆ.

ನಿನ್ನೆ (ಮಾ.26) ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಭರತ್ ಶೆಟ್ಟಿ, “ಮಾ.27ರಂದು ಬೆಳಿಗ್ಗೆ 8ರಿಂದ ಆಚಾರ್ಯಾದಿ ಋತ್ವಿಜರ ಆಗಮನವಾಗಿ, ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, 11ರಿಂದ ತೋರಣ ಮುಹೂರ್ತ, ಉಗ್ರಾಣಮುಹೂರ್ತ ನಡೆಯಲಿದೆ. ಪ್ರತಿನಿತ್ಯ ಅನ್ನಸಂತರ್ಪಣೆ, ಧಾರ್ಮಿಕ , ವೈದಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದ ಸಾಮಾಜಿಕ ಮುಖಂಡರು, ವಿವಿಧ ಮಠಗಳ ಶ್ರೀಗಳು, ರಾಜಕೀಯ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಆಯೋಜನೆ ಮಾಡಲಾಗಿದೆ” ಎಂದು ವಿವರಿಸಿದರು.

ಇಂದು (ಮಾ.27) ಸಂಜೆ 3 ಗಂಟೆಗೆ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ಮಾರ್ಚ್‌ 30ರಂದು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page