Connect with us

LATEST NEWS

ಐಪಿಎಲ್‌ನಿಂದ ಬ್ಯಾನ್‌ ಆದ ಹ್ಯಾರಿ ಬ್ರೂಕ್‌ಗೆ ಒಲಿಯಿತು ಸನ್‌ರೈಸರ್ಸ್‌ನಿಂದ ಅದೃಷ್ಟ!?

Published

on

ಐಪಿಎಲ್‌ ಗವರ್ನರ್‌ ಕೌನ್ಸಿಲ್‌ ಇಂಗ್ಲೆಂಡ್‌ ತಂಡದ ನಾಯಕ ಹ್ಯಾರಿ ಬ್ರೂಕ್‌ ವಿರುದ್ದ 2 ವರ್ಷಗಳ ನಿಷೇಧ ಹೇರಿದ್ದು, ಇದರ ಪರಿಣಾಮವಾಗಿ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಅವರ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಬ್ರೂಕ್‌ಗೆ ಸನ್‌ರೈಸರ್ಸ್‌ನಿಂದ ಅದೃಷ್ಟ ಒಲಿದಿದೆ.

ಹೌದು, ಬಹುನಿರೀಕ್ಷಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಿನಿ ಹರಾಜು ಡಿಸೆಂಬರ್‌ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಈಗಾಗಲೇ ಬಿಸಿಸಿಐ ಹರಾಜಿನಲ್ಲಿ ಭಾಗವಹಿಸುವ 359 ಆಟಗಾರರ ಪಟ್ಟಿಯನ್ನು ಫೈನಲ್‌ ಮಾಡಿದೆ. ಆದರೆ ಇಂಗ್ಲೆಂಡ್‌ ಸ್ಟಾರ್‌ ಆಟಗಾರ ಹ್ಯಾರಿ ಬ್ರೂಕ್‌ ಅವರನ್ನ ಹರಾಜಿನಿಂದ ಹೊರಗಿಡಲಾಗಿದೆ.

ಇದಕ್ಕೆ ಕಾರಣ ಐಪಿಎಲ್‌ನ ಹೊಸ ನಿಯಮದನ್ವಯ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರನ್ನು ಟೂರ್ನಿಯಿಂದ ಎರಡ್ ವರ್ಷ ಬ್ಯಾನ್‌ ಮಾಡಲಾಗುತ್ತದೆ. ಈ ನಿಯಮದನ್ವಯ ಹ್ಯಾರಿ ಬ್ರೂಕ್‌ ಅವರನ್ನು ಐಪಿಎಲ್‌ನಿಂದ ನಿಷೇಧಿಸಲಾಗಿದೆ.

ಇದನ್ನೂ ಓದಿ: ಟೀಮ್‌ ಇಂಡಿಯಾ ಆಟಗಾರರ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿದ ರಿವಾಬಾ ಜಡೇಜಾ!

ಸನ್‌ರೈಸರ್ಸ್‌ನಿಂದ ಒಲಿಯಿತು ಬ್ರೂಕ್‌ಗೆ ಅದೃಷ್ಟ!
ಐಪಿಎಲ್‌ಗೂ ಮುನ್ನವೇ ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ ಬಿಗ್‌ ಡೀಲ್‌ ಕುದುರಿಸಿಕೊಂಡಿದೆ. ಅದುವೇ ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ಆಯೋಜಿಸುವ ದಿ ಹಂಡ್ರೆಡ್‌ ಲೀಗ್‌ನಲ್ಲಿ ಎಂಬುದು ವಿಶೇಷ. ಇಂಗ್ಲೆಂಡ್‌ನ ದಿ ಹಂಡ್ರೆಡ್‌ ಲೀಗ್‌ಗೆ ಕಾಲಿಟ್ಟಿದೆ. ನಾರ್ದರ್ನ್‌ ಸೂಪರ್‌ಚಾರ್ಜರ್ಸ್‌ ಫ್ರಾಂಚೈಸಿಯನ್ನು ಖರೀದಿಸಿರುವ ಕಾವ್ಯ ಮಾರನ್‌ ಅವರು ತಮ್ಮ ಹೊಸ ತಂಡಕ್ಕೆ ಸನ್‌ರೈಸರ್ಸ್ ಲೀಡ್ಸ್‌ ಎಂದು ಹೆಸರಿಟ್ಟಿದ್ದಾರೆ.

ಸನ್‌ರೈಸರ್ಸ್‌ ಲೀಡ್ಸ್‌ ತಂಡವು ಇಂಗ್ಲೆಂಡ್‌ನ ಸ್ಟಾರ್‌ ಆಟಗಾರ ಹ್ಯಾರಿ ಬ್ರೂಕ್‌ ಅವರನ್ನು ರಿಟೈನ್‌ ಮಾಡಿಕೊಂಡಿದೆ. ಅಂದರೆ ಮುಂಬರುವ ಟೂರ್ನಿಗೂ ಮುನ್ನ ಬ್ರೂಕ್‌ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದು ಕೂಡ ಬರೋಬ್ಬರಿ 5.65 ಕೋಟಿ ರೂ.ಗೆ ಎಂಬುದು ವಿಶೇಷ. ಒಟ್ಟಿನಲ್ಲಿ ಹ್ಯಾರಿ ಬ್ರೂಕ್‌ಗೆ ಐಪಿಎಲ್‌ನಲ್ಲಿ ಅದೃಷ್ಟ ಕೈಕೊಟ್ಟರು, ದಿ ಹಂಡ್ರೆಡ್‌ ಲೀಗ್‌ನಲ್ಲಿ ಲಕ್‌ ಬದಲಾಗಿದೆ.

LATEST NEWS

ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಯುವಕ ಸಾ*ವು

Published

on

ಮಂಗಳೂರು/ಬೀದರ್ : ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿ*ದ್ದು ಯುವಕ ಮೃ*ತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ.

19 ವರ್ಷದ ಶಶಿಕುಮಾ‌ರ್ ಶಿವಾನಂದ ಮೃ*ತ ಯುವಕ. ಶಶಿ ಕುಮಾರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂ*ಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿ*ದ್ದಿದ್ದಾನೆ.

ಇದನ್ನೂ ಓದಿ : ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಪರಿಣಾಮ ಸ್ಥಳದಲ್ಲೇ ಕೊನೆ*ಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

LATEST NEWS

ವಾಷಿಂಗ್ ಮಷಿನ್ ದಿಢೀರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

Published

on

ಹೈದರಾಬಾದ್: ಮನೆಯೊಂದರಲ್ಲಿ ವಾಷಿಂಗ್‌ ಮಷಿನ್‌ ಸ್ಫೋಟಗೋಡಿರುವ ಘಟನೆ ಹೈದಾರಾಬಾದಿನ ಕೃಷ್ಣ ನಗರ ಪ್ರದೇಶದಲ್ಲಿರುವ ಜೈನ ದೇವಾಲಯದ ಬಳಿ ಶನಿವಾರ(ಜ.17) ನಡೆದಿದೆ.


ಸ್ಯಾಮ್‌ಸಂಗ್ ವಾಷಿಂಗ್ ಮೆಷಿನ್ ಸ್ಫೋಟಗೊಂಡಿದ್ದು, ಘಟನೆಯ ಸಮಯದಲ್ಲಿ ಅದರ ಹತ್ತಿರ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ ಮತ್ತು ಗೋಡೆಗಳಿಗೆ ಹಾನಿಯಾಗಿದೆ. ಆದರೆ ಶಬ್ದ ಕೇಳಿ ಎಲ್ಲರೂ ಬಾಂಬ್ ಸ್ಫೋಟವಾದಂತೆ ಭಯಪಟ್ಟು ಮನೆಯಿಂದ ಓಡಿ ಬಂದಿದ್ದರು.

ಇದನ್ನೂ ಓದಿ: ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

ಈ ಕುರಿತು ಮಾಹಿತಿ ತಿಳಿದ ಬಳಿಕ ಮಧುರಾನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

Published

on

ಮೂಡುಬಿದಿರೆ : ಸ್ವಂತ ಉದ್ಯಮ ಸ್ಥಾಪಿಸುವ ಕನಸು ಹೊತ್ತು ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವ ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೂಡುಬಿದಿರೆಯ ರಿಂಗ್‌ರೋಡ್ ಬಳಿ ನಡೆದಿದೆ.  ಮೂಡುಬಿದಿರೆ ರಿಂಗ್ ರೋಡ್‌ನ ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ಬಳಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಮೃ*ತಪಟ್ಟ ಯುವಕ.

ಹಲವು ವರ್ಷಗಳ ಕಾಲ ದುಬೈನಲ್ಲಿ ಉದ್ಯೋಗದಲ್ಲಿದ್ದ ದೀಕ್ಷಿತ್, ಒಂದೂವರೆ ವರ್ಷದ ಹಿಂದೆ ತವರಿಗೆ ಮರಳಿದ್ದರು. ಮೂಡುಬಿದಿರೆಯ ರಿಂಗ್‌ರೋಡ್ ಬಳಿ ಹೋಟೆಲ್ ಉದ್ಯಮ ಪ್ರಾರಂಭಿಸಬೇಕೆಂಬ ಹಂಬಲ ಹೊಂದಿದ್ದ ಅವರು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಶನಿವಾರ(ಜ.17) ಮಧ್ಯಾಹ್ನ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ, ಮನೆಯ ಕೋಣೆಯ ಕಿಟಕಿಗೆ ನೇ*ಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ದೀಕ್ಷಿತ್ ಅವರ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಉತ್ತಮ ಭವಿಷ್ಯದ ಕನಸು ಕಂಡಿದ್ದ ಯುವಕನ ಆ*ತ್ಮಹ*ತ್ಯೆಯು ಕುಟುಂಬಸ್ಥರಲ್ಲಿ ಮತ್ತು ಸ್ನೇಹಿತರಲ್ಲಿ ಭಾರೀ ಶೋಕವನ್ನುಂಟು ಮಾಡಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page