Connect with us

DAKSHINA KANNADA

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಮೂಡುಬಿದಿರೆಯ ಬಾಲೆ ತಾನಿಯಾ

Published

on

ಮೂಡುಬಿದಿರೆ: ಕ್ಯಾನ್ಸರ್ ಪೀಡಿತರಿಗಾಗಿ ಪುಟ್ಟ ಬಾಲೆಯೋರ್ವಳು ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ಕೇಶ ದಾನ ಮಾಡುವ ಮೂಲಕ ಮಾನವೀಯತೆ ಮರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ಸಮೀಪದ ಪಡುಮಾರ್ನಾಡಿನಲ್ಲಿ ನಡೆದಿದೆ.

ತಾನಿಯಾ (9) ತನ್ನ 16 ಇಂಚಿನಷ್ಟು ಉದ್ದದ ಕೂದಲನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ದಾನ ಮಾಡಿ ಇತರರಿಗೆ ಮಾದರಿಯಾದ ಬಾಲಕಿಯಾಗಿದ್ದಾಳೆ.

ಪಡುಮಾರ್ನಾಡಿನ ಸೇವಾ ಮಾಣಿಕ್ಯವೆಂದು ಬಿರುದು ಪಡೆದಿರುವ ಲೋಹಿತ್ ಎಸ್-ಟೆಸ್ಲಿನಾ ದಂಪತಿಯ ಪುತ್ರಿಯಾದ ತಾನಿಯ ಎಸ್ .ಹ್ಯುಮಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಕ್ಯಾನ್ಸರ್ ಪೀಡಿತರಿಗಾಗಿ ಹಮ್ಮಿಕೊಂಡಿರುವ ಕೇಶ ದಾನ ಮಹಾಯೋಜನೆಗೆ ತನ್ನ ಕೂದಲನ್ನು ದಾನ ಮಾಡಿದ್ದಾಳೆ.

ಇತ್ತೀಚೆಗಷ್ಟೇ ತಾನಿಯಾ ಚಿಕ್ಕಮ್ಮ ಕ್ಯಾರಲ್ ಅವರು ಕ್ಯಾನ್ಸರ್ ಪೀತರಿಗೆ ತನ್ನ ಕೂದಲನ್ನು ದಾನ ಮಾಡಿದ್ದು, ಈ ಬಗ್ಗೆ ತಾನಿಯಾ ಆಕೆಯ ಬಳಿ ವಿಚಾರಿಸಿದ್ದಾಳೆ.

ಆಗ ಆಕೆಯ ಚಿಕ್ಕಮ್ಮ ಕ್ಯಾನ್ಸರ್ ಪೀಡಿತರ ಬಗ್ಗೆ ತಾನಿಯಾಗೆ ಮಾಹಿತಿ ನೀಡಿದ್ದಾರೆ. ಬಳಿಕ ತಾನೂ ತನ್ನ ಕೂದಲನ್ನು ದಾನ ಮಾಡುವುದಾಗಿ ತಿಳಿಸಿದ್ದು ,ಮಗಳ ಮಾನವೀಯ ಕಾಳಜಿಗೆ ಪೋಷಕರು ಸಮ್ಮತಿ ಸೂಚಿಸಿದ ಬಳಿಕ ತಾನಿಯಾ ಕೂದಲು ದಾನ ಮಾಡಿದ್ದಾಳೆ…

BELTHANGADY

ಇಂದಿನಿಂದ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

 

ಜಮಲಾಬಾದ್ ಗಡ (ಗಡಾಯಿಕಲ್ಲು), ಬಂಡಾಜೆ, ಬೊಳ್ಳೆ, ದಿಡುಪೆ ಜಲಪಾತ ಪ್ರವಾಸಿ ತಾಣಗಳಿಗೆ ಜೂ.16ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಉಡುಪಿ: ಮಲಗಿದ್ದಾತನ ಮೇಲೆ ಕತ್ತಿಯಿಂದ ಹ*ಲ್ಲೆ ನಡೆಸಿದ ದುಷ್ಕರ್ಮಿ

Continue Reading

DAKSHINA KANNADA

ಸುರತ್ಕಲ್-ನಂತೂರು ಜಂಕ್ಷನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು ಗಂಟೆಗೆ 50 ಕಿಲೋ ಮೀಟರ್‌ ಗೆ ನಿಗದಿಪಡಿಸಲಾಗಿದೆ. ಈ ಮಿತಿ ಸಪ್ಟೆಂಬರ್‌ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಕೆಟ್ಟು ಹೋಗಿವೆ. ಹಾಗಾಗಿ ಅಂತಹ ಭಾಗಗಳು ಅತಿ ವೇಗದ ಚಾಲನೆಗೆ ಸುರಕ್ಷಿತವಾಗಿಲ್ಲ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಾಧ್ಯವಾದಷ್ಟು ಎಲ್ಲೆಲ್ಲಿ ಸರ್ವೀಸ್‌ ರಸ್ತೆಗಳಿವೆಯೋ ಅಲ್ಲಿ ಅದನ್ನೇ ಬಳಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

READ IN ENGLISH : https://www.nammakudlaenglish.com/speed-limit-imposed-on-surathkal-nanthur-junction-national-highway/

ಇದನ್ನೂ ಓದಿ: ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

ಸುರತ್ಕಲ್‌- ನಂತೂರು ನಡುವಣ ಹೆದ್ದಾರಿ ಕೆಟ್ಟು ಹೋಗಿದ್ದು, ಘನ ವಾಹನ, ಲಘುವಾಹನ, ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಎಲ್ಲಾ ವಾಹನಗಳು ಈ ಹೆದ್ದಾರಿಯನ್ನೇ ಬಳಸುತ್ತಿವೆ. ಕೆಲವೊಮ್ಮೆ ಹೊಂಡ ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ.

ಈ ಕಾರಣಕ್ಕಾಗಿ ಸರ್ವೀಸ್‌ ರಸ್ತೆ ಇರುವ ಪಣಂಬೂರು, ಸುರತ್ಕಲ್‌, ಬೈಕಂಪಾಡಿ, ಕೂಳೂರು ಭಾಗಗಳಲ್ಲಿ ಈ ಸರ್ವೀಸ್‌ ರಸ್ತೆಯನ್ನೇ ಬಳಸಿ ದ್ವಿಚಕ್ರ ವಾಹನಗಳು ಸಂಚರಿಸುವುದು ಸೂಕ್ತ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

DAKSHINA KANNADA

ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

Published

on

ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಅಪಾರ ಹಾನಿಗೂ ಕಾರಣವಾಗಿದೆ. ನಗರದ ಕದ್ರಿ ಕೈಬಟ್ಟಲ್ ಎಂಬಲ್ಲಿ ಮನೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ: ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

ಉಷಾ ಅಶೋಕ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತಕ್ಕೊಳಗಾಗಿದೆ. ಮನೆಯ ಹಲವು ಸಾಮಾಗ್ರಿಗೆ ಹಾನಿ ಉಂಟಾಗಿದೆ.

ಮನೆಯಲ್ಲಿ ಜನರಿದ್ದ ವೇಳೆ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತವಾಗಿದ್ದರೂ ಮನೆ ಮಂದಿ ಪ್ರಾಣಾಪಾಯದಿಂದ ಪಾರು ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page