Connect with us

LATEST NEWS

ಗುಜರಾತ್ : ಬಟ್ಟೆ ಅಂಗಡಿ ಗೋದಾಮಿಗೆ ಬೆಂಕಿ: 9 ಮಂದಿ ಸಜೀವ ದಹನ

Published

on

ಗುಜರಾತ್ : ಬಟ್ಟೆ ಅಂಗಡಿ ಗೋದಾಮಿಗೆ ಬೆಂಕಿ: 9 ಮಂದಿ ಸಜೀವ ದಹನ

ಗುಜರಾತ್ :  ಬಟ್ಟೆ ಅಂಗಡಿಗೆ ಗೋದಾಮಿನಲ್ಲಿ ಸಂಭಿಸಿದ ಬೆಂಕಿ ಆಕಸ್ಮಿಕದಿಂದ 9 ಮಂದಿ ಸಜೀವದಹನಗೊಂಡ ಘಟನೆ ಗುಜರಾತ್ ವಾಣಿಜ್ಯ ನಗರಿ ಅಹಮದಾಬಾದ್ ನಲ್ಲಿ ಸಂಭವಿಸಿದೆ. 

ಪಿರಾನಾ ಪ್ರದೇಶದಲ್ಲಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಆವಶೇಷಗಳಡಿ ಇನ್ನೂ 5 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ಗೋಡಾನ್ ಗೆ ಹೊಂದಿಕೊಂಡಿದ್ದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಮೊದಲ ಬಾರಿ ಬೆಂಕಿ ಕಾಣಿಸಿಕೊಂಡಿದ್ದು, ಹೊರ ಹೋಗುವ ಬಾಗಿಲಿಗೆ ಅಂಟಿಕೊಂಡಿತು.

ಇದರಿಂದ ಒಳಗೆ ಸಿಲುಕಿದರು ಹೊರಗೆ ಬರಲು ಆಗಲಿಲ್ಲ ಎಂದು ಹೇಳಲಾಗಿದ್ದು, ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

FILM

ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್​ ಇ*ನ್ನಿಲ್ಲ

Published

on

ಮಂಗಳೂರು/ಬೆಂಗಳೂರು : ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿನಯದ ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಮಿಂಚಿದ್ದ ಗಿರಿ ದಿನೇಶ್ (45) ಹೃದ*ಯಾಘಾತದಿಂದ ನಿ*ಧನರಾಗಿದ್ದಾರೆ.  ಗಿರಿ ದಿನೇಶ್  ಶುಕ್ರವಾರ(ಫೆ.07) ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ​ ಅವರು ಕು*ಸಿದು ಬಿ*ದ್ದಿದ್ದರು. ತಕ್ಷಣ  ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ,  ದಾರಿ ಮಧ್ಯೆಯೇ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.

ಹಿರಿಯ ಹಾಸ್ಯ ನಟ ದಿನೇಶ್ ಅವರ ಪುತ್ರ ಗಿರಿ ದಿನೇಶ್. ಮದುವೆಯಾಗದೆ ಉಳಿದುಕೊಂಡಿದ್ದ ಅವರು ಅಣ್ಣನ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.  ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸೇರಿ ಕೆಲವು ಚಿತ್ರಗಳಲ್ಲಿ ಗಿರಿ ದಿನೇಶ್ ನಟಿಸಿದ್ದರು.

ಇದನ್ನೂ ಓದಿ : ಮದುವೆಯ ಬಗ್ಗೆ ಕ್ಲೂ ನೀಡಿದ ಬಿಗ್ ಬಾಸ್ ಐಶ್ವರ್ಯ

ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಖ್ಯಾತಿ ತಂದು ಕೊಟ್ಟಿತ್ತು. ದಿನಕರ್​ ನಿರ್ದೇಶನದ ನವಗ್ರಹ ಚಿತ್ರವನ್ನು ಮೀನಾ ತೂಗುದೀಪ ನಿರ್ಮಾಣ ಮಾಡಿದ್ದರು. ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು. ಕಳೆದ ವರ್ಷ ನವೆಂಬರ್​ 8ರಂದು ಮರುಬಿಡುಗಡೆಯಾಗಿತ್ತು. ಆದರೆ, ಕ್ಯಾಮೆರಾದಿಂದ ದೂರ ಉಳಿದಿದ್ದ ಗಿರಿ ದಿನೇಶ್ ರೀರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

Continue Reading

LATEST NEWS

ಕಣ್ಮರೆಯಾಗಿದ್ದ 208B ಗ್ರ್ಯಾಂಡ್ ಕ್ಯಾರಾವಾನ್ ವಿಮಾನದ ಅವಶೇಷಗಳು ಪತ್ತೆ !

Published

on

ಮಂಗಳೂರು/ವಾಷಿಂಗ್ಟನ್ : ಗುರುವಾರ ಸಂಜೆ ಅಲಸ್ಕಾ ನಗರದ ಯುನಾಕ್ಲೀಟ್‌ನಿಂದ ಹೊರಟ್ಟಿದ್ದ ಬೇರಿಂಗ್ ಏರ್ ಫ್ಲೈಟ್, ಟೇಕ್ ಆಫ್ ಆದ 39 ನಿಮಿಷಗಳ ನಂತರ ರಾಡರ್ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿರುವುದು ವರದಿಯಾಗಿತ್ತು.

ಆದರೆ, ಅಲಾಸ್ಕಾದಿಂದ ನಾಪತ್ತೆಯಾಗಿದ್ದ ಬೇರಿಂಗ್ ಏರ್ ಪ್ರಯಾಣಿಕ ವಿಮಾನ ಮಂಜುಗಡ್ಡೆಯ ಮೇಲೆ ಪತನಗೊಂಡಿದ್ದು ವಿಮಾನದಲ್ಲಿದ್ದ ಎಲ್ಲಾ ಹತ್ತು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಕುಂಭಮೇಳದಲ್ಲಿ ಕೇಸರಿ ಅಂಗಿ ತೊಟ್ಟು ಮಿಂಚಿದ ಮಿಸ್ ಇಂಡಿಯಾ; ಯಾರು ಗೊತ್ತಾ ಆ ಬ್ಯೂಟಿ ?

208B ಗ್ರ್ಯಾಂಡ್ ಕ್ಯಾರಾವಾನ್ ವಿಮಾನದಲ್ಲಿ ಪೈಲಟ್  ಸೇರಿದಂತೆ ಹತ್ತು ಜನರು ಪ್ರಯಾಣಿಸುತ್ತಿದ್ದರು. ವಿಮಾನ ಕಣ್ಮರೆಯಾದ ಹಿನ್ನೆಲೆಯಲ್ಲಿ ಯುಎಸ್. ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಿಸಿತ್ತು.

ಇದಾದ ಬಳಿಕ ಶುಕ್ರವಾರ ಬೆಳಿಗ್ಗೆ ರಕ್ಷಣಾ ತಂಡವು ಸಮುದ್ರದ ಬಳಿಯ ಮಂಜುಗಡ್ಡೆಯ ಮೇಲೆ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್‌ ವಕ್ತಾರ ಮೈಕ್ ಸಲೆರ್ನೊ ಮಾಹಿತಿ ನೀಡಿದ್ದಾರೆ.

 

 

Continue Reading

DAKSHINA KANNADA

ಮಂಗಳೂರು: ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್‌ಗೆ “ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್” ಪ್ರಶಸ್ತಿ

Published

on

ಮಂಗಳೂರು: ಭಾರತದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಗುರುತಿಸುವ *ಫುಡ್ “ಕನೋಸರ್ಸ್ ಇಂಡಿಯಾ ಅವಾರ್ಡ್ಸ್ (FCIA)* ನ ಏಳನೇ ಆವೃತ್ತಿಯಲ್ಲಿ ಮಂಗಳೂರಿನ ಮಾಸ್ಟರ್ ಚೆಫ್ *ಮಹಮ್ಮದ್ ಆಶಿಕ್* ಅವರಿಗೆ *’ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್’* ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ *ತಾಜ್ ಯಶವಂತಪುರ ಹೋಟೆಲ್* ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಅತ್ಯುತ್ತಮ ಶೆಫ್ಗಳು, ರೆಸ್ಟೋರೆಂಟ್ಗಳು ಮತ್ತು ಫುಡ್ ಬ್ರಾಂಡ್ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಪ್ರತಿಭೆ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಈ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಸಿದ್ದಾರೆ.

ಪ್ರಶಸ್ತಿ ಪಡೆದ ನಂತರ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರು ಮಾತನಾಡುತ್ತಾ, “ಈ ಪ್ರಶಸ್ತಿಯನ್ನು ಪ್ರಮುಖವಾಗಿ ಆಹಾರದ ಗುಣಮಟ್ಟ, ಸೃಜನಾತ್ಮಕತೆ ಮತ್ತು ಅನುಭವಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಬಾರಿ ಕನ್ನಡನಾಡಿನ ಹಲವಾರು ರೆಸ್ಟೋರೆಂಟ್ಗಳು ಮತ್ತು ಶೆಫ್ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನನಗೆ ಈ ಪ್ರಶಸ್ತಿ ಲಭಿಸಿದ್ದು ಗೌರವದ ಸಂಗತಿ. ಇದು ನನ್ನ ಕುಟುಂಬ, ಸ್ನೇಹಿತರು ಮತ್ತು ಜಿಲ್ಲೆಯ ಜನರ ಸಹಕಾರದ ಫಲವಾಗಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ” ಎಂದರು.

ಈ ಕಾರ್ಯಕ್ರಮದ ಮೂಲಕ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿ ಮತ್ತು ಪ್ರತಿಭಾವಂತ ಶೆಫ್ಗಳ ಸಾಧನೆಗಳನ್ನು ಗುರುತಿಸಲಾಯಿತು. ಮಂಗಳೂರಿನ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರ ಈ ಸಾಧನೆ ಜಿಲ್ಲೆಯ ಆಹಾರ ಕ್ಷೇತ್ರದ ಹೆಮ್ಮೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page