Connect with us

LATEST NEWS

ಮಹಾಕುಂಭ ಮೇಳಕ್ಕೆ ನಾಗಾಸಾಧುಗಳ ಗ್ರ್ಯಾಂಡ್ ಎಂಟ್ರಿ..!

Published

on

ಮಂಗಳೂರು/ಪ್ರಯಾಗ್ ರಾಜ್  : 12 ವರ್ಷಗಳಿಗೊಂದು ಭಾರಿ ನಡೆಯುವ ಮಹಾಕುಂಭ ಮೇಳ ಜನವರಿ 14 ರ ಮಕರ ಸಂಕ್ರಾಂತಿಯಂದು ಆರಂಭವಾಗಲಿದೆ. ಹಿಂದೂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪವಿತ್ರ ಹಬ್ಬವಾಗಿ ಈ ಕುಂಭಮೇಳದಲ್ಲಿ ಜನರು ಭಾಗವಹಿಸುತ್ತಾರೆ. ಸಾಮಾನ್ಯ ಜನರಿಂದ ಹಿಡಿದು ಹಠಯೋಗ ಸಾಧನೆ ಮಾಡಿರುವ ನಾಗಾಸಾಧುಗಳು ಇದರಲ್ಲಿ ಭಾಗವಹಿಸಿ ಗಂಗಾನದಿಯಲ್ಲಿ ಪುಣ್ಯ ಸ್ನಾನ ಮಾಡುವುದೇ ಇದರ ವಿಶೇಷ.

ಜನವರಿ 14 ರಿಂದ ಫೆಬ್ರವರಿ 26 ರ ತನಕ ಗಂಗಾಸ್ನಾನ:

ಕುಂಭಮೇಳದ ಅಂಗವಾಗಿ ಜನವರಿ 14 ರಂದು ಮೊದಲ ಶಾಹಿಸ್ನಾನ ನೆರವೇರಲಿದ್ದು, ಎರಡನೇ ಶಾಹಿಸ್ನಾನ ಜನವರಿ 29ರ ಮೌನಿ ಅಮಾವಾಸ್ಯೆಯಂದು ನಡೆಯಲಿದೆ. ಮೂರನೇ ಶಾಹಿ ಸ್ನಾನ ಫೆಬ್ರವರಿ 2 ರಂದು ವಸಂತ ಪಂಚಮಿ ಹಾಗೂ ಕೊನೆಯ ಶಾಹಿ ಸ್ನಾನ ಫೆಬ್ರವರಿ 26 ರ ಶಿವರಾತ್ರಿಯಂದು ನಡೆಯಲಿದೆ. ಗಂಗಾ ಯಮುನ ಸರಸ್ವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಈ ತೀರ್ಥಸ್ನಾನಗಳು ನಡೆಯಲಿದ್ದು, ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ, ನಾಸಿಕ್, ಮೊದಲಾದ ಕಡೆಗಳಲ್ಲಿ ಈ ತೀರ್ಥಸ್ನಾನಗಳು ನಡೆಯಲಿದೆ.

ಐಶಾರಾಮಿ ಕಾರಿನಲ್ಲಿ ಸ್ಟೈಲಿಶ್ ನಾಗಾಸಾಧುಗಳ ಆಗಮನ

ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳಕ್ಕೆ ನಾಗಾಸಾಧುಗಳ ಆಗಮನವಾಗುತ್ತಿದ್ದು, ಐಶಾರಾಮಿ ಕಾರುಗಳನ್ನು ಏರಿ ನಾಗಾಸಾಧುಗಳು ಎಂಟ್ರಿಕೊಟ್ಟಿದ್ದಾರೆ. ರೋಲ್ಸ್‌ರಾಯ್ಸ್‌, ಮರ್ಸಿಡಿಸ್ ಬೆಂಜ್‌, ಆಡಿ ಕ್ಯೂ 7 ಮೊದಲಾದ ಕಾರುಗಳಲ್ಲಿ ಆಗಮಿಸಿರುವ ನಾಗಾಸಾಧುಗಳು ಗಮನ ಸೆಳೆದಿದ್ದಾರೆ. ಇನ್ನೂ ಕೆಲವರು ಚಿನ್ನ ಬೆಳ್ಳಿಯ ರಥಗಳಲ್ಲಿ ಪ್ರಯಾಗರಾಜ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೈತುಂಬಾ ಚಿನ್ನವನ್ನು ಹಾಕಿಕೊಂಡ ನಾಗಾಸಾಧುಗಳು ಒಂದೆಡೆಯಾದ್ರೆ, ಒಂದಿಂಚೂ ಬಟ್ಟೆ ಧರಿಸಿದ ನಾಗಾಸಾಧುಗಳು ಮತ್ತೊಂದು ಕಡೆ. ಸ್ಟಾಂಡರ್ಡ್‌ ಸನ್‌ ಗ್ಲಾಸ್‌ಗಳು, ಐಶಾರಾಮಿ ವಾಚ್‌ಗಳು ಕೂಡ ನಾಗಾಸಾಧುಗಳಲ್ಲಿ ಕಂಡು ಬಂದಿದೆ.

ಇದನ್ನೂ ಓದಿ : ಅತ್ತಿಗೆ ಮೇಲೆ ನಾದಿನಿಗೆ ಪ್ರೀತಿ; ಮದುವೆಯಾಗಲು ಮನೆ ಬಿಟ್ಟು ಓಡಿದ ಸಲಿಂಗ ಕಾಮಿಗಳ ಕತೆಯೇನಾಯ್ತು?

ಈ ಐಶಾರಾಮಿ ಜೀವನ ತಾತ್ಕಾಲಿಕ ಮಾತ್ರ 

ಜುನಾ ಅಖಾಡದ ಮಹಾಮಂಡಲೇಶ್ವರ ಪವಿತ್ರಾನಂದ ಗಿರೀ ಅವರು 1965 ಮಾಡೆಲ್‌ನ ರೋಲ್ಸ್-ರಾಯಸ್‌ನಲ್ಲಿ ಆಗಮಿಸಿದ್ರೆ, ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ದೊಡ್ಡ ಬೆಳ್ಳಿ ರಥವೇರಿ ಬಂದಿದ್ದಾರೆ. ಇವುಗಳ ಮಾಲಕರು ಬೇರೆಯೇ ಆಗಿದ್ದು, ಇದನ್ನು ಈ ಅಖಾಡದ ಶಿಷ್ಯರು ತಮ್ಮ ಗುರುಗಳಿಗಾಗಿ ಬಾಡಿಗೆ ಪಡೆದಿರುವ ವಾಹನಗಳಾಗಿವೆ. ಗೋಲ್ಡ್ ಬಾಬಾ, ಕಂಪ್ಯೂಟರ್ ಬಾಬಾ , ಟ್ಯಾಬ್ಲೆಟ್ ಬಾಬಾಗಳು ಕಳೆದ ಕುಂಭ ಮೇಳದಲ್ಲಿ ವಿಶೇಷವಾಗಿ ಆಕರ್ಷಣೆಯಾಗಿದ್ದರೆ, ಈ ಬಾರಿ ಐಶಾರಾಮಿ ಹಾಗೂ ವಿಂಟೇಜ್ ಕಾರುಗಳ ಮೂಲಕ ಆಗಮಿಸಿದ ನಾಗಾಸಾಧುಗಳಿಂದ ಕುಂಭ ಮೇಳದ ಆಕರ್ಷಣೆ ಹೆಚ್ಚಿದೆ. ಹಾಗಂತ ಇದು ಶಿಷ್ಯ ವೃಂದ ನೀಡುವ ಗೌರವವಾಗಿದ್ದು, ಈ ಮೂಲಕ ಧಾರ್ಮಿಕತೆಗೆ ಜನರನ್ನು ಸೆಳೆಯಲು ನಾಗಾಸಾಧುಗಳ ಪ್ರಯತ್ನ ಇದು ಎನ್ನಲಾಗಿದೆ.

DAKSHINA KANNADA

ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಆರೋಪ; ಆರೋಪಿಯ ಬಂಧನ

Published

on

ಮಂಗಳೂರು : ವಿದ್ಯಾರ್ಥಿಗಳಿಗೆ ಮಾ*ದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಶನಿವಾರ(ಜ.17) ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ 20 ವರ್ಷದ ಜೂಡ್ ಮಾಥ್ಯೂ ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಕೃ*ತ್ಯಕ್ಕೆ ಬಳಸಿದ  ಬೈಕ್ ಸಮೇತ ಒಟ್ಟು 70 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

ಮಂಗಳೂರಿನ ಪದವು ಗ್ರಾಮದ ಕೈಲಾಸ ಕಾಲನಿ ಸಮೀಪ ಯುವಕನೋರ್ವ ಮಾ*ದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

 

Continue Reading

LATEST NEWS

ವಿದ್ಯುತ್ ಕಂಬಕ್ಕೆ ಕಾರು ಡಿ*ಕ್ಕಿ; ಇಬ್ಬರು ಸಾ*ವು

Published

on

ಮಂಗಳೂರು/ಭಟ್ಕಳ :  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿ*ಕ್ಕಿಯಾದ  ಪರಿಣಾಮ ಇಬ್ಬರು ಸಾ*ವನ್ನಪ್ಪಿದ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ.

ಭಟ್ಕಳದ ಆಜಾದ್ ನಗರ ನಿವಾಸಿ 15 ವರ್ಷದ ಬಿಲಾಲ್  ಹಾಗೂ 20 ವರ್ಷದ ಆಯಾನ್ ಮೃ*ತ ದುರ್ದೈ*ವಿಗಳು.

ಬಿಲಾಲ್ ಸ್ಥಳದಲ್ಲೇ ಸಾ*ವನ್ನಪ್ಪಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾ*ಯಗೊಂಡಿದ್ದ. ಆತನನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.‌

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪ*ಘಾತ ನಡೆದಿದೆ. ಅಪ*ಘಾತ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page