Connect with us

LATEST NEWS

ಬಿಲ್ಲವರಿಗೆ ಮಣಿದ ಸರ್ಕಾರ: ಕನ್ನಡ ಪಠ್ಯದಿಂದ ಸಮಾಜ ವಿಜ್ಞಾನಕ್ಕೆ ಮತ್ತೆ ನಾರಾಯಣ ಗುರು ಸೇರ್ಪಡೆ

Published

on

ಮಂಗಳೂರು: ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿರುವ ಎಸ್‌ಎಸ್‌ಎಲ್‌ಸಿ ತರಗತಿಯಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ಪಠ್ಯ ವಿವಾದಕ್ಕೆ ಸರಕಾರ ಇತಿಶ್ರೀ ಹಾಡಿದೆ.


ಸಮಾಜವಿಜ್ಞಾನ ಪಠ್ಯದಿಂದ ನಾರಾಯಣ ಗುರು ಪಾರ ಕೈಬಿಟ್ಟು ಕನ್ನಡ ಪಠ್ಯದಲ್ಲಿ ಸೇರಿಸಿದ್ದಕ್ಕೆ ರಾಜ್ಯಾದ್ಯಂತ ಬಿಲ್ಲವ, ಈಡಿಗ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು.

ಜೊತೆಗೆ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಈ ಬಗ್ಗೆ ಸರಕಾರ ಎಷ್ಟೇ ಸಮಜಾಯಿಷಿ ನೀಡಿದರೂ ಬಿಲ್ಲವ ಸಮುದಾಯ ಕೇಳುವ ಸ್ಥಿತಿಯಲ್ಲಿರಲಿಲ್ಲ.

ಈ ಬಗ್ಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಸಚಿವ ಸುನೀಲ್‌ ಕುಮಾರ್‌ ಅವರು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಂಡ ಶಿಕ್ಷಣ ಸಚಿವರು,

ಈ ಹಿಂದೆ ಕನ್ನಡ ಪಠ್ಯದಲ್ಲಿ ಅಳವಡಿಸಿದ್ದ ನಾರಾಯಣ ಗುರು ಪಾಠವನ್ನು ಈ ಹಿಂದಿನಂತೆ ಸಮಾಜ ಪಠ್ಯದಲ್ಲಿ ತಕ್ಷಣ ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

DAKSHINA KANNADA

ಮೂಡುಬಿದಿರೆ : ಪಾಕತಜ್ಞರ ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

Published

on

ಮೂಡುಬಿದಿರೆ: ಪಾಕತಜ್ಞರ ಮನೆಗೆ ಹಗಲಲ್ಲೇ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ದೋಚಿದ ಘಟನೆ ಮೂಡುಬಿದಿರೆಯ ಅಳಿಯೂರಿನಲ್ಲಿ ನಿನ್ನೆ (ಫೆ.16) ರವಿವಾರ ನಡೆದಿದೆ. 

ಖ್ಯಾತ ಪಾಕತಜ್ಞರಾಗಿರುವ , ಅಳಿಯೂರಿನ ನೇಲಡೆಯ ನಿವಾಸಿ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಘಟನಾ ಸಂದಭ೯ ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಮುಲ್ಕಿಯಲ್ಲಿ ಅಡುಗೆಗೆ ಹೋಗಿದ್ದು, ಅವರ ಪತ್ನಿ ಶಿರ್ತಾಡಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಇದೇ ಸುಸಂದರ್ಭ ಎಂದು ಭಾವಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಕಪಾಟು ತೆರೆಯುವ ಸದ್ದು ಕೇಳಿ ಪಾಕತಜ್ಞರ ಮಗಳು ಬಂದು ನೋಡಿದಾಗ ಬೊಬ್ಬೆ ಹೊಡೆಯದಂತೆ ಬಾಯಿಗೆ ಒತ್ತಿ ಹಿಡಿದಿದ್ದಾರೆ. ಅಲ್ಲದೆ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನ 12.30 ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾರೆಳೆ. ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನದವರೂ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ. ಮನೆಯೊಳಗಡೆ ನುಗ್ಗಿರುವವರು ಇಬ್ಬರು ಮುಸುಕುಧಾರಿಗಳು ಎಂದು ತಿಳಿದುಬಂದಿದ್ದು, ಸ್ಥಳೀಯ ಹಾಗೂ ಈ ಮನೆಯನ್ನು ಬಲ್ಲವರೇ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Continue Reading

FILM

ನಟ ದರ್ಶನ್ ಹುಟ್ಟುಹಬ್ಬ…’ಜೀವ ಹೂವಾಗಿದೆ’ ಎಂದು ಹೊಸ ಪೋಸ್ಟರ್ ಹಂಚಿಕೊಂಡ ಪವಿತ್ರಾ ಗೌಡ!

Published

on

ಮಂಗಳೂರು/ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ದರ್ಶನ್ ಮೈಸೂರಿನ ತಮ್ಮ  ಫಾರ್ಮ್ ಹೌಸ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ತನ್ನ ಬ್ಯುಸಿನೆಸ್‌ನತ್ತ ಗಮನ ಹರಿಸಿದ್ದಾರೆ. ಪ್ರೇಮಿಗಳ ದಿನದಂದು ಬೆಂಗಳೂರಿನ ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಬೊಟೀಕ್‌ನ್ನು ರೀ ಲಾಂಚ್ ಮಾಡಿದ್ದಾರೆ.

ರೆಡ್ ಕಾರ್ಪೆಟ್ ಶಾಪ್ ರೀ ಓಪನ್ ಹಿನ್ನೆಲೆ ಪೂಜೆ ಹಮ್ಮಿಕೊಂಡಿದ್ದು,  ಪವಿತ್ರಾ ಗೌಡ ಕುಟುಂಬಸ್ಥರ ಜೊತೆಗೆ ಕಿರುತೆರೆ ನಟಿಯರು ಭಾಗಿಯಾಗಿದ್ರು. ಪವಿತ್ರಾಗೆ ಶುಭಕೋರಿದ್ರು. ಇದೀಗ ಅವರು ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

ಪೋಸ್ಟ್ ಏನು?

ಇಂದು (ಫೆಬ್ರವರಿ 16) ನಟ ದರ್ಶನ್‌ ಜನ್ಮದಿನ. ಇದು ಅವರ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ದರ್ಶನ್‌ಗೆ ರೀತಿಯಲ್ಲಿ ಶುಭಕೋರಿದ್ದಾರೆ. ಹಾಗೆಯೇ ಪವಿತ್ರಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ.

ಜೈಲಿನಿಂದ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಪವಿತ್ರಾ ಗೌಡ, ಹಲವಾರು ಪೋಸ್ಟರ್ ಹಂಚಿಕೊಂಡಿದ್ದಾರೆ. ಇಂದು ಕೂಡ ಹಂಚಿದ್ದಾರೆ. ಅಂದ್ಹಾಗೆ ಅವರು ಹಂಚಿಕೊಂಡಿದ್ದು, ಅವರ ತಾಯಿಯೊಂದಿಗಿನ ಫೋಟೋ ವೀಡಿಯೋವನ್ನು.

ಇದನ್ನೂ ಓದಿ : ಲಕ್ಷ್ಮೀ ಬಾರಮ್ಮ ‘ವೈಷ್ಣವ್’ ನಿಶ್ಚಿತಾರ್ಥ; ಬ್ರೋ ಗೌಡ ಹುಡುಗಿ ಯಾರು ಗೊತ್ತಾ?

ಜೀವ ಹೂವಾಗಿದೆ ಹಾಡಿಗೆ ಫೋಟೋಗಳನ್ನು ಎಡಿಟ್ ಮಾಡಿ ಪೋಸ್ಟರ್‌ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಅಮ್ಮ ನನ್ನ ದೊಡ್ಡ ಶಕ್ತಿ.  ಬದುಕಿನ ಏರಿಳಿತಗಳಲ್ಲಿ ಅಮ್ಮ ನನ್ನನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸಿದ್ದಾರೆ. ಅವಳ ತಾಳ್ಮೆಯಲ್ಲಿ ವಿಶೇಷತೆ ಇದೆ ಎಂದು ಬರೆದಿದ್ದಾರೆ. ಕೊನೆಯಲ್ಲಿ ಲವ್ ಯೂ ಮಾ ಎಂದು ಬರೆದುಕೊಂಡಿದ್ದಾರೆ. ಆದರೆ, ಕಮೆಂಟ್ ಆಪ್ಷನ್ ಆಫ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

Continue Reading

FILM

ಲಕ್ಷ್ಮೀ ಬಾರಮ್ಮ ‘ವೈಷ್ಣವ್’ ನಿಶ್ಚಿತಾರ್ಥ; ಬ್ರೋ ಗೌಡ ಹುಡುಗಿ ಯಾರು ಗೊತ್ತಾ?

Published

on

ಮಂಗಳೂರು/ಬೆಂಗಳೂರು: ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಖ್ಯಾತಿಯ, ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿ ಶಮಂತ್ ಬ್ರೋ ಗೌಡ ತನ್ನ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ನಟ ಶಮಂತ್ @ ಬ್ರೋ ಗೌಡ ಎಂಗೇಜ್ ಮೆಂಟ್ ಆಗಿದ್ದಾರೆ.

ಪ್ರೇಮಿಗಳ ದಿನದಂದು ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರೀತಿಸಿದ ಹುಡುಗಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಶಮಂತ್ ಗೌಡ.

ನಟ ಶಮಂತ್ ತನ್ನ ಬಹುದಿನದ ಗೆಳತಿ ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಮಂತ್, ಮೇಘನಾ ಬಹುಕಾಲದ ಪ್ರೀತಿಗೆ ಇಂದು ಅಧಿಕೃತ ಮುದ್ರೆ ಬಿದ್ದಿದೆ.

ಬ್ರೋ ಗೌಡ ಹುಡುಗಿ ಯಾರು ಗೊತ್ತಾ?

ನಟ ಶಮಂತ್ ಬ್ರೋ ಗೌಡ ಅವರನ್ನು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘಾನಾ. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಈ ಹಿಂದೆ ಸಾಕಷ್ಟು ಭಾರೀ ಜೊತೆಯಾಗಿ ರೀಲ್ಸ್‌ಗಳನ್ನು ಸಹ ಮಾಡುತ್ತಿದ್ದರು.

ಇದನ್ನೂ ಓದಿ: ತಾಳಿ ಕಟ್ಟುವಾಗ ನನಗೆ… ಮದುವೆಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಧನಂಜಯ 

ಶಮಂತ್, ಮೇಘನಾ ಮದುವೆಗೂ ತಯಾರಿ ನಡೆದಿದ್ದು, ಶೀಘ್ರವೇ ಬ್ರೋಗೌಡ ಅವರ ಮದುವೆ ಯಾವಾಗ ಅನ್ನುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ‘ಲಕ್ಷ್ಮೀ ಬಾರಮ್ಮ’ ಧಾರವಾಹಿಯಲ್ಲಿ ಹೀರೋ ಆಗಿ ಕಾಣಿಸಿಕೊಂಡ ಶಮಂತ್ ಬ್ರೋ ಗೌಡ ಅವರು ಕಿರುತೆರೆಯಿಂದ ಬೆಳ್ಳಿ ತೆರೆಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಹೊಸ ಕನ್ನಡ ಸಿನಿಮಾವೊಂದರಲ್ಲಿ ಶಮಂತ್ ಹೀರೋ ಆಗುವುದರ ಬಗ್ಗೆ ಅಪ್ಡೇಟ್ ಕೊಟ್ಟಿದ್ದರು.

 

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page