Connect with us

LATEST NEWS

ಹಳಿ ತಪ್ಪಿದ ಗೂಡ್ಸ್ ರೈಲು; 4 ಗಂಟೆ ಕಾಲ ರೈಲುಗಳ ಸಂಚಾರಕ್ಕೆ ಅಡಚಣೆ

Published

on

ಮಂಗಳೂರು/ಬೆಳಗಾವಿ: ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಜಿಂದಾಲ್ ಫ್ಯಾಕ್ಟರಿಯ ಕಬ್ಬಿಣದ ಅದಿರು ತುಂಬಿಕೊಂಡು ಮಿರಜ್ ವರೆಗೆ ಹೊರಟಿದ್ದ ಗೂಡ್ಸ್ ರೈಲು ಬೆಳಗಾವಿ ರೈಲು ನಿಲ್ದಾಣದ ಬಳಿ ಹಳಿ ತಪ್ಪಿದ್ದರಿಂದ ರೈಲು ಸಂಚಾರದಲ್ಲಿಯೂ ಅಡಚಣೆ ಉಂಟಾಗಿದೆ. ಸುಮಾರು 3ರಿಂದ 4 ತಾಸುವರೆಗೆ ದುರಸ್ತಿ ಕಾರ್ಯ ನಡೆಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ರಾಣಿ ಚೆನ್ನಮ್ಮ ರೈಲು ಸಂಚರಿಸುವುದರಲ್ಲಿತ್ತು. ಅಧಿಕಾರಿಗಳ ಸಮಯಪ್ರಜ್ಞೆಯಿಂದ ರಾಣಿ ಚೆನ್ನಮ್ಮ ರೈಲು ನಿಲುಗಡೆಗೊಳಿಸಲಾಯಿತು. ಇದರಿಂದಾಗಿ ಸಂಭಾವ್ಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಗೂಡ್ಸ್ ರೈಲು ಎರಡು ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತಿತ್ತು. ಹೀಗಾಗಿ, ಅದಾದ ಬೆನ್ನಲ್ಲೇ ರಾಣಿ ಚೆನ್ನಮ್ಮ ರೈಲು ಆಗಮಿಸುತ್ತಿತ್ತು. ಬೆಳಗ್ಗೆ 8 ಗಂಟೆಗೆ ರಾಣಿ ಚೆನ್ನಮ್ಮ (ಬೆಂಗಳೂರು-ಕೊಲ್ಹಾಪುರ ರೈಲು) ಸಂಚರಿಸಬೇಕಿತ್ತು. ರೈಲು ಬರುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ರೈಲನ್ನು ಬೆಳಗಾವಿಯಿಂದ 8 ಕಿ.ಮೀ. ದೂರದಲ್ಲಿರುವ ದೇಸೂರ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿದರು.

ಇದನ್ನೂ ಓದಿ: Watch Video: ಜೀಪ್ ರೇಸ್ ನಡೆಯುತ್ತಿದ್ದ ವೇಳೆ ನೋಡಲು ಬಂದ ವ್ಯಕ್ತಿಯ ಮೇಲೆರಗಿದ ಆನೆ

ಬೆಳಗಾವಿ ಮಿರಜ್ ಮಾರ್ಗದಲ್ಲಿ ಎಲ್ಲಾ ರೈಲುಗಳು ಸಂಚಾರ ಸ್ಥಗಿತಗೊಂಡಿದ್ದು, ದುರಸ್ತಿ ಕಾರ್ಯ ಮುಗಿದ ಬಳಿಕ ಆರಂಭಗೊಳ್ಳಲಿವೆ. ಈಗಾಗಲೇ ಮಿರಾಜ್‌ದಿಂದ ಬರುತ್ತಿದ್ದ ಚಾಲುಕ್ಯ ಶರಾವತಿ ಎಕ್ಸ್ ಪ್ರೆಸ್, ಎಲ್ ಟಿಟಿ ದಾದರ್, ಅಜೇರ್ ಎಕ್ಸ್‌ಪ್ರೆಸ್ ಮಾರ್ಗ ಮಧ್ಯದಲ್ಲಿಯೇ ನಿಂತುಕೊಂಡಿವೆ. ಬೆಳಗಾವಿಯಿಂದ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್, ಬೆಂಗಳೂರು ಜೋದ್ಭುರ್ ಎಕ್ಸ್ ಪ್ರೆಸ್, ಬೆಂಗಳೂರಿಂದ ಭಗತ್ ಕೋಟಿ, ಕ್ಯಾಸಲ್ ರಾಕ್- ಮಿರಜ್ ಪ್ಯಾಸೆಂಜರ್, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

LATEST NEWS

ಮಗಳ ಹೆಸರು ರಿವೀಲ್ ಮಾಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ

Published

on

ಮಂಗಳೂರು/ ಮುಂಬೈ : ಇಂದು ಕ್ರಿಕೆಟಿಗ ಕೆ.ಎಲ್‌.ರಾಹುಲ್‌ಗೆ ಜನ್ಮದಿನದ ಸಂಭ್ರಮ. ಈ ಬಾರಿ ಅವರ ಜನ್ಮದಿನ ಬಹಳ ವಿಶೇಷ. ಯಾಕಂದ್ರೆ, ಈ ಖುಷಿಯನ್ನು ದುಪ್ಪಟ್ಟು ಮಾಡಲು ಮಗಳ ಆಗಮನವಾಗಿದೆ. ಅಥಿಯಾ ಶೆಟ್ಟಿ ಮಾರ್ಚ್ 14 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಾ. 24 ರಂದು ನಾಮಕರಣ ಕಾರ್ಯ ನಡೆದಿದ್ದು, ಇಂದು(ಎ.18) ಮಗುವಿನ ಹೆಸರು ಬಹಿರಂಗಗೊಳಿಸಿದ್ದಾರೆ ದಂಪತಿ.

ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಮಗಳ ಫೋಟೋದೊಂದಿಗೆ ಹೆಸರನ್ನು ಅನಾವರಣ ಮಾಡಿದ್ದಾರೆ. ರಾಹುಲ್ ಮಗುವನ್ನು ಎತ್ತಿಕೊಂಡಿದ್ದು, ಅಥಿಯಾ ಮಗುವನ್ನು ನೋಡುತ್ತಾ ಫೋಸ್ ಕೊಟ್ಟಿದ್ದಾರೆ. ಫೋಟೋದಲ್ಲಿ ಮಗುವಿನ ಮುಖ ತೋರಿಸಲಾಗಿಲ್ಲ.

ಅಂದ್ಹಾಗೆ, ಮಗಳಿಗೆ ವಿಭಿನ್ನವಾಗಿರುವ ಹೆಸರನ್ನು ಇಟ್ಟಿದ್ದಾರೆ ದಂಪತಿ.  ‘ಇವಾರಾ’ ಎಂದು ಹೆಸರಿಡಲಾಗಿದ್ದು, ‘ದೇವರ ಉಡುಗೊರೆ’ ಎಂದರ್ಥ. ಈ ಬಗ್ಗೆ ಸ್ವತಃ ದಂಪತಿ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಒಂದೆಡೆ ಜಾಟ್2 ಚಿತ್ರ ಘೋಷಣೆ; ಮತ್ತೊಂದೆಡೆ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ ವಿರುದ್ಧ ಎಫ್‌ಐಆರ್!

ಅನೇಕ ಮಂದಿ ರಾಹುಲ್ ದಂಪತಿಯನ್ನು ಅಭಿನಂದಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಕೆ.ಎಲ್.ರಾಹುಲ್ – ಅಥಿಯಾ ಶೆಟ್ಟಿ 2023 ರ ಜ.23 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

 

Continue Reading

BELTHANGADY

ಬೆಳ್ತಂಗಡಿ: ಸ್ನಾನ ಮಾಡಲೆಂದು ನದಿಗೆ ಇಳಿದು ನೀರು ಪಾಲಾದ ಯುವಕ

Published

on

ಬೆಳ್ತಂಗಡಿ: ಕೋಳಿ ಸಾಗಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಯುವಕನೊಬ್ಬ ವಾಹನ ತೊಳೆಯುವ ಸಂದರ್ಭದಲ್ಲಿ ನೀರು ಪಾಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ 19 ವರ್ಷದ ಮನ್ಸೂರು ಮೃತ ದುರ್ಧೈವಿಯಾಗಿದ್ದಾರೆ. ಕೋಳಿ ಸಾಗಾಣಿಕೆ ಉದ್ದೇಶದಿಂದ ಮೈಸೂರಿನ ಟಿ ನರಸೀಪುರ ತಾಲೂಕಿನ ಬನ್ನೂರು ಎಂಬಲ್ಲಿಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ರಾತ್ರಿ ಟಿ ನರಸೀಪುರದಲ್ಲಿ ತಂಗಿದ್ದ ಮನ್ಸೂರ್ ಹಾಗೂ ಸಹೋದ್ಯೋಗಿ ಮುಂಜಾನೆ ವಾಹನ ತೊಳೆದು ಸ್ನಾನಕ್ಕೆ ನದಿಗೆ ಇಳಿದಿದ್ದಾರೆ. ಈ ವೇಳೆ ಮನ್ಸೂರ್ ಕಾಲು ಜಾರಿ ಆಳವಾದ ಜಾಗಕ್ಕೆ ಬಿದ್ದು ಮೃತ ಪಟ್ಟಿದ್ದಾಗಿ ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತದೇಹವನ್ನು ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.

Continue Reading

FILM

ನಾನೇನಾದರೂ ಹೆಣ್ಣಾಗಿ ಹುಟ್ಟಿದ್ದರೆ ಆ ನಟನನ್ನೇ ಪ್ರೀತಿಸಿ ಮದುವೆಯಾಗುತ್ತಿದೆ..! ಶಿವರಾಜ್‌ಕುಮಾರ್

Published

on

ಮಂಗಳೂರು/ಚೆನ್ನೈ: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ’45’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.


ಚಿತ್ರದ ತಮಿಳು ಆವೃತ್ತಿಯ ಟೀಸರ್‌ಅನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಲಾಯಿತು. ರಾಯಪೇಟದ ಸ್ಥಳೀಯ ಪಿವಿಆರ್ ಸತ್ಯಂ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶಿವ ರಾಜ್‌ಕುಮಾರ್, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, ಚೆನ್ನೈ ಎಂದರೆ ನನಗೆ ತುಂಬಾ ಇಷ್ಟ. ನಾನು ಇಲ್ಲಿ ಹುಟ್ಟಿ, ಬೆಳೆದು, ಅಧ್ಯಯನ ಮಾಡಿದೆ ಎಂದು ಹೇಳಿದ್ದಾರೆ. ನನಗೆ ಓರ್ವ ನಟನಾಗಿ ಮೊದಲ ಅವಕಾಶ ದೊರಕಿದ್ದು ಇಲ್ಲೇ ಎಂದಿದ್ದಾರೆ.

ಇದನ್ನೂ ಓದಿ: ಒಂದೆಡೆ ಜಾಟ್2 ಚಿತ್ರ ಘೋಷಣೆ; ಮತ್ತೊಂದೆಡೆ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ ವಿರುದ್ಧ ಎಫ್‌ಐಆರ್!

ನಾನು ಎಂದಿಗೂ ನಾಯಕನಾಗೋಕೆ ಬಯಸಿರಲಿಲ್ಲ. ಆದರೆ, ಕಮಾಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಅವರಂತೆ ಆಗಬೇಕೆಂದು ಬಯಸಿದ್ದೆ. ಅವರಿಬ್ಬರು ನನ್ನ ಫೇವರಿಟ್ ಎಂದು ಹೇಳಿದರು. ವಿಶೇಷವಾಗಿ ನಟ ಕಮಾಲ್ ಹಾಸನ್ ನನಗೆ ಸ್ಪೂರ್ತಿ. ನಾನೇನಾದರೂ ಹುಡುಗಿ ಆಗಿದ್ದರೆ ನಾನು ಅವರನ್ನೇ ಪ್ರೀತಿಸಿ ಮದುವೆಯಾಗುತ್ತಿದೆ. ಏಕೆಂದರೆ, ಅವರು ತುಂಬಾ ಸುಂದರವಾಗಿದ್ದಾರೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಯುಗಾದಿ ದಿನದಂದು ಚಿತ್ರದ ಟೀಸರ್ ಬಿಡುಗಡೆಗೊಂಡು, ಮೆಚ್ಚುಗೆ ಗಳಿಸಿಕೊಂಡಿತ್ತು. ಸೂರಜ್ ಪ್ರೊಡಕ್ಷನ್ ಲಾಂಛನದಡಿ ಅದ್ದೂರಿಯಾಗಿ ಚಿತ್ರ ನಿರ್ಮಾಣಗೊಂಡಿದೆ. ವಿದೇಶಿ ತಂತ್ರಜ್ಞರನ್ನು ಬಳಸಿಕೊಂಡು ಹೊಸಬಗೆಯ ಸಿಜಿ ಕಾರ್ಯಗಳನ್ನು ಚಿತ್ರಕ್ಕಾಗಿ ಮಾಡಿರುವುದು ವಿಶೇಷ.

Continue Reading
Advertisement

Trending

Copyright © 2025 Namma Kudla News

You cannot copy content of this page