Connect with us

LATEST NEWS

ಪ್ರೇಮಿಗಳಿಗೆ ಓಯೋ ಕಡೆಯಿಂದ ಗುಡ್ ನ್ಯೂಸ್; ಇನ್ಮುಂದೆ ನೈಟ್ ಇಷ್ಟು ಹೊತ್ತು ಫುಲ್ ಜಾಲಿ.. ಜಾಲಿ..

Published

on

ಓಯೋ ಅಂದರೆ ಎಲ್ಲರಿಗೂ ಚಿರಪರಿಚಿತ. ಕೆಲವರು ಉತ್ತಮ ಉದ್ದೇಶಗಳಿಗಾಗಿ ಬಳಸಿಕೊಂಡರೆ, ಇನ್ನೂ ಕೆಲವರು ಪ್ರೇಮಿಗಳೆಂದು ಹೇಳಿಕೊಂಡು ದುರುಪಯೋಗಪಡಿಸಿಕೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಗಳು ನಡೆದಿವೆ. ಇದೀಗ ಓಯೋ ಸ್ವತಃ ಪ್ರೇಮಿಗಳಿಗೆ  ಗುಡ್‌ ನ್ಯೂಸ್‌ವೊಂದನ್ನು ನೀಡಿದ್ದು, ಅದು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಹುತೇಕ ಮಂದಿ ಓಯೋ ಎಂದರೆ ಬರೀ ಪ್ರೇಮಿಗಳಷ್ಟೇ ಉಳಿದುಕೊಳ್ಳುವ ತಾಣ ಅಂದುಕೊಂಡುಬಿಡುತ್ತಾರೆ. ಅನೇಕ ಉದ್ಯಮಿಗಳು ಓಯೋ ಕೊಠಡಿಗಳಲ್ಲಿ ಒಪ್ಪಂದಗಳನ್ನ ಕೂಡ ಮಾಡುತ್ತಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಜನರು ತಮ್ಮ ಕೆಲಸ ಮುಗಿಯುವವರೆಗೂ ತಂಗಲು ಓಯೋ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಓಯೋ ಕೊಠಡಿಗಳನ್ನು 24 ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತದೆ. ಆದರೆ, ಎಲ್ಲರಿಗೂ 24 ಗಂಟೆಗಳ ಕೊಠಡಿಗಳು ಅಗತ್ಯ ಇರುವುದಿಲ್ಲ. ಕೆಲವರಿಗೆ 10 ಗಂಟೆ ಮಾತ್ರ ಸಾಕಾಗಿರುತ್ತದೆ. ಮತ್ತೂ ಕೆಲವರಿಗೆ 1 ಗಂಟೆ ಸಾಕಾಗಿರುತ್ತದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ಪಡೆದು ಆ ಕೊಠಡಿಗಳಿಗೆ ಕಡಿಮೆ ಬಾಡಿಗೆ ನೀಡಿದ್ರೆ ಅಂತಹ ಸೌಲಭ್ಯವನ್ನು ಗ್ರಾಹಕರು ಬಯಸುತ್ತಾರೆ.

ಓಯೋ ರೂಮ್ ಬುಕ್ಕಿಂಗ್ ಹೇಗೆ ?

ಅವಿವಾತರಿಗೆ ದೇಶದ ಹಲವೆಡೆ ಓಯೋ ಎಂಟ್ರಿಯನ್ನು ನಿಷೇಧಿಸಲಾಗಿತ್ತು. ಆದರೆ, ಇದೀಗ ಗುಡ್‌ ನ್ಯೂಸ್‌ ಕೊಟ್ಟಿದೆ. ಪ್ರೇಮಿಗಳಿಗಾಗಿ ಓಯೋ ಹೊಸ ಆಯ್ಕೆಯೊಂದನ್ನ ತಂದಿದೆ. ಓಯೋ ಗಂಟೆಯ ಕೊಠಡಿಗಳಂತೆಯೇ. ಇದನ್ನು ತಾತ್ಕಾಲಿಕ ವಾಸ್ತವ್ಯಕ್ಕಾಗಿ ಓಯೋ ಕೊಠಡಿಗಳೆಂಬ ಆಯ್ಕೆಯಡಿಯಲ್ಲಿ ಬುಕ್ ಮಾಡಬಹುದು. ಈ ಆಯ್ಕೆಯಡಿಯಲ್ಲಿ ಓಯೋ ಕೊಠಡಿಯನ್ನು ಒಂದು ಗಂಟೆ ಕಾಲ ಕೂಡ ಬುಕ್ ಮಾಡಬಹುದು. ಕೇವಲ ಒಂದು ಗಂಟೆಗೆ ಓಯೋ ರೂಮ್ ಬೇಕು ಎನ್ನುವವರು ಮೊದಲನೆಯದಾಗಿ ಮೊಬೈಲ್‌ನಲ್ಲಿ ಓಯೋ ಆಪ್ ಅಥವಾ ಓಯೋ ವೆಬ್ ಸೈಟ್‌ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆಯ ಮೂಲಕ ಸೈನ್ ಅಪ್ ಮಾಡಬೇಕು. ಈಗಾಗಲೇ ಸೈನ್ ಅಪ್ ಮಾಡಿದವರು ಲಾಗಿನ್ ಆಗಬಹುದು. ಲಾಗಿನ್ ಆದ ನಂತರ ಓಯೋ OYO Hourly Room ರೂಮ್ಸ್ ಅಥವಾ OYO ರೂಮ್ಸ್ ಶಾರ್ಟ್ ಸ್ಟೇ ಆಯ್ಕೆಗಳನ್ನು ಹುಡುಕಿ. ನಂತರ ಆಯ್ಕೆಯು ಪರದೆಯ ಮೇಲೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಸ್ಥಳದಲ್ಲಿ ಉಳಿಯಲು ಬಯಸುವ ನಗರದ ಹೆಸರನ್ನು ನಮೂದಿಸಬೇಕು. ನಂತರ ಆ ನಗರದಲ್ಲಿ ಕೇವಲ ಗಂಟೆಗಟ್ಟಲೇ ಬಾಡಿಗೆಗೆ ಲಭ್ಯ ಇರುವ ಓಯೋ ಹೋಟೆಲ್‌ಗಳ ಪಟ್ಟಿಯನ್ನು ನೋಡಬಹುದು. ಕೆಲವು ಹೋಟೆಲ್‌ಗಳು 1 ಗಂಟೆಗೆ, ಕೆಲವು 3 ಗಂಟೆಗಳಿಗೆ, ಕೆಲವು 6 ಗಂಟೆಗಳವರೆಗೆ ಬಾಡಿಗೆಗೆ ಸಿಗುತ್ತಿದ್ದು ಪ್ರೇಮಿಗಳ ದಿನ ಸಮೀಪಿಸುತ್ತಿರುವ ಈ ಸಮಯದಲ್ಲಿಯೇ ಹೊಸ ಕಾನೂನು ಜಾರಿಯಾದದ್ದು ಪ್ರೇಮಿಗಳಿಗೆ ಖುಷಿ ತಂದು ಕೊಟ್ಟಿದೆ.

DAKSHINA KANNADA

ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ 5.75 ಮೀ ನೀರು ಸಂಗ್ರಹ..! ಎರಡು ತಿಂಗಳು ನಿರಾತಂಕ..!

Published

on

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ನೀರಿನ ಸಂಗ್ರಹ ಕಡಿಮೆ ಆಗಿದೆ. ಹಾಗಂತ ಮುಂದಿನ 60 ದಿನಗಳ ಕಾಲ ನಗರದ ನೀರಿನ ಬೇಡಿಕ ಪೂರೈಸುವ ವಿಚಾರವಾಗಿ ಯಾವುದೇ ಆತಂಕ ಇಲ್ಲ ಎನ್ನಲಾಗಿದೆ. ಹಾಗಂತ ಮಳೆ ಬಾರದೆ ಬಿಸಿಲಿನ ತಾಪ ಏರಿಕೆಯಾದ್ರೆ ಕೊಂಚ ಮಟ್ಟಿನ ತೊಂದರೆಯನ್ನು ತಳ್ಳಿಹಾಕುವಂತಿಲ್ಲ.

ಮಂಗಳೂರು ನಗರಕ್ಕೆ ಪ್ರತಿ ನಿತ್ಯ 160 MLD ನೀರಿನ ಬೇಡಿಕೆ ಇದ್ದು, ತುಂಬೆ ಡ್ಯಾಮ್ ನಿಂದ ನಿರಂತರವಾಗಿ ನೀರು ಪೂರೈಕೆ ಆಗುತ್ತಿದೆ. ಮಂಗಳೂರಿನಲ್ಲಿರುವ 80 MLD ಸಾಮರ್ಥ್ಯದ ಎರಡು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಗೊಂಡು ನಗರದ ಜನರಿಗೆ ಪೂರೈಕೆ ಆಗುತ್ತಿದೆ. ತುಂಬೆ ಡ್ಯಾಮ್ ನ ಶೇಖರಣಾ ಸಾಮರ್ಥ್ಯ 6 ಮೀಟರ್ ಆಗಿದ್ದು, ಇದೀಗ ಮಾರ್ಚ್ ಅಂತ್ಯದ ವೇಳೆಗೆ 5.75 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ 5.85 ಇದ್ದು, ಕಳೆದ ವರ್ಷಕ್ಕಿಂತ ಈ ವರ್ಷ .10 ಮೀಟರ್ ಕಡಿಮೆ ನೀರಿನ ಸಂಗ್ರಹ ಇದೆ.

ತುಂಬೆ ವೆಂಟೆಡ್ ಡ್ಯಾಮ್ ಗೂ ಮೊದಲು ಸಿಗುವ ಎಎಂಆರ್, ಸರಳಿಕಟ್ಟೆ, ಜಕ್ಕ್ರಿಬೆಟ್ಟು, ಮೊದಲಾದ ಕಡೆಯಲ್ಲೂ ನೀರಿನ ಸಂಗ್ರಹ ಇರುವ ಕಾರಣ ಮಂಗಳೂರು ನಗರಕ್ಕೆ ನೀರು ಪೂರೈಕೆಗೆ ಯಾವುದೇ ಆತಂಕ ಇಲ್ಲಾ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಂತ ನೀರನ್ನು ಜನರು ಇತಿಮಿತಿಯಲ್ಲಿ ಬಳಸುವ ಮೂಲಕ ನೀರಿನ ಉಳಿತಾಯ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

Continue Reading

LATEST NEWS

ಹಬ್ಬಕ್ಕೆಂದು ಊರಿಗೆ ಹೋಗುತ್ತೀರಾ..? ಹಾಗಾದರೆ ಬಸ್ ಟಿಕೆಟ್ ದರ ಎಷ್ಟಿದೆ ನೋಡಿ

Published

on

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಅನೇಕ ಜನರು ಊರಿನ ಕಡೆ ಹೋಗಲು ತಯಾರಾಗಿದ್ದಾರೆ. ಆದರೆ ಹಬ್ಬಕ್ಕೆ ಊರಿಗೆ ಹೊರಟವರಿಗೆ ಇದೀಗ ಬಿಗ್‌ ಶಾಕ್ ಎದುರಾಗಿದೆ. ಖಾಸಗಿ ಬಸ್ ಟಿಕೆಟ್ ದರವು 3 ಪಟ್ಟು ಹೆಚ್ಚಾಗಿದೆ.

ಮಾರ್ಚ್- 29 ಶನಿವಾರ, ಮಾರ್ಚ್‌ – 30 ಯುಗಾದಿ ಹಬ್ಬ ಹಾಗೂ ಮಾರ್ಚ್‌ 31 ರಂಜಾನ್ ಹಬ್ಬ ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಇರುತ್ತದೆ. ಹೀಗಾಗಿ ಮಾರ್ಚ್ 28ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ.

ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ?

ಬೆಂಗಳೂರು-ದಾವಣಗೆರೆ

ಪ್ರಸ್ತುತ ದರ = 450-1300
ಹಬ್ಬದ ದರ = 750-5500

ಬೆಂಗಳೂರು-ಧಾರವಾಡ

ಪ್ರಸ್ತುತ ದರ = 600-1100
ಹಬ್ಬದ ದರ = 1069-5500

ಬೆಂಗಳೂರು-ಹುಬ್ಬಳ್ಳಿ

ಪ್ರಸ್ತುತ ದರ=475-1100
ಹಬ್ಬದ ದರ=1200-4200

ಬೆಂಗಳೂರು-ಬೆಳಗಾವಿ

ಪ್ರಸ್ತುತ ದರ=389-1200
ಹಬ್ಬದ ದರ=1129-5500

ಬೆಂಗಳೂರು-ಮಂಗಳೂರು

ಪ್ರಸ್ತುತ ದರ=650-1300
ಹಬ್ಬದ ದರ=1200-4500

ಬೆಂಗಳೂರು-ಕಲ್ಬುರ್ಗಿ

ಪ್ರಸ್ತುತ ದರ=750-1000
ಹಬ್ಬದ ದರ=1200-2200

ಬೆಂಗಳೂರು-ರಾಯಚೂರು

ಪ್ರಸ್ತುತ ದರ=650-990
ಹಬ್ಬದ ದರ=1100-2990

ಬೆಂಗಳೂರು-ಹಾಸನ

ಪ್ರಸ್ತುತ ದರ=463-1000
ಹಬ್ಬದ ದರ=750-1600

ಬೆಂಗಳೂರು-ಯಾದಗಿರಿ

ಪ್ರಸ್ತುತ ದರ=699-900
ಹಬ್ಬದ ದರ=1300-2200

ಬೆಂಗಳೂರು-ಶಿವಮೊಗ್ಗ

ಪ್ರಸ್ತುತ ದರ =500-990
ಹಬ್ಬದ ದರ =1199-1800

ಈ ಕುರಿತು ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ನಾವು 50 ರಿಂದ 60 ರಷ್ಟು ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಹಳೆ ಮೀಸಲು ಪಟ್ಟಿಯಂತೆ ಪಾಲಿಕೆ ಚುನಾವಣೆ ..!? ಶೀಘ್ರವೇ ಆಗಲಿದೆ ಘೋಷಣೆ..!

Published

on

ಮಂಗಳೂರು / ಮೈಸೂರು: ಮಂಗಳೂರು ಸೇರಿದಂತೆ ರಾಜ್ಯದ ಐದು ಮಹಾನಗರ ಪಾಲಿಕೆಗೆ ಈ ವರ್ಷದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಸರ್ಕಾರದಿಂದ ಈ ಐದೂ ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ನೀಡಿದ್ರೆ ಅದರಂತೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಹೈ ಕೋರ್ಟ್ ಮೊರೆ ಹೋಗಿ ಹಳೆ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.


ಮಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ದಾವರಣಗೆರೆ, ತುಮಕೂರು ಈ ಐದು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿದಿಗಳ ಅವದಿ ಮುಕ್ತಾಯಗೊಂಡಿದೆ. ಈ ಐದೂ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ರಾಜ್ಯ ಸರ್ಕಾರದ ಬಳಿ ಮೀಸಲು ಪಟ್ಟಿ ನೀಡಲು ಮನವಿ ಮಾಡಿದೆ. ನಿಯಮಾನುಸಾರ ಸರ್ಕಾರ ಮೀಸಲು ಪಟ್ಟಿ ಕೊಟ್ಟ ಬಳಿಕ ಅದರಂತೆ ಚುನಾವಣೆ ನಡೆಸಲಾಗುತ್ತದೆ. ಆದ್ರೆ ಸರ್ಕಾರ ಇನ್ನೂ ಮೀಸಲು ಪಟ್ಟಿ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೊಂದು ವೇಳೆ ಮೀಸಲು ಪಟ್ಟಿ ನೀಡದೇ ಇದ್ರೆ ಈ ಹಿಂದಿನ ಮೀಸಲು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣ ಆಯಕ್ತು ಜಿ.ಎಸ್. ಸಂಗ್ರೇಶಿ ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗಿದೆಯಾದ್ರೂ ಮೀಸಲು ಪಟ್ಟಿಗಾಗಿ ಮಾತ್ರ ಕಾಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page