Connect with us

LATEST NEWS

ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಸಿಹಿ ಸುದ್ದಿ; ಮಾಸಿಕ ಗೌರವ ಸಂಭಾವನೆ 1,000 ರೂ. ಹೆಚ್ಚಳ

Published

on

ಬೆಂಗಳೂರು: ಬಿಸಿಯೂಟ ತಯಾರಕರಿಗೆ ಮಾಸಿಕ ಗೌರವ ಸಂಭಾವನೆ 1,000 ರೂ. ಹೆಚ್ಚಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.

ಉಪಹಾರ ಯೋಜನೆಯಡಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಸಂಭಾವನೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: Watch Video: ಮಗುವಿನ ಎದುರೇ ಅಮ್ಮನನ್ನು ಮರಕ್ಕೆ ಕಟ್ಟಿ ಶಿಕ್ಷೆ ಕೊಟ್ಟ ಪಾಪಿಗಳು..!

ಈ ಮೊದಲು ಮುಖ್ಯ ಅಡುಗೆಯವರಿಗೆ ಮಾಸಿಕ ಗೌರವಧನವನ್ನು 3,700 ರೂಪಾಯಿ ಇತ್ತು. ಈಗ 4,700 ರೂ.ಗೆ ಹೆಚ್ಚಿಸಲಾಗಿದೆ. ಅಂತೆಯೇ ಅಡುಗೆ ಸಹಾಯಕರಿಗೆ 3,600 ರೂಪಾಯಿ ಇತ್ತು. ಈಗ 4,600 ರೂ.ಗೆ ಹೆಚ್ಚಳ ಮಾಡಲಾಗಿದೆ.

ಗೌರವ ಸಂಭಾವನೆಯನ್ನು ನೇರ ನಗದು ವರ್ಗಾವಣೆ ವೇದಿಕೆ ಮೂಲಕವೇ ಪಾವತಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ.

DAKSHINA KANNADA

ಜಾಗತಿಕ ಬಂಟರ ಸಂಘಗಳ ಒಕ್ಕೂಟ : 29ನೇ ವಾರ್ಷಿಕ ಮಹಾಸಭೆ

Published

on

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು  ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಮತ್ತು ಸಾಧಕರಿಗೆ ಗೌರವ ಸನ್ಮಾನ ನ.25 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಂಟ್ಸ್ ಹಾಸ್ಟೆಲ್ ಬಳಿ ಇರುವ  ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 10 ರಿಂದ 11 ರ ವರೆಗೆ ಕಾರ್ಯಕಾರಿ ಸಮಿತಿ ಸಭೆ ಮತ್ತು 29ನೇ ವಾರ್ಷಿಕ ಮಹಾಸಭೆ  ಜರುಗಲಿದೆ. ಬೆಳಿಗ್ಗೆ  11 ರಿಂದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ  ಹಾಗೂ ಬಹಿರಂಗ ಅಧಿವೇಶನ ಕಾರ್ಯಕ್ರಮ ನಡೆಯಲಿದೆ.

ಬಹಿರಂಗ ಅಧಿವೇಶನದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಒಕ್ಕೂಟದ ದಾನಿ  ಉಮಾ ಕೃಷ್ಣ ಶೆಟ್ಟಿ ದಂಪತಿಗೆ  ಸನ್ಮಾನ ಕಾರ್ಯಕ್ರಮ ಮತ್ತು 2025ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಗೌರವ ಸನ್ಮಾನ ಹಾಗೂ ಇತರ ಕಾರ್ಯಕ್ರಮಗಳು ಜರುಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ.

ಇದನ್ನೂ ಓದಿ : ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ಭವ್ಯ ಗೌಡ! ಯಾವ ಸಿನಿಮಾ ಗೊತ್ತಾ!?

ಸಮಾರಂಭದಲ್ಲಿ ಮಹಾದಾನಿ, ದಾನಿಗಳು, ಪದಾಧಿಕಾರಿಗಳು, ವಿವಿಧ ಬಂಟರ ಸಂಘಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.

Continue Reading

LATEST NEWS

ಬಿ. ಸಿ. ರೋಡ್ ಟೂರಿಸ್ಟ್ ವ್ಯಾನ್ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Published

on

ಬಂಟ್ವಾಳ: ಟೂರಿಸ್ಟ್ ವ್ಯಾನ್ ಚಾಲಕ ಮಾಲಕರ ಸಂಘ ( ರಿ ) ಬಿ. ಸಿ. ರೋಡ್, ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಬಿಸಿರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, 2025ನೇ ಸಾಲಿನ‌ ಅಧ್ಯಕ್ಷರಾಗಿ ಸದಾನಂದ ಗೌಡ ಹಳೆಗೇಟು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಇಕ್ಬಾಲ್ ಬಿಸಿ ರೋಡ್ ,ಕಾರ್ಯದರ್ಶಿಯಾಗಿ ಸುನಿಲ್ ಲೋಬೊ ,ಕೋಶಾಧಿಕಾರಿಯಾಗಿ ನಮೇಶ್ ಶೆಟ್ಟಿ ಕುರಿಯಾಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರವೀಣ್ ಕಾರ್ಲೋ, ರಿಯಾಜ್ ಜವಾನ್, ಗಣೇಶ್ ಕಲ್ಲಡ್ಕ, ರಿಯಾಜ್ ಬದ್ರಿಯಾ, ಚಂದ್ರಹಾಸ ಸಾಲೆತ್ತೂರು,ಸುಧಾಕರ್ ತುಂಬೆ, ಜಬ್ಬರ್ ಅಜಿಲಮೊಗರು, ನಿತಿನ್ ಅಜಿಬೆಟ್ಟು ಆಯ್ಕೆಯಾದರು.

ಇದನ್ನೂ ಓದಿ: ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜರಿಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

ಈ ಸಂದರ್ಭದಲ್ಲಿ ಸಂಘದ 70 ಸದಸ್ಯರು ಉಪಸ್ಥಿತರಿದ್ದರು. ಇಕ್ಬಾಲ್ ರವರು ಸ್ವಾಗತಿಸಿ ಸುನಿಲ್ ಲೋಬೊ ರವರು ಧನ್ಯವಾದ ನೀಡಿದರು.

Continue Reading

LATEST NEWS

ಕುಖ್ಯಾತ ಹೊರ ರಾಜ್ಯ, ಅಂತರ್ ಜಿಲ್ಲಾ ಕಳವು ಪ್ರಕರಣಗಳ ಆರೋಪಿ ಇತ್ತೆ ಬರ್ಪೆ ಅಬುಬಕ್ಕರ್ ಬಂಧನ

Published

on

ಬೆಳ್ತಂಗಡಿ: ಹೊರ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲಿ ನಡೆದ 40 ಕ್ಕೂ ಅಧಿಕ ಕಳವು ಪ್ರಕರಣಗಳ ಕುಖ್ಯಾತ ಆರೋಪಿ ‘ಇತ್ತೆ ಬರ್ಪೆ ಅಬುಬಕ್ಕರ್’ ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ 5 ಲಕ್ಷದ 65 ಸಾವಿರ ರೂಪಾಯಿ ಮೌಲ್ಯದ 56.850 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರು ಎಂಬಲ್ಲಿ ಕಳೆದ ಅಕ್ಟೋಬರ್ 2 ರಿಂದ ಅಕ್ಟೋಬರ್ 6 ರ ಮಧ್ಯದ ಅವಧಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ನಡೆದ 149 ಗ್ರಾಂ ತೂಕದ ಒಟ್ಟು 9 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಹೊರ ರಾಜ್ಯಗಳಲ್ಲಿ ಹಾಗೂ ಹಲವು ಜಿಲ್ಲೆಗಳಲ್ಲಿ 40 ಕ್ಕೂ ಅಧಿಕ ಕಳವು ಪ್ರಕರಣಗಳ ಕುಖ್ಯಾತ ಆರೋಪಿ ಮಂಗಳೂರಿನ ಜೋಕಟ್ಟೆ ನಿವಾಸಿ 70 ವರ್ಷ ಪ್ರಾಯದ ಅಬುಬಕ್ಕರ್ ಯಾನೆ ಅಬ್ದುಲ್ ಖಾದರ್ ಯಾನೆ ಇತ್ತೆ ಬರ್ಪೆ ಅಬುಬಕ್ಕರ್ (70) ಎಂಬಾತನನ್ನು ಬಂಧಿಸಿ ಆತನಿಂದ 5 ಲಕ್ಷದ 65 ಸಾವಿರ ರೂಪಾಯಿ ಬೆಲೆಬಾಳುವ ಒಟ್ಟು 56.850 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ 60 ಸಾವಿರ ರೂಪಅಯಿ ಮೌಲ್ಯದ ದ್ವಿಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: ಉಡುಪಿ: ಹಿಂದೂ ಜಾಗರಣ ವೇದಿಕೆ ಮುಖಂಡನ ಬಂಧನ

ಬೆಳ್ತಂಗಡಿ ಡಿ.ವೈ.ಎಸ್. ಪಿ. ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ, ಪೂಂಜಾಲಕಟ್ಟೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮಂಗಳೂರು ಜಿಲ್ಲಾ ಕಂಪ್ಯೂಟರ್ ವಿಭಾಗದ ಸಿಬ್ಬಂದಿಯನ್ನು ಒಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page