Connect with us

LATEST NEWS

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ಮುಂದೆ ಹಾಯಾಗಿ ಕಳೆಬಹುದು ನಿವೃತ್ತಿ ಜೀವನ

Published

on

ಉದ್ಯೋಗಿಗಳು ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷ್ಯಗಳಲ್ಲಿ ನಿವೃತ್ತಿ ವಯಸ್ಸು ಒಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಸರ್ಕಾರಿ ನೌಕರರ ನಿವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉದ್ಯೋಗಿಗಳ ನಿವೃತ್ತಿ ವಯಸ್ಸು, ಪಿಂಚಣಿ ಸೇರಿದಂತೆ ಕೆಲ ಬದಲಾವಣೆಗಳು ಮಾಡಲಾಗತ್ತಿದೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2025 ರ ಮಾರ್ಚ್ 1 ರಿಂದ ಈ ಹೊಸ ನಿಯಮಗಳು ಜಾರಿಯಾಗಲಿದೆ ಎನ್ನಲಾಗುತ್ತಿದ್ದು, ಒಂದು ವೇಳೆ  ಹೊಸ ಮಾರ್ಗಸೂಚಿ ಜಾರಿಗೆ ಬಂದರೆ ಏನೆಲ್ಲ ಬದಲಾವಣೆ ಆಗಲಿದೆ ಎಂಬ ವಿವರ ಇಲ್ಲಿದೆ.

ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ : ಸದ್ಯ ನಿವೃತ್ತಿ ವಯಸ್ಸು ಕೇಂದ್ರ ಸರ್ಕಾರಿ ನೌಕರರಿಗೆ 60 ಆದ್ರೆ ರಾಜ್ಯ ಸರ್ಕಾರಿ ನೌಕರರ ವಯಸ್ಸು 58 -60 ವರ್ಷವಿದೆ. ಈ ವಯಸ್ಸನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದಲಿಸಲಿದೆ. ಮುಂದಿನ ದಿನಗಳಲ್ಲಿ ವಯಸ್ಸು 62 ಆಗಲಿದೆ ಎಂಬ ಸುದ್ದಿ ಹರಡಿದೆ.

ಪಿಂಚಣಿ ವೃದ್ಧಿ : ನಿವೃತ್ತಿ ವಯಸ್ಸಿನ ಜೊತೆ ಸರ್ಕಾರ ಪಿಂಚಣಿಯನ್ನೂ ಹೆಚ್ಚಿಸಲಿದೆ. ಇದ್ರಿಂದ ಉದ್ಯೋಗಿಗಳ ಮುಂದಿನ ಭವಿಷ್ಯ ಉತ್ತಮವಾಗಿರಲಿದೆ.

ಗ್ರಾಚ್ಯುಟಿ ಸುಧಾರಣೆ : ಸರ್ಕಾರಿ ನೌಕರರಿಗೆ ಗ್ರಾಚ್ಯುಟಿಯಲ್ಲಿ ಮತ್ತಷ್ಟು ಸುಧಾರಣೆ ತರುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.

ವಯಸ್ಸು ಹೆಚ್ಚಳ : ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ವಾದ ಹಿಂದಿನಿಂದಲೂ ಕೇಳಿ ಬರ್ತಿದೆ. ಅದಕ್ಕೆ ಕಾರಣ ಜೀವಿತಾವಧಿಯಲ್ಲಿ ಹೆಚ್ಚಳ. ಹಿಂದೆ 1998ರಲ್ಲಿ ಸರಾಸರಿ ಜೀವಿತಾವಧಿ 61.4 ವರ್ಷವಿತ್ತು. ಆದ್ರೀಗ ಅದು 72.24 ವರ್ಷವಾಗಿದೆ. ಸರ್ಕಾರಕ್ಕೆ ಇನ್ನೆರಡು ವರ್ಷ ಅನುಭವಿ ಉದ್ಯೋಗಿಗಳು ಲಭ್ಯವಾಗ್ತಾರೆ ಹಾಗೂ ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಪಿಂಚಣಿ ಎರಡು ವರ್ಷ ವಿಳಂಬವಾಗುತ್ತದೆ. ಇದ್ರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಕೆಲವರ ವಾದವಾಗಿದೆ.

ವಯಸ್ಸಿನ ಹೆಚ್ಚಳದ ಲಾಭ : ಒಂದ್ವೇಳೆ ಸರ್ಕಾರ ವಯಸ್ಸಿನಲ್ಲಿ ಹೆಚ್ಚಳ ಮಾಡಿದ್ರೆ ಕೆಲ ಉದ್ಯೋಗಿಗಳಿಗೆ ಲಾಭವಾದ್ರೆ ಕೆಲ ಉದ್ಯೋಗಿಗಳು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ದೀರ್ಘಾವಧಿಯವರೆಗೆ ಕೆಲಸ ಮಾಡಲು ಮತ್ತು ಗಳಿಸಲು ಅವಕಾಶ ಸಿಗುತ್ತದೆ. ಅನುಭವಿ ಉದ್ಯೋಗಿಗಳಿಂದ ಕೆಲಸ ಸುಲಭವಾಗುತ್ತದೆ.

ನಕಾರಾತ್ಮಕ ಪ್ರಭಾವ : ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಪ್ರಸ್ತುತ ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಬಳಿ ಬಾಕಿ ಇಲ್ಲ ಎಂದು ಹೇಳಿದ್ದರು.

LATEST NEWS

ಗ್ರಿಲ್ಡ್ ಚಿಕನ್ ತಿಂದು 22 ಜನರು ಆಸ್ಪತ್ರೆಗೆ ದಾಖಲು

Published

on

ತಮಿಳುನಾಡು: ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದು 22 ಜನ ಆಸ್ಪತ್ರೆಗೆ ದಾಖಲಾದ ಘಟನೆ ತಮಿಳುನಾಡಿನ ಮಧುರೈ ಚೋಳವಂಧನ್‌ನಲ್ಲಿ ನಡೆದಿದೆ.

ಮಧುರೈನ ಹೋಟೆಲ್‌ವೊಂದರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಇತ್ತು. ಇಲ್ಲಿ ಯಾವಾಗಲೂ ಜನಸಂಖ್ಯೆಯಿಂದಲೇ ಹೋಟೆಲ್ ತುಂಬಿಕೊಳ್ಳುತ್ತಿತ್ತು. ನಿನ್ನೆ ರಾತ್ರಿ ಬಾಸ್ಕೆಟ್ ಬಾಲ್ ಆಡಲು ಮಧುರೈಗೆ ಬಂದಿದ್ದ ಪ್ರಸನ್ನ ಎಂಬ ಆಟಗಾರ ತನ್ನ 10 ಜನ ಸ್ನೇಹಿತರೊಂದಿಗೆ ಈ ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದಿದ್ದರು. ಇದನ್ನು ತಿಂದ ಬಳಿಕ ಅವರಲ್ಲಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಹಾಗೆಯೇ ಗ್ರಿಲ್ಡ್ ಚಿಕನ್ ತಿಂದ ಉಳಿದವರಿಗೂ ಇದೇ ರೀತಿ ಆಗಿ ಅಸ್ವಸ್ಥಗೊಂಡಿದ್ದಾರೆ.

ಹುಷಾರ್‌ ಇಲ್ಲದೇ ಆದ ಎಲ್ಲರನ್ನೂ ಮಧುರೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

ChatGPT, DeepSeek ಬ್ಯಾನ್; ಹಣಕಾಸು ಸಚಿವಾಲಯದಿಂದ ಸುತ್ತೋಲೆ

Published

on

ಮಂಗಳೂರು/ನವದೆಹಲಿ : ಸದ್ಯ ಎಲ್ಲೆಡೆ ಚಾಟ್ ಜಿಪಿಟಿ, ಡೀಪ್ ಸೀಕ್‌ನದ್ದೇ ಸದ್ದು. ಆದರೆ, ಇಂತಹ  ಕೃತಕ ಬುದ್ಧಿಮತ್ತೆ ಟೂಲ್‌ಗಳ ಬಳಕೆಯನ್ನು ಹಣಕಾಸು ಸಚಿವಾಲಯ ನಿಷೇಧಿಸಿದೆ. AI ಭದ್ರತಾ ನೀತಿಗಳನ್ನು ಬಿಗಿಗೊಳಿಸಿರುವ ಹಣಕಾಸು ಸಚಿವಾಲಯ ಸರ್ಕಾರದ ಡೇಟಾ ಹಾಗೂ ಕಡತಗಳ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರ ಅನುಮೋದನೆಯೊಂದಿಗೆ ಹೊರಡಿಸಲಾದ ಈ ನಿರ್ದೇಶನ ಸಚಿವಾಲಯದ ಜಾಲದಲ್ಲಿ ಬಳಸಲಾಗುವ ಎಲ್ಲಾ AI-ಚಾಲಿತ ಅಪ್ಲಿಕೇಶನ್‌ಗಳಿಗೆ ಅನ್ವಯಿಸುತ್ತದೆ.  ಸರ್ಕಾರಿ ಇಲಾಖೆಗಳ ಡಿವೈಸ್ ಗಳಲ್ಲಿ ಮಾತ್ರ ChatGPT, DeepSeek ಗಳ ಬಳಕೆಗೆ ನಿಷೇಧ ಅನ್ವಯವಾಗುತ್ತದೆ.

ಈ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ.

ಇದನ್ನೂ ಓದಿ : ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

AI ಟೂಲ್ ಗಳು ಸರ್ಕಾರಿ ಡೇಟಾದ ಗೌಪ್ಯತೆಗೆ ಅ*ಪಾಯವನ್ನುಂಟು ಮಾಡುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಅಧಿಕೃತ ಸಾಧನಗಳಲ್ಲಿ ಅವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕೆಂದು ಸಲಹೆ ನೀಡಿದೆ. ಎಲ್ಲಾ ಇಲಾಖೆಗಳ ಉದ್ಯೋಗಿಗಳಿಗೆ ನಿರ್ದೇಶನವನ್ನು ಪಾಲಿಸಲು ಸೂಚಿಸಲಾಗಿದೆ.

 

Continue Reading

BIG BOSS

ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

Published

on

ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಅವರ ಹೆಸರು ಇನ್ನಷ್ಟು ಪ್ರಸಿದ್ಧಿಯಾಗುತ್ತದೆ. ದಿನಕ್ಕೊಂದು ಹೊಸ ಹೊಸ ಆಫರ್‌ಗಳು ಬರುತ್ತಲೇ ಇರುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಗ್‌ಬಾಸ್ ಮನೆಗೆ ನನಗೂ ಹೋಗಲು ಅವಕಾಶ ಸಿಗುತ್ತಿದ್ದರೆ ಒಳ್ಳೆಯದಿತ್ತು ಎಂದು ಬಯಸುತ್ತಾರೆ.

ಇನ್ನು ಬಿಗ್‌ಬಾಸ್ ಮನೆಗೆ ಹೋದವರಿಗೆ ಮೊದಲೇ ಪೇಮೆಂಟ್ ವಿಷಯವನ್ನು ಹೇಳುತ್ತಾರೆ. ಈ ಮೊದಲೇ ಹೆಸರು ಗಳಿಸಿದವರಿಗೆ ಸ್ವಲ್ಪ ಜಾಸ್ತಿ ಹಣವಿರುತ್ತದೆ. ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಅವರಿಗೆ ಸಿಗುತ್ತದೆ. ಅಲ್ಲದೇ ಬಿಗ್‌ಬಾಸ್ ಗೆದ್ದರೆ 50 ಲಕ್ಷ ಹಣವಿರುತ್ತದೆ. ಇದೀಗ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಯಾರು ಗೊತ್ತಾ..?

 

ಹೌದು, ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದವರು ಪುತ್ತೂರಿನ ಧನ್‌ರಾಜ್ ಆಚಾರ್ಯ. ಒಂದು ವಾರಕ್ಕೆ 30 ಸಾವಿರ ಸಂಭಾವನೆ ಸಿಗುತ್ತಿತ್ತು. ಬಿಗ್‌ಬಾಸ್ ಮನೆಯಲ್ಲಿ ಧನರಾಜ್ ಅವರು ಕೊನೆಯವರೆಗೂ ಇದ್ದರು. ಗ್ರ್ಯಾಂಡ್ ಫಿನಾಲೆಗೆ ಹೋಗುವ ಮೊದಲು ಎಲಿಮಿನೇಟ್ ಆದರು.

ಅಲ್ಲದೇ ಬಿಗ್‌ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿದ್ದು ಸತ್ಯ ಧಾರಾವಾಹಿಯ ಗೌತಮಿ ಜಾದವ್ ಎಂದು ತಿಳಿದುಬಂದಿದೆ. ಬಿಗ್ ಬಾಸ್‌ ಮನೆಯಲ್ಲಿ ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಅವರ ಸ್ನೇಹ ಎಂಥದ್ದು ಎಲ್ಲರಿಗೂ ತಿಳಿದಿದೆ. ಇಬ್ಬರು ಕೂಡ ಜೀವಕ್ಕೆ ಜೀವದಂತೆ ಇದ್ದರು. ಹಾಗೆಯೇ ತನ್ನ ಕಾಮಿಡಿ ಮಾತುಗಳ ಮೂಲಕ ಧನ್‌ರಾಜ್ ವೀಕ್ಷಕರನ್ನು ಮನೋರಂಜಿಸುತ್ತಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page