Connect with us

LATEST NEWS

ಭಾರೀ ಇಳಿಕೆಯತ್ತ ಚಿನ್ನದ ಬೆಲೆ

Published

on

ದೆಹಲಿ: ಕರೋನಾದಿಂದ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಮತ್ತೆ ಇಳಿಮುಖಗೊಂಡಿದೆ. ಕಳೆದ ಶುಕ್ರವಾರ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಇಳಿಕೆ ಕಂಡಿತ್ತು, ಈಗ ಮತ್ತೆ  ಬೆಲೆ ಇಳಿಮುಖ ಕಂಡಿದೆ.


ಕಳೆದ ಶುಕ್ರವಾರ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಇಳಿಕೆ ಕಂಡಿತ್ತು, ಈಗ ಮತ್ತೆ ಚಿನ್ನದ ಬೆಲೆ ಇಳಿಮುಖ ಕಂಡಿದೆ. ಶುಕ್ರವಾರ 49,000 ರೂ. ಇದ್ದ ಚಿನ್ನ, ಈಗ ಮತ್ತೆ 430 ರೂ. ಕುಸಿತಗೊಂಡು 48,450 ರೂ. ಗೆ ಇಳಿದಿದೆ.
ಒಂದು ವಾರದೊಳಗೆ 10 ಗ್ರಾಂ ನ ಚಿನ್ನದ ಬೆಲೆ 750 ರೂ. ಇಳಿಕೆ ಕಂಡಿದೆ. ಬೆಳ್ಳಿ ದರವೂ ಕುಸಿತ ಕಂಡಿದ್ದು, ಜೂ.14ರಂದು  72,200 ರೂ.ಇದ್ದ ಬೆಳ್ಳಿ ಬೆಲೆ, ಇಂದು 71,900ಕ್ಕೆ ಕುಸಿದಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 72,200 ರೂ.ಇತ್ತು. ಇಂದು 71,900 ರೂ. ಗೆ ಕುಸಿತ ಕಂಡಿದೆ
ಬೇರೆ ನಗರಗಳಲ್ಲಿ ಚಿನ್ನದ ಬೆಲೆ 
ಬೆಂಗಳೂರಿನಲ್ಲಿ 22 ಕ್ಯಾರೆಟ್​ ನ 10 ಗ್ರಾಂ ಚಿನ್ನಕ್ಕೆ 45,740 ರೂ. ಇದ್ದಿದ್ದು, ಇಂದು 45,490 ರೂ.ಗೆ ಕುಸಿದಿದೆ.  ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 47,650, ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 47,760 ರೂ. ಆದರೇ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 48,760 ರೂ. ಆಗಿದೆ.

FILM

ಮತ್ತೆ ಹೆಣ್ಣು ಮಗು ಹುಟ್ಟಬಹುದೆಂಬ ಭಯ…! ವಿವಾದಕ್ಕೆ ಕಾರಣವಾಯಿತು ನಟ ಚಿರಂಜೀವಿ ಹೇಳಿಕೆ

Published

on

ಮಂಗಳೂರು/ನವದೆಹಲಿ : ಬ್ರಹ್ಮ ಆನಂದಂ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆಗಳು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹೌದು, ಈ ಸಂದರ್ಭ ಅವರು ಮನೆಯ ತುಂಬ ಹೆಣ್ಣು ಮಕ್ಕಳೇ ತುಂಬಿದ್ದಾರೆ. ನಮ್ಮ ವಂಶವನ್ನು ಉದ್ಧಾರ ಮಾಡಲು ಮೊಮ್ಮಗ ಬೇಕಿತ್ತು ಎಂದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗ್ರಾಸವಾಗಿದೆ.

ಚಿರಂಜೀವಿ ಹೇಳಿದ್ದೇನು?

ಮಾತಿನ ಭರದಲ್ಲಿ ಚಿರಂಜೀವಿ ಗಂಡು ಮಗು ಅಂದ್ರೆ ತನಗೆ ಮೊಮ್ಮಗ ಬೇಕು ಎಂಬ ಇಂಗಿತ ಹೊರ ಹಾಕಿದ್ದಾರೆ.  ನನ್ನ ಮನೆಯಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದಾರೆ. ಹೀಗಾಗಿ ನನಗೆ ಮನೆಯಲ್ಲಿರುವಂತೆ ಭಾಸವಾಗುವುದಿಲ್ಲ. ಬದಲಿಗೆ ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವಂತೆ, ನಾನು ವಾರ್ಡನ್ ಆಗಿರುವಂತೆ ಭಾಸವಾಗುತ್ತದೆ. ನಮ್ಮ ಕುಟುಂಬದ ವಂಶವನ್ನು ಮುಂದುವರಿಸಲು ಮೊಮ್ಮಗ ಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಮನೆಯಲ್ಲಿ ಇರುವಾಗ ಮೊಮ್ಮಕ್ಕಳು ಸುತ್ತುವರೆದಿರುವಂತೆ ಭಾಸವಾಗುವುದಿಲ್ಲ. ನನ್ನ ಸುತ್ತಲೂ ಹೆಂಗಸರೇ ಸುತ್ತುವರೆದಿರುವುದರಿಂದ ನಾನು ಲೇಡೀಸ್ ಹಾಸ್ಟೆಲ್ ವಾರ್ಡನ್ ಎಂದು ಅನಿಸುತ್ತದೆ. ನಮ್ಮ ವಂಶವು ಮುಂದುವರಿಯಲು ಈ ಬಾರಿಯಾದರೂ ಚರಣ್‌ಗೆ ಗಂಡು ಮಗುವಾಗಲಿ ಎಂದು ನಾನು ಹಾರೈಸುತ್ತಲೇ ಇದ್ದೇನೆ. ಆದರೆ ಅವನಿಗೂ ಹೆಣ್ಣು ಮಗುವಾಯಿತು ಎಂದಿದ್ದಾರೆ.

ನನ್ನ ಮಗ ರಾಮ್ ಚರಣ್‌ಗೆ ಮತ್ತೊಂದು ಹೆಣ್ಣು ಮಗು ಹುಟ್ಟಬಹುದು ಎಂಬ ಭಯವಿದೆ. ಅವನಿಗೆ ಮತ್ತೆ ಹೆಣ್ಣು ಮಗುವಾದರೆ… ಎಂದು ನಾನು ಹೆದರುತ್ತೇನೆ ಎಂದು ಚಿರಂಜೀವಿ ಹೇಳಿದ್ದು ಇದು ವಿವಾದಕ್ಕೆಡೆ ಮಾಡಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಕೆಳಮಟ್ಟದ ಯೋಚನೆ, ರೀಲ್‌ನಲ್ಲಿ ಹೀರೋ ರಿಯಲ್‌ನಲ್ಲಿ ವಿಲನ್, ಇದೊಂದು ಕೆಟ್ಟ ಮೆಂಟಾಲಿಟಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಗುಟ್ಟಾಗಿ ಎಂಗೇಜ್ಮೆಂಟ್…! ದರ್ಶನ್ ಬಗ್ಗೆ ಸ್ವಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೇಲಾ, ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರಿಗೂ ಎರಡೆರಡು ಹೆಣ್ಣು ಮಕ್ಕಳಿವೆ. ಶ್ರೀಜಾಗೆ ನವೀಕ್ಷಾ,  ನಿವೃತ್ತಿ , ಸುಶ್ಮಿತಾಗೆ ಸಮರ,  ಸಂಹಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇನ್ನು ಮಗ ರಾಮ್ ಚರಣ್ ಪತ್ನಿ ಉಪಾಸನಾ 2023ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕ್ಲಿಂಕರಾ ಎಂದು ಹೆಸರಿಡಲಾಗಿದೆ.

 

Continue Reading

LATEST NEWS

ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿ ವ್ಯಕ್ತಿ ಸಾವು

Published

on

ತುಮಕೂರು: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶದ ನಾನಾ ಕಡೆಯಿಂದ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಅದೇ ರೀತಿ ಪುಣ್ಯ ಸ್ನಾನ ಮಾಡುತ್ತಿರುವಾಗ ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿರಾ ತಾಲೂಕಿನ ಬರಗೂರು ಮೂಲದ ನಾಗರಾಜ್ (57) ಎಂದು ಗುರುತಿಸಲಾಗಿದೆ.

ಎಲ್‌ಎನ್‌ಪಿ ಬ್ರಿಕ್ಸ್ನ ಮಾಲೀಕರಾದ ನಾಗರಾಜು ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಮಂಗಳವಾರ ಸಾಯಂಕಾಲ ತ್ರಿವೇಣಿ ಸಂಗಮದಲ್ಲಿ ಸಂಧ್ಯಾ ವಂದನೆ ಮಾಡಿ ಪುಣ್ಯಸ್ನಾನ ಮಾಡುತ್ತಿರುವಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Continue Reading

FILM

ಗುಟ್ಟಾಗಿ ಎಂಗೇಜ್ಮೆಂಟ್…! ದರ್ಶನ್ ಬಗ್ಗೆ ಸ್ವಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

Published

on

ಮಂಗಳೂರು/ಬೆಂಗಳೂರು : ಇತ್ತೀಚೆಗೆ ನಟಿ ರಕ್ಷಿತಾ ಪ್ರೇಮ್ ಅವರ ತಮ್ಮನ ವಿವಾಹ ನಡೆಯಿತು. ಈ ವೇಳೆ ಸ್ಯಾಂಡಲ್ ವುಡ್‌ ನಟ, ನಟಿಯರು ಗಮನ ಸೆಳೆದಿದ್ದರು. ಅವರಲ್ಲಿ ರಮ್ಯಾ ಕೂಡ ಒಬ್ಬರು. ಕಪ್ಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಂಗೊಳಿಸುತ್ತಿದ್ದ ಸ್ಯಾಂಡಲ್‌ವುಡ್ ಕ್ವೀನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈ ವೇಳೆ ಅವರ ಕೈಯಲ್ಲಿದ್ದ ರಿಂಗ್ ಗಮನ ಸೆಳೆದಿತ್ತು.

ಎಂಗೇಜ್ಮೆಂಟ್…ಮದುವೆ ಊಟ:

ರಮ್ಯಾ ಮದುವೆ ಯಾವಾಗ? ಎಂಬ ಪ್ರಶ್ನೆ ಸದಾ ಚಾಲ್ತಿಯಲ್ಲಿರುತ್ತದೆ. ಇದೀಗ ಅವರ ಕೈಯಲ್ಲಿದ್ದ ರಿಂಗ್ ಮತ್ತೆ ಮದುವೆ ವಿಚಾರವನ್ನು ಮುನ್ನೆಲೆಗೆ ತಂದಿದೆ. ಈ ಬಗ್ಗೆ ಹಲವು ಊಹಾಪೋಹಾಗಳು ಹುಟ್ಟಿಕೊಂಡಿದೆ. ಗುಟ್ಟಾಗಿ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಮೋಹಕ ತಾರೆ? ಎಂದೇ ಹೇಳಲಾಗುತ್ತಿದೆ. ಇದೀಗ ಈ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದೂ ಒಗಟಾಗಿ.

ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮದವರು ಮದುವೆ, ರಿಂಗ್ ಬಗ್ಗೆ ಕೇಳಿದ್ದಾರೆ. ಅದಕ್ಕೆ ರಮ್ಯಾ ನಕ್ಕಿದ್ದಾರೆ. ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ. ಮದುವೆ ಆದ್ರೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ಯಾವಾಗ ಬೇಕಾದರು ಹಾಕಿಸಬಹುದು. ಅದಕ್ಕೆ ಮದುವೆಯಾಗಲೇಬೇಕೆಂದೇನಿಲ್ಲ ಎಂದಿದ್ದಾರೆ. ಆಮೇಲೆ ವೈಯಕ್ತಿಕ ಪ್ರಶ್ನೆ ಬೇಡ ಎಂದು ಅಲ್ಲಿಂದ  ನಡೆದಿದ್ದಾರೆ.

ದರ್ಶನ್ ಬಗ್ಗೆ ರಮ್ಯಾ ಏನಂದ್ರು?

ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲು ಪಾಲಾದಾಗ ನಟಿ ರಮ್ಯಾ ಟೀಕಿಸಿದ್ದರು. ತಮ್ಮ ಟ್ವೀಟ್ ಖಾತೆಯಲ್ಲಿ ದರ್ಶನ್ ವಿರುದ್ಧ ಟ್ವೀಟ್ ಮಾಡಿದ್ದರು.

ಕರ್ನಾಟಕ ಬಾಕ್ಸ್ ಆಫೀಸ್ ಎನ್ನುವ ಹೆಸರಿನ ಖಾತೆಯಿಂದ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ವೊಂದನ್ನು ಮಾಡಲಾಗಿತ್ತು. ಆ ಟ್ವೀಟ್‌ ಅನ್ನು ರಮ್ಯಾ ಅವರು ರೀ ಟ್ವೀಟ್ ಮಾಡಿದ್ದರು. ಐಪಿಸಿ ಸೆಕ್ಷನ್ 302 ಉಲ್ಲೇಖಿಸಿ, ಈ ಸೆಕ್ಷನ್‌ನ ಪ್ರಕಾರ ದರ್ಶನ್ ಕಠಿಣ ಶಿಕ್ಷೆಯಾಗಬಹುದು ಎಂದಿದ್ದರು. ಈ ಮೂಲಕ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ : ಉ*ಗ್ರರ ಟಾರ್ಗೆಟ್ ಆದ ಪ್ರಧಾನಿ ಮೋದಿ..! ವಿಮಾನದ ಮೇಲೆ ದಾ*ಳಿಯ ಬೆದರಿಕೆ..!

ಇದೀಗ ದರ್ಶನ್ ಜೈಲಿನಿಂದ ಹೊರಬಂದ ಬಳಿಕ ನಟಿ ರಮ್ಯಾರಲ್ಲಿ ಅವರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಲು ರಮ್ಯಾ ಹಿಂಜರಿದಿದ್ದಾರೆ. ನೋ ಕಮೆಂಟ್ಸ್ ಎಂದು ಮೆಲು ದನಿಯಲ್ಲಿ ಹೇಳಿ ಜಾರಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page