Connect with us

DAKSHINA KANNADA

udupi: ಲಕ್ಷಾಂತರ ಮೌಲ್ಯದ ಸರ ಕಳವು-ಆರೋಪಿ ಅರೆಸ್ಟ್..!

Published

on

ಉಡುಪಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಪಾವಂಜೆ ರಸ್ತೆಯಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಸರ ಸುಲಿಗೆ ಮಾಡಲು ಪ್ರಯತ್ನಿಸಿದ ಮತ್ತು ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಎಂಬಲ್ಲಿ ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದು ಲಕ್ಷಾಂತರ ಮೌಲ್ಯದ ಚಿನ್ನದ ಹವಳದ ಸರ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಯನ್ನು ಮಂಗಳೂರು ಮಾಲೇಮಾರ್ ಬಳಿ ವಾಸ್ತವ್ಯವಿರುವ ಮೂಲತಃ ಕೈಕಂಬ ಮಳಲಿ ನಿವಾಸಿ ವಿನಯ ಪ್ರಸಾದ್(30) ಎಂದು ಗುರುತಿಸಲಾಗಿದೆ.

ಕಳೆದ ಅ. 14ರಂದು ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾವಂಜೆ ಗ್ರಾಮದ ಪಾವಂಜೆಯಿಂದ ಹಳೆಯಂಗಡಿ ಕಡೆಗೆ ಹೋಗುವ ಒಳ ರಸ್ತೆಯಲ್ಲಿ  ಲೀಲಾ ಎಂಬವರ ಕುತ್ತಿಗೆಯಲ್ಲಿದ್ದ ಸರವನ್ನು ಯಾರೋ ಅಪರಿಚಿತ ವ್ಯಕ್ತಿ ಸುಲಿಗೆ ಮಾಡಲು ಪ್ರಯತ್ನಿಸಿದ ಬಗ್ಗೆ  ಲೀಲಾ ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾದ ವಿನಯ್ ಪ್ರಸಾದ್ ಎಂಬಾತನನ್ನು ಮುಲ್ಕಿ ಪೊಲೀಸರು ನ.2ರಂದು ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದು, ಪೊಲೀಸರು ತೀವ್ರ ತನಿಖೆ ನಡೆಸಿದಾಗ ಆರೋಪಿ ತಾನು ಉಡುಪಿಯ ಕಟಪಾಡಿ ಒಳ ರಸ್ತೆಯಲ್ಲಿ ಕೂಡ ಮಹಿಳೆಯೋರ್ವಳ ಕುತ್ತಿಗೆಯಿಂದ ಸರವನ್ನು ಸುಲಿಗೆ ಮಾಡಿದ ತಿಳಿಸಿದ್ದಾನೆ.

ಅದರಂತೆ ಆರೋಪಿ ಸುಲಿಗೆ ಮಾಡಿದ 43,4 ಗ್ರಾಂ. ತೂಕದ ಚಿನ್ನದ ಹವಳದ ಸರವನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್,  ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ  ಸಿದ್ದಾರ್ಥ ಗೋಯಲ್  ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ರವರ ನೇತೃತ್ವದಲ್ಲಿ  ಆರೋಪಿಯಮತ್ತು ಸೊತ್ತು ಪತ್ತೆ ಹಚ್ಚುವಲ್ಲಿ ಮುಲ್ಕಿ ಪೊಲಿಸ್ ಠಾಣೆಯ ಪಿ.ಎ,  ವಿದ್ಯಾಧರ ಡಿ  ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು..

DAKSHINA KANNADA

ಕಿನ್ನಿಗೋಳಿ : ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರರಿಬ್ಬರು ಸಾವು

Published

on

ಕಿನ್ನಿಗೋಳಿ : ವಿದ್ಯುತ್ ಕಂಬಕ್ಕೆ ಬೈಕ್ ಡಿ*ಕ್ಕಿಯಾಗಿ ಬೈಕ್ ಸವಾರ ಹಾಗೂ ಸಹ ಸವಾರ ಮೃತಪಟ್ಟ ಘಟನೆ  ಸೋಮವಾರ ರಾತ್ರಿ(ಮಾ.17) ಕಿನ್ನಿಗೋಳಿ ಬಟ್ಟ ಕೋಡಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೂಲತಃ ಧಾರವಾಡ ಸವದತ್ತಿ ಕಲ್ಲೂರು ನಿವಾಸಿಗಳಾದ ಪದ್ಮನ್ನೂರು ಹಾಗೂ ಮೂಲ್ಕಿಯಲ್ಲಿ ವಾಸ್ತವ್ಯವಿರುವ ನವೀನ್ (26) ಆತ್ಮಾನಂದ (27) ಮೃ*ತ ಯುವಕರು.

ಮೃತ ನವೀನ್ ಮತ್ತು ಆತ್ಮಾನಂದ  ಪದ್ಮನ್ನೂರು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದು, ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಸವಾರ ಆತ್ಮಾನಂದರ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಗಂಭೀರ  ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃ*ತಪಟ್ಟಿದ್ದಾರೆ

ಅಪಘಾ*ತದಿಂದ ವಿದ್ಯುತ್ ಕಂಬಕ್ಕೆ ಕೂಡ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮೆಸ್ಕಾಂ ಕಿನ್ನಿಗೋಳಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ : ಹರೀಶ್ ಪೂಂಜಾ ಸೀಟ್‌ನಲ್ಲಿ ಕೂತ್ಕೊಳ್ಳಿ.. ಇಲ್ಲಾಂದ್ರೆ ಎತ್ತಿ ಹೊರಗೆ ಬಿಸಾಡ್ತೇನೆ ; ಸದನದಲ್ಲಿ ಗರಂ ಆದ ಸ್ಪೀಕರ್

ಮೃತರಿಬ್ಬರು ಕಿನ್ನಿಗೋಳಿ ಸಮೀಪದ ಪದ್ಮನ್ನೂರು ಬಳಿ ಪ್ರತ್ಯಂಗಿರಾ ಎಂಟರ್ ಪ್ರೈಸಸ್ ಎಂಬ ರೆಡಿಮೇಡ್ ಆವರಣ ಗೋಡೆ ನಿರ್ಮಾಣದ ಸಂಸ್ಥೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಮೃತ ನವೀನ್ ಕುಮಾರ್ ವಿವಾಹಿತನಾಗಿದ್ದರೆ, ಆತ್ಮಾನಂದ ಅವಿವಾಹಿತ.

Continue Reading

DAKSHINA KANNADA

‘ಮಹಾ ಡ್ರಗ್’ ಜಾಲ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಸನ್ಮಾನ

Published

on

ಮಂಗಳೂರು : ‘ಡ್ರ*ಗ್ ಫ್ರೀ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪಣ ತೊಟ್ಟಿದ್ದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾರ್ಚ್ 16 ರಂದು  ಮಂಗಳೂರು ನಗರಕ್ಕೆ, ರಾಜ್ಯಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ದೇಶದ ವಿದೇಶಿ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಿದ್ದರು. ಅವರಿಂದ 75 ಕೋಟಿ ಮೌಲ್ಯದ 37.8 ಕೆಜಿ ನಿ*ಷೇಧಿತ ಮಾ*ದಕ ವಸ್ತು ಎಂಡಿಎಂಎಯನ್ನು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಇದೊಂದು ಬಹುದೊಡ್ಡ ಕಾರ್ಯಾಚರಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೀಗ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ  ಸಾಮರಸ್ಯ ಮಂಗಳೂರು ಪರವಾಗಿ ಗೌರವಿಸಲಾಯಿತು. ಅಧಿಕಾರಿಗಳಾದ ಮನೋಜ್ ಕುಮಾರ್, ರಫೀಕ್ , ಸುದೀಪ್, ಶರಣಪ್ಪ, ನರೇಂದ್ರ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ್ ಭಟ್ , ಸಾಮರಸ್ಯ ಮಂಗಳೂರು  ಸಂಘಟನೆ ಅಧ್ಯಕ್ಷೆ ಮಂಜುಳಾ ನಾಯಕ್ ಹಾಗೂ ಪದಾಧಿಕಾರಿಗಳಾದ ನೀತ್ ಶರಣ್, ರಾಜೇಶ್ ದೇವಾಡಿಗ, ಯೋಗೀಶ್ ನಾಯಕ್, ಟಿಸಿ ಗಣೇಶ್, ಜಯರಾಜ್ ಕೋಟಿಯಾನ್ , ವಿದ್ಯಾ ಶೆಣೈ , ಮಮತಾ ಕುಡ್ವ , ರಾಧಿಕಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Continue Reading

BANTWAL

ಬಂಟ್ವಾಳ: ರಸ್ತೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ

Published

on

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಇಲ್ಲಿನ ಮನೋರೋಗ ಚಿಕಿತ್ಸಕರು ರಕ್ಷಣೆ ಮಾಡಿದ್ದಾರೆ. ಕಲ್ಲಡ್ಕದ ಡಾಕ್ಟರ್ ಚಂದ್ರಶೇಖರ್ ಅವರ ಚೇತನಾ ಕ್ಲಿನಿಕ್ ನ ಮನೋರೋಗ ತಜ್ಞ ಡಾ. ರಾಜೇಶ್ ಈ ಕಾರ್ಯ ಮಾಡಿದವರಾಗಿದ್ದಾರೆ.

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ರಸ್ತೆಯಲ್ಲಿ ತಿರುಗಾಡುವುದನ್ನು ಕಂಡ ಅವರು ಆತನಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಹೀಗಾಗಿ ಆತನನ್ನು ವಿಚಾರಿಸಿದಾಗ ಆತ ತಮಿಳುನಾಡು ಮೂಲದ ಕಾಂಜಿಪುರಂನವನು ಎಂಬುದಾಗಿ ಹೇಳಿದ್ದಾನೆ. ಆತನನ್ನು ಚಿಕಿತ್ಸೆಗೆ ಒಳಪಡಿಸಲು ಕರೆದುಕೊಂಡು ಹೋಗಲು ಮುಂದಾದಾಗ ಈತ ತಪ್ಪಿಸಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ವ್ಯಕ್ತಿಯನ್ನು ಸ್ಥಳಿಯರಾದ ಚೇತನ ಕ್ಲಿನಿಕ್ ಸಿಬ್ಬಂದಿ ವಿನಯಾ ಮಿತಬೈಲು , ಜಮಾಲ್ ಕರಾವಳಿ ಮೆಡಿಕಲ್, ಸೌಕತ್ ಕಲ್ಲಡ್ಕ,ಅರಿಶ್ ಅಮರ್ ಹಾಗೂ ಇನ್ನಿತರ ಸಹಕಾರದೊಂದಿಗೆ ಹಿಡಿದು ಅಂಬ್ಯುಲೆನ್ಸ್ ನಲ್ಲಿ ಕೂರಿಸಿದ್ದಾರೆ. ಬಳಿಕ ದೈಗೂಳಿ ಸತ್ಯಸಾಯಿ ಸೇವಾಶ್ರಮಕ್ಕೆ ಬಿಡಲಾಗಿದೆ. ಇದೀಗ ಈತನಿಗೆ ಸತ್ಯಸಾಯಿ ಸೇವಾಶ್ರಮದಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಅಲ್ಪ ಪ್ರಮಾಣದಲ್ಲಿ ಸುದಾರಿಸಿಕೊಂಡಿದ್ದಾನೆ. ಇವರ ಈ ಸೇವೆಯನ್ನು ಸ್ಥಳೀಯರು ಕೊಂಡಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page