Connect with us

BIG BOSS

ನಿಯಮ ವಿರುದ್ಧ ನಡೆದುಕೊಂಡ ಗಿಲ್ಲಿ; ವೀಕೆಂಡ್‌ನಲ್ಲಿ ಕಿಚ್ಚನ ಕ್ಲಾಸ್‌ ಗ್ಯಾರಂಟಿ!

Published

on

BBK12: ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿನಟ ಕಳೆದ ಎರಡು ತಿಂಗಳಿನಿಂದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಉತ್ತಮವಾಗಿ ಆಡುತ್ತಿದ್ದಾರೆ. ಅನೇಕ ಬಾರಿ ಅವರ ಆಟ ಹಳಿ ತಪ್ಪಿದ್ದು ಇದೆ. ವೀಕೆಂಡ್‌ನಲ್ಲಿ ಸುದೀಪ್‌ ಬುದ್ಧಿ ಹೇಳಿದಾಗ ತಿದ್ದಿಕೊಂಡು ಮುಂದುವರೆಯುತ್ತಿದ್ದಾರೆ. ಈಗ ಅವರು ಕ್ಯಾಪ್ಟನ್ಸಿ ಅರ್ಹತೆ ಪಡೆಯದಿದ್ದರೂ ಕ್ಯಾಪ್ಟನ್‌ ರೂಂ ಬಳಸುವ ಹಂಬಲದಲ್ಲಿ ಇದ್ದಾರೆ. ವೀಕೆಂಡ್‌ನಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ.


ಗಿಲ್ಲಿಗೆ ಈ ವಾರ ಕ್ಯಾಪ್ಟನ್‌ ಆಗುವ ಅವಕಾಶ ತಪ್ಪಿದೆ. ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಕ್ಯಾಪ್ಟನ್‌ ಆಗಿದ್ದು, ಸ್ಪಂದನಾ ಹಾಗೂ ಅಭಿಷೇಕ್‌ ಕ್ಯಾಪ್ಟನ್‌ ಪಟ್ಟ ಪಡೆದರು. ಈ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಸ್ಪಂದನಾ ಅವರು ಸಾಕಷ್ಟು ಖುಷಿಪಟ್ಟರು. ಅವರನ್ನು ಸ್ವಾಗತಿಸಲು ಗಿಲ್ಲಿ ರೆಡಿಯಾಗಿ ನಿಂತಿದ್ದರು.

ಕ್ಯಾಪ್ಟನ್‌ ರೂಂಗೆ ಕ್ಯಾಪ್ಟನ್‌ ಬಿಟ್ಟು ಇನ್ಯಾರಿಗೂ ಹೋಗಲು ಹಾಗೂ ಅದನ್ನು ಬಳಸಲು ಅವಕಾಶ ಇಲ್ಲ. ಆದರೆ ಗಿಲ್ಲಿ ವೈಸ್‌ ಕ್ಯಾಪ್ಟನ್‌ ಎಂದು ರೂಂ ಒಳಗೆ ಹೋದರು. ಅಷ್ಟೇ ಅಲ್ಲ, ಅಲ್ಲಿರೋ ಬೆಡ್ ಮೇಲೆ ಮಲಗಿ ಕೆಲ ಹೊತ್ತು ವಿಶ್ರಾಂತಿ ಪಡೆದು ನಿಯಮ ವಿರುದ್ಧ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: BBK12: ರಕ್ಷಿತಾ ಯೋಗ್ಯತೆ ಅಳೆದ ಇತರೆ ಸ್ಪರ್ಧಿಗಳು!

ಈ ಮೊದಲು ಮಲ್ಲಮ್ಮನನ್ನು ಕ್ಯಾಪ್ಟನ್‌ ರೂಂ ಒಳಗೆ ಕೂರಿಸಿದ್ದಕ್ಕೆ ರಘುಗೆ ಸುದೀಪ್ ಕಿವಿ ಮಾತು ಹೇಳಿದ್ದರು. ಅದನ್ನು ಅರ್ಹತೆ ಪಡೆದು ಬಳಸಬೇಕು ಎಂಬರ್ಥದಲ್ಲಿ ಮಾತನಾಡಿದ್ದರು. ಈಗ ಗಿಲ್ಲಿ ಅವರಿಗೂ ಕಿಚ್ಚ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಳ್ಳುವ ಮುನ್ಸೂಚನೆ ಇದೆ.

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading

BIG BOSS

ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

Published

on

BBK12 : ಬಿಗ್ ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಅನ್ನೋ ಕುತೂಹಲ ಬಿಗ್ ಬಾಸ್ ವೀಕ್ಷಕರದ್ದು.  ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಈಗಾಗಲೇ ಬಹುತೇಕ ಮಂದಿ ವೋಟ್ ಮಾಡಿದ್ದು, ಫಿನಾಲೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಬಿಗ್ ಬಾಸ್‌ 11ರಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದವರು ಗಾಯಕ ಹನುಮಂತ ಲಮಾಣಿ. ಆ ಸೀಸನ್‌ನ ವಿಜೇತರಾಗಿ ಹೊರಬಂದು ಇತಿಹಾಸ ಸೃಷ್ಟಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಒಳಗೆ ಹೋದವರು ಗೆದ್ದು ತೋರಿಸಬಹುದೆಂದು ತೋರಿಸಿಕೊಟ್ಟಿದ್ದರು ಹನುಮಂತ. ಇದೀಗ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಅನ್ನೋ ಭವಿಷ್ಯ ನುಡಿದಿದ್ದಾರೆ.

ಯಾರು ವಿನ್ನರ್ ?

ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವರೇ ವಿನ್ನರ್ ಆಗ್ತಾರೆ ಎಂದು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಹೇಳಿದ್ದಾರೆ.

ಈ ಬಾರಿಗೆ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದ ಭಾವ ಮಾಡುವುದಿಲ್ಲ. ಈ ಬಾರಿ ಅತಿ ಹೆಚ್ಚು ವೋಟಿಂಗ್ ಆಗಿದೆ. ಅತಿ ಹೆಚ್ಚು ವೋಟು ಗಿಲ್ಲಿನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟ್ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್. ಸೋತೋರು ಬೇಜಾರ್ ಮಾಡ್ಕೋಬೇಡಿ. ಎಲ್ಲರಿಗೂ ಆಲ್ ದಿ ಬೆಸ್ಟ್, ಗಿಲ್ಲಿ ಅಣ್ಣನಿಗೆ ವಿಶೇಷ ಆಲ್ ದಿ ಬೆಸ್ಟ್. ಸುದೀಪ್ ಸರ್ ಮುಂದೆ ನಿಲ್ಲೋದೆ ಪುಣ್ಯ. ಫೈನಲ್ ವರೆಗೂ ಹೋಗೋದೆ ಪುಣ್ಯ  ಎಂದಿದ್ದಾರೆ.

Continue Reading

BIG BOSS

BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

Published

on

BBK12: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ಇಂದು ನಡೆಯಲಿದ್ದು, ಆರು ಸ್ಫರ್ಧಿಗಳು ಫಿನಾಲೆ ತಲುಪಿದ್ದಾರೆ. ಅವರ ಪೈಕಿ ಗಿಲ್ಲಿ ನಟನೇ ಈ ಸೀಸನ್‌ನ ವಿನ್ನರ್‌ ಎಂದು ಇಡೀ ಕರ್ನಾಟಕ ಸುದ್ದಿ ಮಾಡುತ್ತಿದೆ. ಇನ್ನು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿ ಬದಲು ರಕ್ಷಿತಾ ಶೆಟ್ಟಿ ಗೆಲ್ಲಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ.


ರಕ್ಷಿತಾ ಶೆಟ್ಟಿ ಕೇವಲ ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್‌. ಆದರೆ ಗಿಲ್ಲಿ ನಟ ನಟರಾಗಿದ್ದಾರೆ. ರಕ್ಷಿತಾ ಯೂಟ್ಯೂಬ್‌ ಒಂದರಿಂದಲೇ ಇಷ್ಟು ಫೇಮಸ್‌ ಆಗಿ ಬಿಗ್‌ಬಾಸ್‌ ಶೋಗೆ ಸ್ಥಾನ ಪಡೆದಿದ್ದಾರೆ. ಅದಕ್ಕಾಗಿ ಗಿಲ್ಲಿಗಿಂತಲೂ ರಕ್ಷಿತಾ ಗ್ರೇಟ್‌ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ರಕ್ಷಿತಾಗಿಂತ ಗಿಲ್ಲಿಗೆ ಅಭಿಮಾನಿಗಳು ಜಾಸ್ತಿ ಇದ್ದಾರೆ. ಅದೇ ಕಾರಣಕ್ಕಾಗಿ ಸಾಕಷ್ಟು ವೋಟ್‌ ಗಿಲ್ಲಿಗೆ ಬಂದಿವೆ. ಆದರೆ, ರಕ್ಷಿತಾ ಶೆಟ್ಟಿ ಗೆಲ್ಲಬೇಕು ಎಂಬ ಬಯಕೆ ಇರುವುದು ಈಗ ಜಗತ್ತಿಗೆ ಗೊತ್ತಾಗಿದೆ. ಕೆಲವು ಮಾಹಿತಿ ಪ್ರಕಾರ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಸ್ಥಾನ ಸಿಗುವುದು ಡೌಟ್‌ ಎನ್ನಲಾಗಿದೆ. ಗಿಲ್ಲಿ ವಿನ್ನರ್‌, ಅಶ್ವಿನಿ ಗೌಡ ರನ್ನರ್ ಎಂದು ಅನೇಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಇನ್ನು ಕೆಲವೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡ 12ರ ವಿನ್ನರ್‌, ರನ್ನರ್‌ ಅದೇ ರೀತಿ 3ನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ತಿಳಿಯಲಿದೆ. ಕಲರ್ಸ್‌ ಕನ್ನಡದಲ್ಲಿ ಇಂದು ಪ್ರಕಟಿಸಲಾಗುತ್ತಿದ್ದು, ಕಪ್‌ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

Continue Reading
Advertisement

Trending

Copyright © 2025 Namma Kudla News

You cannot copy content of this page