Connect with us

MANGALORE

‘Get Mi Class’ ಉದ್ಘಾಟಿಸಿದ ಮಂಗಳೂರು ವಿವಿ ಉಪಕುಲಪತಿ

Published

on

ಮಂಗಳೂರು: ರಾಷ್ಟೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ, ಹಾಗೂ ಮಣಿಪಾಲ್ ಗ್ರೂಪ್ ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್, 7ನೇ ಪಡೆ, ಅಸೈಗೋಳಿ, ಮಂಗಳೂರು ಇದರ ಸಹಭಾಗಿತ್ವದಲ್ಲಿ ಪೊಲೀಸ್‌ ಕುಟುಂಬದ ವಿದ್ಯಾರ್ಥಿಗಳಿಗೆ CET, NEET & JEE ಕೋರ್ಸ್‌ನ ‘Get Mi Class’ ಉದ್ಘಾಟನಾ ಸಮಾರಂಭ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಘಟಕದ ವಸತಿ ಗೃಹ ಸಮುಚ್ಛಯದಲ್ಲಿ ಇಂದು ನಡೆಯಿತು.


ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಸುಬ್ರಮಣ್ಯ ಯಡಪಡಿಯತ್ತಾಯರವರು ಉದ್ಘಾಟಿಸಿದರು.

ನಂತರ ಮಾತನಾಡಿದ ವಿವಿ ಉಪಕುಲಪತಿ, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಮತ್ತು ಮಣಿಪಾಲ್ ಗ್ರೂಪ್‍ರವರ ಸಾಧನೆಗಳನ್ನು ಶ್ಲಾಘಿಸುತ್ತಾ ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣದ ಮಹತ್ವ ಅತಿ ಪ್ರಾಮುಖ್ಯವಾಗಿದೆ.

ಇಂತಹ ಅವಕಾಶವನ್ನು ಪೊಲೀಸ್ ಕುಟುಂಬದರವರ ಮಕ್ಕಳಿಗೆ ಸಿಇಟಿ ಮತ್ತು ಎನ್‍ಇಇಟಿ ಕೊಚಿಂಗ್‍ನ್ನು ಆನ್ ಲೈನ್ ಮೂಲಕ ಉಚಿತವಾಗಿ ನೀಡುತ್ತಿದ್ದಾರೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು ತಿಳಿಸಿದರು.


ಇದೇ ಸಂದರ್ಭದಲ್ಲಿ ‘Get Mi Class’ ಮಣಿಪಾಲ್ ಗ್ರೂಪ್‍ನವರು ಅನಾವರಣ ಮಾಡಿದರು. ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಕಾರ್ಯಕಾರಿ ನಿರ್ವಾಹಕ ನಿರ್ದೇಶಕ ಮಾತನಾಡಿ, ಇಂದಿನ ಯುಗದಲ್ಲಿ ಕಂಪ್ಯೂಟರ್‌ನ ಬಳಕೆ ಅತ್ಯುಮೂಲ್ಯವಾಗಿರುತ್ತದೆ.

ಹಾಗಾಗಿ ಪೊಲೀಸ್ ಕುಟುಂಬದವರ ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಸಿಇಟಿ ಮತ್ತು ಎನ್‍ಇಇಟಿ ಪರೀಕ್ಷೆಯ ಪೂರ್ವ ಸಿದ್ದತೆಯ ಬಗ್ಗೆ ಆನ್ ಲೈನ್ ಕೋಚಿಂಗ್ ತರಗತಿಗಳನ್ನು ಉಚಿತವಾಗಿ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ 7ನೇ ಪಡೆಯ ಕಮಾಂಡೆಂಟ್ ಬಿ.ಎಂ ಪ್ರಸಾದ್ ಮಾತಾನಾಡಿ, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಮತ್ತು ಮಣಿಪಾಲ್ ಗ್ರೂಪ್‍ರವರು ಸಿಇಟಿ ಮತ್ತು ಎನ್‍ಇಇಟಿ ಪರೀಕ್ಷೆಯ ಆನ್ ಲೈನ್ ತರಬೇತಿ ಕೊಚಿಂಗ್‍ನ್ನು ನಮ್ಮ ಪೊಲೀಸ್ ಕುಟುಂದವರ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ.

 

ಇವರ ಸಂಸ್ಥೆಯಿಂದ ಹಲವಾರು ಡಿಜಿಟಲ್ ತರಬೇತಿಗಳನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ ನಮ್ಮ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕಂಪ್ಯೂಟರ್ ತರಬೇತಿ ನೀಡಲು ಸದರಿ ಸಂಸ್ಥೆಯವರು ಒಮ್ಮತವನ್ನು ನೀಡಿರುತ್ತಾರೆ.

ಹಾಗಾಗಿ ಅವರಿಗೆ ಬೇಕಾದ ಎಲ್ಲಾ ಸಹಕಾರವನ್ನು ನಾನು ನೀಡುತ್ತೇನೆ ಹಾಗೆಯೆ ನಮ್ಮ ಕುಟುಂಬ ಸದಸ್ಯರ ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆನೀಡಿದರು.

ಇದೇ ಸಂದರ್ಭದಲ್ಲಿ ಮಣಿಪಾಲ್ ಗ್ರೂಪ್ ಸೀನಿಯರ್ ಮ್ಯಾನೇಜರ್‌ ರಾಜ್ ಕುಮಾರ್ ನಟರಾಜ್, ಸೀನಿಯರ್ ಅಸೋಸಿಯೇಟ್‍ ಅನ್ಮೂಲ್ ಅಶೋಕ್,

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ನಿರ್ದೇಶಕ ನಿರ್ಮಲ ಪಿ ರಾವ್, ಸಮಾಲೋಚಕಿ ಮಾಲತಿ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‌ ಅವಿನಾಶ್ ಎಸ್, ಹೆಡ್ ಕಾನ್ಸ್ಟೇಬಲ್‍ ವಿರುಪಾಕ್ಷಪ್ಪ ಎನ್, ಮತ್ತು ಘಟಕದ ಅಧಿಕಾರಿ ಸಿಬ್ಬಂದಿ ಹಾಗೂ ಕುಟುಂಬಸ್ಥರು ಹಾಜರಿದ್ದರು.

ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಸಂಯೋಜಕ ಮುಕುಂದ ನಿರೂಪಣೆ ಮಾಡಿದರು. ಸುನಿತ ಮತ್ತು ದಿವ್ಯರವರು ಪ್ರಾರ್ಥನೆಗೈದರು. ಪೊಲೀಸ್ ಇನ್ಸ್‍ಪೆಕ್ಟರ್‌ ಗಣೇಶ ಕೊನಬೇವು ಸ್ವಾಗತಿಸಿದರು.

MANGALORE

ಮಂಗಳೂರು: ನಗರದಲ್ಲಿ ಮಿತಿ ಮೀರಿದ ಫ್ಲೆಕ್ಸ್ ಹಾವಳಿಗೆ ಕಡಿವಾಣ

Published

on

ಮಂಗಳೂರು: ಮಂಗಳೂರು ನಗರದಲ್ಲಿ ನಗರ ಸೌಂಧರ್ಯವನ್ನು ಹಾಳುಗೆಡವುತ್ತಿರುವ ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕಲು ನಗರ ಪಾಲಿಕೆ ಮುಂದಾಗಿದೆ.

ಕೆಲ ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮ ಹೊರತಾಗಿ ಇತರ ಫ್ಲೆಕ್ಸ್ ಗಳ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಬಳಿಕ ಹೊಸದಾಗಿ ಯಾರೂ ಕೂಡಾ ಫ್ಲೆಕ್ಸ್ ಅಳವಡಿಸಬಾರದು ಎಂದು ಎಚ್ಚರಿಕೆ ಕೂಡಾ ನೀಡಲಾಗಿತ್ತು.

ಇದನ್ನೂ ಓದಿ: ಫ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ: ಮಂಗಳೂರು ಮಹಾನಗರ ಪಾಲಿಕೆ ಎಚ್ಚರಿಕೆ

ಆದ್ರೆ ನಗರ ಪಾಲಿಕೆ ಕಮಿಷನರ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬಂತೆ ತೆರವಾದ ಜಾಗದಲ್ಲಿ ಮತ್ತೆ ಅನಧಿಕೃತ ಫ್ಲೆಕ್ಸ್ ಗಳು ಎದ್ದು ನಿಂತಿತ್ತು. ಇದೀಗ ಈ ವಿಚಾರವಾಗಿ ಖಡಕ್ ವಾರ್ನಿಂಗ್ ಮಾಡಿರುವ ನಗರ ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್ ಅವರು ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಸೋಮವಾರದಿಂದ ನಿರಂತರವಾಗಿ ಕಾರ್ಯಾಚರಣೆ ಮಾಡಿ ನಗರದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್ ಗಳನ್ನು ತೆರವು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

 

Continue Reading

DAKSHINA KANNADA

ಅಕ್ರಮ ಪಿಸ್ತೂಲ್ ಸಹಿತ ಅಂತಾರಾಜ್ಯ ಕ್ರಿಮಿನಲ್ ಬಂಧನ

Published

on

ಮಂಗಳೂರು : ಎರಡು ದಿನಗಳ ಹಿಂದೆ ಎರಡು ದಿನಗಳ ಹಿಂದೆ ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಡ್ರಗ್ ಮಾರಾಟಗಾರ ಬಂಧನವಾಗಿತ್ತು. ಅವರಿಂದ 3 ಪಿಸ್ತೂಲ್, 6 ಸಜೀವ ಮದ್ದುಗುಂ*ಡುಗಳನ್ನು, ಕಾರುಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳ ಬೆನ್ನು ಹತ್ತಿರುವ ಪೊಲೀಸರು, ಈ ಪೈಕಿ ಓರ್ವನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಬ್ದುಲ್ ಫೈಜಲ್.ಎಂ ಅಲಿಯಾಸ್ ಫೈಜು (26) ಬಂಧಿತ ಆರೋಪಿ. ಈತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಮೊರ್ತಾನಾ ಎಂಬಲ್ಲಿ ಮಾರ್ಚ್ 15 ರಂದು ಬಂಧಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲೇ ಅತೀ ದೊಡ್ಡ ಕಾರ್ಯಾಚರಣೆ; ಮಂಗಳೂರು ಸಿಸಿಬಿ ಪೊಲೀಸರಿಂದ ವಿದೇಶಿ ಡ್ರಗ್ ಪೆಡ್ಲರ್‌ಗಳ ಬಂಧನ

ಆತನಿಂದ 1 ಪಿಸ್ತೂಲ್, 1 ಸಜೀವ ಮದ್ದು ಗುಂಡು ಹಾಗೂ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 2,10,000 ರೂ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಎರಡು ಹ*ಲ್ಲೆ ಪ್ರಕರಣಗಳು ದಾಖಲಾಗಿವೆ.

Continue Reading

DAKSHINA KANNADA

ಮಂಗಳೂರು: ಮಹಡಿಯಿಂದ ಬಿದ್ದು13 ವರ್ಷದ ಬಾಲಕ ಸಾ*ವು, ಪಬ್‌ಜಿ ಆಟದ ಬಗ್ಗೆ ಅನುಮಾನ..!

Published

on

ಮಂಗಳೂರು: ಐದನೇ ಮಹಡಿಯಿಂದು ಬಿದ್ದು 13 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರಿನ ಮೇರಿಹಿಲ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

6ನೇ ತರಗತಿ ಓದುತ್ತಿದ್ದ ಸಮರ್ಜಿತ್(13) ಮೃತ ಬಾಲಕ. ಈ ಘಟನೆಯು ಶನಿವಾರ ಮುಂಜಾನೆ 5.30 ರಿಂದ 5.50 ರ ನಡುವೆ ನಡೆದಿದ್ದು, ಬಾಲಕನು ಮುಂಜಾನೆ ಯಾವೂದೋ ಕಾರಣಕ್ಕೆ ಅಪಾರ್ಟ್‌ಮೆಂಟ್‌ನ 5 ನೇ ಮಹಡಿಗೆ ಹೋಗಿದ್ದಾನೆ. ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಬಾಲಕನು ತನ್ನ ಪುಸ್ತಕದಲ್ಲಿ ಪಬ್‌ಜಿ ಆಟದ ಬಗ್ಗೆ ಬರೆದಿದ್ದು, ಈ ಸಾವಿನ ಕಾರಣವಾಗಿರಬಹುದೆಂದು ಅನುಮಾನ ವ್ಯಕ್ತವಾಗಿದೆ.

ಮೃತ ಬಾಲಕನ ತಂದೆ ಸುದೇಶ್ ಭಂಡಾರಿ ಉದ್ಯಮಿಯಾಗಿದ್ದು ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿ ವಾಸವಾಗಿದ್ದರು. ಕಲಿಕೆಯಲ್ಲೂ ಮುಂದಿದ್ದ ಬಾಲಕನಿಗೆ ಈಜು ಹಾಗೂ ಕೀಬೋರ್ಡ್‌ ನುಡಿಸುವುದು ಸೇರಿದಂತೆ ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿದ್ದನು. ಅಲ್ಲದೇ ಹಲವಾರು ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದನು.

ಮಹಡಿಯಿಂದ ಬೀಳುವ ಒಂದು ಹಂತದ ವಿಡಿಯೋ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಬಾಲಕನು ತಂದೆ-ತಾಯಿ ಹಾಗೂ ತಂಗಿಯನ್ನು ಅಗಲಿದ್ದಾನೆ. ಬಾಲಕನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page