Connect with us

FILM

ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು… ಅಷ್ಟಕ್ಕೂ ಏನಾಯಿತು ಗೊತ್ತಾ..?

Published

on

ಬೆಂಗಳೂರು: ಇತ್ತೀಚಿಗಷ್ಟೇ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ನಟ ಶಿವರಾಜ್‌ಕುಮಾರ್ ಚಿಕಿತ್ಸೆ ಪಡೆದು ಹುಷಾರ್ ಆಗಿ ಅಮೇರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಅವರು ಗುಣಮುಖರಾದ ಕೂಡಲೇ ಪತ್ನಿ ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗೀತಾ ಶಿವರಾಜ್‌ಕುಮಾರ್‌ ಅವರಿಗೆ ನರದ ಸಮಸ್ಯೆಯಿಂದ ಕತ್ತಿನ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ವರದಿಯಾಗಿದೆ.

ಈ ಮೊದಲೇ ಅವರು ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ಆದರೆ ಇದು ಆಗಿರಲಿಲ್ಲ. ಈಗ ಅವರಿಗೆ ಕತ್ತಿನ ಭಾಗದಲ್ಲಿ ಸರ್ಜರಿ ನಡೆದಿದೆ. ಅವರು ಬೇಗ ಹುಷಾರ್ ಆಗಿ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

FILM

ನನ್ನ ಕುಟುಂಬದಿಂದ ನನಗೆ ಒತ್ತಡವಿದೆ..!ಪೂಜಾ ಹೆಗ್ಡೆ

Published

on

ಕುಡ್ಲದ ಹುಡುಗಿ ಪೂಜಾ ಹೆಗ್ಡೆ ಈಗಾಗಲೇ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಸೂರ್ಯ ಜೊತೆಗಿನ ‘ರೆಟ್ರೋ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದಲ್ಲಿ ಅವರು ತಮ್ಮ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ್ದಾರೆ.

ನಟಿ ಪೂಜಾ ಹೆಗ್ಡೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗವನ್ನು ಮೆಚ್ಚಿಸಿದ್ದಾರೆ. ಅವರು ಒಂದು ಕಾಲದಲ್ಲಿ ಟಾಲಿವುಡ್‌ನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದರು. ತೆಲುಗು ಉದ್ಯಮದಲ್ಲಿ ಒಳ್ಳೆಯ ಹೆಸರು ಮಾಡಿರುವ ನಟಿ.

ಸ್ಟಾರ್ ಹೀರೊಗಳಾದ ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್, ಮಹೇಶ್ ಬಾಬು, ಪ್ರಭಾಸ್, ರಾಮ್‌ ಚರಣ್, ಪವನ್ ಕಲ್ಯಾಣ್ ಮತ್ತು ಇತರ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ತೆಲುಗು ಚಿತ್ರಗಳನ್ನು ತೊರೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ತೆಲುಗು ಚಿತ್ರಗಳಿಂದ ದೂರವಿದ್ದಾರೆ. ಪ್ರಸ್ತುತ ಪೂಜಾ ಹಿಂದಿ ಮತ್ತು ತಮಿಳು ಚಿತ್ರಗಳನ್ನು ಮಾಡುತ್ತಿದ್ದಾರೆ.
ಸರಣಿ ಹಿಟ್ ಚಿತ್ರಗಳು ಮತ್ತು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ ನಟಿ ಈಗ ಕೈಯಲ್ಲಿ ಒಂದೇ ಒಂದು ತೆಲುಗು ಚಿತ್ರವಿಲ್ಲ. ಅವರು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕನ್ನಡ ಸಿನಿಮಾ ಮಾಡುವಂತೆ ಮನೆಯವರಿಂದ ಒತ್ತಾಯ ಇದೆ ಎಂದಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಎಟಿಎಮ್; ವಿನೂತನ ಕಾರ್ಯ ಪರಿಚಯಿಸಿದ ಭಾರತೀಯ ರೈಲ್ವೆ..!

ಸಂದರ್ಶನದಲ್ಲಿ ಮಾತನಾಡಿದ ಪೂಜಾ ಹೆಗ್ಡೆ,’ನನ್ನ ಕುಟುಂಬದಿಂದ ನನಗೆ ಒತ್ತಡವಿದೆ. ನಾನು ಮೂಲತಃ ಕರ್ನಾಟಕದವಳು, ತುಳು ಹುಡುಗಿ. ಹಾಗಾಗಿ ನನ್ನ ಪೋಷಕರು ಆಗಾಗ ಕನ್ನಡದಲ್ಲಿ ಸಿನಿಮಾ ಮಾಡಲು ಹೇಳುತ್ತಾ ಇರುತ್ತಾರೆ. ಕನ್ನಡದಲ್ಲಿ ಹಲವು ಕಥೆಗಳನ್ನು ಈಗಾಗಲೇ ಕೇಳಿದ್ದೇನೆ. ಯಾವುದು ಇಷ್ಟವಾಗಿಲ್ಲ. ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ’. ಈ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸುವ ಆಸಕ್ತಿಯನ್ನು ಹಂಚಿಕೊಂಡಿದ್ದಾರೆ. ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

Continue Reading

FILM

300 ಮದುವೆ ಪ್ರಸ್ತಾಪಗಳನ್ನು ರಿಜೆಕ್ಟ್ ಮಾಡಿದ್ದ ವೈಷ್ಣವಿ ಗೌಡ.. ಅಕಾಯ್ ಬಲೆಗೆ ಬಿದ್ದಿದ್ದು ಹೇಗೆ..!

Published

on

ಮಂಗಳೂರು/ಬೆಂಗಳೂರು: ಸೀತಾ ರಾಮ ಸೀರಿಯಲ್ ಖ್ಯಾತಿಯ ವೈಷ್ಣವಿ ಗೌಡ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ನಟಿ ಸೋಶಿಯಲ್ ಮೀಡಿಯಾದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಮಿಂಚಿರುವ ವೈಷ್ಣವಿ ಗೌಡ, ಸ್ನೇಹಿತರು, ಸಿನಿಮಾ ಇಂಡಸ್ಟ್ರಿಯವರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವೈಷ್ಣವಿ ಗೌಡ ಅವರ ಎಂಗೇಜ್‌ಮೆಂಟ್ ಗುಟ್ಟಾಗಿ ನಡೆದಿದೆ. ಅವರು ‘ಸೀತಾ ರಾಮ’ ಧಾರಾವಾಹಿ ಕೆಲಸಗಳ ಮಧ್ಯೆ ಬ್ರೇಕ್ ಪಡೆದು ಅದ್ದೂರಿಯಾಗಿ ತಮ್ಮ ವಿಶೇಷ ದಿನವನ್ನು ಆಚರಿಸಿದ್ದಾರೆ. ವೈಷ್ಣವಿ ಹಾಗೂ ಅಕಾಯ್‌ಗೆ ಎಲ್ಲ ಕಡೆಗಳಿಂದ ಶುಭಾಶಯ ಹರಿದು ಬರುತ್ತಿದೆ.

ಇನ್ನು ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಅಂತ ಅಭಿಮಾನಿಗಳು ಹುಡುಕುತ್ತಿದ್ದಾರೆ. ಹುಡುಗನ ಹೆಸರು ಅಕಾಯ್. ಉದ್ಯಮಿಯಾಗಿದ್ದಾರೆ. ನಟಿ ವೈಷ್ಣವಿ ಗೌಡ ಬಣ್ಣದ ಲೋಕದವರನ್ನು ಕೈ ಹಿಡಿಯದೆ ಉದ್ಯಮಿಯನ್ನು ಮದುವೆಯಾಗಲು ರೆಡಿಯಾಗಿದ್ದಾರೆ.

ವೈಷ್ಣವಿ ಗೌಡ ಅವರು ಬಿಗ್ ಬಾಸ್ ಸೀಸನ್ 8ಕ್ಕೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್‌ನಲ್ಲಿ ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗಿತ್ತು. ಕೊವಿಡ್ ಬಂದ ಕಾರಣ ಬಿಗ್ ಬಾಸ್‌ನ ಅರ್ಧಕ್ಕೆ ನಿಲ್ಲಿಸಿ ಆ ಬಳಿಕ ಶುರು ಮಾಡಲಾಯಿತು. ಮನೆಗೆ ಹೋಗಿ ಬಂದ ಗ್ಯಾಪ್‌ನಲ್ಲಿ ವೈಷ್ಣವಿಗೆ ಭರ್ಜರಿ ಮದುವೆ ಆಫರ್‌ಗಳು ಬಂದಿತ್ತು ಎಂದು ವೈಷ್ಣವಿ ಹೇಳಿದ್ದರು.

ಇದನ್ನೂ ಓದಿ: ಗೆಲುವಿನ ಬಳಿಕ ಧೋನಿ ಈ ರೀತಿ ಹೇಳಿದ್ದು ಯಾಕೆ..!

’43 ದಿನ ಹೊರಗಡೆ ಇದ್ರಿ, ಅಂದಾಜು ಎಷ್ಟು ಪ್ರಫೋಸಲ್ ಬಂದಿರಬಹುದು’ ಎಂದು ವೇದಿಕೆ ಮೇಲೆ ಸುದೀಪ್ ಕೇಳಿದ್ದರು. ಆಗ ವೈಷ್ಣವಿ, ‘200ರಿಂದ 300 ಬಂದಿರಬಹುದು. ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ ಸರ್’ ಎಂದಿದ್ದರು ವೈಷ್ಣವಿ.

ಈ ವೇಳೆ ವೈಷ್ಣವಿ ಇನ್ನೊಂದು ಮಾತು ಹೇಳಿದ್ದರು. ‘ನಾನು ಯಾವಾಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ’ ಎಂದಿದ್ದರು. ಈಗ ಅಕಾಯ್ ವೈಬ್‌ಗೆ ಕನೆಕ್ಟ್ ಆಗಿ ಬಲೆಯಲ್ಲಿ ಬಿದ್ದಿದ್ದಾರೆ.

ಅಲ್ಲದೇ ನಟಿ ವೈಷ್ಣವಿ ಗೌಡ ತಾವು ಮದುವೆಯಾಗುತ್ತಿರೋ ಹುಡುಗನ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. 8 ನಿಮಿಷದ ವೀಡಿಯೋದಲ್ಲಿ ನಟಿ ವೈಷ್ಣವಿ ಗೌಡ ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇನ್ನೂ ಅನುಕೂಲ್ ಅವರು ಬೇರೆ ರಾಜ್ಯದವರು ಎಂದು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ.

Continue Reading

FILM

ಸದ್ದಿಲ್ಲದೆ ಚಂದನ್‌ ಶೆಟ್ಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ..!

Published

on

ಮಂಗಳೂರು/ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿ ಮೂಡಿ ಬರುತ್ತಿರುವ ‘ಸೀತಾ ವಲ್ಲಭ’ ಧಾರಾವಾಹಿಯ ನಟಿ ಸುಪ್ರೀತಾ ಸತ್ಯನಾರಾಯಣ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಚಂದನ್ ಶೆಟ್ಟಿ ಜೊತೆ ಎಂಗೇಜ್ ಆಗಿರುವ ಕುರಿತು ನಟಿ ಸುಪ್ರೀತಾ ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್ ‘ಸೀತಾ ವಲ್ಲಭ’ ಧಾರಾವಾಹಿಯಲ್ಲಿ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಅಲ್ಲದೇ ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ಇದೀಗ ನಟಿ ಸುಪ್ರೀತಾ ಸತ್ಯನಾರಾಯಣ್ ಗುಟ್ಟಾಗಿ ಎಂಗೇಜ್‌ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಕೆಲವು ದಿನಗಳ ಬಳಿಕ ಸುಪ್ರೀತಾ ಸತ್ಯನಾರಾಯಣ್ ಅವರೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಶೇರ್​ ಮಾಡಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ಸುಪ್ರೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಬ್ಬದ ದಿನದಂದೇ ದುಬಾರಿ ಬೆಲೆಯ ಕಾರು ಖರೀದಿಸಿದ ನಟ ರಿಷಬ್‌ ಶೆಟ್ಟಿ

ಹೊಸ ಚಾಪ್ಟರ್ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ.

ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯೂ ಕಂದ. ನನ್ನ ಹೃದಯ ನಿನ್ನದು. ನನ್ನ ಹೃದಯವು ಶಾಶ್ವತವಾಗಿ ನಿನಗೆ ಸೇರಿದೆ. ನಿನ್ನ ಸಹಚಾರಿಣಿ ನಾನೇ ಎಂದು ನಟಿ ಪೋಸ್ಟ್ ಬರೆದುಕೊಂಡಿದ್ದಾರೆ.

ಚಂದನ್ ಶೆಟ್ಟಿ ಯಾರು?
ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಚಂದನ್ ಶೆಟ್ಟಿ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚಂದನ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಡಿಜಿಟಲ್ ಕ್ರಿಯೇಟರ್, ಸಾಫ್ಟ್‌ವೇರ್ ಉದ್ಯೋಗಿ ಎಂದು ಬರೆದುಕೊಂಡಿದ್ದಾರೆ. ಕೊಡಗಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇನ್‌ಸ್ಟಾ ಖಾತೆಯಲ್ಲಿ ದೇಶ ವಿದೇಶ ಸುತ್ತಿರೋ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page