Connect with us

LATEST NEWS

ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಅಕ್ಕ – ತಂಗಿ ಸಾ*ವು

Published

on

ಮಂಗಳೂರು/ಮೈಸೂರು : ಬಾತ್‌ರೂಂ ನಲ್ಲಿ  ಗ್ಯಾಸ್ ಗೀಸರ್  ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ  ಸಾ*ವನ್ನಪ್ಪಿದ ಘಟನೆ ಮೈಸೂರು  ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

23 ವರ್ಷದ ಗುಲ್ಫರ್ಮ್ ತಾಜ್ , 20 ವರ್ಷದ  ಸಿಮ್ರಾನ್ ತಾಜ್  ಮೃ*ತಪಟ್ಟವರು. ಗ್ಯಾಸ್ ಗೀಸರ್‌ ನಿಂದ ಕಾರ್ಬನ್ ಮೋನಾಕ್ಸೈಡ್   ಸೋರಿಕೆಯಾಗಿ ಈ ದುರಂ*ತ ನಡೆದಿದೆ. ಗುಲ್ಫರ್ಮ್,  ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಬಾತ್‌ ರೂಂಗೆ ಹೋಗಿದ್ದಾರೆ. ಬಹಳ ಹೊತ್ತು ಕಳೆದರೂ ಬಾತ್‌ರೂಂನಿಂದ ಅಕ್ಕ, ತಂಗಿ ಹೊರ ಬಾರದ ಹಿನ್ನೆಲೆ ತಂದೆ ಅಲ್ತಾಫ್ ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿದ್ದುದು ಗಮನಕ್ಕೆ ಬಂದಿದೆ.

ಇದನ್ನೂ ಓದಿ :ನೇತ್ರಾವತಿ ನದಿಗೆ ಹಾರಿ ಮಹಿಳೆ ಆ*ತ್ಮಹ*ತ್ಯೆ 

ಕೂಡಲೇ ಸಹೋದರಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲಿ ಇಬ್ಬರು ಉಸಿರು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಬಾತ್​ರೂಂನಲ್ಲಿ ಕಿಟಕಿ ಇಲ್ಲದ ಕಾರಣ ಈ ದುರಂ*ತ ಸಂಭವಿಸಿದೆ  ಎಂದು ಹೇಳಲಾಗಿದೆ.

LATEST NEWS

ವಿವಾಹಿತ ಯುವಕನಿಗೆ ಹನಿಟ್ರ್ಯಾಪ್, ಹೋಂ ಸ್ಟೇಗೆ ಕರೆಸಿ ಆಕೆ ಮಾಡಿದ್ದೇನು ಗೊತ್ತಾ..?

Published

on

ಮಡಿಕೇರಿ: ಈ ಸೋಷಿಯಲ್ ಮೀಡಿಯಾ ಕಾಲಘಟ್ಟದಲ್ಲಿ ಪ್ರೀತಿ, ಪ್ರೇಮ, ಮದುವೆ, ಬ್ರೇಕಪ್ ಎಲ್ಲವೂ ಆನ್ಲೈನ್‌ನಲ್ಲೇ ಆಗುತ್ತಿರುತ್ತದೆ. ಇತ್ತೀಚೆಗೆ ಹನಿಟ್ರ್ಯಾಪ್‌ನಂತಹ ಪ್ರಕರಣಗಳು ಕೂಡಾ ಎಲ್ಲೆಂದರಲ್ಲಿ ನಡೆಯುತ್ತಿದೆ. ಹಣಕ್ಕಾಗಿ ಜನರು ಅದೆಷ್ಟೋ ಅನ್ಯ ಮಾರ್ಗವನ್ನು ಹಿಡಿಯುತ್ತಾರೆ. ಅದೇ ರೀತಿ ಯಾಮಾರಿದ ಯುವಕನೋರ್ವ ಹುಡುಗಿ ಕೈಯ್ಯಲ್ಲಿ ಸಿಕ್ಕಿ ಕಕ್ಕಾಬಿಕ್ಕಿಯಾಗಿದ್ದಾನೆ.

ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಮಡಿಕೇರಿಗೆ ಬಂದಿದ್ದ ಮಂಡ್ಯ ಮೂಲದ ಯುವಕನಿಗೆ  ನರಕ ದರ್ಶನವಾಗಿದೆ. ಮಡಿಕೇರಿಗೆ ಬಂದಿದ್ದ ಯುವಕನನ್ನ ಖಾಸಗಿ ಹೋಂ ಸ್ಟೇನಲ್ಲಿ  ಬಂಧಿಸಿಟ್ಟು ಹಣಕ್ಕಾಗಿ ಡಿಮ್ಯಾಂಡ್ ಮಾಡಿರುವ ಘಟನೆ ಬೆಚ್ಚಿಬೀಳಿಸಿದೆ.

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್‌ಗೆ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಭೇಟಿಯಾಗಿ ಮಹದೇವಬ್‌ ಶುಕ್ರವಾರ ಸಂಜೆ ಮಡಿಕೇರಿಗೆ ಬಂದಿದ್ದಾನೆ. ಒಂಟಿಯಾಗಿ ಬಂದಿದ್ದ ಮಹದೇವ್‌ನನ್ನ ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದಕ್ಕೆ ಕರೆಸಿಕೊಂಡಿದ್ದಾಳೆ. ಕೆಲ ಕಾಲ ಆತನೊಂದಿಗೆ ಮಾತನಾಡಿ ಮದ್ಯಪಾನ ಸೇವಿಸಿ ಮಡಿಕೇರಿಯ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ನೀಡಿದ್ದಾಳೆ.

ಇದೇ ವೇಳೆಯಲ್ಲಿ ಆಕೆಗೊಂದು ಕಾಲ್ ಬಂದಿದೆ. ತಕ್ಷಣ ನನ್ನ ಸಂಬಂಧಿಕರು ಯಾರೋ ಮೃತಪಟ್ಟಿದ್ದಾರೆ ತಾನು ಹೋಗಿ ಬರುತ್ತೇನೆ ಎಂದು ನಾಟಕವಾಡಿ ಅಲ್ಲಿಂದ ಹೊರಟಿದ್ದಾಳೆ. ಅದೇ ಸಂದರ್ಭದಲ್ಲಿ ರೂಮಿಗೆ ಬಂದ ಮೂವರು ಯುವಕರು ತನ್ನ ಬಳಿಯಿದ್ದ ಹಣ ವಸ್ತುಗಳೆಲ್ಲವನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.

ಭಾರೀ ಪ್ರಮಾಣದ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ. ಕೊನೆಗೆ ಮಹದೇವ್‌ ಮೂವರಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾನೆ. ಆದ್ರೂ ಮಹದೇವ್‌ನನ್ನು ಬೆನ್ನಟ್ಟಿದ ಮೂವರು ಆಟೋದಲ್ಲಿ ಅಪಹರಣ ಮಾಡಲು ಮುಂದಾಗಿದ್ದಾರೆ. ಅಪಹರಣಕ್ಕೆ ಯತ್ನಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮೂವರಿಂದ ತಪ್ಪಿಸಿಕೊಂಡ ಮಹದೇವ್, ಮಡಿಕೇರಿ ನಗರ ಠಾಣೆಗೆ ಅರೆಬೆತ್ತಲಾಗಿ ಓಡೋಡಿ ಬಂದು ದೂರು ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಮಹದೇವ್ ಹಲ್ಲೆಗೆ ಬಳಸಲಾಗದ ಮಾರಕಾಸ್ತ್ರಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೊಂದು ಹನಿಟ್ರ್ಯಾಪ್ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಾನಿಟ್ಯ್ರಾಪ್‌ ಪ್ರಕರಣದ ರುವಾರಿ ರಚನಾ ಮಡಿಕೇರಿ ನಗರದ ಅಶೋಕಪುರದ ನಿವಾಸಿಯಾಗಿದ್ದಾಳೆ. ಈಕೆ ಹಲವಾರು ವರ್ಷಗಳ ಹಿಂದೆ ಪೊಲೀಸ್  ಕಾನ್ಸ್ಟೇಬಲ್ ನೊಂದಿಗೆ  ಮದುವೆ ಆಗಿದ್ದಳು. ಈಕೆ ಸಾಕಷ್ಟು ಕುಡಿತದ ಚಟಕ್ಕೆ ಒಳಗಾಗಿದ್ದರಿಂದ ಬೇಸತ್ತ ಗಂಡ ಡಿವೋರ್ಸ್ ನೀಡಿದ್ದರಂತೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

 

Continue Reading

DAKSHINA KANNADA

ಮಂಗಳೂರು: ವಿಚ್ಛೇದನಕ್ಕೆ ಬಂದ ಎರಡು ಜೋಡಿಗಳು-ಸಂಧಾನ ಮಾಡಿ ಒಂದಾಗಿಸಿದ ಲೋಕ್ ಅದಾಲತ್

Published

on

ಮಂಗಳೂರು: ವಿಚ್ಛೇದನಕ್ಕೆ ಮುಂದಾಗಿದ್ದ ಎರಡು ಜೋಡಿಗಳು ಮತ್ತೆ ಒಂದಾದ ವಿಶೇಷ ಹಾಗೂ ಹೃದಯಸ್ಪರ್ಶಿ ವಿದ್ಯಮಾನಕ್ಕೆ ಶನಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಬೈಠಕ್‌ ಸಾಕ್ಷಿಯಾಯಿತು.

ಈ ಎರಡು ಜೋಡಿಗಳ ದಾಂಪತ್ಯ ಜೀವನದಲ್ಲಿ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿದ್ದ ಕಾರಣ ದಂಪತಿಗಳು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ವೇಳೆ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನ ನಡೆಯಿತು. ಪತಿ ಮತ್ತು ಪತ್ನಿಯ ಮಧ್ಯೆ ಸಂಧಾನ ಏರ್ಪಡಿಸಿ ಮತ್ತೆ ಒಂದುಗೂಡಿ ದಾಂಪತ್ಯ ಜೀವನ ಮುಂದುವರಿಸುವ ಬಗ್ಗೆ ಉಭಯೇತರರಿಗೂ ಮನವರಿಕೆ ಮಾಡಲಾಗಿತ್ತು.

ಸಂಧಾನದ ವೇಳೆ ದಂಪತಿಗಳು ಮತ್ತೆ ಒಂದುಗೂಡಿ ಜೀವನ ಮುಂದುವರಿಸಲು ಒಪ್ಪಿದ್ದರು. ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಎರಡೂ ಜೋಡಿಗಳು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಲಕ್ಷ್ಮೀ ನಾರಾಯಣ ಭಟ್‌ ಕೆ.  ಅವರ ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮುಖೇನ  ಒಂದಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಉಪಸ್ಥಿತರಿದ್ದು, ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.  ಲೋಕ ಅದಾಲತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಎರಡೂ ಜೋಡಿಗಳು ಮತ್ತೆ ಒಂದಾಗುವ ಮೂಲಕ ತಮ್ಮ ವಿಚ್ಛೇದನದ ಹೋರಾಟವನ್ನು ಕೊನೆಗೊಳಿಸಿದ ಈ ವಿದ್ಯಮಾನ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಅವರು ತಿಳಿಸಿದ್ದಾರೆ.

Continue Reading

bangalore

ಬರಹದ ಮೂಲಕ ಮಹಿಳೆಯರಿಗೆ ಧೈರ್ಯ ತುಂಬಿದ ಆಟೋ ಡ್ರೈವರ್; ಅಂತದ್ದೇನಿದೆ?

Published

on

ಬೆಂಗಳೂರು: ಇತ್ತೀಚೆಗೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಹಾಗೂ ವಿವಿಧ ವಾಹನಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವ ಹಲವು ಉದಾಹರಣೆಗಳು ಇದೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರುವ ಮಹಿಳೆಯರಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚಾಗಿದೆ.


ಇಂತಹ ವಾತಾವರಣದ ನಡುವೆ ಬೆಂಗಳೂರಿನಲ್ಲಿ ಓರ್ವ ಆಟೋ ಚಾಲಕನ ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಚಾಲಕನ ಹಿಂದಿನ ಭಾಗದಲ್ಲಿ, ನಾನೂ ಒಬ್ಬ ಅಣ್ಣ/ತಂದೆ. ನಿಮ್ಮ ಸುರಕ್ಷತೆಯೇ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದು ಆಟೋ ಚಾಲಕರೊಬ್ಬರು ಪ್ರಯಾಣಿಕರಿಗೆ ಧೈರ್ಯ ತುಂಬಿದ್ದಾರೆ.

ಈ ರೀತಿಯ ಬರಹವನ್ನು ಗಮನಿಸಿದ ಯುವತಿಯೊಬ್ಬರು, ರಾತ್ರಿ 12 ಗಂಟೆಗೆ ರ್ಯಾಪಿಡೊ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಆಟೋದಲ್ಲಿ ಕುಳಿತ ತಕ್ಷಣ ಈ ಬರಹ ಓದಿದೆ. ಆಗ ನನಗೆ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡಿತು ಎಂದು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ವೃದ್ಧೆ ಕುತ್ತಿಗೆಯಿಂದ ಚಿನ್ನದ ಸರ ದೋಚಿದ ಕಳ್ಳರು

ಆದರೆ, ಆಟೋ ಚಾಲಕನ ಹೆಸರು, ವಿವರಗಳನ್ನು ಅವರು ಹಂಚಿಕೊಂಡಿಲ್ಲ. ಆತನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page