Connect with us

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

Published

on

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಉಡುಪಿ: ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಟ್ರಸ್ಟ್ ಇದರ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಜನ್ಮದಿನದ ಪ್ರಯುಕ್ತ ಶಾಲಾ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು.

ಸುರತ್ಕಲ್ ನ ಶ್ರೀ ರಂಗನಾಥ್ ಸೈಕಲ್ ಮಾರ್ಟ್ ತಡಂಬೈಲ್ ಇದರ ಮ್ಯಾನೆಜಿಂಗ್ ಡೈರೆಕ್ಟರ್ ಎನ್.ರಾಜು ಕೆಲ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು. ನಂತರ ಮಾತನಾಡಿದ ಅವರು ಸಮಾಜದ ಕಾರ್ಯವೆಂದರೆ ದೇವರ ಕಾರ್ಯಕ್ಕೆ ಸಮ. ಶಿಕ್ಷಣಕ್ಕೆ ಮಹತ್ವ ನೀಡಿದರೆ ಅದರ ಫಲ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದರು. ಇನ್ನು ಮಹಾನಗರ ಪಾಲಿಕೆ ಸದಸ್ಯರಾದ ಲೋಕೇಶ್ ಬೆಳ್ಳಾಜೆಯವರು ಸಮವಸ್ತ್ರ ವಿತರಣೆಯ ಉದ್ದೇಶದ ಬಗ್ಗೆ ವಿವರಣೆ ನೀಡಿದರು.

ಈ ಸಂದರ್ಭ ಸಮಾರಂಭದಲ್ಲಿ ಲಕ್ಮೀ ಎನ್ ರಾಜು, ವಿಹೆಚ್‍ಪಿ ಪ್ರಮುಖ ಸತೀಶ್ ಆಚಾರ್ಯ , ಸಂಚಾಲಕ ಪ್ರೀತಂ,ಪ್ರಾಂಶುಪಾಲ ಉಮೇಶ್ ಎಂ ಕರ್ಕೇರ, ಮುಖ್ಯೋಪಾದ್ಯಾಯಿನಿ ಕುಮಾರಿ ಪುಷ್ಪಲತಾ ರಾವ್ ಮುಂತಾದವರು ಉಪಸ್ಥಿತರಿದ್ದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಸಿಲಿಂಡರ್ ಅಭಾವ: ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

Published

on

ಬೆಂಗಳೂರು: ಇಸ್ರೇಲ್‌, ಅಮೇರಿಕ ಮತ್ತು ಇರಾನ್‌ ಯುದ್ಧದ ಕಿಚ್ಚು ಈಗಾಗಲೇ ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಇದೀಗ ಗ್ಯಾಸ್ ಸಿಲಿಂಡರ್ ಕೊರತೆಯ ನಡುವೆ, ಗ್ರಾಹಕರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ಈಗ ಬೆಲೆ ಏರಿಕೆಯ ಬಿಸಿ ಮತ್ತೊಂದು ಶಾಕ್ ನೀಡುವ ಸಾಧ್ಯತೆಯಿದೆ.


ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದ್ದು, ಹೋಟೆಲ್​ ಮಾಲೀಕರ ಸ್ಥಿತಿ ಅಯೋಮಯವಾಗಿದೆ. ಬೆಂಗಳೂರಿನಲ್ಲಿ ಕೆಲ ಹೋಟೆಲ್​​ಗಳು ಸಹ ಬಂದ್‌ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್​ನಂತೆ ಅಡುಗೆ ಆಯಿಲ್ ಅಂಗಡಿಗಳು ಕೂಡ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಅಡುಗೆ ಎಣ್ಣೆ ಮಾಲಿಕರೊಬ್ಬರು ಪ್ರತಿಕ್ರಿಯಿಸಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100-200 ಬಾಕ್ಸ್‌ ಎಣ್ಣೆ ಬುಕ್‌ ಮಾಡಿದರೆ 20-50 ಬಾಕ್ಸ್‌ ಮಾತ್ರ ಕಳುಹಿಸುತ್ತಾರೆ. ಏಜೆಂಟರಲ್ಲಿ ಕೇಳಿದರೆ, ಸಪ್ಲೈ ಆಗುತ್ತಿಲ್ಲ. ಹೆಚ್ಚು ಬಾಕ್ಸ್‌ ನೀಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ 15-20 ರೂ. ದರ ಜಾಸ್ತಿ ಆಗಿರುವುದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸೀಮೆಎಣ್ಣೆ ಹಂಚಿಕೆ ಮತ್ತು ಆಮದು ನೀತಿಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದ ಹೊಸ ನಿರ್ಧಾರ

ಗ್ಯಾಸ್ ಅಭಾವ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯತೆಯಿಂದಾಗಿ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಭೀತಿ ಎದುರಾಗಿದೆ. ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಕಾಡುತ್ತಿದೆ. ನಗರದ ಕೆಲವು ಹೋಟೆಲ್‌ಗಳು ಮತ್ತು ಪಿಜಿಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದೆ ಮತ್ತೆ ಹಳೆಯ ಪದ್ಧತಿಯಂತೆ ಸೌದೆ ಒಲೆಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ.

Continue Reading

DAKSHINA KANNADA

ಎಜೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ಸು

Published

on

ಮಂಗಳೂರು: ಎಂಡೋಮೆಟ್ರಿಯೊಸಿಸ್ ಜಾಗೃತಿ ಮಾಸದ ಅಂಗವಾಗಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಂಡೋಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಹಿಳೆಯರಿಗೆ ಅಪರೂಪದ ಮಿನಿಮಲ್ ಇನ್ವೇಸಿವ್ (ಲ್ಯಾಪರೋಸ್ಕೋಪಿಕ್) ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸುವ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಎಂಡೋಮೆಟ್ರಿಯೊಸಿಸ್ ಮತ್ತು ಅಡೆನೊಮಯೋಸಿಸ್ ಮಹಿಳೆಯರಲ್ಲಿ ಸಾಮಾನ್ಯವಾಗಿದ್ದರೂ ಹಲವು ಬಾರಿ ಸರಿಯಾದ ಸಮಯದಲ್ಲಿ ಗುರುತಿಸಲಾಗದೆ ತೀವ್ರ ಹೊಟ್ಟೆ ಕೆಳಭಾಗದ ನೋವು, ನೋವಿನೊಂದಿಗೆ ಮುಟ್ಟು ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ

36 ವರ್ಷದ ಮಹಿಳೆ ಸುಮಾರು 10 ವರ್ಷಗಳಿಂದ ತೀವ್ರ ಹೊಟ್ಟೆ ನೋವು, ಮುಟ್ಟಿನ ಸಮಯದಲ್ಲಿ  ರಕ್ತಸ್ರಾವ ಮತ್ತು ತೀವ್ರ ಮಾಸಿಕ ನೋವಿನಿಂದ ಬಳಲುತ್ತಿದ್ದರು. ಪರೀಕ್ಷೆಯಲ್ಲಿ ಅವರಿಗೆ ಐಲಿಯೋಕೋಲಿಕ್ ಭಾಗವನ್ನು ಒಳಗೊಂಡ ಸ್ಟೇಜ್ IV ಎಂಡೋಮೆಟ್ರಿಯೊಸಿಸ್ ಇರುವುದಾಗಿ ಪತ್ತೆಯಾಯಿತು. ಅವರಿಗೆ ಲ್ಯಾಪರೋಸ್ಕೋಪಿಕ್ ಎಂಡೋಮೆಟ್ರಿಯೊಸಿಸ್ ಎಕ್ಸಿಷನ್ ಶಸ್ತ್ರಚಿಕಿತ್ಸೆ ಹಾಗೂ ಐಲಿಯೋಕೋಲಿಕ್ ನೊಡ್ಯೂಲ್ ತೆಗೆದುಹಾಕುವ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು.

ಮತ್ತೊಂದು ಪ್ರಕರಣದಲ್ಲಿ, 34 ವರ್ಷದ ಮಹಿಳೆಗೆ ಡಿಫ್ಯೂಸ್ ಪೋಸ್ಟೀರಿಯರ್ ವಾಲ್ ಅಡೆನೊಮಯೋಸಿಸ್ ಜೊತೆಗೆ ಸ್ಟೇಜ್ IV ಎಂಡೋಮೆಟ್ರಿಯೊಸಿಸ್ ಪತ್ತೆಯಾಯಿತು. ಅವರಿಗೆ ಲ್ಯಾಪರೋಸ್ಕೋಪಿಕ್ ಎಂಡೋಮೆಟ್ರಿಯೊಸಿಸ್ ಎಕ್ಸಿಷನ್ ಶಸ್ತ್ರಚಿಕಿತ್ಸೆ ನಡೆಸಿ ನಂತರ ಮೈಕ್ರೋವೇವ್ ಅಬ್ಲೇಷನ್ ಮೂಲಕ ಚಿಕಿತ್ಸೆ ನೀಡಲಾಯಿತು. ಇದರಿಂದ ನೋವು ಕಡಿಮೆಯಾಗುವ ಜೊತೆಗೆ ಭವಿಷ್ಯದಲ್ಲಿ ಗರ್ಭಧಾರಣೆಯ ಅವಕಾಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ

ಈ ಶಸ್ತ್ರಚಿಕಿತ್ಸಾ ತಂಡದ ನೇತೃತ್ವವನ್ನು ಡಾ. ಅರ್ಥಿಕಾ ಶೆಟ್ಟಿ ವಹಿಸಿದ್ದರು. ತಂಡದಲ್ಲಿ ಡಾ. ಟಿ.ವಿ. ತಂತ್ರಿ (ಅನಸ್ಥೀಷಿಯಾ), ಡಾ. ಭರತ್ ಶೆಟ್ಟಿ (ರೇಡಿಯಾಲಜಿ) ಹಾಗೂ ಡಾ. ರೋಹನ್ ಶೆಟ್ಟಿ (ಆಂತ್ರ ಶಸ್ತ್ರಚಿಕಿತ್ಸೆ) ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅರ್ಥಿಕಾ ಶೆಟ್ಟಿ, ಎಂಡೋಮೆಟ್ರಿಯೊಸಿಸ್ ಲಕ್ಷಣಗಳು ಇತರ ಸಾಮಾನ್ಯ ಸಮಸ್ಯೆಗಳೊಂದಿಗೆ ಹೊಂದಿಕೆಯಾಗುವುದರಿಂದ ಹಲವಾರು ಮಹಿಳೆಯರಿಗೆ ಸರಿಯಾದ ನಿರ್ಣಯ ತಡವಾಗುತ್ತದೆ ಎಂದರು. ಎಕ್ಸಿಷನ್ ಶಸ್ತ್ರಚಿಕಿತ್ಸೆ ಎಂಡೋಮೆಟ್ರಿಯೊಸಿಸ್‌ಗೆ ಅತ್ಯುತ್ತಮ ಚಿಕಿತ್ಸೆ ವಿಧಾನವಾಗಿದ್ದು, ಸಮಯೋಚಿತ ನಿರ್ಣಯ ಮತ್ತು ಮಿನಿಮಲ್ ಇನ್ವೇಸಿವ್ ಶಸ್ತ್ರಚಿಕಿತ್ಸೆಯಿಂದ ನೋವು ಕಡಿಮೆಯಾಗುವುದರ ಜೊತೆಗೆ ಸಂತಾನೋತ್ಪತ್ತಿ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂದರು.

ಇದನ್ನೂ ಓದಿ : ತನ್ನ ಉದ್ಯೋಗಿಗಳಿಗೆ ‘ಮನೆಯಿಂದಲೇ ಊಟದ ಬಾಕ್ಸ್’ ತರುವಂತೆ ಸೂಚಿಸಿದ ಇನ್ಫೋಸಿಸ್!

ಸಂಕೀರ್ಣ ಸ್ತ್ರೀರೋಗ ಸಮಸ್ಯೆಗಳಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸುವ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡುವಲ್ಲಿ ಎಜೆ ಆಸ್ಪತ್ರೆ ಮುಂದುವರಿದಿದೆ ಎಂದು ಆಸ್ಪತ್ರೆ ತಿಳಿಸಿದೆ.

 

Continue Reading

LATEST NEWS

ತನ್ನ ಉದ್ಯೋಗಿಗಳಿಗೆ ‘ಮನೆಯಿಂದಲೇ ಊಟದ ಬಾಕ್ಸ್’ ತರುವಂತೆ ಸೂಚಿಸಿದ ಇನ್ಫೋಸಿಸ್!

Published

on

ಮಂಗಳೂರು/ಬೆಂಗಳೂರು : ಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇತರ ದೇಶಗಳ ಮೇಲೂ ಬೀರುತ್ತಿದೆ. ಷೇರು ಮಾರುಕಟ್ಟೆ  ಮೇಲೆ ದೊಡ್ಡ ಮಟ್ಟಿನ ಪರಿಣಾಮ ಬೀರಿದ್ದು, ಇಂಧನ ಪೂರೈಕೆಗೂ ಅಡ್ಡಿಯಾಗಿದೆ. ಅಲ್ಲದೆ, ದೈನಂದಿನ ಬದುಕಿಗೂ ಬಿಸಿ ತಟ್ಟಿದೆ.

ಇನ್ಫೋಸಿಸ್‌ಗೂ ಸಿಲಿಂಡರ್ ಕೊರತೆ:

ಗ್ಯಾಸ್ ಸಿಲಿಂಡರ್ ಕೊರತೆ ಎಲ್ಲಾ ಉದ್ಯಮಕ್ಕೂ ತಟ್ಟಿದೆ. ಭಾರತದ ದೈತ್ಯ ಐಟಿ ಕಂಪೆನಿ ಇನ್ಫೋಸಿಸ್‌ಗೂ ಗ್ಯಾಸ್ ಸಿಲಿಂಡರ್ ಕೊರತೆ ಕಾಡಿದೆ. ಇನ್ಫೋಸಿಸ್‌ನ ಬೆಂಗಳೂರು, ಚೆನ್ನೈ ಮತ್ತು ಪುಣೆ ಬ್ರಾಂಚ್‌ಗಳ ಕ್ಯಾಂಟೀನ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳ ಅಭಾವ ಕಂಡಿದೆ. ಜಾಗತಿಕ ಮಟ್ಟದ ಯುದ್ಧದ ಸನ್ನಿವೇಶಗಳಿಂದಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಕಮರ್ಷಿಯಲ್ ಗ್ಯಾಸ್ ಲಭ್ಯವಾಗುತ್ತಿಲ್ಲ  ಎಂದು ಹೇಳಲಾಗಿದೆ.

ಕ್ಯಾಂಪಸ್‌ನಲ್ಲಿರುವ ಫುಡ್ ಕೋರ್ಟ್‌ಗಳಿಗೆ ದೊಡ್ಡ  ಹೊಡೆತ ಬಿದ್ದಿದ್ದು, ಅಡುಗೆ ಮಾಡಲು ಗ್ಯಾಸ್ ಇಲ್ಲದ ಕಾರಣ, ಲೈವ್ ಕೌಂಟರ್‌ ಗಳನ್ನು  ಸದ್ಯಕ್ಕೆ ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.

ಹೀಗಾಗಿ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ  ಇಮೇಲ್ ಮೂಲಕ ಸಂದೇಶ ನೀಡಿದ್ದು, ಮಾರ್ಚ್ 12 ರಿಂದಲೇ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಗ್ಯಾಸ್ ಕೊರತೆ ಇರುವುದರಿಂದ ಕ್ಯಾಂಟೀನ್‌ನಲ್ಲಿ ಸೀಮಿತ ಮೆನು ಮಾತ್ರ ಲಭ್ಯವಿರಲಿದೆ. ಅತಿ ಹೆಚ್ಚು ಬೇಡಿಕೆ ಇರುವ ಬೆರಳೆಣಿಕೆಯ ಆಹಾರ ಪದಾರ್ಥಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಪರಿಸ್ಥಿತಿ ತಿಳಿಯಾಗುವ ವರೆಗೆ ಸಹಕರಿಸುವಂತೆ  ಕೋರಲಾಗಿದೆ.

ಮನೆಯಿಂದಲೇ ಊಟದ ಬಾಕ್ಸ್ ತರಲು ಸೂಚನೆ :

ಕ್ಯಾಂಟೀನ್‌ನಲ್ಲಿ ಪೂರ್ಣ ಪ್ರಮಾಣದ ಆಹಾರ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ಫೋಸಿಸ್ ತನ್ನ ಸಿಬ್ಬಂದಿಗೆ ಮನೆಯಿಂದಲೇ ಊಟದ ಬಾಕ್ಸ್ ತರಲು ಸೂಚಿಸಿದೆ. ಒಂದು ವೇಳೆ ಮನೆಯಿಂದ ತರಲು ಸಾಧ್ಯವಾಗದಿದ್ದರೆ, ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ : ಶ್ರೀಗಂಧದ ಗುಡಿ ಧಾರಾವಾಹಿಯಿಂದ ಹೊರ ನಡೆದ ನಟಿ!

ಕ್ಯಾಂಪಸ್ ಒಳಗೆ ಅಡುಗೆ ಮಾಡಲು ಸಾಧ್ಯವಾಗದ ಕಾರಣ, ಕಂಪೆನಿ ಹೊರಗಿನ ಕೇಟರಿಂಗ್ ಸಂಸ್ಥೆಗಳಿಂದ ಬೇಯಿಸಿದ ಊಟವನ್ನು ತರಿಸಿ  ನೀಡುತ್ತಿತ್ತು. ಸಾವಿರಾರು ಉದ್ಯೋಗಿಗಳಿರುವ ಕ್ಯಾಂಪಸ್‌ನಲ್ಲಿ ಹೊರಗಿನ ಊಟ ಎಲ್ಲರಿಗೂ ತಲುಪುತ್ತಿಲ್ಲ. ಜೊತೆಗೆ ತಾಜಾತನದ ಕೊರತೆಯೂ ಕಂಡುಬರುತ್ತಿದ್ದು, . ಹೀಗಾಗಿ ಉದ್ಯೋಗಿಗಳಿಗೆ ಕಂಪೆನಿ ಮನೆಯಿಂದಲೇ ಊಟದ ಬಾಕ್ಸ್ ತರಲು ಸೂಚಿಸಿದೆ ಎನ್ನಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page