Connect with us

DAKSHINA KANNADA

ಮೊಮ್ಮಗಳ ಮೊಮ್ಮಗನನ್ನು ಕಾಣುವ ಭಾಗ್ಯ ಯಾರಿಗುಂಟು..?

Published

on

ಮೊಮ್ಮಗಳ ಮೊಮ್ಮಗನನ್ನು ಕಾಣುವ ಭಾಗ್ಯ ಯಾರಿಗುಂಟು..?

ಮೊಮ್ಮಗಳ ಮೊಮ್ಮಗನನ್ನು ಕಾಣುವ ಭಾಗ್ಯ ಯಾರಿಗುಂಟು..!

ಮಂಗಳೂರು: ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ  ಅಮ್ಮ ಅಜ್ಜಿಯನ್ನು ಕಾಣೋದೇ ಹೆಚ್ಚು ಆದರೆ ಇಲ್ಲೊಂದು ಕುಟುಂಬ ಐದು ತಲೆಮಾರನ್ನು ಕಂಡಿದೆ.ಸಂಪದ ದಿವಂಗತ ಸುಬ್ರಾಯ ಭಟ್ಟರ ಪತ್ನಿ 94ರ ಹರೆಯದ ಸಾವಿತ್ರಿ ಅಮ್ಮ ಅವರ ಪುತ್ರಿ 74ರ  ಹರೆಯದ ಸುಬ್ಬಮ್ಮ. ಅವರ ಪ್ರಥಮ ಪುತ್ರಿ 44ವರ್ಷ ಹರೆಯದ ಭಾರತಿ ಅವರ ಪುತ್ರಿ 30ರ ಹರೆಯದ ಡಾ.ಮೈತ್ರಿ ಹಾಗೂ ಅವರ ಪುತ್ರ 11ತಿಂಗಳ ಭಾರ್ಗವ್ ಶರ್ಮ ಹೀಗೆ ಐದು ತಲೆಮಾರು ಬೆಳೆದು ಬಂದಿದೆ. ಹಿರಿಯರಾದ ಸಾವಿತ್ರಿ ಅಮ್ಮ ಅವರಿಗೆ ಅಜ್ಜನ ಮಕ್ಕಳು, ಅವರಲ್ಲಿ ಸುಬ್ಬಮ್ಮ ಎರಡನೆಯವರು ಅವರನ್ನು ಖಂಡಿಗೆ ರಾಮಚಂದ್ರ ಭಟ್ಟರಿಗೆ ವಿವಾಹ ಮಾಡಿಕೊಡಲಾಗಿತ್ತು. ಅವರ ಪ್ರಥಮ ಪುತ್ರಿ ಭಾರತಿಯನ್ನು ಕಾಕುಂಜೆ ಜಗದೀಶ್ ಇವರಿಗೆ  ವಿವಾಹ ಮಾಡಿಕೊಡಲಾಗಿತ್ತು,

ಅವರ ಪುತ್ರಿ ಡಾ. ಮೈತ್ರಿಯನ್ನು ಪುಳು ಡಾ. ಪವನ್ ರಾಜ್ ರವರಿಗೆ ವಿವಾಹ ಮಾಡಿಕೊಡಲಾಗಿತ್ತು. 2019ರ ಡಿಸೆಂಬರ್ ನಲ್ಲಿ ಪುತ್ರ ಭಾರ್ಗವ್ ಜನಿಸುವುದರೊಂದಿಗೆ 5 ತಲೆಮಾರನ್ನು ಕಾಣುವ ಹಾಗಾಯಿತು.

DAKSHINA KANNADA

ಕೋಳಿ ಸಾಗಾಟದ ಟೆಂಪೋ ಪ*ಲ್ಟಿ; ಸ*ತ್ತ ಕೋಳಿಗಳಿಗಾಗಿ ಮುಗಿಬಿದ್ದ ಸಾರ್ವಜನಿಕರು

Published

on

ಬಂಟ್ವಾಳ: ಕೋಳಿ ಸಾಗಾಟದ ಟೆಂಪೋ ಪ*ಲ್ಟಿಯಾಗಿ ನೂರಾರು ಕೋಳಿಗಳು ಸಾ*ವನ್ನಪ್ಪಿರುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕನ್ಯಾನದ ಕುಳಾಲು ಎಂಬಲ್ಲಿ ಘಟನೆ ನಡೆದಿದೆ.

ಕಡಿದಾದ ರಸ್ತೆಯಲ್ಲಿ ಇನ್ನೊಂದು‌ ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಪಿಕಪ್ ಪ*ಲ್ಟಿಯಾಗಿದೆ.  ಪಿಕಪ್ ಟೆಂಪೋ ಚಾಲಕ‌ ಅದೃಷ್ಟವಶಾತ್ ಅ*ಪಾಯದಿಂದ ಪಾರಾಗಿದ್ದಾನೆ.

ಈ ವೇಳೆ ಸ*ತ್ತ ಕೋಳಿಗಳನ್ನು ಮನೆಗೆ ಕೊಂಡೊಯ್ಯಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.  ಈ ಘಟನೆಯಿಂದ ಕೋಳಿ‌ಪ್ರಿಯರಿಗೆ ಪುಕ್ಕಟೆಯಾಗಿ ಕೋಳಿಗಳು ದೊರೆದಂತಾಗಿದೆ.

Continue Reading

DAKSHINA KANNADA

ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳಕ್ಕೆ ಚಾಲನೆ

Published

on

ಮಂಗಳೂರು : ಮಂಗಳೂರು ನಗರದ ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ 15 ನೇ ವರ್ಷದ ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳಕ್ಕೆ ಇಂದು ಬೆಳಗ್ಗೆ ಚಾಲನೆ ದೊರೆತಿದೆ.

ದಿವಂಗತ ಜೆ. ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಸ್ಮರಣಾರ್ಥ ನಡೆಯುವ ಕಂಬಳದ ಉದ್ಘಾಟನೆ ಬೆಳಗ್ಗೆ ನೆರವೇರಿತು. ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆಯಲ್ಲಿ ದೇರೆಬೈಲ್ ವಿಠಲದಾಸ ತಂತ್ರಿ ಅವರು 15 ನೇ ವರ್ಷದ ಜಯ ವಿಜಯ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಗೌರವ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಕಂಬಳಕ್ಕೆ ಪಾಲಿಕೆಯಿಂದ  ಆರ್ಥಿಕ ನೆರವು ನೀಡಲಾಗುತ್ತಿದೆ. ಕಂಬಳ ಸಂಸ್ಕೃತಿಯನ್ನು ಉಳಿಸಿ ಬೆಳೆಸ ಬೇಕು. ತನ್ನಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡುತ್ತೇನೆ ಎಂದರು.

ಪೊಲೀಸ್ ಅಧಿಕಾರಿ ಟಿ.ಡಿ. ನಾಗರಾಜ್, ಜಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತಿತರ ವಿವಿಧ ಕ್ಷೇತ್ರಗಳ ಪ್ರಮುಖರು ಅತಿಥಿಗಳಾಗಿ ಉಪಸ್ಥಿತರಿದ್ದರು. ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಜೆ. ಅನಿಲ್ ಶೆಟ್ಟಿ ಮನ್ಕುತೋಟ, ಮಾರ್ಗದರ್ಶಕ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೆ. ಉಮೇಶ್ ಅತಿಕಾರಿ, ಕೋಶಾಧಿಕಾರಿ ಜೆ. ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಮೇಲಂಟ, ಶೇಖರ ಕಿಲ್ಲೆ ಪಡುಹಿತ್ಲು, ಗುರುರಾಜ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು. ಮನೋಜ್ ಶೆಟ್ಟಿ ವಂದಿಸಿದರು. ಅಭಿಷೇಕ್ ಕಾರ್ಯಕ್ರಮ ನಿರ್ವಹಿಸಿದರು.

Continue Reading

DAKSHINA KANNADA

ಮಂಗಳೂರು: ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್‌ಗೆ “ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್” ಪ್ರಶಸ್ತಿ

Published

on

ಮಂಗಳೂರು: ಭಾರತದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಗುರುತಿಸುವ *ಫುಡ್ “ಕನೋಸರ್ಸ್ ಇಂಡಿಯಾ ಅವಾರ್ಡ್ಸ್ (FCIA)* ನ ಏಳನೇ ಆವೃತ್ತಿಯಲ್ಲಿ ಮಂಗಳೂರಿನ ಮಾಸ್ಟರ್ ಚೆಫ್ *ಮಹಮ್ಮದ್ ಆಶಿಕ್* ಅವರಿಗೆ *’ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್’* ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ *ತಾಜ್ ಯಶವಂತಪುರ ಹೋಟೆಲ್* ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಅತ್ಯುತ್ತಮ ಶೆಫ್ಗಳು, ರೆಸ್ಟೋರೆಂಟ್ಗಳು ಮತ್ತು ಫುಡ್ ಬ್ರಾಂಡ್ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಪ್ರತಿಭೆ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಈ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಸಿದ್ದಾರೆ.

ಪ್ರಶಸ್ತಿ ಪಡೆದ ನಂತರ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರು ಮಾತನಾಡುತ್ತಾ, “ಈ ಪ್ರಶಸ್ತಿಯನ್ನು ಪ್ರಮುಖವಾಗಿ ಆಹಾರದ ಗುಣಮಟ್ಟ, ಸೃಜನಾತ್ಮಕತೆ ಮತ್ತು ಅನುಭವಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಬಾರಿ ಕನ್ನಡನಾಡಿನ ಹಲವಾರು ರೆಸ್ಟೋರೆಂಟ್ಗಳು ಮತ್ತು ಶೆಫ್ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನನಗೆ ಈ ಪ್ರಶಸ್ತಿ ಲಭಿಸಿದ್ದು ಗೌರವದ ಸಂಗತಿ. ಇದು ನನ್ನ ಕುಟುಂಬ, ಸ್ನೇಹಿತರು ಮತ್ತು ಜಿಲ್ಲೆಯ ಜನರ ಸಹಕಾರದ ಫಲವಾಗಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ” ಎಂದರು.

ಈ ಕಾರ್ಯಕ್ರಮದ ಮೂಲಕ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿ ಮತ್ತು ಪ್ರತಿಭಾವಂತ ಶೆಫ್ಗಳ ಸಾಧನೆಗಳನ್ನು ಗುರುತಿಸಲಾಯಿತು. ಮಂಗಳೂರಿನ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರ ಈ ಸಾಧನೆ ಜಿಲ್ಲೆಯ ಆಹಾರ ಕ್ಷೇತ್ರದ ಹೆಮ್ಮೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page