Connect with us

BANTWAL

ತುಳುಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಿ.ಎಂ.ಕುಲಾಲ್ ನಿಧನ..!

Published

on

ಮಂಗಳೂರು: ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಿ.ಎಂ.ಕುಲಾಲ್ ಅವರು ಇಂದು ನಿಧನರಾಗಿದ್ದಾರೆ.

ಸುದೀರ್ಘ ಕಾಲದ ಅಸೌಖ್ಯದಿಂದ ಬಂಟ್ವಾಳ ಬಿ.ಸಿ.ರೋಡಿನ ದೈಪಲದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮದ್ಯಾಹ್ನ ದೈವಾಧೀನರಾಗಿದ್ದಾರೆ .

ಸರಳ- ಸಜ್ಜನಿಕೆ ಮತ್ತು ಮಿತಭಾಷಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾಗಿದ್ದ ಕುಲಾಲ್ ಅವರಿಗೆ ಇತ್ತೀಚೆಗಷ್ಟೆ ತುಳುಸಾಹಿತ್ಯ ಅಕಾಡೆಮಿಯಿಂದ ಚಾವಡಿ ಪ್ರಶಸ್ತಿ ನೀಡಿ‌ ಗೌರವಿಸಲಾಗಿತ್ತು.

ಕುಲಾಲ್ ಅವರ ನಿಧನಕ್ಕೆ ತುಳು ಸಾಹಿತ್ಯ ಅಕಾಡಮಿ ಸರ್ವ ಸದಸ್ಯರು, ಮಾಎಇ ಅಕಾಡಮಿ ಅಧ್ಯಕ್ಷ ಹಾಗೂ ಶಾಸಕರಾದ ಉಮನಾಥ್ ಕೋಟ್ಯಾನ್ ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

BANTWAL

ಬಂಟ್ವಾಳ: ಅವಿವಾಹಿತ ಯುವತಿ ಮನೆಯಿಂದ ನಾಪತ್ತೆ

Published

on

ಬಂಟ್ವಾಳ: ಅವಿವಾಹಿತ ಯುವತಿಯೋರ್ವಳು ಮನೆಯಿಂದ ಕಾಣೆಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ನಡೆದಿದೆ.

ಆಲ್ಬರ್ಟ್ ಡಿ’ಸೋಜಾ ಎಂಬವರ ಪುತ್ರಿ ಮರಿಯಾ ಆಲ್ಬರ್ಟ್ ಡಿ’ ಸೋಜಾ ಎಂಬವಳು ಕಾಣೆಯಾದ ಯುವತಿ.

ಮೂಲತಃ ಮುಂಬಯಿ ನಿವಾಸಿಯಾಗಿದ್ದ ಮರಿಯಾ ಕಳೆದ ಐದು ತಿಂಗಳುಗಳಿಂದ ಬೆಂಜನಪದವು ಶಿವಾಜಿ ನಗರದಲ್ಲಿ ಅತ್ತೆ ಮೋಲಿ ಟೆಲ್ಲಿಸ್ ಅವರ ಮನೆಯಲ್ಲಿ ವಾಸವಾಗಿದ್ದಳು. ಒಂದು ವರ್ಷದ ಹಿಂದೆ ಆಕೆಯ ತಾಯಿ ಮೃತಪಟ್ಟಿದ್ದು, ತಂದೆ ಮುಂಬಯಿಯಲ್ಲಿದ್ದಾರೆ.

ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದ ಮಾಡೆಲ್ ನಿಗೂಢ ಸಾವು, ಪ್ರಿಯಕರ ಖಾಸಿಂ ನಾಪತ್ತೆ

ಹಾಗಾಗಿ ಮರಿಯಾ ಬೆಂಜನಪದವು ಅತ್ತೆ ಮನೆಯಲ್ಲಿ ವಾಸವಾಗಿದ್ದರು. ನವೆಂಬರ್ 9 ರಂದು ಮೋಲಿ ಟೆಲ್ಲಿಸ್ ಅವರು ಬೆಳಗ್ಗೆ ಚರ್ಚ್‌ ಗೆ ತೆರಳಿ ಪೂಜೆ ಮುಗಿಸಿ ವಾಪಸ್ ಮನೆಗೆ ಬಂದಾಗ ಮರಿಯಾ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾಳೆ ಎಂದು ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Continue Reading

BANTWAL

ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

Published

on

ಬಂಟ್ವಾಳ: ನಿಷೇಧಿತ ಅಮಲು ಪದಾರ್ಥಗಳನ್ನು ಮಾರಾಟ ಮಾಡುವ ಯತ್ನಿಸುತ್ತಿದ್ದ  ವ್ಯಕ್ತಿಯೋರ್ವನನ್ನು ಬಂಟ್ವಾಳ ಅಬಕಾರಿ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.


ಉತ್ತರ ಪ್ರದೇಶ ಮೂಲದ ಸಂತೋಷ್ ಸೋಂಕರ್ (28) ಎಂಬಾತ ಬಂಧಿತ ಆರೋಪಿ. ಈತನಿಂದ 58, 650 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಲಾಗಿದೆ. 1173 ಪ್ಲಾಸ್ಟಿಕ್ ಸ್ಯಾಚೆಟ್ ಗಳಲ್ಲಿ ಗಾಂಜಾ ಪದಾರ್ಥವನ್ನು ಹೊಂದಿದ್ದು ,ಒಟ್ಟು 6.590 ಕೆ.ಜಿ.ಗಾಂಜಾ ಉಂಡೆಗಳನ್ನು ಪತ್ತೆಹಚ್ಚಿ ಎನ್‌ಡಿಪಿಎಸ್ ಕಾಯಿದೆ 1985 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‌

ಇದನ್ನೂ ಓದಿ: 19 ದಿನಗಳ ಹಿಂದೆ ರಷ್ಯಾದಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶವ ನದಿಯೊಂದರ ಬಳಿ ಪತ್ತೆ!

ಆರೋಪಿ ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಯ ಸಮೀಪ ರೈಲ್ವೆ ಹಳಿಯಲ್ಲಿ ಗಿರಾಕಿಗಳಿಗೆ ನೀಡುವ ಉದ್ದೇಶದಿಂದ ಅಲೆದಾಡುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

Continue Reading

BANTWAL

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸುತ್ತೋಲೆಯಲ್ಲಿ ಎಡವಟ್ಟು ಮಾಡಿದ ಬಂಟ್ವಾಳ ತಾಲೂಕು ಆಡಳಿತ

Published

on

ಬಂಟ್ವಾಳ: ‌ತಾಲೂಕು ಆಡಳಿತದಿಂದ ಆದ ಎಡವಟ್ಟು, ಯಥಾ ಪ್ರಕಾರ ತಾಲೂಕು ಪಂಚಾಯತ್ ನಿಂದ ಗ್ರಾ.ಪಂ.ಗಳಿಗೆ ಸುತ್ತೋಲೆ ಕಳುಹಿಸುವ ಮೂಲಕ ಪೇಚಿಗೆ ಸಿಲುಕಿ ಗೌರವ ಕಳೆದುಕೊಂಡ ಘಟನೆಯೊಂದು ನಡೆದಿದ್ದು, ಈ ಸುತ್ತೋಲೆಯೊಂದು ಇದೀಗ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.


2025 ರ ನ.1 ರಂದು ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ತಾಲೂಕು ಸಮಿತಿ ವತಿಯಿಂದ ತಹಶಿಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸುತ್ತೋಲೆಯೊಂದನ್ನು ತಹಶಿಲ್ದಾರ್ ಮಂಜುನಾಥ್ ಅವರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಅವರಿಗೆ ಕಳುಹಿಸಿದ್ದಾರೆ.

ಸಚಿನ್ ಅವರು ತಹಶಿಲ್ದಾರ್ ಅವರು ಕಳುಹಿಸಿದ ಸುತ್ತೋಲೆಯನ್ನು ಯಥಾ ಪ್ರಕಾರ ತಾಲೂಕಿನ ಗ್ರಾ.ಪಂ.ಪಿಡಿಒಗಳಿಗೆ ರವಾನೆ ಮಾಡಿ ಇದೀಗ ಪೇಚಿಗೆ ಸಿಲುಕಿದ್ದಾರೆ. 2022 ರಲ್ಲಿ ಅಂದಿನ ಸಮಿತಿ ಪ್ರಿಂಟ್ ಮಾಡಿದ ಸುತ್ತೊಲೆಯನ್ನೇ 2025 ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಕಳುಹಿಸುವ ದುಸ್ಥಿತಿ ಒದಗಿ ಬಂದಿರುವುದು ಬೇಸರದ ವಿಚಾರವಾಗಿದ್ದು, 2022 ರಲ್ಲಿ ಪ್ರಿಂಟ್ ಮಾಡಲಾದ ಸುತ್ತೋಲೆಯಲ್ಲಿ ದಿನಾಂಕವನ್ನು ಕರೆಕ್ಷನ್ ಮಾಡಿ ಕಳುಹಿಸುವ ಭರದಲ್ಲಿ ತಪ್ಪಿ ಹೋಗಿದ್ದು, ಇದೀಗ ಸುತ್ತೊಲೆ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಮಂಗಳೂರು: ಓವರ್ ಟೇಕ್‌ ಮಾಡುವ ಭರದಲ್ಲಿ ಡಿವೈಡರ್ ಮೇಲೇರಿದ ಖಾಸಗಿ ಸಿಟಿ ಬಸ್

ಪತ್ರದ ಕ್ರಮ ಸಂಖ್ಯೆಯೂ ಹಿಂದಿನದ್ದು. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಆಮಂತ್ರಿಸುವಂತೆ ಕೋರಿ ಜನಪ್ರತಿನಿಧಿಗಳಿಗೆ ತಿಳಿಸುವ ಪತ್ರದ ವಿಚಾರದಲ್ಲಿ ತಾಲೂಕು ಮಟ್ಟದ ಇಬ್ಬರು ಅಧಿಕಾರಿಗಳ ಕಾರ್ಯ ಕ್ಷಮತೆಯ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page