Connect with us

LATEST NEWS

ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಇನ್ನಿಲ್ಲ..!

Published

on

ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಇನ್ನಿಲ್ಲ..!

ನವದೆಹಲಿ :  ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ 84 ವರ್ಷದ ಪ್ರಣಬ್ ಮುಖರ್ಜಿ ಅವರನ್ನು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಮಸ್ಯೆ ಉದ್ಭವವಾಗಿತ್ತು.

ಹೀಗಾಗಿ ಪ್ರಣಬ್ ಅವರಿಗೆ ತುರ್ತಾಗಿ ಮಿದುಳು ಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ, ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು.

ಆದರೂ ಮಿದುಳು ಶಸ್ತ್ರ ಚಿಕಿತ್ಸೆಯನ್ನು ಮುಗಿಸಿ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್ ಸಪೋರ್ಟ್) ಮಾಡುವ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು. ಈ ವೇಳೆ ಅವರು ಶಾಶ್ವತ ಕೋಮಾಕ್ಕೆ ಜಾರಿದ್ದರು.

ಆದರೆ, ಎಷ್ಟೇ ಪ್ರಯತ್ನ ನಡೆಸಿದರು ಪ್ರಣಬ್‌ ಮುಖರ್ಜಿ ಚಿಕಿತ್ಸೆಗೆ ಸ್ಪಂದಿಸಿಲ್ಲ. ಹೀಗಾಗಿ ಸಂಜೆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಂಗಾಳದಲ್ಲಿ 1935, ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ.

ರಾಷ್ಟ್ರಪತಿಗಳಾಗುವ ಮುನ್ನ ಅವರು ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಅವರು ರಾಷ್ಟ್ರಪತಿ ಅಧಿಕಾರ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು.

ಮಾಜಿ ರಾಷ್ಟ್ರಪತಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ , ಕಾಂಗ್ರೆಸ್ ನಾಯಕರುಗಳು, ಸಂಸದರು ರಾಜಕೀಯ ನಾಯಕರು ಅವರು ಸಂತಾಪ ವ್ಯಕ್ತಪಡಿಸಿದ್ದರು.

 

Advertisement
Click to comment

Leave a Reply

Your email address will not be published. Required fields are marked *

DAKSHINA KANNADA

ಪುತ್ತೂರು ಯುವತಿಗೆ ವಂಚನೆ ಪ್ರಕರಣ; ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ

Published

on

ಪುತ್ತೂರು: ಕೃಷ್ಣ ಜೆ ರಾವ್ ನಿಂದ ವಂಚನೆಗೊಳಗಾದ ಸಂತ್ರಸ್ತೆ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಬಳಿಕ ಮಗು ಕೊಟ್ಟು ಇದೀಗ ಮದುವೆ ಆಗುವುದಿಲ್ಲ ಎಂದು ವಂಚನೆ ಮಾಡಿದ ಪ್ರಕರಣದ ಸಂತ್ರಸ್ತೆ ಮನೆಗೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಸಂತ್ರಸ್ತೆ ಜೊತೆ ಮಾತುಕತೆ ನಡೆಸಿದರು.

ಈ ವೇಳೆ ಸಂತ್ರಸ್ತೆಯ ಮಗುವನ್ನು ನಾಗಲಕ್ಷ್ಮಿ ಚೌಧರಿ ಮುದ್ದಾಡಿದರು. ಅಲ್ಲದೆ ಸಂತ್ರಸ್ತೆಯ ಎಲ್ಲಾ ರೀತಿಯ ಹೋರಾಟಕ್ಕೆ ಜೊತೆಯಾಗಿರುವುದಾಗಿ ಭರವಸೆ ನೀಡಿದರು.

ಸಂತ್ರಸ್ತೆಗೆ ಶಿಕ್ಷಣ ಮುಂದುವರಿಸುವಂತೆ ಸಲಹೆ

ಅಲ್ಲದೇ, ಶಿಕ್ಷಣ ಮುಂದುವರಿಸುವಂತೆ ಸಂತ್ರಸ್ತೆಗೆ ನಾಗಲಕ್ಷ್ಮೀ ಅವರು ಸೂಚಿಸಿದರು. ಗಟ್ಟಿಯಾಗಿ ನಿಂತು ಸಂಕಷ್ಟ ಎದುರಿಸುವಂತೆ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಮನವಿ ಮಾಡಿದರು. ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ಜೀವನದಲ್ಲಿ ಕುಗ್ಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಸಂತ್ರಸ್ತೆಗೆ ನಾಗಲಕ್ಷ್ಮಿ ಧೈರ್ಯ ತುಂಬಿದ್ದಾರೆ.

ಸಂತ್ರಸ್ತ ಮಹಿಳೆಯರಿಗೆ ಆಯೋಗ ತಾಯಿಯಿದ್ದಂತೆ!

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಹಿಳಾ ಆಯೋಗ ತಾಯಿಯಂತೆ ಸಂತ್ರಸ್ತೆಯ ಪರ ನಿಲ್ಲುತ್ತದೆ, ಎಲ್ಲಾ ಸಂತ್ರಸ್ತ ಮಹಿಳೆಯರಿಗೆ ಆಯೋಗ ತಾಯಿಯಿದ್ದಂತೆ. ತಾಯಿ ಸ್ಥಾನದಲ್ಲಿ ನಿಂತು ಮಹಿಳೆಯ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಸಂತ್ರಸ್ತೆ ಯುವತಿಗೆ ಎಲ್ಲಾ ರೀತಿಯ ಸಹಾಯವನ್ನು ಆಯೋಗದ ಮುಖಾಂತರ ಮಾಡಲಾಗುವುದು ಎಂದರು.

ಮುಂದುವರಿದು, ಯುವತಿಯ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಆಕೆಯನ್ನು ಆರ್ಥಿಕ, ಶೈಕ್ಷಣಿಕವಾಗಿ ಸದೃಢಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಇದಕ್ಕಿಂತ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Continue Reading

INTERNATIONAL

ಇಸ್ರೇಲ್-ಇರಾನ್ ವಾರ್ ! ಬಹ್ರೈನ್ ಭಾರತೀಯರ ಪರಿಸ್ಥಿತಿ ಹೇಗಿದೆ? ಸತ್ಯ ಬಿಚ್ಚಿಟ್ಟ ಗಣೇಶ್ ಮಾಣಿಲ

Published

on

ಪ್ರೀತಿಯ ಬಂಧುಗಳೇ ಮಿತ್ರರೇ ನನ್ನ ಎಲ್ಲಾ  ಸಹಪಾಠಿಗಳಿಗೆ ಮಾಧ್ಯಮ ಸ್ನೇಹಿತರೆ!

ಕಳೆದ ಕೆಲದಿನಗಳಿಂದ ಗಲ್ಫ್ ದೇಶಗಳಾದ ಕತಾರ್, ಯುಎಇ, ಕುವೈಟ್, ಒಮಾನ್, ಬಹರೈನ್, ಸೌದಿ ಅರೇಬಿಯಾದಲ್ಲಿರುವ ನಮ್ಮಂಥ ಅನಿವಾಸಿ ಭಾರತೀಯರ ಬಗ್ಗೆ, ನಮ್ಮ ಸುರಕ್ಷತೆಯ ಬಗ್ಗೆ ಆತಂಕಗೊಂಡಿರುವ, ಚಿಂತೆಗೊಳಗಾಗಿ, ನಮ್ಮನ್ನು ಸಂಪರ್ಕಿಸಿರುವ ಎಲ್ಲರಿಗೂ ನಾನು ಹೇಳುವುದಿಷ್ಟೆ. ನಾವು ಇಲ್ಲಿ ಅತ್ಯಂತ ಸುರಕ್ಷಿತವಾಗಿದ್ದೇವೆ. ನಾವು ಎಂದಿನಂತೆ ಜೀವಿಸುತ್ತಿದ್ದೇವೆ.

ನಾನಿರುವ  ಬಹರೈನ್  ಆಗಲಿ, ಅಕ್ಕಪಕ್ಕದ , ಕುವೈಟ್  , ಯುಎಇ, ಸೌದಿ ಅರೇಬಿಯಾ ಅಥವಾ ಒಮಾನ್ ಎಲ್ಲೆಲ್ಲಿಯೂ ಇಲ್ಲಿರುವ ಜನರು, ಅವರು ಇಲ್ಲಿನ ನಾಗರಿಕರಾಗಿರಲಿ, ಇಲ್ಲ ನಮ್ಮಂಥ ನಿವಾಸಿಗಳಾಗಿರಲಿ ಇಲ್ಲ ಸ್ವಲ್ಪ ಸಮಯಕ್ಕೆ ವಿಸಿಟ್ ವೀಸಾನೋ ಇಲ್ಲ ಟೂರಿಸ್ಟ್ ವೀಸಾದಲ್ಲಿ ಇಲ್ಲಿ ಬಂದಿರುವವರು, ಎಲ್ಲರೂ ಸುರಕ್ಷಿತರಾಗಿದ್ದಾರೆ.

 

ಹೌದು ಒಂದು ವಾರದ ಮೊದಲಿದ್ದ ಹಾಗೆ ಇಲ್ಲ ಪರಿಸ್ಥಿತಿ. ಆಕಾಶದ ಮೇಲೆ ದಿನಕೊಂದು ನಾಲ್ಕು ಬಾರಿ ಕ್ಷಿಪಣಿಗಳು, ಡ್ರೋನ್‌ಗಳು, ಅಪರೂಪಕ್ಕೊಮ್ಮೆ ಫೈಟರ್ ಜೆಟ್‌ಗಳು ಈ ದೇಶಗಳಲ್ಲಿರುವ ಅಮೇರಿಕನ್ ಮಿಲಿಟರಿ, ವಿಮಾನ ಬೇಸ್‌ಗಳು ಹಾಗೂ ಇತರ ಅಮೇರಿಕನ್ asset ಗಳನ್ನು ಗುರಿಯಾಗಿಸಿ ಹಾರಾಡುತ್ತಿವೆ. ಆದರೆ ಅದರಲ್ಲಿ 95% ಕ್ಷಿಪಣಿ, ಡ್ರೋನ್‌ಗಳನ್ನು ಗಾಳಿಯಲ್ಲಿ ಹೊಡೆದುರುಳಿಸಲಾಗಿದೆ. ಒಂದೆರಡು ಕ್ಷಿಪಣಿ, ಡ್ರೋನ್‌ಗಳು ಅವರ ಉದ್ದೇಶಿತ ಗುರಿಯನ್ನು ತಲುಪಿವೆ. ಆದರೆ ನಾಗರಿಕ ವಸತಿ ಪ್ರದೇಶಗಳಾಗಲಿ, ನಾಗರಿಕರಾಗಲಿ ಇದರಿಂದ ತೊಂದರೆ, ಅಪಾಯಗೀಡಾಗಿಲ್ಲ.

ಇಲ್ಲಿ ಮಾಲ್, ಹೈಪರ್, ಸೂಪರ್ ಮಾರ್ಕೆಟ್ಗಳು, ಅಂಗಡಿ-ಮುಗ್ಗಟ್ಟುಗಳು, ಹೊಟೇಲ್, ರೆಸ್ಟೋರೆಂಟ್‌ಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಅದರಲ್ಲೂ ಮೊನ್ನೆಯಿಂದ ಕೆಲ ಮಾಲ್,  ಮಾರ್ಕೆಟ್ಟುಗಳು 24/7 ಕಾರ್ಯಾಚರಿಸುತ್ತಿವೆ. ಕೆಲಸಕ್ಕೆ ಹೋಗುವ ಜನರು ಕೆಲಸಕ್ಕೆ ಹೋಗುತ್ತಿದ್ದಾರೆ. Remote, online ಕೆಲಸ ಸಾಧ್ಯವಿದ್ದಲ್ಲಿ ಅದೂ ನಡೆಯುತ್ತಿದೆ. ಶಾಲೆಗಳು offline ಹೋಗಿ online ಆಗಿದ್ದರೂ ಎಂದಿನಂತೆ ಕಾರ್ಯಾಚರಿಸುತ್ತಿವೆ. ಅಂಗಡಿ, ಮಾರ್ಕೆಟುಗಳಲ್ಲಿ ದಿನನಿತ್ಯದ ಸಾಮಾನುಗಳು, ದಿನಸಿ, ಹಾಲು-ಹಣ್ಣು-ಹಂಪಲು ಎಲ್ಲವೂ ಎಂದಿನಂತೆ ಸಿಗುತ್ತಿವೆ. ಕೆಲ ದೇಶಗಳಲ್ಲಿ ಮುಂದಿನ ಒಂದು ತಿಂಗಳು ಯಾವುದೇ ದಿನಸಿ, ಸಾಮಾನಿನ ಬೆಲೆ ಹೆಚ್ಚಿಸಬಾರದೆಂದು ಸರ್ಕಾರ ಆದೇಶನೂ ಹೊರಡಿಸಿದೆ. ರಮ್ಜಾನ್ ಆಚರಿಸುತ್ತಿರುವ ಮುಸ್ಲೀಮ್ ಬಾಂಧವರಿಗೂ, ಇಲ್ಲಿರುವ ಎಲ್ಲರಿಗೂ ಯಾವುದೇ ತೊಂದರೆಯಾಗಬಾರದೆನ್ನುವ ದೃಷ್ಟಿಯಿಂದ.

ಹೌದು! ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿಲ್ಲ. ಇಲ್ಲಿಂದ ಆಗಮಿಸುವ ಹಾಗೂ ನಿರ್ಗಮಿಸುವ ಹೆಚ್ಚಿನ ವಿಮಾನಗಳಿಗೆ ಇರಾನ್ ಏರ್-ಸ್ಪೇಸ್ ಮುಖ್ಯ. ಸದ್ಯ ಅಲ್ಲಿ ಪ್ರಕ್ಷುಬ್ದ ವಾತಾವರಣ ಇರುವುದರಿಂದ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಾಸ ಉಂಟಾಗಿರುವುದು ನಿಜ. ಆದರೂ ನಿನ್ನೆ-ಮೊನ್ನೆಯಿಂದ ಇಲ್ಲಿ ಸಿಲುಕಿರುವ ಟ್ರಾನ್ಸಿಟ್ ಅಥವಾ ವಿಸಿಟ್/ಟೂರಿಸ್ಟ್ ವೀಸಾಗಳಲ್ಲಿ ಬಂದಿರುವ ಜನರನ್ನು ಅವರ ದೇಶಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೆಲ ವಿಮಾನಗಳು ಸಂಚಾರ ಆರಂಭಿಸಿವೆ.

ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿಲ್ಲವಾದರೂ, ವಿಮಾನಗಳು ಕ್ಯಾನ್ಸಲ್ ಆಗಿದ್ದರೂ, ಪ್ರಯಾಣಿಸಬೇಕಾಗಿದ್ದ ಜನರಿಗೆ, ಟ್ರಾನ್ಸಿಟ್ ವೀಸಾದಲ್ಲಿದ್ದವರಿಗೆ, ವಿಸಿಟರ್ಸ್, ಪ್ರವಾಸಿಗಳಿಗೆ ಇಲ್ಲಿನ ಸರ್ಕಾರ ಅಲ್ಲೇ ವಿಮಾನ ನಿಲ್ದಾಣಗಳಲ್ಲಿ ಬಿಟ್ಟು ಹಾಕಿಲ್ಲ. ಅವರೆಲ್ಲರನ್ನೂ ನಗರ ಭಾಗಗಳಲ್ಲಿರುವ ಅತ್ಯುತ್ತಮ ಹೊಟೇಲುಗಳಿಗೆ ಶಿಫ್ಟ್ ಮಾಡಿ ಅವರಿಗೆ ಉಚಿತ ವಸತಿ, ಊಟ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ, ಅವರ ಸುರಕ್ಷತೆಗಾಗಿ ಎಲ್ಲವನ್ನೂ ಮಾಡಲಾಗಿದೆ. ಸರ್ಕಾರ ಟ್ರಾನ್ಸಿಟ್, ವಿಸಿಟ್ ಹಾಗೂ ಬೇರೆ ಅಲ್ಪಕಾಲದ ವೀಸಾಗಳ ಅವಧಿಯನ್ನು ವಿಸ್ತರಿಸಿದೆ, ಅದೂ ಉಚಿತವಾಗಿ.

ಇಲ್ಲಿನ ಸರ್ಕಾರಗಳು ಎಲ್ಲರ, ಅಂದರೆ ಪ್ರತಿಯೊಬ್ಬರ ರಕ್ಷಣೆ, ಸುರಕ್ಷತೆಗಾಗಿ ಹಗಲಿರುಳೂ ಶ್ರಮಿಸುತ್ತಿವೆ. ಇಲ್ಲಿ ಧರ್ಮ, ಜಾತಿ, ದೇಶ, ಬಣ್ಣ ನೋಡಿ ಜನರನ್ನು ಪ್ರತ್ಯೇಕಿಸಲ್ಲ. ಎಲ್ಲರನ್ನು ಸಮಾನವಾಗಿ ಕಂಡು, ಎಲ್ಲರ ಸುರಕ್ಷತೆಗಾಗಿ ಏನು, ಅಲ್ಲ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತಿವೆ.

ಹೌದು, ಜನರು ಸ್ವಲ್ಭ ಹೆದರಿದ್ದಾರೆ. ಇಲ್ಲಿರುವ ಬಹುಪಾಲು ಭಾರತೀಯರಾಗಲಿ, ಬೇರೆಯವರಾಗಲಿ, ಯುದ್ದವನ್ನು ಕಂಡವರಲ್ಲ. ನಾವು ಭಾರತೀಯರಂತೂ ಯುದ್ದ ಬಿಡಿ, ಸಣ್ಣ skirmish, insurgency ಕೂಡ ಅನುಭವಿಸಿದವರಲ್ಲ. ಹಾಗಾಗಿ ಕ್ಷಿಪಣಿ, ಡ್ರೋನ್‌ಗಳ interception ಆಗಿ ದೊಡ್ಡ ಶಬ್ದ, ಗಾಳಿಯಲ್ಲಿ ಸ್ಪೋಟವಾದಾಗ ಒಮ್ಮೆ ಹೆದರುವುದು ಸಹಜ.  ಕಾಣುತ್ತಿರುವ ಹೊಗೆ, ಸ್ಪೋಟಗಳು   ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದಾಗ ಅದರಿಂದ ನೆಲಕ್ಕೆ ಬಿದ್ದ ಅವಶೇಷಗಳು,  ಕಿಡಿ ಬಿದ್ದು ಹೊತ್ತಿಕೊಂಡಿರುವ ಬೆಂಕಿ. ಅದರ ಹೊರತಾಗಿ ಎಲ್ಲಿ ಎಲ್ಲವೂ, ಎಲ್ಲರೂ ಸುರಕ್ಷಿತ.

ಎರಡ್ಮೂರು ದಿನಗಳ ಹಿಂದೆ ನಿಮಗೆ ಕೆಲ ಭಾರತೀಯರು ರೀಲ್ ಇಲ್ಲ ವೀಡಿಯೋ ಮಾಡಿ ನಾವಿಲ್ಲಿ ಸಿಲುಕಿಕೊಂಡಿದ್ದೇವೆ, ಹೆದರಿಕೆ ಆಗುತ್ತಿದೆಯೆನ್ನುವುದನ್ನು ನೋಡಿದಿದ್ದರೆ, ಅದೂ ಸುಳ್ಳಲ್ಲ. ಅವರೆಲ್ಲರೂ  ವಿಸಿಟ್, ಟೂರಿಸ್ಟ್ ಇಲ್ಲ ಬೇರೆ ಅಲ್ಪಕಾಲದ ವೀಸಾದ ಮೇಲೆ ಬಂದಿರುವವರು. ಮೊನ್ನೆ ದಾಳಿ ಆರಂಭವಾದ ದಿನ ಇಲ್ಲ ಅದರ ನಂತರದ ದಿನಗಳಲ್ಲಿ ವಾಪಾಸ್ಸು ಭಾರತಕ್ಕೆ ಹೋಗಿ ತಮ್ಮ ಮನೆ, ಕುಟುಂಬ ಸೇರಬೇಕಾಗಿದ್ದವರು. ಅವರಲ್ಲಿ ತುಸು ಗಾಬರಿ, ಆತಂಕವಿರುವುದು ಸಹಜ. ಅವರಿಗೆ ಇದೊಂದು ಹೊಸ ದೇಶ, ಇಲ್ಲಿನ ಜನರು ಅಪರಿಚಿತರು. ಅವರು ಇಲ್ಲಿನ ನಿವಾಸಿಗಳಲ್ಲ. ಕೆಲವರು ಅವತ್ತು ವಿಮಾನ ನಿಲ್ದಾಣದಲ್ಲಿದ್ದರು, ಕೆಲವರ ವೀಸಾ ಅವಧಿ ಮುಗಿಯಲಿತ್ತು. ಹಾಗಾಗಿ ಮುಂದೆ ಏನಾಗಬಹುದೆಂದು ಅವರಿಗೆ ಆತಂಕವಿದ್ದದ್ದು ಸಹಜ. ಆದರೆ ಇಲ್ಲಿನ ಸರ್ಕಾರಗಳು ಅವರನ್ನೂ ಬಿಟ್ಟಾಕಿಲ್ಲ. ಅವರಿಗೆ ಉಚಿತ ಊಟ, ವಸತಿ ಕಲ್ಪಿಸಿ ಅವರ ವೀಸಾ ಅವಧಿಯನ್ನೂ ಉಚಿತವಾಗಿ ವಿಸ್ತರಿಸಿದ ನಂತರ ಅವರೂ ಈಗ ನಿರಾಳವಾಗಿದ್ದಾರೆ, ತಮ್ಮ ಮನೆ, ಕುಟುಂಬಸ್ಥರೊಡನೆ ಸಂಪರ್ಕದಲ್ಲಿದ್ದಾರೆ.

ನಮ್ಮ ಸುರಕ್ಷತೆಯ ಬಗ್ಗೆ, ನಮ್ಮ ಬಗ್ಗೆ ಕಾಳಜಿ ಇರುವ ಎಲ್ಲಾ ಕುಟುಂಬಸ್ಥರು, ಮಿತ್ರರು, ಪರಿಚಯದವರಿಗೆ ಇದರ ಮೂಲಕ ಹೇಳಬಯಸುವುದೇನೆಂದರೆ, ಇಲ್ಲಿಯವರೆಗೆ ಎಲ್ಲವೂ ಸೇಫ್ ಆಂಡ್ ಸೌಂಡ್. ಮುಂದಿನ ದಿನಗಳಲ್ಲಿ ಎಲ್ಲವೂ ನಾರ್ಮಲ್ ಆಗಲಿದೆ ಎನ್ನುವ ವಿಶ್ವಾಸ ನಮಗಿದೆ.

ಇಲ್ಲಿರುವ  ಸರ್ಕಾರಕ್ಕೂ ಇಲ್ಲಿನ ರಾಯಭಾರ ಕಚೇರಿಗಳಿಗೂ ಇಲ್ಲಿರುವ ಭಾರತೀಯರು ಸೇಫಾಗಿದ್ದಾರೆ, ಅತ್ಯಂತ ಸುರಕ್ಷಿತರಾಗಿದ್ದಾರೆಂದು ತಿಳಿದಿದೆ. ಹಾಗಾಗಿ ಸರ್ಕಾರ, ವಿದೇಶಾಂಗ ಇಲಾಖೆಯವರನ್ನು ಬಿಟ್ಟು ಇನ್ನು ಯಾರೋ ಯೂಟ್ಯೂಬ್ ಚಾನಲ್‌ನಲ್ಲಿ, ನ್ಯೂಸ್ ಚಾನಲ್‌ನಲ್ಲಿ evacuation ಬಗ್ಗೆ ಮಾತಾನಾಡಿದರೆ, ನಾನು ಹೇಳುವುದು ಇಷ್ಟೆ!

ಸದ್ಯ ಶಾಂತಿ ನೆಲೆಸಬೇಕಾಗಿರುವುದು ನಮ್ಮ ನ್ಯೂಸ್ ರೂಮ್‌ಗಳಲ್ಲಿ ಕೆಲವೊಂದು   ಯುಟ್ಯೂಬ್ ಚಾನೆಲ್  ತನ್ನದೇ ಶೈಲಿಯಲ್ಲಿ  ಬಿಂಬಿಸುತ್ತಿವೆ ಮಾಧ್ಯಮದ ಕೆಲವೊಂದು ಟಿವಿ ಸರಿಯಾದ ಮಾಹಿತಿಯನ್ನು ತೋರಿಸುತ್ತಿದೆ.

ನಾನಿಲ್ಲಿ 15 ವರುಷಗಳಿಂದ ಇಲ್ಲಿದ್ದೇನೆ. ಅವತ್ತಿನಿಂದ ಇವತ್ತಿನವರೆಗೆ ಒಂದು ಸೆಕೆಂಡಿಗೂ ನಾನು ಇಲ್ಲಿ ಸೇಫಾಗಿಲ್ಲವೆಂದು ನನಗೆ ಯಾವತ್ತೂ ಅನಿಸಿಲ್ಲ. ಮುಂದೆಯೂ ಹಾಗೆಯೇ. ಇದು ನನ್ನಂತ ಇಲ್ಲಿ ನೆಲೆಸಿರುವ ಎಲ್ಲರ ಅನಿಸಿಕೆಯೂ ಹೌದು! ಇಲ್ಲಿನ ಸರ್ಕಾರ ನಮ್ಮನ್ನು ಹಾಗೂ ಇಲ್ಲಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿಡಲಿದೆ ಎನ್ನುವ ನಂಬಿಕೆ ನಮಗಿದೆ. ಇದು ನಮ್ಮ ಜನ್ಮಭೂಮಿಯಲ್ಲದಿದ್ದರೂ, ನಮ್ಮ ಕರ್ಮಭೂಮಿ. ನಮ್ಮ ಜನ್ಮಭೂಮಿಯಷ್ಟೆ ಸುರಕ್ಷಿತ ನಾವಿಲ್ಲಿ ಎನ್ನುವ ಭಾವನೆ ಎಂದೆಂದಿಗೂ ನಮಗಿದೆ. ನಮಗೆ ಉದ್ಯೋಗ, ಜೀವನ, ವಸತಿ ಕಲ್ಪಿಸಿರುವ ಈ ದೇಶ, ನಮಗೆ ಭದ್ರತೆ, ಸುರಕ್ಷತೆಯನ್ನೂ ಒದಗಿಸಿದೆ, ಮುಂದೆಯೂ ಒದಗಿಸಲಿದೆ.

ನನ್ನ ನಮ್ರ ವಿನಂತಿ ನಿಮ್ಮಲ್ಲಿ ಎಲ್ಲರಲ್ಲೂ  ಇಷ್ಟೇ,ಬಹರೈನ್ ದೇಶದಲ್ಲಿ  ಯುದ್ಧದ ಕಾರ್ಮೋಡವಿಲ್ಲ ಯುದ್ಧ  ಭೂಮಿ ಎಂದು ಯಾರು ಹೇಳಬೇಡಿ, ಇರಾನ್, ಇಸ್ರೇಲ್  ಮತ್ತು ಅಮೇರಿಕ ನಡುವಿನ  ಜಂಟಿ ಹೋರಾಟದಲ್ಲಿ  ಅರಬ್ ದೇಶ   ಸಾಂದರ್ಭಿಕವಾಗಿ  ಗಟ್ಟಿ ನೆಲೆಯೂರಬೇಕಾಗಿದೆ ಅನ್ನುವುದೇ ಸತ್ಯ.  ಇರಾನ್ ದಾಳಿಗೆ ಪ್ರತಿ  ದಾಳಿಯಾಗಿ  ದೇಶದ ಅಸ್ಥಿತ್ವ ಉಳಿಸಬೇಕಿದೆ. ಮುಂದಿನ ದಿನದಲ್ಲಿ  ಆರ್ಥಿಕತೆ ಮತ್ತು  ಉದ್ಯೋಗದ ಮೇಲಾಗುವ ಪರಿಣಾಮ ಅನಿವಾಸಿಯ ಭಾರತೀಯರ  ಮೇಲೆ ಬೀರದಿರಲಿ ಅನ್ನುವುದೇ ನಮ್ಮ ಆಶಯ.. ಶಾಂತಿ ಸಂಧಾನದ ಮೂಲಕ  ನಾಂದಿ ಹಾಡಲಿ..    ..!

ಲೇಖಕ : ಗಣೇಶ್ ಮಾಣಿಲ (ಬಹರೈನ್ )

Continue Reading

LATEST NEWS

ತುಮಕೂರು: ನವವಿವಾಹಿತನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ!

Published

on

ತುಮಕೂರು: ಕೆಲಸದ ನಿಮಿತ್ತವಾಗಿ ಮನೆಯಿಂದ ಹೊರಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ತಿಪಟೂರು ನಗರದ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ನಡೆದಿದೆ.


ತಿಪಟೂರು ನಗರದ ಆರ್‌ಸಿಸಿ ಟ್ಯಾಂಕ್‌ ರಸ್ತೆಯ 3ನೇ ಕ್ರಾಸ್‌ನ ನಿವಾಸಿ, ಮನ್ಸೂರು(32) ಕೊಲೆಯಾದ ವ್ಯಕ್ತಿ. ಇವರು ಕಳೆದ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿ ಹೊಸ ಜೀವನ ಆರಂಭಿಸಿದ್ದರು ಎನ್ನಲಾಗಿದೆ.

ನಿನ್ನೆ(ಮಾ.4) ಬೆಳಿಗ್ಗೆ ತನ್ನದೇ ಆಟೋದಲ್ಲಿ ಮನೆಯಿಂದ ಹೊರಹೋದ ಬಳಿಕ ನಾಪತ್ತೆಯಾಗಿದ್ದಾರೆ. ಕುಟುಂಬಸ್ಥರು ಅನೇಕ ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಗಾಬರಿಗೊಂಡು ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ: ಹೃದಯಾಘಾ*ತಕ್ಕೆ ನವವಿವಾಹಿತ ಬ*ಲಿ

ತಿಪಟೂರು ನಗರ ಪೊಲೀಸ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹುಡುಕಾಟ ನಡೆಸಿದಾಗ ಚಿಕ್ಕಕೊಟ್ಟಗಿಹಳ್ಳಿ ಬಳಿ ಆಟೋ ಪತ್ತೆ ಆಗಿದೆ. ಬಳಿಕ ಸುತ್ತಮುತ್ತ ಹುಡುಕಾಡಿದಾಗ ಅಡಿಕೆ ತೋಟ ಒಂದರಲ್ಲಿ ಮನ್ಸೂರ್‌ ಶವ ಪತ್ತೆ ಆಗಿದೆ. ಪೊಲೀಸರು ಸಾವಿಗೆ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page