Connect with us

DAKSHINA KANNADA

ಪ್ರಥಮ ಪ್ರಧಾನಿಗೆ ರಾಜ್ಯ  ಸರ್ಕಾರ ಸ್ಥಳೀಯಾಡಳಿತದಿಂದ ಅವಮಾನ: ಮಾಜಿ ಶಾಸಕ ಲೋಬೋ ಆರೋಪ..!

Published

on

 ಪ್ರಥಮ ಪ್ರಧಾನಿಗೆ ರಾಜ್ಯ  ಸರ್ಕಾರ ಸ್ಥಳೀಯಾಡಳಿತದಿಂದ ಅವಮಾನ: ಮಾಜಿ ಶಾಸಕ ಲೋಬೋ ಆರೋಪ..!

ಮಂಗಳೂರು: ನೆಹರೂ ಮೈದಾನದಲ್ಲಿರುವ ನೆಹರು ಪ್ರತಿಮೆಯನ್ನು ಸ್ಥಳೀಯಾಡಳಿತ ಸೇರಿದಂತೆ ಕೇಂದ್ರ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸುವ  ಮೂಲಕ ದೇಶದ ಪ್ರಥಮ ಪ್ರಧಾನಿಗೆ ಅವಮಾನ ಮಾಡಿದೆ ಎಂದು ಮಾಜಿ ಶಾಸಕ  ಜೆ. ಆರ್ ಲೋಬೊ ಆರೋಪಿಸಿದ್ದಾರೆ.

ಜಿಲ್ಲಾಡಳಿತದಿಂದ ನಿರ್ವಹಿಸಲ್ಪಡಬೇಕಾದ ನೆಹರೂ ಪ್ರತಿಮೆ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಯನ್ನು ತಲುಪಿದೆ. ನಗರ ಪಾಲಿಕೆಯಲ್ಲಿ ನಮ್ಮ ಸರ್ಕಾರ ಆಡಳಿತದಲ್ಲಿ ಇದ್ದಾಗ, ನೆಹರು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರತಿಮೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಮಾತ್ರವಲ್ಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ , ಬೃಹತ್ ಯೋಜನೆಗಳನ್ನು ಜಾರಿಗೆ ತಂದು ಈ ದೇಶವನ್ನು ಆರ್ಥಿಕವಾಗಿ ಸದೃಡವಾಗುವಂತೆ ಮಾಡಿದ  ನೆಹರೂರವರಿಗೆ ಈ ಮೂಲಕ ಅವಮಾನ ಮಾಡಿರುವುದು ಖಂಡನೀಯ ಎಂದು ಲೋಬೋ ಅಭಿಪ್ರಾಯಪಟ್ಟಿದ್ದಾರೆ.

DAKSHINA KANNADA

ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಹಜ್ಜಾಜಿಗಳಿಗೆ ಭವ್ಯ ಸ್ವಾಗತ

Published

on

ಮಂಗಳೂರು/ ಮದೀನಾ ಮುನವ್ವರ : ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಬಂದ ಹಜ್ಜಾಜಿಗಳ ಮೊದಲ ಎರಡು ವಿಮಾನವು ಮದೀನಾ ಮುನವ್ವರದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ಇಂಟರ್ನ್ಯಾಷನಲ್ ಏರ್ಪೋರ್ಟ್ ತಲುಪಿದೆ. ಇಂದು(ಎ.29) ಭಾರತದ ಹೈದರಾಬಾದ್ ಹಾಗೂ ಲಕ್ನೋದಿಂದ 578 ಹಾಜಿಗಳು ಆಗಮಿಸಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಹಜ್ಜ್ ವಾಲೇಂಟಿಯರ್ ಕೋರ್‌ನ ಸದಸ್ಯರು ಹಜ್ಜಾಜಿಗಳನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು.

ಇಂಡಿಯನ್ ಅಂಬಾಸಿಡರ್ ಡಾ.ಸುಹೇಲ್ ಅಜಾಝ್ ಖಾನ್, ಇಂಡಿಯನ್ ಕೌನ್ಸಿಲ್ ಜನರಲ್(ಜಿದ್ದಾ) ಫಹದ್ ಅಹ್ಮದ್ ಖಾನ್ ಸುರಿ ಸೇರಿದಂತೆ ಇಂಡಿಯನ್ ಎಂಬಸಿಯ ವಿವಿಧ ಅಧಿಕಾರಿಗಳು ಹಜ್ಜಾಜಿಗಳನ್ನು ಸ್ವಾಗತಿಸಿದರು.

ಕೆಸಿಎಫ್ ಹೆಚ್.ವಿ.ಸಿ ಸದಸ್ಯರು ಹಜ್ಜಾಜಿಗಳನ್ನು ಮದೀನಾ ವಿಮಾನ ನಿಲ್ದಾಣ ಹಾಗೂ ಅವರು ತಂಗುವ ಹೋಟೆಲ್‌ಗೆ ತೆರಳಲು ಸಹಕರಿಸಿದರು. ಹಾಜಿಗಳಿಗೆ ಹೆಚ್.ವಿ.ಸಿ ವೆಲ್ಕಂ ಕಿಟ್, ಖರ್ಜೂರ ನೀಡಿ ಸತ್ಕರಿಸಿದರು. ಈ ವೇಳೆ ಮದೀನಾ ಮುನವ್ವರದ ಸಾಂಪ್ರದಾಯಿಕ ಶೈಲಿಯಲ್ಲಿ ಝಂಝಂ ವಿತರಿಸಲಾಯಿತು. ಹಜ್ಜಾಜಿಗಳ ಮೇಲೆ ಹೂವಿನ ಎಸಲುಗಳನ್ನು ಸುರಿಸುವ ಮೂಲಕ ಭವ್ಯವಾಗಿ ಸ್ವಾಗತಿಸಲಾಯಿತು. ಅಶಕ್ತ ಹಜ್ಜಾಜಿಗಳನ್ನು ವೀಲ್ ಚೇರ್ ಮೂಲಕ ಕೆ.ಸಿ.ಎಫ್ ಹೆಚ್.ವಿ.ಸಿ ಕಾರ್ಯಕರ್ತರು ಹೋಟೆಲ್ ತಲುಪಿಸಿದರು.

ಇಂದು ರಾತ್ರಿ 7.30 ವೇಳೆಗೆ ಮುಂಬೈಯಿಂದ 442ಹಾಜಿಗಳು ಆಗಮಿಸಲಿದ್ದಾರೆ. ರಾಜ್ಯದ 956  ಹಜ್ಜಾಜಿಗಳು ನಾಳೆ ಪವಿತ್ರ ನಗರ ಮದೀನಾ ಮುನವ್ವರ ತಲುಪಲಿದ್ದು, 378 ಹಾಜಿಗಳು ನಾಳೆ ಬೆಳಗ್ಗಿನ ವೇಳೆ, 289 ಹಾಜಿಗಳು ಮಧ್ಯಾಹ್ನ ವೇಳೆ, ಹಾಗೂ ಸಂಜೆ 289 ಹಾಜಿಗಳು ಮದೀನಾ ಮುನವ್ವರ ತಲುಪಲಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೆಂಟಿಯರ್ ಕೋರ್ ಸದಸ್ಯರು ಮಕ್ಕತುಲ್ ಮುಕರ್ರಮ ಹಾಗೂ ಮದೀನಾ ಮುನವ್ವರದಲ್ಲಿ ಹಜ್ಜಾಜಿಗಳಿಗೆ ಸಹಕರಿಸಲು ಸನ್ನದ್ಧರಾಗಿದ್ದಾರೆ.

Continue Reading

DAKSHINA KANNADA

ಆನೆ ದಾಳಿಗೆ ಮಹಿಳೆ ಸಾವು; ಮೃತ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ

Published

on

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರ್ ಎಂಬಲ್ಲಿ ಮಹಿಳೆಯನ್ನು ಕಾಡಾನೆ ಬಲಿ ಪಡೆದುಕೊಂಡ ಜಾಗಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದಾರೆ.

ಇಂದು ಮುಂಜಾನೆ ಕಾರ್ಮಿಕ ಮಹಿಳೆ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದ ವೇಳೆ ಕಾಡಾನೆ ದಾಳಿ ನಡೆಸಿತ್ತು. ಕೆಎಪ್‌ಡಿಸಿ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯ ಕುಟುಂಬವನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಅರಣ್ಯ ಇಲಾಖೆಯಿಂದ ಮಹಿಳೆಯ ಕುಟುಂಬಕ್ಕೆ 15 ಲಕ್ಷ ಪರಿಹಾರ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಕೆಎಫ್‌ಡಿಸಿ ಯಿಂದಲೂ ಪರಿಹಾರ ಒದಗಿಸುವುದಾಗಿ ಹೇಳಿದ ಶಾಸಕರು ತಮ್ಮ ವ್ಯಯಕ್ತಿಕ ನೆಲೆಯಲ್ಲಿ ಹತ್ತು ಸಾವಿರ ರೂಪಾಯಿ ನೀಡಿದ್ದಾರೆ. ಈ ವೇಳೆ ಕಾಡಾನೆ ಹಾವಳಿಯ ಬಗ್ಗೆ ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಆನೆಯನ್ನು ಓಡಿಸುವ ಅಥವಾ ಸೆರೆ ಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಸಕರಲ್ಲಿ ಆಗ್ರಹಿಸಿದ್ದಾರೆ.

Continue Reading

DAKSHINA KANNADA

ಅಪರಿಚಿತ ಯುವಕನನ್ನು ಹೊಡೆದು ಸಾಯಿಸಿದ 25 ಜನ; 15 ಜನರ ಬಂಧನ..!

Published

on

ಮಂಗಳೂರು : ಏಪ್ರಿಲ್ 27 ರಂದು ಕುಡುಪು ಸಮೀಪದ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಅದೊಂದು ಕೊಲೆ ಎಂಬುದು ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು 15 ಯುವಕರನ್ನು ಕೊಲೆ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. ಪ್ರಕರಣದಲ್ಲಿ ಸುಮಾರು 25 ಕ್ಕೂ ಹೆಚ್ಚು ಮಂದಿ ಆರೋಪಿಗಳಿದ್ದು ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪರಚಿತ ವ್ಯಕ್ತಿಯನ್ನು ಭೀಕರವಾಗಿ ಥಳಿಸಿ ಕಾಲಿನಿಂದ ತುಳಿದು ಸಾಯಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅಲ್ಲಿದ್ದ ಕೆಲವರು ತಡೆಯಲು ಯತ್ನಿಸಿದ್ರೂ ಬಿಡದೆ ಯುವಕನನ್ನು ಹೊಡೆದು ಸಾಯಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರು ತಿಳಿಸಿದ್ದಾರೆ.

ಮೃತನ ಗುರುತು ಪತ್ತೆ ಹಚ್ಚುವ ಸಲುವಾಗಿ, ಮೃತನ ಫೋಟೋಗಳನ್ನು ವ್ಯಾಪಕವಾಗಿ ಹಂಚಲಾಗಿತ್ತು. ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸಾಕ್ಷಿದಾರರು ಮತ್ತು ಅನುಮಾನಿತ ವ್ಯಕ್ತಿಗಳನ್ನು ವಿಚಾರಣೆ ಮಾಡುವ ಮತ್ತು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್/ಟವರ್ ಡಂಪ್ ಡೇಟಾ ಸಂಗ್ರಹಿಸಿ ವಿಶ್ಲೇಷಿಸಲು ಹಲವು ತಂಡಗಳನ್ನು ರಚಿಸಲಾಯಿತು.

ತನಿಖೆ ವೇಳೆ ಲಭ್ಯವಾದ ಮಾಹಿತಿ ಹಾಗೂ ಸ್ಥಳೀಯ ವ್ಯಕ್ತಿಗಳ ಭಾಗವಹಿಸಿರುವ ಬಗ್ಗೆ ಅನುಮಾನಗೊಂಡು ಅಪರಿಚಿತ ಮೃತದೇಹದ ಶವ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ : ಮಂಗಳೂರು : ಕೋಮು ದ್ವೇಶಕ್ಕೆ ಅಮಾಯಕ ಯುವಕನ ಬರ್ಬರ ಹತ್ಯೆ; ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಸುಮಾರು 25 ಕ್ಕೂ ಹೆಚ್ಚು ವ್ಯಕ್ತಿಗಳು ಭಾಗವಹಿಸಿರುವ ಸಂಶಯವಿದ್ದು, ಈಗಾಗಲೇ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ತಿರುವೈಲ್ ಗ್ರಾಮದ ಸಚಿನ್ ಟಿ, ದೇವದಾಸ್,  ಮಂಜುನಾಥ್, ನೀರು ಮಾರ್ಗದ ಸಾಯಿದೀಪ್, ಕುಡುಪುವಿನ ನಿತೇಶ್ ಕುಮಾರ್ ಅಲಿಯಾಸ್ ಸಂತೋಷ್, ದೀಕ್ಷಿತ್ ಕುಮಾರ್, ವಾಮಂಜೂರಿನ ಸಂದೀಪ್, ವಿವಿಯನ್ ಆಳ್ವಾರೀಸ್, ಶ್ರೀದತ್ತ, ಬಿಜೈಯ ರಾಹುಲ್, ಪ್ರದೀಪ್ ಕುಮಾರ್, ಪದವು ಗ್ರಾಮದ ಮನೀಷ್ ಶೆಟ್ಟಿ,  ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಬಂಧಿತರು. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಿ ಬಂಧಿಸಲಾಗುವುದು ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

 

 

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page